ಸೋನಿ ಎಕ್ಸ್‌‌ಪೀರಿಯಾ Z2 ಮನಸೆಳೆಯುವ ವೈಶಿಷ್ಟ್ಯಗಳು

By Shwetha
|

ಈ ವರ್ಷದ ಪ್ರಾರಂಭದಲ್ಲೇ, ಸೋನಿ ಅತ್ಯದ್ಭುತ ಹ್ಯಾಂಡ್‌ಸೆಟ್‌ಗಳೊಂದಿಗೆ ಮಾರುಕಟ್ಟೆಯಲ್ಲಿ ತನ್ನ ಮಾನ್ಯತೆಯನ್ನು ಉಳಿಸಿಕೊಂಡಿದೆ. 2014 ರ ಮಧ್ಯ ಕಾಲದಲ್ಲೇ ಸೋನಿ ತನ್ನ ಎಕ್ಸ್‌ಪೀರಿಯಾ Z2 ನೊಂದಿಗೆ ಎಚ್‌ಟಿಸಿ ಒನ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್‌5 ಗೆ ಭರ್ಜರಿ ಪೈಪೋಟಿಯನ್ನೇ ನೀಡಿದೆ.

ಈಗ ಸೋನಿ ಕಂಪೆನಿ ಎಕ್ಸ್‌ಪೀರಿಯಾ Z2 ವನ್ನು ಖರೀದಿಸುವವರಿಗಾಗಿ ಸಂತಸಕರ ಸುದ್ದಿಯೊಂದನ್ನು ಇಂದಿನ ಲೇಖನದಲ್ಲಿ ತಿಳಿಸಲಾಗುತ್ತಿದೆ. ಈಗ ಭಾರತದಲ್ಲಿ ಈ ಡಿವೈಸ್ ರೂ 45,000 ದಲ್ಲಿ ಲಭ್ಯವಿದ್ದು ತನ್ನ ಬಿಡುಗಡೆಯ ಸಮಯಕ್ಕಿಂತ ರೂ. 5,000 ವನ್ನು ಕಡಿಮೆ ಮಾಡಿದೆ.

ಎಕ್ಸ್‌ಪೀರಿಯಾ Z2, ಎಕ್ಸ್‌ಪೀರಿಯಾ Z1 ನ ಯಶಸ್ಸಿನಿಂದ ಪರಿಣಾಮಕಾರಿಯಾಗಿ ಮಾರುಕಟ್ಟೆಯಲ್ಲಿ ಮುನ್ನಡೆಯುತ್ತಿರುವ ಹ್ಯಾಂಡ್‌ಸೆಟ್ ಆಗಿದ್ದು 5.2 ಇಂಚಿನ ಪೂರ್ಣ ಎಚ್‌ಡಿ ಡಿಸ್‌ಪ್ಲೇ ಐಪಿಎಸ್ ರೆಸಲ್ಯೂಶನ್‌ನೊಂದಿಗೆ ಬಂದಿದೆ. ಇದು 2.3GHz ಕ್ವಾಡ್‌ಕೋರ್ ಸ್ನ್ಯಾಪ್‌ಡ್ರಾಗನ್ 801 ಚಿಪ್‌ಸೆಟ್‌ನೊಂದಿಗೆ ಬಂದಿದ್ದು, 32 ಜಿಬಿ RAM ನೊಂದಿಗೆ ಮಹತ್ವಪೂರ್ಣ

ಹ್ಯಾಂಡ್‌ಸೆಟ್ ಆಗಿ ಮನಸೋಲುವಂತೆ ಮಾಡಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಆವೃತ್ತಿ ಇದರಲ್ಲಿ ಚಾಲನೆಗೊಳ್ಳುತ್ತಿದ್ದು ಸೋನಿ ಕಂಪೆನಿಯ ಗುಣಮಟ್ಟದ ಹೊದ್ದಿಕೆಯಿಂದ ಆವರಿತಗೊಂಡು ಮನಸೂರೆಗೊಳ್ಳುವಂತಿದೆ.

ಸೋನಿ ಎಕ್ಸ್‌ಪೀರಿಯಾದ ಇನ್ನಷ್ಟು ಮಹತ್ವಕಾರಿ ಅಂಶಗಳನ್ನು ವೈಶಿಷ್ಟ್ಯಗಳನ್ನು ಕೆಳಗಿನ ಸ್ಲೈಡ್‌ಗಳಲ್ಲಿ ತಿಳಿದುಕೊಂಡು ಈ ಡಿವೈಸ್ ಏಕೆ ಇಷ್ಟೊಂದು ಜನಪ್ರಿಯವಾಗುತ್ತಿದೆ ಎಂಬುದನ್ನು ಅರಿತುಕೊಳ್ಳೋಣ.

#1

#1

ಎಕ್ಸ್‌ಪೀರಿಯಾ Z2 ಗ್ಲಾಸ್ ವಿನ್ಯಾಸದೊಂದಿಗೆ ಬಂದಿದ್ದು ನೀರು ಮತ್ತು ಧೂಳಿನಿಂದ ರಕ್ಷಣೆಯನ್ನು ಪಡೆಯುವಲ್ಲಿ ಸಫಲಗೊಂಡಿದೆ. ಆಳವಾದ ನೀರಿನಲ್ಲಿ 30 ನಿಮಿಷಗಳ ಕಾಲರಕ್ಷಣೆಯನ್ನು ಪಡೆಯುವ ಸಾಮರ್ಥ್ಯ ಫೋನ್‌ಗಿದ್ದು ಮತ್ತೆಲ್ಲಾ ಡಿವೈಸ್‌ಗಿಂತ ಬೇರೆಯಾಗಿ ನಿಲ್ಲುವ ಗುಣ ಇದಕ್ಕಿದೆ ಎಂಬುದು ತಿಳಿದುಬರುತ್ತದೆ.

#2

#2

ಇದು ಅತ್ಯದ್ಭುತವಾದ 5.2 ಇಂಚಿನ 1080ಪಿ ಪರದೆಯನ್ನು ಹೊಂದಿದ್ದು ಇದು ಲೈವ್ ಕಲರ್ ಎಲ್‌ಇಡಿ ವೈಶಿಷ್ಟ್ಯವನ್ನು ಹೊಂದಿರುವ ಮೊದಲ ಫೋನ್ ಆಗಿದೆ.

#3

#3

ಇದು 20.7 ಎಮ್‌ಪಿ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಹೊಂದಿದ್ದು ಆಟೋ ಫೋಕಸ್ ಮತ್ತು ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಬಂದಿದೆ. ಇದು 2.2 ಎಮ್‌ಪಿ ಫ್ರಂಟ್ ಫೇಸಿಂಗ್ ಶೂಟರ್ಅನ್ನು ಹೊಂದಿದೆ. ಇದು ಅಸಂಖ್ಯಾತ ಕ್ಯಾಮೆರಾ ಅಪ್ಲಿಕೇಶನ್‌ಗಳನ್ನು ಹೊಂದಿದ್ದು ಬಳಕೆದಾರರು ಬ್ಲರ್ ಬ್ಯಾಕ್‌ಗ್ರೌಂಡ್, ಕ್ರಿಯಾತ್ಮಕ ಗುಣಗಳನ್ನು ಚಿತ್ರಗಳಿಗೆ ಅನ್ವಯಿಸುವುದುಮತ್ತು ಇದನ್ನು ಸಾಮಾಜಿಕ ಪ್ಲಾಟ್‌ಫಾರ್ಮ್‌ಗಳಾದ ಫೇಸ್‌ಬುಕ್ ಮತ್ತು ಟ್ವಿಟ್ಟರ್‌ನಲ್ಲಿ ಲೈವ್ ಆಗಿ ಹಂಚಿಕೊಳ್ಳುವ ಸೌಲಭ್ಯವನ್ನು ಎಕ್ಸ್‌ಪೀರಿಯಾ Z2 ನಿಮಗೆ ಒದಗಿಸಲಿದೆ.

#4

#4

ಇದು ಡ್ಯುಯೆಲ್ ಸ್ಟಿರಿಯೋ ಸ್ಪೀಕರ್ ಅನ್ನು ಹೊಂದಿದ್ದು, ನಿಮಗೆ ಸಂಗೀತದ ಅನುಭವವನ್ನು ಪ್ರಯಾಣದ ಉದ್ದಗಲಕ್ಕೂ ನೀಡುವ ಸಾಮರ್ಥ್ಯವನ್ನು ಹೊಂದಿದೆ. ಇದು ಡಿಜಿಟಲ್ನೋಯ್ಸ್ ಕ್ಯಾನ್ಸಲೇಶನ್ ತಂತ್ರಜ್ಞಾನದೊಂದಿಗೆ ಬಂದಿದ್ದು ನಿಮ್ಮ ಸುತ್ತಲಿರುವ ಅನಾವಶ್ಯಕ ಶಬ್ದಗಳನ್ನು ಇದು ರದ್ದುಗೊಳಿಸುತ್ತದೆ.

#5

#5

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನಂತೆ, ಎಕ್ಸ್‌ಪೀರಿಯಾ Z2 ಕೂಡ 4ಕೆ ರೆಸಲ್ಯೂಶನ್ ವೀಡಿಯೋವನ್ನು ಶೂಟ್ ಮಾಡುವ ಗುಣವನ್ನು ಹೊಂದಿದೆ. ಆದರೆ ಈ ವೈಶಿಷ್ಟ್ಯವನ್ನುಬಳಸಲು ನೀವು 4ಕೆ ಟಿವಿಯನ್ನು ಹೊಂದುವುದು ಆವಶ್ಯಕವಾಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X