ಸ್ಪೈಸ್ ಸ್ಟೆಲ್ಲರ್ 520, ಸ್ಟೆಲ್ಲರ್ 526 ಕಿಟ್‌ಕ್ಯಾಟ್ ಮೋಡಿ

By Shwetha
|

ಮೈಕ್ರೋಮ್ಯಾಕ್ಸ್ ಮತ್ತು ಕಾರ್ಬನ್ ಕಂಪೆನಿಗಳು ಮಾಡಿದ ಅದೇ ಜಾದೂವನ್ನು ಸ್ಪೈಸ್ ಕೂಡ ಇತ್ತೀಚೆಗೆ ಭಾರತೀಯ ಮಾರುಕಟ್ಟೆಯಲ್ಲಿ ಮಾಡುತ್ತಿದೆ. ಬಜೆಟ್ ಪರಿಧಿಯೊಳಗೆ ಬರುವಂತಹ ಎರಡು ಹ್ಯಾಂಡ್‌ಸೆಟ್‌ಗಳನ್ನು ಕಾರ್ಬನ್ ಸ್ಪೈಸ್ ಈ ಬಾರಿ ಬಿಡುಗಡೆ ಮಾಡಲಿದ್ದು ಮಾರುಕಟ್ಟೆಯಲ್ಲಿ ಕೊಂಚ ತಲ್ಲಣವನ್ನು ಈ ಸುದ್ದಿ ಉಂಟುಮಾಡಿದೆ.

ರೂ 8,999 ಮತ್ತು ರೂ 11,499 ಕ್ಕೆ ಲಭ್ಯವಾಗುತ್ತಿರುವ ಈ ಹ್ಯಾಂಡ್‌ಸೆಟ್‌ಗಳು ಸ್ಪೈಸ್ ಸ್ಟೆಲ್ಲರ್ 520 ಮತ್ತು ಸ್ಪೈಸ್ ಸ್ಟೆಲ್ಲರ್ 526 ಎಂಬ ಹೆಸರುಗಳನ್ನು ಹೊಂದಿವೆ. ಈ ಮೊದಲೇ ನಾವು ತಿಳಿಸಿದಂತೆ ಇವೆರಡೂ ಫೋನ್‌ಗಳು ಬಜೆಟ್‌ ಪರಿಧಿಯೊಳಗೆ ಬರುತ್ತಿವೆ. ಇದೇ ಬಜೆಟ್‌ನಲ್ಲಿ ಲಭ್ಯವಾಗುತ್ತಿರುವ ಇತರೆ ಫೋನ್‌ಗಳಿಗೆ ಇವೆರಡೂ ಸೆಟ್‌ಗಳು ಭರ್ಜರಿ ಸ್ಪರ್ಧೆಯನ್ನು ಒಡ್ಡಲಿವೆ.

ಇವೆರಡೂ ಫೋನ್‌ಗಳ ವಿಶೇಷತೆಗಳನ್ನು ಮುಂದಿನ ಸ್ಲೈಡ್‌ಗಳಲ್ಲಿ ನೋಡಿ

#1

#1

ಸ್ಪೈಸ್ ಸ್ಟೆಲ್ಲರ್ 520 ಇತ್ತೀಚಿನ ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯಲ್ಲಿ ಚಾಲನೆಯಾಗುತ್ತಿದೆ. ಡಿವೈಸ್ 5 ಇಂಚಿನ (12.7cms) HD OGS ಲ್ಯಾಮಿನೇಶನ್ ಡಿಸ್‌ಪ್ಲೇಯನ್ನು ಹೊಂದಿದೆ. 1.3 GHz ಕ್ವಾಡ್ ಕೋರ್ ಪ್ರೊಸೆಸರ್ ಫೋನ್‌ನಲ್ಲಿದ್ದು 8.4mm ಸ್ಲಿಮ್‌ನೆಸ್ ಅನ್ನು ಪಡೆದುಕೊಂಡಿದೆ.

#2

#2

ಸ್ಟೆಲ್ಲರ್ 520 8 ಮೆಗಾಪಿಕ್ಸೆಲ್‌ಗಳ ರಿಯರ್ ಕ್ಯಾಮೆರಾವನ್ನು ನೀಡಲಿದ್ದು 2 ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಫೋನ್‌ಗಿದೆ. 1 ಜಿಬಿ RAM ಪೋನ್‌ನ ಒಳಗಿದ್ದು 4 ಜಿಬಿ ಆಂತರಿಕ ಸಂಗ್ರಹಣಾ ಸ್ಥಳ ಇದರಲ್ಲಿದೆ. ಇದರ ಸಂಗ್ರಹಣಾ ಸಾಮರ್ಥ್ಯವನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. 2000 mAh ಬ್ಯಾಟರಿ ಫೋನ್‌ಗಿದ್ದು ಡ್ಯುಯೆಲ್ ಸಿಮ್, 3 ಜಿ ಮತ್ತು 2 ಜಿ ಸಾಮರ್ಥ್ಯಗಳನ್ನು ಇದು ಒಳಗೊಂಡಿದೆ. ಬ್ಲ್ಯೂಟೂತ್ 3.0, GPS/AGPS/GMS ಇದರಲ್ಲಿದೆ. ಇದು 500 ರೂಪಾಯು ಬೆಲೆ ಬಾಳುವ ಉಚಿತ ಫ್ಲಿಪ್ ಕವರ್ ಕೂಡ ಹೊಂದಿದೆ.

#3

#3

ಇದು 5 ಇಂಚಿನ On-Cell IPS ತಂತ್ರಜ್ಞಾನದೊಂದಿಗೆ ಬಂದಿದ್ದು 1.5 GHz ಹೆಕ್ಸಾ ಕೋರ್ ಪ್ರೊಸೆಸರ್ 8.3mm ಸ್ಲಿಮ್‌ನೆಸ್ ಡಿವೈಸ್‌ಗಿದೆ. ಇದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಓಎಸ್‌ನಲ್ಲಿ ಚಾಲನೆಯಾಗುತ್ತಿದೆ.

#4

#4

ಸ್ಪೈಸ್ ಸ್ಟೆಲ್ಲರ್ 526 8 ಮೆಗಾಪಿಕ್ಸೆಲ್ AF ರಿಯರ್ ಕ್ಯಾಮೆರಾವನ್ನು ಒದಗಿಸುತ್ತಿದ್ದು, 3.2 ಮೆಗಾಪಿಕ್ಸೆಲ್ ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದೆ. 1 ಜಿಬಿ RAM ಅನ್ನು ಡಿವೈಸ್ ಹೊಂದಿದ್ದು 8 ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯ ಫೋನ್‌ನಲ್ಲಿದೆ. ಇದನ್ನು 32 ಜಿಬಿಗೆ ವಿಸ್ತರಿಸಬಹುದಾಗಿದೆ. 2500 mAh ಬ್ಯಾಟರಿ ಡಿವೈಸ್‌ನಲ್ಲಿದೆ.

#5

#5

ಇದರಲ್ಲಿ ಸೇರ್ಪಡೆಗೊಂಡಿರುವ ಇತರ ವೈಶಿಷ್ಟ್ಯಗಳೆಂದರೆ ಡ್ಯುಯೆಲ್ ಸಿಮ್, 3 ಜಿ ಮತ್ತು 2ಜಿಯಾಗಿದೆ. ವೈಫೈ, ಬ್ಲ್ಯೂಟೂತ್ 4.0, ಎಫ್‌ಎಮ್ ರೇಡಿಯೋ ಮತ್ತು ನೀವು ಬಯಸುವ ಹೆಚ್ಚುವರಿ ಸಂಪರ್ಕ ಅಂಶಗಳು ಫೋನ್‌ನಲ್ಲಿವೆ.

Best Mobiles in India

Read more about:
English summary
This article tells about that Spice Stellar 520, Stellar 526 Budget Android KitKat Phones Officially Launched.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X