ಸೋನಿಯ ಹೊಸ ಎಕ್ಸ್‌ಪೀರಿಯಾ Z3 ಲಾಂಚ್

By Shwetha
|

ಇನ್ನಷ್ಟು ವಿಶದವಾಗಿ ಹೇಳಬೇಕೆಂದರೆ, ಸೋನಿಯ ಹೊಸ ಎಕ್ಸ್‌ಪೀರಿಯಾ Z3 ನಿಜಕ್ಕೂ ಕಮಾಲಿನ ಫೋನ್ ಆಗಿದೆ. ಇದರ ಹಿಂದಿನ ಆವೃತ್ತಿ ಎಕ್ಸ್‌ಪೀರಿಯಾ Z2 ಅನ್ನು ಹೊಸ ಎಕ್ಸ್‌ಪೀರಿಯಾ Z3 ಗೆ ಹೋಲಿಸಿದಾಗ ಅಂತಹ ಗಂಭೀರವಾದ ಬದಲಾವಣೆಗಳೇನೂ ಕಾಣುವುದಿಲ್ಲ. ಆದರೂ ಈ ಫೋನ್‌ ಮಾರುಕಟ್ಟೆಗೆ ನೀಡಿರುವಂತಹ ಭರ್ಜರಿ ಪ್ರವೇಶ ಮಾತ್ರ ಇತರ ಹೊಸ ಲಾಂಚಿಂಗ್ ಫೋನ್‌ಗಳಲ್ಲಿ ಮಿಂಚಿನ ಸಂಚಾರವನ್ನು ಉಂಟುಮಾಡುವುದು ನಿಶ್ಚಯವಾಗಿದೆ.

ಸೋನಿಯ ಪ್ರವೇಶ ಅಂತಹುದ್ದೇ ಅದಕ್ಕೆ ಹೆಚ್ಚುವರಿ ಪೀಠಿಕೆಯ ಅಗತ್ಯವೇ ಇರುವುದಿಲ್ಲ. ಮತ್ತು ತನ್ನ ಹೊಸ ಸೆಟ್ ಅನ್ನು ಪ್ರಾಯೋಜಿಸಲು ಹೆಚ್ಚಿನ ತಯಾರಿಯನ್ನು ಕಂಪೆನಿಗೆ ಮಾಡಬೇಕಾಗಿಲ್ಲ. ಇನ್ನು ಫೋನ್‌ನ ವಿಶೇಷತೆಗಳತ್ತ ಗಮನಹರಿಸುವುದಾದರೆ, ಎಕ್ಸ್‌ಪೀರಿಯಾ Z3, 5.2 ಇಂಚಿನ ಪೂರ್ಣ HD ರೆಸಲ್ಯೂಶನ್ ಇರುವ 1920x1080 ಪಿಕ್ಸೆಲ್‌ಗಳ ಡಿಸ್‌ಪ್ಲೇಯನ್ನು ಒದಗಿಸುತ್ತಿದೆ. ಕಂಪೆನಿಯ ಟ್ರಿಲ್ಯುಮಿನಿಯಸ್ ಡಿಸ್‌ಪ್ಲೇಯನ್ನು ಈ ಸೆಟ್ ಹೊಂದಿದ್ದು ಮೊಬೈಲ್ ಚಿತ್ರಕ್ಕಾಗಿ ಎಕ್ಸ್ ರಿಯಾಲಿಟಿಯನ್ನು ಇದು ಪಡೆದುಕೊಂಡಿದೆ.

ಇದನ್ನೂ ಓದಿ:ಹೊಸ ಮೋಟೋ ಎಕ್ಸ್‌ಗೆ ಎದುರಾಗಿದೆ ಅಗ್ನಿಪರೀಕ್ಷೆ

ಸ್ಮಾರ್ಟ್‌ಫೋನ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 801 SoC ಜೊತೆಗೆ 2.5 GHz ಕ್ವಾಡ್ ಕೋರ್ CPU ನೊಂದಿಗೆ ಬಂದಿದ್ದು 4G LTE ಮೋಡೆಮ್ ಮತ್ತು Adreno 330 GPU ಅನ್ನು ಡಿವೈಸ್ ಹೊಂದಿದೆ. ಸೋನಿಯು 3 ಜಿಬಿ RAM ಅನ್ನು ಸ್ವಿಫ್ಟ್ ಮಲ್ಟಿ ಟಾಸ್ಕಿಂಗ್ ಕಾರ್ಯಾಚರಣೆಗಳಿಗಾಗಿ ನೀಡಿದ್ದು ಇದು ಗೂಗಲ್‌ನ ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಓಎಸ್ ಅನ್ನು ಚಾಲನೆ ಮಾಡುತ್ತಿದೆ. ಇನ್ನು ಫೋನ್‌ನಲ್ಲಿ ಹೆಚ್ಚು ಮನಸೆಳೆಯುವ ಅಂಶಗಳೆಂದರೆ ಇದು 20.7 ಎಮ್‌ಪಿ ಯ ಹಿಂಭಾಗ ಕ್ಯಾಮೆರಾವನ್ನು ಪಡೆದುಕೊಂಡಿದ್ದು ಎಲ್‌ಇಡಿ ಫ್ಲ್ಯಾಶ್ ಇದರಲ್ಲಿದೆ. ಇನ್ನು ಫೋನ್‌ನ ಮುಂಭಾಗ ಕ್ಯಾಮೆರಾವು 2.2 ಎಮ್‌ಪಿ ಆಗಿದ್ದು ಫೋನ್ 16 ಜಿಬಿ ಆಂತರಿಕ ಸಂಗ್ರಹಣೆ ಮತ್ತು 128 ಜಿಬಿಗೆ ವಿಸ್ತರಿಸಬಹುದಾದ ಎಸ್‌ಡಿ ಕಾರ್ಡ್ ಸ್ಲಾಟ್‌ನೊಂದಿಗೆ ಆಗಮಿಸಿದೆ.

ಇನ್ನು ಫೋನ್‌ನಲ್ಲಿರುವ ಸಂಪರ್ಕ ವಿಶೇಷತೆಗಳೆಂದರೆ 4G LTE, aGPS/GLONASS, ಬ್ಲ್ಯೂಟೂತ್ 4.0, DLNA, NFC, Native USB ಟೆದರಿಂಗ್ ಸಿಂಕ್ರೊನೈಸೇಶನ್, ಯುಎಸ್‌ಬಿ ಹೈ ಸ್ಪೀಡ್ 2.0 ಮತ್ತು ಮೈಕ್ರೋ ಯುಎಸ್‌ಬಿ ಬೆಂಬಲ, ವೈಫೈ ಮತ್ತು ವೈಫೈ ಹಾಟ್‌ಸ್ಪಾಟ್ ಇದರಲ್ಲಿದೆ. ಸೋನಿ ಎಕ್ಸ್‌ಪೀರಿಯಾ 3100 ಬ್ಯಾಟರಿಯನ್ನು ಒಳಗೊಂಡಿದ್ದು, ವೈಫೈ, ವೈಫೈ ಹಾಟ್‌ಸ್ಪಾಟ್ ಇದರಲ್ಲಿದೆ. ಸೋನಿಯ ಪ್ರಕಾರ ಇದು 19 ಗಂಟೆಗಳಿಗೂ ಮೇಲ್ಪಟ್ಟು ಟಾಕ್ ಟೈಮ್ ಅನ್ನು ನೀಡಲಿದ್ದು ಇದರ ಸ್ಟ್ಯಾಂಡ್ ಬೈ ಅವಧಿ 740 ಗಂಟೆಗಳಾಗಿದೆ.

ಇದನ್ನೂ ಓದಿ: ಅತ್ಯುತ್ತಮ ಎಚ್‌ಟಿಸಿ ಕ್ವಾಡ್ ಕೋರ್ ಫೋನ್‌ಗಳು

#1

#1

ಬೆಲೆ ರೂ 36,975
4.0 ಇಂಚಿನ, 640x1136 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಐಓಎಸ್ ಆವೃತ್ತಿ 7.0.1
ಡ್ಯುಯಲ್ ಕೋರ್ 1300 MHz ಪ್ರೊಸೆಸರ್
8 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.2 ಎಮ್‌ಪಿ ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ
1 ಜಿಬಿ RAM
1570 mAh, Li-Polymer ಬ್ಯಾಟರಿ

#2

#2

ಬೆಲೆ ರೂ 44,499
5.1 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.4 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
16 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
2800 mAh, Li-Ion ಬ್ಯಾಟರಿ

#3

#3

ಬೆಲೆ ರೂ 39,200
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3000 mAh, Li-Polymer ಬ್ಯಾಟರಿ

#4

#4

ಬೆಲೆ ರೂ 37,990
5.5 ಇಂಚಿನ, 1440x2560 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC, DLNA
32 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3000 mAh, Li-Polymer ಬ್ಯಾಟರಿ

#5

#5

ಬೆಲೆ ರೂ 39,990
5.2 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
20.7 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA
16 ಜಿಬಿ ಆಂತರಿಕ ಮೆಮೊರಿ ಇದನ್ನು 128 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 mAh, Li-Ion ಬ್ಯಾಟರಿ

#6

#6

ಬೆಲೆ ರೂ 39,390
5.7 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, Super AMOLED
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 1900 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2 ಎಮ್‌ಪಿ ದ್ವಿತೀಯ
3ಜಿ, ವೈಫೈ
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
3 ಜಿಬಿ RAM
3200 mAh, Li-Ion ಬ್ಯಾಟರಿ

#7

#7

ಬೆಲೆ ರೂ 36,405
6.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ವಿಂಡೋಸ್ ಆವೃತ್ತಿ 8
ಕ್ವಾಡ್ ಕೋರ್ 2200 MHz ಪ್ರೊಸೆಸರ್
20 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 1.2 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ ಇದನ್ನು 64 ಜಿಬಿಗೆ ವಿಸ್ತರಿಸಬಹುದು
2 ಜಿಬಿ RAM
3400 mAh, Li-Ion ಬ್ಯಾಟರಿ

#8

#8

ಬೆಲೆ ರೂ 39,500
6.0 ಇಂಚಿನ, 1280x720 ಪಿಕ್ಸೆಲ್ ಡಿಸ್‌ಪ್ಲೇ, OLED
ಆಂಡ್ರಾಯ್ಡ್ ಆವೃತ್ತಿ 4.2.2 ಜೆಲ್ಲಿಬೀನ್
ಕ್ವಾಡ್ ಕೋರ್ 2260 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 2.1 ಎಮ್‌ಪಿ ದ್ವಿತೀಯ
3ಜಿ, ವೈಫೈ, DLNA, NFC
32 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3500 mAh, Li-Polymer ಬ್ಯಾಟರಿ

#9

#9

ಬೆಲೆ ರೂ 39,249
5.0 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, S-LCD 3
ಆಂಡ್ರಾಯ್ಡ್ ಆವೃತ್ತಿ 4.4.2 ಕಿಟ್‌ಕ್ಯಾಟ್
ಕ್ವಾಡ್ ಕೋರ್ 2500 MHz ಪ್ರೊಸೆಸರ್
4 ಯುಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC
16 ಜಿಬಿ ಆಂತರಿಕ ಮೆಮೊರಿ 128 ಜಿಬಿಗೆ ಇದನ್ನು ವಿಸ್ತರಿಸಬಹುದು
2 ಜಿಬಿ RAM
2600 mAh, Li-Polymer ಬ್ಯಾಟರಿ

#10

#10

ಬೆಲೆ ರೂ 32,990
5.9 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ, IPS LCD
ಆಂಡ್ರಾಯ್ಡ್ ಆವೃತ್ತಿ 4.2 ಜೆಲ್ಲಿಬೀನ್
ಕ್ವಾಡ್ ಕೋರ್ 1700 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 13 ಎಮ್‌ಪಿ ದ್ವಿತೀಯ
3ಜಿ, ವೈಫೈ, NFC, DLNA
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
3160 mAh, Li-Ion ಬ್ಯಾಟರಿ

#11

#11

ಬೆಲೆ ರೂ 31,990
5.5 ಇಂಚಿನ, 1080x1920 ಪಿಕ್ಸೆಲ್ ಡಿಸ್‌ಪ್ಲೇ,LCD
ಆಂಡ್ರಾಯ್ಡ್ ಆವೃತ್ತಿ 4.3 ಜೆಲ್ಲಿಬೀನ್
ಕ್ವಾಡ್ ಕೋರ್ 2300 MHz ಪ್ರೊಸೆಸರ್
13 ಎಮ್‌ಪಿ ಪ್ರಾಥಮಿಕ ಕ್ಯಾಮೆರಾ 5 ಎಮ್‌ಪಿ ದ್ವಿತೀಯ
3ಜಿ, ವೈಫೈ
16 ಜಿಬಿ ಆಂತರಿಕ ಮೆಮೊರಿ
2 ಜಿಬಿ RAM
2800 mAh, Li-Ion ಬ್ಯಾಟರಿ

Best Mobiles in India

English summary
This article tells about Sony Xperia Z3 Officially Launched in India At Rs 51,990: Top 10 Smartphones Rivals To Consider.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X