ರಿಟೋಟ್ ಸ್ಮಾರ್ಟ್‌ವಾಚ್ ಹಸ್ತ ಮಾಂತ್ರಿಕ

By Shwetha
|

ಸ್ಮಾರ್ಟ್‌ವಾಚ್‌ಗಳು ನಮ್ಮನ್ನು ಇತ್ತೀಚೆಗೆ ಆನ್‌ಲೈನ್ ಜಗತ್ತಿಗೆ ಹೆಚ್ಚು ಎಳೆಯುತ್ತಿದೆ. ಈ ವೃಸ್ಟ್‌ಬ್ಯಾಂಡ್ ಪರಿಕಲ್ಪನೆಯನ್ನು ರಿಟೋಟ್ ಎಂದು ಕರೆಯಲಾದ ಅಂಶವು ಹೆಚ್ಚು ಪರಿಷ್ಕರಿಸಿದ್ದು ಈ ಸ್ಮಾರ್ಟ್‌ವಾಚ್ ನಿಮ್ಮ ಕೈಗಳಲ್ಲೇ ಟ್ವಿಟ್ಟರ್ ಮತ್ತು ಫೇಸ್‌ಬುಕ್‌ನ ಅಧಿಸೂಚನೆಗಳನ್ನು ತೋರಿಸಲಿದೆ. ಇದರಿಂದ ನಿಮಗೆ ಸಮಯ, ಒಳಬರುವ ಕರೆಗಳು, ಇಮೇಲ್‌ಗಳು ಹೀಗೆ ಎಲ್ಲಾ ಮಾಹಿತಿ ಕೈಗಳಲ್ಲೇ ದೊರೆಯಲಿದೆ.

ರಿಟೋಟ್ ಎಂದು ಕರೆಯಲಾದ ಮೊದಲ ಪ್ರೊಜೆಕ್ಟ್ ವಾಚ್ ಇದಾಗಿದ್ದು, ಇದರ ಮೇಲೆ ಕಂಪೆನಿ ಇನ್ನೂ ಕೆಲವೊಂದು ಕೆಲಸಗಳನ್ನು ನಡೆಸುತ್ತಿದೆ. ಈ ಪ್ರಕಾರದ ತಂತ್ರಜ್ಞಾನಕ್ಕೆ ಹೆಚ್ಚು ಬೇಡಿಕೆ ಇದೆ ಎಂಬುದು ತಿಳಿದು ಬಂದಿದೆ. ಈ ರಿಟೋಟ್ ವೈಯಕ್ತೀಕರಿಸಿದ ವಿಷಯಗಳನ್ನು ನಿಮ್ಮ ಹಸ್ತದ ಮೇಲ್ಭಾಗದಲ್ಲಿ ಪ್ರದರ್ಶಿಸಲು ಬೆಳಕನ್ನು ಬಳಸುತ್ತದೆ. ಇದು ಎರಡು ಮಾದರಿಗಳಲ್ಲಿ ಬರುತ್ತಿದ್ದು ಯುನಿಸೆಕ್ಸ್, ಅಲ್ಯುಮಿನಿಯಮ್ ಬ್ರಾಸ್‌ಲೆಟ್ ಆಗಿದೆ. ಇದು ನಾಲ್ಕು ಗಾತ್ರಗಳು ಮತ್ತು ಬೇರೆ ಬೇರೆ ಬಣ್ಣಗಳಲ್ಲಿ ಲಭ್ಯವಿದ್ದು ಪ್ಲಾಸ್ಟಿಕ್‌ನಿಂದ ಇದನ್ನು ತಯಾರಿಸಲಾಗಿದೆ.

ಬೆರಳು ತೋರಿಸಿದರೆ ಹಸ್ತವನ್ನೇ ನುಂಗುವ ರಿಟೋಟ್

ನಿಮ್ಮ ಕೈಯಲ್ಲಿ ಡಿಜಿಟಲ್ ಗಡಿಯಾರ ವಿಷಯನ್ನು ಪ್ರಾಜೆಕ್ಟ್ ಮಾಡಿದಾಗ, ತಮ್ಮ ಸ್ಮಾರ್ಟ್‌ಫೋನ್‌ಗೆ ಈ ಡಿವೈಸ್ ಅನ್ನು ಸಂಪರ್ಕಪಡಿಸಿದ ಬಳಕೆದಾರ, ನೈಜ ಸಮಯದಲ್ಲಿ ವೈಬ್ರೇಟ್ ಉಳ್ಳ ಅಧಿಸೂಚನೆಗಳನ್ನು ಪಡೆಯಬಹುದಾಗಿದೆ. ಇದರರ್ಥ ನೀವು ಫೇಸ್‌ಬುಕ್‌ನಲ್ಲಿ ಹೊಸ ಸ್ನೇಹಿತ ಕೋರಿಕೆಯನ್ನು (ಫ್ರೆಂಡ್ ರಿಕ್ವೆಸ್ಟ್) ಸ್ವೀಕರಿಸಿದಾಗ ನಿಮ್ಮ ಹಸ್ತದ ಮೇಲೆ ನೇರವಾಗಿ ಇದನ್ನು ನೋಡಬಹುದು.

ಈ ಅಧಿಸೂಚನೆಯನ್ನು ನಿರಾಕರಿಸಲು, ನಿಮ್ಮ ಕೈಯನ್ನು ಅಲುಗಾಡಿಸಿದರೆ ಸಾಕು. ಇಲ್ಲವೇ ಹತ್ತು ಸೆಕುಂಡುಗಳಲ್ಲಿ ಇದು ಮಾಯವಾಗುತ್ತದೆ. ಇದು ಒನ್ ಟಚ್ ಸೆನ್ಸಿಟೀವ್ ಬಟನ್ ಜೊತೆಗೆ ಬಂದಿದ್ದು ಇದರಿಂದ ನಿಮಗೆ ಪ್ರಾಜೆಕ್ಶನ್ ಅನ್ನು ಬದಲಾಯಿಸಬಹುದಾಗಿದೆ.

ರಿಟೋಟ್ ಅನ್ನು ಐಓಎಸ್, ಆಂಡ್ರಾಯ್ಡ್ ಮತ್ತು ವಿಂಡೋಸ್ ಫೋನ್‌ಗಳಿಗೆ ಸಂಯೋಜಿಸಬಹುದಾಗಿದೆ. ಇದು ಅನನ್ಯ ವೈರ್‌ಲೆಸ್ ಚಾರ್ಜರ್ ಜೊತೆಗೆ ಕೂಡ ಬಂದಿದೆ. ಇದನ್ನು ಚಾರ್ಜಿಂಗ್ ಮಾಡುವ ಮೇಲ್ಭಾಗದಲ್ಲಿ ಇರಿಸಿದಾಗ, ನಿಮ್ಮ ಕೈಯಲ್ಲೇ ಇಪ್ಪತ್ತು ಬಣ್ಣಗಳನ್ನು ಆರಿಸಬಹುದಾಗಿದೆ. ಆಪಲ್ ತನ್ನ ಐವಾಚ್ ಅಂಶವನ್ನು ಬೆಳಕಿಗೆ ತರುವ ಕೆಲವು ತಿಂಗಳುಗಳ ಮುನ್ನ ರಿಟೋಟ್ ಆವಿಷ್ಕಾರವಾಗಿದೆ.

<center><iframe width="100%" height="360" src="//www.youtube.com/embed/OfmReO31grA?feature=player_embedded" frameborder="0" allowfullscreen></iframe></center>

Best Mobiles in India

English summary
This article tells about that This smartwatch concepts projects notifications directly on to your hand.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X