ಸ್ಮಾರ್ಟ್‌ಫೋನ್ ಖರೀದಿಯಲ್ಲಿ ಯಾವ ಅಂಶಗಳು ಅತಿಮುಖ್ಯ

By Shwetha
|

ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿ ಎಂದರೆ ಸ್ವಲ್ಪ ತಲೆನೋವಿನ ಕೆಲಸವೇ ಆಗಿದೆ. ಏಕೆಂದರೆ ಬಜೆಟ್ ಬೆಲೆಯಲ್ಲಿ ಬರುವ ಫೋನ್‌ಗಳು, ಉತ್ತಮ ವಿಶೇಷತೆಯುಳ್ಳ ಫೋನ್‌ಗಳು, ಗುಣಮಟ್ಟದ ಕ್ಯಾಮೆರಾ ಇರುವ ಫೋನ್‌ಗಳು ಹೀಗೆ ಫೋನ್‌ಗಳ ಮಾದರಿಯಲ್ಲೇ ನಾವು ವ್ಯತ್ಯಾಸವನ್ನು ಕಾಣುತ್ತಿದ್ದೇವೆ.

ಓದಿರಿ: ದಿನವಿಡೀ ಫೋನ್ ಚಾರ್ಜ್ ಮಾಡಿ ನಿಶ್ಚಿಂತೆಯಿಂದಿರಿ

ಈ ಭಿನ್ನತೆ ಬಳಕೆದಾರರಲ್ಲಿ ಫೋನ್ ಖರೀದಿಯ ಗೊಂದಲವನ್ನುಂಟು ಮಾಡುತ್ತಿದ್ದು ಯಾವ ಫೋನ್ ಅನ್ನು ಖರೀದಿಸಬೇಕು ಎಂಬ ಜಿಜ್ಞಾಸೆಯತ್ತ ಅವರನ್ನು ನೂಕುತ್ತಿದೆ. ಕೈಗೆಟಕುವ ಬೆಲೆಯಲ್ಲಿ ಉತ್ತಮ ಮೌಲ್ಯದ ಫೋನ್ ಖರೀದಿಯನ್ನು ಮಾಡುವುದು ಹೇಗೆ ಎಂಬುದೇ ಆಧುನಿಕ ಬಳಕೆದಾರರ ಮುಂದೆ ಇರುವ ಅತಿ ದೊಡ್ಡ ಸವಾಲಾಗಿದೆ.

ಓದಿರಿ: ನಿಮ್ಮ ಮೊಬೈಲ್ ಭದ್ರತೆಗಾಗಿ ಅತ್ಯುತ್ತಮ ಅಪ್ಲಿಕೇಶನ್‌ಗಳು

ಇಂದಿನ ಲೇಖನದಲ್ಲಿ ಈ ಅಂಶಗಳಿಗೆ ಪ್ರಾಶಸ್ಯತೆ ನೀಡಿ ಉತ್ತ ಫೋನ್ ಖರೀದಿಯನ್ನು ಮಾಡುವುದು ಹೇಗೆ ಎಂಬುದನ್ನು ಕುರಿತು ಅರಿತುಕೊಳ್ಳೋಣ. ಫೋನ್ ಖರೀದಿಗೆ ನೀವು ಹೊರಟಿದ್ದೀರಿ ಎಂದಾದಲ್ಲಿ ಯಾವ ಅಂಶಗಳಿಗೆ ಮಹತ್ವ ನೀಡಬೇಕು ಎಂಬುದನ್ನು ನೋಡೋಣ.

ಫೀಚರ್ಸ್ ಪರಿಶೀಲಿಸಿ

ಫೀಚರ್ಸ್ ಪರಿಶೀಲಿಸಿ

ನೀವು ಕೈಗೆಟಕುವ ಬೆಲೆಯಲ್ಲಿ ಫೋನ್ ಖರೀದಿ ಮಾಡಬೇಕು ಎಂದಾದಲ್ಲಿ ಅದರ ಫೀಚರ್‌ಗಳನ್ನು ಎರಡು ಬಾರಿ ಪರಿಶೀಲಿಸಿ. ಡಿಸ್‌ಪ್ಲೇ, ರೆಸಲ್ಯೂಶನ್, RAM, ಸಂಗ್ರಹಣೆ ಮೊದಲಾದ ಅಂಶಗಳತ್ತ ಗಮನ ಹರಿಸಿ ಫೋನ್ ಖರೀದಿಸಿ.

ಹಾರ್ಡ್‌ವೇರ್ ಕಡೆ ಗಮನ ಹರಿಸಿ

ಹಾರ್ಡ್‌ವೇರ್ ಕಡೆ ಗಮನ ಹರಿಸಿ

ನೀವು ಫೋನ್ ಖರೀದಿ ಮಾಡುವಾಗ ಹಾರ್ಡ್‌ವೇರ್‌ನತ್ತ ಗಮನ ಹರಿಸಲೇ ಬೇಕು. ಮೊದಲು ಡೆಮೊ ಫೋನ್ ಅನ್ನು ಪರಿಶೀಲಿಸಿ ನಂತರ ನೈಜ ಫೋನ್‌ನ ಖರೀದಿಯನ್ನು ಮಾಡಿ. ಫೋನ್‌ನ ರಚನಾ ಗುಣಮಟ್ಟ ಹಾರ್ಡ್‌ವೇರ್ ಬಟನ್‌ಗಳು ಮತ್ತು ಪೋರ್ಟ್‌ಗಳತ್ತ ಗಮನ ಹರಿಸಿ.

ದುಬಾರಿ ಫೋನ್‌ಗೆ ಹೋಲಿಸದಿರಿ

ದುಬಾರಿ ಫೋನ್‌ಗೆ ಹೋಲಿಸದಿರಿ

ದುಬಾರಿ ಫೋನ್‌ಗಳು ಹೆಚ್ಚು ಶಕ್ತಿಯುತ ಮತ್ತು ಮಿತದರದ ಫೋನ್‌ಗಳು ಅಷ್ಟೊಂದು ಪರಿಣಾಮಕಾರಿಯಲ್ಲ ಎಂಬ ಅಲೋಚನೆಯನ್ನು ನಿಮ್ಮ ತಲೆಯಿಂದ ತೆಗೆದು ಹಾಕಿರಿ. ಇಂದಿನ ದಿನಗಳಲ್ಲಿ ಕಡಿಮೆ ದರದಲ್ಲೂ ಶ್ರೀಮಂತ ವಿಶೇಷತೆಯುಳ್ಳ ಫೋನ್‌ಗಳು ಲಭ್ಯವಾಗುತ್ತಿದ್ದು ಇದು ಖರೀದಿರಾರರ ಮನಗೆಲ್ಲುತ್ತಿದೆ.

ಓಎಸ್ ಪರಿಶೀಲಿಸಿ

ಓಎಸ್ ಪರಿಶೀಲಿಸಿ

ಸ್ಮಾರ್ಟ್‌ಫೋನ್‌ಗಳು ಓಪರೇಟಿಂಗ್ ಸಿಸ್ಟಮ್ ಆದ ಆಂಡ್ರಾಯ್ಡ್, ವಿಂಡೋಸ್ ಮತ್ತು ಬ್ಲ್ಯಾಕ್‌ಬೆರ್ರಿಯಲ್ಲಿ ಚಾಲನೆಯಾಗುತ್ತದೆ. ನೀವು ಫೋನ್ ಖರೀದಿಸುವ ಮುನ್ನ ಓಎಸ್ ಬಗ್ಗೆ ತಿಳಿದುಕೊಳ್ಳಿ. ಆಂಡ್ರಾಯ್ಡ್ ಅಥವಾ ವಿಂಡೋಸ್ ಫೋನ್‌ನ ಹಳೆಯ ಆವೃತ್ತಿಗೆ ಬದ್ಧರಾಗಿರಬೇಡಿ. ಹೊಸ ಹೊಸ ಅಪ್‌ಡೇಟ್‌ಗಳನ್ನು ಪರಿಶೀಲಿಸಿಕೊಳ್ಳುತ್ತಿರಿ.

ಮಾರಾಟ ಬೆಂಬಲ ನಂತರ

ಮಾರಾಟ ಬೆಂಬಲ ನಂತರ

ನಿಮ್ಮ ಫೋನ್ ಏನಾದರೂ ಸಮಸ್ಯೆಯುಂಟು ಮಾಡಿದ ಸಂದರ್ಭದಲ್ಲಿ ಆನ್‌ಲೈನ್‌ನಲ್ಲಿ ಬ್ರ್ಯಾಂಡ್ ಕುರಿತು ಮಾಹಿತಿ ಪರಿಶೀಲಿಸಿ. ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ತಯಾರಕರೂ ವರ್ಷದ ವಾರಂಟಿಯನ್ನು ನೀಡುತ್ತಾರೆ. ಕಂಪೆನಿಯ ಸೇವಾ ಕೇಂದ್ರದ ಬಗ್ಗೆ ಮಾಹಿತಿ ಅರಿತುಕೊಳ್ಳಿ.

Best Mobiles in India

English summary
Nowadays to own a smart phone you do not need to empty your wallet. They have evolved to a great extent that you can have one as per your budget. If you are about to purchase a Smartphone then take into consideration these things before buying one.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X