ಸೋನಿ ಎಕ್ಸ್‌ಪೀರಿಯಾ ಎಮ್2 ಆಕ್ವಾ ಆನ್‌ಲೈನ್‌ನಲ್ಲಿ ಸೋರಿಕೆ

By Shwetha
|

ಸೋನಿ ಕಂಪೆನಿ ತಯಾರಿಸುವ ಸ್ಮಾರ್ಟ್‌ಫೋನ್ ಕುರಿತು ಆಲೋಚಿಸುವಾಗ ಮನದಲ್ಲಿ ಮೊದಲು ಸುಳಿದಾಡುವ ವಿಚಾರ ಅಥವಾ ಪ್ರಮುಖ ಅಂಶವಾಗಿದೆ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿದೆಯೇ ಎಂದಾಗಿದೆ (ವಾಟರ್ ಪ್ರೂಫ್). ಆದರೆ ಸೋನಿಯ ಎಲ್ಲಾ ಫೋನ್‌ಗಳು ಈ ಅಂಶವನ್ನು ಒಳಗೊಂಡಿರಬೇಕೆಂದೇನಿಲ್ಲ. ಜೆಡ್ ಶ್ರೇಣಿಯ ಫೋನ್‌ಗಳು ಮಾತ್ರವೇ ಈ ಅರ್ಹತೆಯನ್ನು ಹೊಂದಿರುತ್ತವೆ. ಉಳೀದವುಗಳು ಸಾಮಾನ್ಯ ಅಂಶಗಳಿಂದ ದೈನಂದಿನ ಫೋನ್‌ಗಳಂತೆ ಕಾಣುತ್ತವೆ.

ಇತ್ತೀಚೆಗೆ ದೊರಕಿದ ಒಂದು ಮಾಹಿತಿಯಂತೆ ಎಕ್ಸ್‌ಪೀರಿಯಾ ಎಮ್2 ನ ಯಶಸ್ಸಿಗೆ ಪೂರಕವಾಗಿ ಅದೇ ರೀತಿಯ ಜಲಪ್ರತಿರೋಧಕ ಶಕ್ತಿಯನ್ನು ಹೊಂದಿರುವ ಫೋನ್ ಅನ್ನು ತಯಾರಿಸಲಾಗುತ್ತಿದೆ. ಇದನ್ನು ಎಕ್ಸ್‌ಪೀರಿಯಾ ಎಮ್2 ಆಕ್ವಾ ಎಂಬ ಹೆಸರಿನಿಂದ ಇದನ್ನು ಕರೆಯಲಾಗುತ್ತದೆ.

ಸೋನಿ ಎಕ್ಸ್‌ಪೀರಿಯಾ ಎಮ್2 ವಿಶೇಷತೆ ಏನು

ಸೋನಿ ಎಕ್ಸ್‌ಪೀರಿಯಾ ಎಮ್2 : ಪ್ರಮುಖ ವಿಶೇಷತೆಗಳು
ಇದು 4.8 ಇಂಚಿನ ಸಾಮರ್ಥ್ಯವುಳ್ಳ ಸ್ಪರ್ಶ ಪರದೆಯೊಂದಿಗೆ ಬಂದಿದ್ದು ಇದರ ರೆಸಲ್ಯೂಶನ್ 960 x 540 ಪಿಕ್ಸೆಲ್‌ಗಳಾಗಿವೆ. ಇದು 1.2 GHz ಕ್ವಾಡ್-ಕೋರ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್‌ನೊಂದಿಗೆ ಬಂದಿದ್ದು ಇದು 400 (MSM8226 ) ಪ್ರೊಸೆಸರ್ ಜೊತೆಗೆ ಅಡ್ರೆನೋ 305 GPU ಮತ್ತು 1ಜಿಬಿ RAM ಅನ್ನು ಒಳಗೊಂಡಿದೆ. ಇದರಲ್ಲಿ ಆಂಡ್ರಾಯ್ಡ್ 4.3 (ಜೆಲ್ಲಿ ಬೀನ್) ಓಎಸ್ ಚಾಲನೆಯಾಗುತ್ತಿದ್ದು 8 ಮೆಗಾಪಿಕ್ಸೆಲ್ ಎಲ್‌ಇಡಿ ಫ್ಲ್ಯಾಶ್ ಕ್ಯಾಮೆರಾವನ್ನು ಒಳಗೊಂಡಿದೆ. ಈ ರಿಯರ್ ಕ್ಯಾಮೆರಾ Exmor RS ಸೆನ್ಸಾರ್ ಅನ್ನು ಬಳಸುತ್ತಿದ್ದು ಇದರಿಂದ 1080p ಗುಣಮಟ್ಟದಲ್ಲಿ ವೀಡಿಯೋವನ್ನು ಶೂಟ್ ಮಾಡಬಹುದಾಗಿದೆ.

ಈ ಡಿವೈಸ್ ಮುಂಭಾಗದಲ್ಲಿ 0.3MP (VGA) ಸೆನ್ಸಾರ್ ಅನ್ನು ಹೊಂದಿದ್ದು ಸೋನಿಯು ತನ್ನ ಎಕ್ಸ್‌ಪೀರಿಯಾ M2 ಗೆ ಸ್ಥಳೀಯ ಸಂಗ್ರಹಣಾ ಸಾಮರ್ಥ್ಯವನ್ನು 8ಜಿಬಿಯಷ್ಟನ್ನು ನೀಡಿದೆ. ಇದನ್ನು ಎಸ್‌ಡಿ ಕಾರ್ಡ್ ಮೂಲಕ 32 ಜಿಬಿಗೆ ವಿಸ್ತರಿಸಬಹುದಾಗಿದೆ. ಇದರಲ್ಲಿ ಸಂಪರ್ಕ ವ್ಯವಸ್ಥೆಗಳು ಎಂದಿನಂತಿದ್ದು, ಇದು 3G HSPA+,WiFi 820.11 b/g/n, ಬ್ಲ್ಯೂಟೂತ್ 4.0, GPS ಮತ್ತು NFC ಅನ್ನು ಒಳಗೊಂಡಿದೆ. ಇದು 8.64 ಎಮ್‌ಎಮ್ ದಪ್ಪವನ್ನು ಹೊಂದಿದ್ದು ತೂಕ 148 ಗ್ರಾಮ್‌ಗಳಾಗಿವೆ. ಬ್ಯಾಟರಿ ಸಾಮರ್ಥ್ಯ 2300mAh ಆಗಿದೆ.

Best Mobiles in India

English summary
This article tells that Sony xperia M2 Aqua leaks online waterproof build hinted.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X