ಸೆಲ್ಪಿ ಇತಿಹಾಸವನ್ನೇ ಬದಲಿಸಲಿರುವ ಓಪ್ಪೋ F3 ಪ್ಲಸ್ ಡುಯಲ್ ಸೆಲ್ಫಿ ಕ್ಯಾಮೆರಾ..!!

ಸ್ಮಾರ್ಟ್‌ಪೋನ್ ಕ್ಯಾಮರೆಗಳಾಳಲ್ಲೇ ಇದು ಹೊಸ ಭಾಷ್ಯ ಬರೆಯಲಿದೆ.

|

ಇಂದು ಸ್ಮಾರ್ಟ್‌ಪೋನೆಂಬುದು ಕೇವಲ ಪೋನಾಗಿ ಉಳಿದಿಲ್ಲ. ಕ್ಯಾಮೆರಾಗಳಿಗಿಂತಲೂ ಹೆಚ್ಚಿನದಾಗಿ ಫೋಟೋ ತೆಗೆದುಕೊಳ್ಳುವುದಕ್ಕೆ ಬಳಸಲಾಗುತ್ತಿದೆ. ಆದರಲ್ಲಿಯೂ ಸೆಲ್ಪಿ ಫೋಟೊಗಳಂತೂ ಇಂದು ಹೆಚ್ಚಾಗಿದ್ದು, ಪ್ರತಿಯೊಬ್ಬರು ತಮ್ಮ ಫೋಟೋಗಳನ್ನು ತಾವೆ ತೆಗೆದುಕೊಳ್ಳುವಲ್ಲಿ ಬಿಝಿಯಾಗಿರುವುದನ್ನು ನಾವು ಕಾಣಬಹುದಾಗಿದೆ. ಸೆಲ್ಪಿ ಕ್ರೆಜ್ ಇರುವವರಿಗೆ ಸ್ಮಾರ್ಟ್‌ಪೋನು ವರದಾನವಾಗಿದೆ ಎಂದರೆ ತಪ್ಪಾಗುವುದಿಲ್ಲ ಎನ್ನಿಸುತ್ತಿದೆ. ಹೀಗಾಗಿಯೇ ಹೆಚ್ಚಿನ ಸ್ಮಾರ್ಟ್‌ಪೋನ್‌ ತಯಾರಕ ಕಂಪನಿಗಳು ಸೆಲ್ಪಿ ಕ್ಯಾಮೆರಾಗಳಿಗೆ ಹೆಚ್ಚಿನ ಆಧ್ಯತೆಯನ್ನು ನೀಡುತ್ತಿದ್ದಾರೆ ಎನ್ನಲಾಗಿದೆ.

ಸೆಲ್ಪಿ ಇತಿಹಾಸವನ್ನೇ ಬದಲಿಸಲಿರುವ ಓಪ್ಪೋ F3 ಪ್ಲಸ್ ಡುಯಲ್ ಸೆಲ್ಫಿ ಕ್ಯಾಮೆರಾ..!!

ಓದಿರಿ: ಜಿಯೋ ಪ್ರೈಮ್ ತಿಂಗಳ ರಿಜಾರ್ಜ್ 303 ರೂ. ಅಲ್ಲ, ಕೇವಲ 273 ರೂ....!!!

ಸೆಲ್ಫಿ ಫೋಟೋಗಳ ಸಂಖ್ಯೆ ಹೆಚ್ಚಾದಂತೆ ಸ್ಮಾರ್ಟ್‌ಪೋನಿನ ಹಿಂಬದಿ ಕ್ಯಾಮೆರಗಳ ಪ್ರಾಮುಖ್ಯತೆಯನ್ನು ಕಳೆದುಕೊಳ್ಳುತ್ತಿದ್ದು ಹಾಗೆಯೇ ಹಿಂಭಾಗದ ಕ್ಯಾಮೆರಾದಲ್ಲಿ ಪೋಟೋ ಕ್ಲಿಕ್ಕಿಸುವ ಸಂಖ್ಯೆಯೂ ಇಳಿಮುಖವಾಗಿದ್ದು, ಪ್ರತಿಯೊಬ್ಬರು ಸೆಲ್ಫಿ ತೆಗೆದುಕೊಳ್ಳುವುದರಲ್ಲೇ ಹೆಚ್ಚಿನ ಸಂತೋಷವನ್ನು ಅನುಭವಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ಸೆಲ್ಪಿ ಕ್ಯಾಮೆರಾ ಆದ್ಯತೆ ನಿಡುವ ಸ್ಮಾರ್ಟ್‌ಪೋನುಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದಕ್ಕಾಗಿಯೇ ಮುಂಭಾಗದ ಕ್ಯಾಮೆರಾಗಳೆ ಹೆಚ್ಚಿನ ಗುಣಮಟ್ಟ ಸೇರಿದಂತೆ ಹಲವು ಆಯ್ಕೆಗಳನ್ನು ಹೊಂದಿರುತ್ತವೆ. ಅವುಗಳ ಕುರಿತ ಒಂದು ನೋಟ ಮುಂದಿನಂತಿದೆ.

ಓಪೋ F3 ಪ್ಲಸ್: ಮೊದಲ ಡುಯಲ್ ಫ್ರಂಟ್ ಕ್ಯಾಮೆರಾದ ಸ್ಮಾರ್ಟ್‌ಪೋನ್

ಓಪೋ F3 ಪ್ಲಸ್: ಮೊದಲ ಡುಯಲ್ ಫ್ರಂಟ್ ಕ್ಯಾಮೆರಾದ ಸ್ಮಾರ್ಟ್‌ಪೋನ್

ಕ್ಯಾಮೆರಾ ಪೋನುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವುದರಲ್ಲಿ ಮುಂಚೂಣಿಯಲ್ಲಿರುವ ಓಪೋ ಕಂಪನಿಯ F3 ಪ್ಲಸ್ ಪೋನು ಸೆಲ್ಪಿ ಎಕ್ಸ್‌ಪರ್ಟ್ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ. ಸೆಲ್ಪಿಗಾಗಿಯೇ ಡುಯಲ್ ಕ್ಯಾಮೆರಾ ಈ ಪೋನಿನ್ಲಲಿದೆ. ಒಂದು ವೈಡ್ ಆಂಗಲ್ ಮತ್ತೊಂದು ಸ್ಟಾಂಡರ್ಡ್ ಕ್ಯಾಮೆರಾಗಳಿದ್ದು, ಈ ಎರಡು ಕ್ಯಾಮೆರಾಗಳು ಒಟ್ಟಾಗಿ ಉತ್ತಮ ಸೆಲ್ಪಿ ಫೋಟೋಗಳನ್ನು ತೆಗೆಯಲು ಹೇಳಿ ಮಾಡಿಸಿದಂತಿದೆ. ಅಲ್ಲದೇ ಈ ಪೋನಿನಲ್ಲಿರುವ ಎರಡು ಕ್ಯಾಮೆರಗಳು ಗೂಪ್ ಸೆಲ್ಪಿ ತೆಗೆದುಕೊಳ್ಳಲು ಸೂಕ್ತವಾಗಿರುವಂತೆ ರೂಪಿಸಲಾಗಿದೆ.

ಸೆಲ್ಫಿ ಕ್ಯಾಮೆಗಳ ಇತಿಹಾಸದಲ್ಲೇ ಇದೊಂದು ಮೈಲಿಗಲ್ಲಲಾಗಿದ್ದು, ಹಿಂಬದಿ ಕ್ಯಾಮೆರಾಗಳಿಗಿಂತ ಹೆಚ್ಚಿನ ಆದ್ಯತೆ ಮಂಭಾಗದ ಕ್ಯಾಮೆರಾಗಳಲ್ಲಿ ನೀಡಲಾಗಿದೆ. ಇದೊಂದು ಸೆಲ್ಪಿ ಸ್ಮಾರ್ಟ್‌ಪೋನು ಎಂದರೆ ತಪ್ಪಾಗುವುದಿಲ್ಲ ಎನ್ನಲಾಗಿದೆ. ಸೆಲ್ಪಿ ಪ್ರಿಯರಿಗೆ ಈ ಕ್ಯಾಮೆರಾ ಬಹುಬೇಗ ಇಷ್ಟವಾಗಲಿದೆ.

ಬ್ಯೂಟಿ ಮೋಡ್ 4.0: ಫೇಸ್ ಸೆಲ್ಫಿಗಾಗಿ:

ಬ್ಯೂಟಿ ಮೋಡ್ 4.0: ಫೇಸ್ ಸೆಲ್ಫಿಗಾಗಿ:

ಓಪೋ F3 ಪ್ಲಸ್ ಸೆಲ್ಫಿಗಾಗಿಯೇ ಬ್ಯೂಟಿಫೈಯ್ 4.0 ಸಾಫ್ಟ್‌ವೇರ್‌ವೊಂದನ್ನು ಓಪೋ ಅಳವಡಿಸಿದ್ದು, ಇದು ಕ್ಲಿಯರ್ ಕಟ್ ಸೆಲ್ಪಿಗಾಗಿಯೇ ವಿನ್ಯಾಸ ಮಾಡಲಾಗಿದೆ. ಇದು ಟೂನ್ ಆಟೋ ಆಡ್ಜಟ್ ಮಾಡಲಿದ್ದು, ಶ್ಯಾಡೋ ಮತ್ತು ಲೈಟ್ ಅನ್ನು ಸರಿಯಾಗಿ ಹೊಂದಿಸಿ ಉತ್ತಮ ಫೋಟೋ ಕ್ಲಿಕ್ ಮಾಡಲು ಸಹಾಯ ಮಾಡಲಿದೆ.

ಈ ಸಾಫ್ಟ್ ವೇರ್ ಸೆನ್ಸರ್‌ಗಳ ಸಹಾಯದಿಂದ ಸೆಲ್ಪಿ ಫೋಟೋಗಳನ್ನು ಕ್ಲಿಕ್ ಮಾಡಿ ನಂತರ ಬ್ರೈಟ್ ಮಾಡುವುದಲ್ಲದೇ , ಕ್ಲಿಯರ್ ಸ್ಕಿನ್, ವಿವಿಡ್ ಐ ಮುಂದಾದ ಆಯ್ಲೆಗಳನ್ನು ನಿಮಗಾಗಿ ನೀಡಲಿದೆ. ಸೆಲ್ಪಿ ಫೋಟೋವನ್ನು ಇರುವದಕ್ಕಿಂತ ಅಂದವಾಗಿ ಮಾಡಲು ಬೇಕಾದ ಎಲ್ಲಾ ಅಂಶಗಳು ಇದರಲ್ಲಿದೆ.

ಸೆಲ್ಪಿ ಪನೋರಮ:

ಸೆಲ್ಪಿ ಪನೋರಮ:

ಹಿಂಬದಿ ಕ್ಯಾಮೆರಾಗಳಲ್ಲಿ ಇರುತ್ತದ್ದ ಸೆಲ್ಫಿ ಪನೊರಮ ಆಯ್ಕೆಯೂ ಓಪೋ F3 ಪ್ಲಸ್ ಪೋನಿನ ಸೆಲ್ಪಿ ಕ್ಯಾಮೆರಾಕ್ಕೆ ನೀಡಲಾಗಿದ್ದು, ಡುಯಲ್ ಕ್ಯಾಮೆರಾ ಇರುವುದರಿಂದ ವೈಡ್ ಆಗಂಲ್ ನಲ್ಲಿ ಪನೋರಮ ಸೆಲ್ಪೀಯನ್ನು ಕ್ಲಿಕ್ ಮಾಡಬಹುದಾಗಿದೆ. ಇದಕ್ಕಾಗಿಯೇ ಸೆಲ್ಪಿ ಪನೋರಮ ಆಯ್ಕೆಯನ್ನು ನೀಡಲಾಗಿದೆ. ಕ್ಯಾಮೆರಾವನ್ನು ತಿರುಗಿಸುತ್ತಾ ಸೆಲ್ಪಿ ಪನೋರಮ ಕ್ಲಿಕ್ ಮಾಡಬುಹುದಾಗಿದ್ದು, ಇದು ನಿಮ್ಮ ಸೆಲ್ಪಿಯನ್ನು ಮತ್ತಷ್ಟು ಉತ್ತಮಗೊಳಿಸಲಿದೆ.

ಸ್ಕ್ರಿನ್ ಫ್ಲಾಷ್:

ಸ್ಕ್ರಿನ್ ಫ್ಲಾಷ್:

ಹಿಂಬದಿಯ ಕ್ಯಾಮೆರಾಗಳಲ್ಲಿ ಉತ್ತಮ ಫೋಟೋ ಸೆರೆಹಿಡಿಯಲು ನೆರವಾಗಲು ನೀಡುತ್ತಿದ್ದ ಫ್ಲಾಷ್ ಲೈಟ್ ಅನ್ನು ಬಳಸುವಂತೆ ಓಪೋ F3 ಪ್ಲಸ್ ಪೋನಿನಲ್ಲಿ ಸೆಲ್ಪಿ ಪೋಟೋ ತೆಗೆಯಲು ಸ್ಕ್ರಿನ್ ಫ್ಲಾಷ್ ಆಯ್ಕೆ ನೀಡಿದ್ದಾರೆ. ಕಡಿಮೆ ಲೈಟ್ ಇದ್ದ ಸಂದರ್ಭದಲ್ಲಿ ಉತ್ತಮ ಸೆಲ್ಪಿ ಕ್ಲಿಕಿಸಿಕೊಳ್ಳಲು ಈ ಆಯ್ಕೆ ಸಹಾಯಕಾರಿಯಾಗಲಿದೆ. ಆಟೋ ಮೋಡ್ ನಲ್ಲಿ ಕೆಲಸ ಮಾಡುವ ಈ ಆಯ್ಕೆ ಕೃತಕ ಬೆಳಕನ್ನು ನೀಡಲಿದೆ.

ಮೃದು ಶೆಟ್ಟರ್:

ಮೃದು ಶೆಟ್ಟರ್:

ಈ ಹಿಂದೆ ಬರುತ್ತಿದ ಪೋನುಗಳಲ್ಲಿ ಸೆಲ್ಪಿ ತೆಗೆದುಕೊಳ್ಳಬೇಕಾದರೆ ಹಾಡ್ ಶೆಟ್ಟರ್ ನಿಂದಾಗಿ ಉತ್ತಮ ಪೋಟೋಗಳನ್ನು ಸೆರೆಹಿಡಿಯಲು ಸಾಧ್ಯವಾಗುತ್ತಿರಲಿಲ್ಲ. ಬ್ಲರ್ ಆಗುತ್ತಿತ್ತು ಹಾಗಾಗಿಯೇ ಓಪೋ F3 ಪ್ಲಸ್ ಪೋನಿನಲ್ಲಿ ಮೃದು ಶೆಟ್ಟರ್ ನೀಡಲಾಗಿದ್ದು, ಬ್ಲರ್ ಆಗದೆ, ಶೇಕ್ ಮಾಡದೆ ಉತ್ತಮ ಸೆಲ್ಪಿ ತೆಗೆಯಲು ಇದು ಸಹಾಯಕಾರಿಯಾಗಿದೆ. ಇದಕ್ಕಾಗಿ ಪ್ಲಾಮ್ ಶೆಟ್ಟರ್ ಈ ಪೋನಿನಲ್ಲಿದೆ. ಇದು ಪೋನಿನಲ್ಲೇ ಫೋಟೊ ಪ್ರೋಸೆಸರ್ ಮಾಡಲಿದೆ.

ಅನೇಕ ಫಿಲ್ಟರ್‌ಗಳು:

ಅನೇಕ ಫಿಲ್ಟರ್‌ಗಳು:

ಓಪೋ F3 ಪ್ಲಸ್ ಪೋನಿನಲ್ಲಿ ನಿಮ್ಮ ಫೋಟೋಗಳನ್ನು ಎಡಿಟ್ ಮಾಡಲು ಬೇರೆ ಆಪ್‌ಗಳನ್ನು ಅಳವಡಿಸಿಕೊಳ್ಳುವ ಯಾವುದೇ ಅವಶ್ಯಕತೆ ಇಲ್ಲವೇ ಇಲ್ಲ ಎಂದು ಹೇಳಬಹುದು. ಇಕ್ಕಾಗಿಯೇ ಈ ಪೋನಿನಲ್ಲಿ ಅನೇಕ ಫಿಲ್ಟರ್‌ಗಳನ್ನು ನೀಡಲಾಗಿದ್ದು ಇದರಿಂದ ನಿಮ್ಮ ಪೋಟೋಗಳನ್ನು ಸುಂದರಿಸಿಕೊಳ್ಳಬಹುದಾಗಿದೆ.

ಹಿಂಭಾಗದಲ್ಲಿ 16 MP ಕ್ಯಾಮೆರಾ

ಹಿಂಭಾಗದಲ್ಲಿ 16 MP ಕ್ಯಾಮೆರಾ

ಓಪೋ F3 ಪ್ಲಸ್ ಪೋನಿನಲ್ಲಿ ಮುಂಭಾಗದಲ್ಲಿ ಸೆಲ್ಪಿಗಾಗಿಯೇ ಡುಯಲ್ ಕ್ಯಾಮೆರಾ ನೀಡಿರುವಂತೆ ಹಿಂಭಾಗದಲ್ಲಿ 16 MP ಕ್ಯಾಮೆರಾವನ್ನು ಅಳವಡಿಸಲಾಗಿದ್ದು, ಬೆಸ್ಟ್ ಕ್ಲಾಸ್ ಪೋಟೋಗಳನ್ನು ಕ್ಲಿಕ್ ಮಾಡಲು ಇದು ಸಹಾಯಕಾರಿಯಾಗಿದೆ.

ಇದರಲ್ಲಿರುವ ಬಿಗ್ ಆಪರ್ಚರ್ ಸೆನ್ಸಾರಿಗೆ ಬೆಳಕನ್ನು ತಲುಪಿಸುವಲ್ಲಿ ಪ್ರಮುಖ ಪಾತ್ರವಹಿಸಲಿದ್ದು, ಇದರಿಂದ ಉತ್ತಮ ಫೋಟೊ ಕ್ಯಾಪ್ಚರ್ ಮಾಡಬಹುದಾಗಿದೆ. ಇದಲ್ಲದೇ ಕಡಿಮೆ ಗುಣಮಟ್ಟದಲ್ಲಿ ಸರಿಯಾದ ಚಿತ್ರಗಳನ್ನು ಸೆರೆಹಿಡಿಯಲು ಈ ಕ್ಯಾಮೆರಾ ಸಹಾಯಕಾರಿಯಾಗಿದೆ.

ಎಕ್ಸ್‌ಪರ್ಟ್ ಮೋಡ್:

ಎಕ್ಸ್‌ಪರ್ಟ್ ಮೋಡ್:

ಈ ಪೋನಿನಲ್ಲಿರುವ ಕ್ಯಾಮೆರಾ ಆಪ್‌ನಲ್ಲಿರುವ ಎಕ್ಸ್‌ಪರ್ಟ್ ಮೋಡ್ ನೀವು ಕ್ಲಿಕ್ ಮಾಡುವ ಪೋಟೋವನ್ನು ಎಲ್ಲಾ ರೀತಿಯಿಂದಲೂ ಉತ್ತಮಗೊಳಿಸಲು ಸಹಾಯಕಾರಿಯಾಗಿದೆ. ಅಲ್ಲದೇ ನಿಮ್ಮ ಪೋಟೋಗ್ರಫಿಯ ಸಣ್ಣ ಸಣ್ಣ ಇಂಚುಗಳನ್ನು ಹೆಚ್ಚು ಪ್ರಕಾರವಾಗಿ ಕಾಣುವಂತೆ ಮಾಡಲಿದೆ. ಇದು ವೈಟ್ ಬ್ಯಾಲೆನ್ಸಿಂಗ್ ಮತ್ತು ISO ಗಳನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಿದೆ. ಇದರಿಂದ ನೀವು ಕ್ಲಿಕ್ ಮಾಡುವ ಪೋಟೋ ಪ್ರೋಫೆಷನಲ್ ಲೆವೆಲ್‌ನಲ್ಲಿ ಇರಲಿದೆ.

ಅಲ್ಟ್ರಾ HD:

ಅಲ್ಟ್ರಾ HD:

ಓಪೋ F3 ಪ್ಲಸ್ ಪೋನಿನಲ್ಲಿ Ultra-HD ಮೋಡ್ ನಿಡಲಾಗಿದ್ದು, ಇದು ನೀವು ಕ್ಲಿಕ್ ಮಾಡುವ ಫೋಟೋವಿನ ಗುಣಮಟ್ಟವನ್ನು ಬಹುವಿಧವಾಗಿ ಹೆಚ್ಚಿಸುತ್ತದೆ. ಕಡಿಮೆ MPಯಲ್ಲಿ ತೆಗೆದರು 50MP ಕ್ಯಾಮೆರೆದಲ್ಲಿ ತೆಗೆದಷ್ಟು ಗುಣಮಟ್ಟವನ್ನೇ ಹೊಂದಿರಲಿದೆ. ಇದರಿಂದ ಹೈಡೆಫನೆಷನ್ ಪೋಟೋಗಳನ್ನು ಪಡೆಯಬಹುದಾಗಿದೆ.

 ಡಬಲ್ ಎಕ್ಸ್‌ಪೋಸರ್ ಮತ್ತು ಸುಪರ್ GIF:

ಡಬಲ್ ಎಕ್ಸ್‌ಪೋಸರ್ ಮತ್ತು ಸುಪರ್ GIF:

ಓಪೋ F3 ಪ್ಲಸ್ ಪೋನಿನಲ್ಲಿ ಡಬಲ್ ಎಕ್ಸ್‌ಪೋಸರ್ ಆಯ್ಕೆಯನ್ನು ನೀಡಲಾಗಿದ್ದು, ಎರಡು ಫೋಟೋಗಳನ್ನು ಓವರ್ ಲ್ಯಾಪ್ ಮಾಡಿ ಹೊಸದೊಂದು ಪೋಟೋವನ್ನು ನೀಡುವ ಆಯ್ಕೆ ಉತ್ತಮವಾಗಿದೆ.

ಇದಲ್ಲದೇ ಸುಪರ್ GIF ಆಯ್ಕೆಯನ್ನು ನೀಡಲಾಗಿದ್ದು, ನಿಮ್ಮದೇ ಪೋಟೋಗಳನ್ನು GIF ಮಾದರಿಯಲ್ಲಿ ಚಲಿಸುವಂತೆ ಮಾಡಬಹುದಾಗಿದೆ, ಇದು ಸಹ ಈ ಸ್ಮಾರ್ಟ್‌ಪೋನಿನ ಹೆಗ್ಗಳಿಕೆಯಾಗಿದೆ.

ಕೊನೆ ಮಾತು:

ಕೊನೆ ಮಾತು:

ಒಂದೇ ಮಾತಿನಲ್ಲಿ ಹೇಳುವುದಾರೆ ಓಪೋ F3 ಪ್ಲಸ್ ಕ್ಯಾಮೆರಾ ಸ್ಮಾರ್ಟ್‌ಪೋನ್ ಆಫ್‌ ದಿ ಇಯರ್ ಎನ್ನಬಹುದಾಗಿದೆ, ಹಿಂಬದಿ ಕ್ಯಾಮೆರಾಕ್ಕಿಂತ ಸೆಲ್ಪಿ ಪ್ರಿಯರಿಗಾಗಿಯೇ ಮಾಡಿರುವ ಈ ಪೋನಿನ ಆಯ್ಕೆಗಳು ಮತ್ತೆ ಎಲ್ಲಿಯೂ ಕಾಣ ಸಿಗುವುದೇ ಇಲ್ಲ. ಗೂಪ್ ಸೆಲ್ಪೀ, ಪನೋರಮ ಸೆಲ್ಪಿ ಮುಂದಾದವು ಇದರ ಬಲವಾಗಿದ್ದು, ಸ್ಮಾರ್ಟ್‌ಪೋನ್ ಕ್ಯಾಮೆರಾಗಳಾಳಲ್ಲೇ ಇದು ಹೊಸ ಭಾಷ್ಯ ಬರೆಯಲಿದೆ.

Best Mobiles in India

Read more about:
English summary
The first-of-its kind dual front-facing camera on OPPO F3 Plus is the best selfie camera you can get in the market. to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X