ಬ್ಯಾಕ್‍ಗ್ರೌಂಡ್ ಡೀಫೋಕಸ್ ನಿಮ್ಮ ಸೋನಿ ಎಕ್ಸ್‍ಪೀರಿಯಾದಲ್ಲಿದೆಯೇ?

By Shwetha
|

ನೆಕ್ಸ್‍ಸ್ ಅಲ್ಲದ ಡಿವೈಸ್‍ಗಳಿಗೆ ತನ್ನ ಇತ್ತೀಚಿನ ಕ್ಯಾಮೆರಾ ಅಪ್ಲಿಕೇಶನ್ ಅನ್ನು ಸ್ವಲ್ಪ ದಿನಗಳಿಗೆ ಹಿಂದೆ ಗೂಗಲ್ ಘೋಷಿಸಿತ್ತು. ಈ ಕ್ಯಾಮೆರಾ ಅಪ್ಲಿಕೇಶನ್ ಹೆಚ್ಚಿನ ಫೀಚರ್‍ಗಳಾದ ಬ್ಯಾಕ್‍ಗ್ರೌಂಟ್ ಬ್ಲರ್ ಮತ್ತು ಇತರ ವೈಶಿಷ್ಟ್ಯಗಳಿಂದ ಮನಸೆಳೆಯುವಂತಿದೆ.

ಇದೀಗ ಸೋನಿ ಕೂಡ ಬ್ಯಾಕ್‍ಗ್ರೌಂಡ್ ಡೀಫೋಕಸ್ ಅಪ್ಲಿಕೇಶನ್ ಅನ್ನು ತನ್ನ ಎಕ್ಸ್‍ಪೀರಿಯಾ ಹ್ಯಾಂಡ್‍ಸೆಟ್ ಮಾಡೆಲ್‍ಗಳಿಗೂ ಲಾಂಚ್ ಮಾಡಿದೆ. ಗೂಗಲ್ ಪ್ಲೇ ಸ್ಟೋರ್‍ನಲ್ಲಿ ಇದನ್ನು ಡೌನ್‍ಲೋಡ್ ಮಾಡಬಹುದು.

ಬ್ಯಾಕ್‍ಗ್ರೌಂಡ್ ಡೀಫೋಕಸ್ ನಿಮ್ಮ ಸೋನಿ ಎಕ್ಸ್‍ಪೀರಿಯಾದಲ್ಲಿದೆಯೇ?

ಸ್ಮಾರ್ಟ್‍ಪೋನ್ ಕ್ಯಾಮೆರಾಗಳಲ್ಲಿ ಡಿಎಸ್‍ಎಲ್‍ಆರ್ ನಂತಹ ಇಫೆಕ್ಟ್‍ಗಳನ್ನು ಬಳಸುವುದು ಸವಾಲಿನ ಕೆಲಸವೇ. ಸ್ಯಾಮ್‍ಸಂಗ್, ನೋಕಿಯಾ, ಎಚ್‍ಟಿಸಿ ಮತ್ತು ಗೂಗಲ್ ಕೂಡ ಈ ವೈಶಿಷ್ಟ್ಯವನ್ನು ಸ್ವಲ್ಪ ಸಮಯ ಬಳಸುತ್ತಿದ್ದು ಈಗ ಸೋನಿ ಕೂಡ ಇವುಗಳ ಸಾಲಿಗೆ ಸೇರ್ಪಡೆಗೊಂಡಿದೆ.
ಗೂಗಲ್ ಕ್ಯಾಮೆರಾ ಅಪ್ಲಿಕೇಶನ್‍ನಂತಹ ವೈಶಿಷ್ಟ್ಯಗಳೊಂದಿಗೆ ಬಂದಿರುವ ಇದು ಕೆಲವು ಶಾಟ್‍ಗಳ ಮೂಲಕ ನಿಮಗೆ ಬ್ಲರ್ ಮಾಡಬೇಕಾಗಿರುವ ಪ್ರದೇಶವನ್ನು ಶೋಧಿಸುತ್ತದೆ. ಇದನ್ನು ಮಾಡಲು ನಿಮಗೆ ಫೋನ್ ಅನ್ನು ಮೂವ್ ಮಾಡಬೇಕಾದ ಅಗತ್ಯವಿರುವುದಿಲ್ಲ. ನೀವು ಫೋಟೋವನ್ನು ತೆಗೆಯುತ್ತಿರುವಾಗ ಕೂಡ ಈ ಅಂಶ ನಿಮಗೆ ತಾಂತ್ರಿಕ ವಿಧಾನಗಳನ್ನು ಅನುಸರಿಸಲು ಸಹಾಯ ಮಾಡುತ್ತದೆ.

ಎಕ್ಸ್‍ಪೀರಿಯಾ ಶ್ರೇಣಿಯ ಫೋನ್‍ಗಳಿಗೆ ಮಾತ್ರ ಲಭ್ಯವಿರುವ ಈ ಅಪ್ಲಿಕೇಶನ್ ಇತರ ಮೊಬೈಲ್ ಬ್ರಾಂಡ್‍ಗಳಿಗೆ ಲಭ್ಯವಾಗಲು ಸ್ವಲ್ಪ ಸಮಯ ಹಿಡಿಯುತ್ತದೆ. ಇತರ ಬ್ರಾಂಡ್ ಫೋನ್‍ಗಳು ಗೂಗಲ್ ಕ್ಯಾಮರಾ ಅಪ್ಲಿಕೇಶನ್ ಅನ್ನು ಅಲ್ಲಿಯವರೆಗೆ ಬಳಸಬಹುದು.

ಬ್ಯಾಕ್‍ಗ್ರೌಂಡ್ ಡೀಫೋಕಸ್ ನಿಮ್ಮ ಸೋನಿ ಎಕ್ಸ್‍ಪೀರಿಯಾದಲ್ಲಿದೆಯೇ?
ಈ ಅಪ್ಲಿಕೇಶನ್ ಅನ್ನು ಬಳಸುವುದು ತುಂಬಾ ಸರಳವಾಗಿದೆ ಮೊದಲಿಗೆ ನೀವು ಬ್ಯಾಕ್‍ಗ್ರೌಂಡ್ ಡೀಫೋಕಸ್ ಅನ್ನು ಕ್ಯಾಮೆರಾ ಮೋಡ್‍ನಂತೆ ಆಯ್ಕೆ ಮಾಡಿ>ವ್ಯೂಫೈಂಡರ್‍ನಲ್ಲಿ ನೀವು ಫೋಕಸ್ ಮಾಡಬೇಕಾಗಿರುವ ವಿಷಯವನ್ನು ಟ್ಯಾಪ್ ಮಾಡಿ> ಫೋಟೋ ತೆಗೆಯಲು ಕ್ಯಾಮೆರಾ ಕೀ ಸ್ಪರ್ಶಿಸಿ> ಸ್ಕ್ರೀನ್‍ನಲ್ಲಿ ನಿಯಂತ್ರಣಗಳೊಂದಿಗೆ ಬ್ಲರ್ ಲೆವಲ್ ಹಾಗೂ ಬ್ಲರ್ ಇಫೆಕ್ಟ್ ಅನ್ನು ಬದಲಾಯಿಸಿ>ಸೇವ್ ಬಟನ್ ಅನ್ನು ಟ್ಯಾಪ್ ಮಾಡಿ ಇಷ್ಟು ಮಾಡಿದರೆ ಸಾಕು ನಿಮಗೆ ಬೇಕಾದ ಫೋಟೋ ಇನ್ನಷ್ಟು ಎಫ್‍ಕ್ಟೀವ್ ಹಾಗೂ ಸುಂದರವಾಗಿರುತ್ತದೆ.

ಸೋನಿ ಎಕ್ಸ್‍ಪೀರಿಯಾ ಸ್ಮಾರ್ಟ್‍ಫೋನ್‍ಗಳನ್ನು ನೀವು ಬಳಸುವವರಾಗಿದ್ದಲ್ಲಿ ಇಲ್ಲಿ ಅಪ್ಲಿಕೇಶನ್ ಅನ್ನು ಡೌನ್‍ಲೋಡ್ ಮಾಡಿಕೊಳ್ಳಬಹುದು. ಈ ಅಪ್ಲಿಕೇಶನ್‍ಗೆ ಬೇಕಾಗಿರುವುದು 4.2 ಹಾಗೂ ಓಎಸ್‍ನ ನಂತರದ ಆವೃತ್ತಿಯಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X