ನಾಲ್ಕು ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳಿಂದ ಭರ್ಜರಿ ಹೊಡೆತ

By Shwetha
|

ನಾವು ಹಿಂದಿನಿಂದಲೂ ಹೇಳಿಕೊಂಡು ನಂಬಿಕೊಂಡು ಬಂದಿರುವುದು ಏನೆಂದರೆ ಮೊಬೈಲ್ ಇಕೋ ಸಿಸ್ಟಮ್ ಅನ್ನು ಎರಡು ವಿಭಾಗಗಳಲ್ಲಿ ವಿಭಜಿಸಿದ್ದು ಒಂದು ಆಂಡ್ರಾಯ್ಡ್ ಮತ್ತು ಐಓಎಸ್ ಎಂದೇ. ಏಕೆಂದರೆ ಇವೆರಡೂ ಪ್ರಮುಖ ಓಎಸ್‌ಗಳು ಸದ್ಯ ಪೋನ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವುದು.

ಇದೀಗ, ಬಿಬಿ ಮತ್ತು ವಿಂಡೋಸ್ ಫೋನ್ ಇವೆರಡೂ ಈ ಓಎಸ್‌ಗಳಿಗೆ ಸಣ್ಣ ಮಟ್ಟಿನ ಪೈಪೋಟಿಯನ್ನು ನೀಡುತ್ತಿವೆ ಎಂದೇ ಭಾವಿಸಿದ್ದೆವು ಆದರೆ ಸ್ವಲ್ಪ ದೊಡ್ಡ ಮಟ್ಟಿನಲ್ಲಿ ಅನಿರೀಕ್ಷಿತ ಹೊಡೆತವನ್ನು ನೀಡಲು ಬರುತ್ತಿರುವ ಮೊಬೈಲ್ ಆಪರೇಟಿಂಗ್ ಸಿಸ್ಟಮ್‌ಗಳು ಫೋನ್ ಕ್ಷೇತ್ರದಲ್ಲಿ ಧೂಳೆಬ್ಬಿಸುವುದು ನಿಶ್ಚಿತವಾಗಿದೆ.

ಗೂಗಲ್ ಮತ್ತು ಆಪಲ್ ಕಂಪೆನಿಗಳು ತಮ್ಮ ಆಪರೇಟಿಂಗ್ ವ್ಯವಸ್ಥೆಗಳಲ್ಲಿ ಸಾಕಷ್ಟು ಅನ್ವೇಷಣೆಗಳನ್ನು ಮಾಡುತ್ತಿದ್ದು ಹೊಸ ಹೊಸ ಕೊಡುಗೆಗೆಳ ಮತ್ತು ದೋಷ ನಿವಾರಕಗಳ ಮೂಲಕ ಗ್ರಾಹಕರನ್ನು ತಮ್ಮತ್ತ ಸೆಳೆಯುವ ಪ್ರಯತ್ನವನ್ನು ಮಾಡುತ್ತಿವೆ. ಆದರೆ ಈ ಕಂಪೆನಿಗಳು ತಾವು ಇದರವರೆಗೆ ನಿರ್ವಹಿಸಿರುವಂತಹ ಆಪರೇಟಿಂಗ್ ವ್ಯವಸ್ಥೆಗಳಲ್ಲಿ

ಬದಲಾವಣೆ ಮಾಡುತ್ತಿದ್ದರೂ ಹೊಸದಾಗಿ ತಮ್ಮ ಆಪರೇಟಿಂಗ್ ವ್ಯವಸ್ಥೆಯನ್ನು ಲಾಂಚ್ ಮಾಡುತ್ತಿರುವ ಕಂಪೆನಿಗಳು ಇವುಗಳ ಬೇಡಿಕೆ ಮಟ್ಟವನ್ನು ಕುಸಿಯುವಂತೆ ಮಾಡುವ ನಿಟ್ಟಿನಲ್ಲಿವೆ.

ಹಾಗಿದ್ದರೆ ಹೊಸದಾಗಿ ಲಾಂಚ್ ಆಗಿರುವ ಮತ್ತು ಆಗುತ್ತಿರುವ ಆಪರೇಟಿಂಗ್ ಸಿಸ್ಟಮ್‌ಗಳತ್ತ ನಿಮ್ಮ ಕುತೂಹಲ ಹರಿಯುತ್ತಿದೆ ಎಂದಾದಲ್ಲಿ ಈ ಲೇಖನ ಇಂದು ಮಹತ್ವದ್ದಾಗುತ್ತದೆ. ಹಾಗಿದ್ದರೆ ಆ ವಿವರಪೂರ್ಣ ಮಾಹಿತಿ ಕೆಳಗಿನ ಸ್ಲೈಡ್‌ಗಳಲ್ಲಿ ನಿಮಗಾಗಿ

#1

#1

ಇದು ಓಪನ್ ಸೋರ್ಸ್ ಆಪರೇಟಿಂಗ್ ಸಿಸ್ಟಮ್ ಅನ್ನು ಹೊಂದಿದ್ದು ಹೆಚ್ಚಾಗಿ ಫೋನ್, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸುವಂತಹ ಓಎಸ್ ಇದಾಗಿದೆ. ಇದನ್ನುಮೊಜೈಲಾ ಅಭಿವೃದ್ಧಿ ಪಡಿಸಿದ್ದು ಹೆಚ್ಚು ನಿರೀಕ್ಷಿತ ಮಟ್ಟದಲ್ಲಿದೆ. ನಿಮ್ಮ ಫೇಸ್‌ಬುಕ್ ಖಾತೆಯನ್ನು ಸಿಂಕ್ ಮಾಡಿ ನಿಮ್ಮೆಲ್ಲಾ ಸಂಪರ್ಕಗಳನ್ನು ಇಂಪೋರ್ಟ್ ಮಾಡುವ ಕ್ವಾಲಿಟಿಇದಕ್ಕಿದೆ.

#2

#2

ಸ್ಮಾರ್ಟ್‌ಫೋನ್, ಟ್ಯಾಬ್ಲೆಟ್ ಮತ್ತು ಇತರ ವೇರಿಯೇಬಲ್ ಡಿವೈಸ್‌ಗಳಲ್ಲಿ ಬಳಸಲು ಸಾಧ್ಯವಾಗುವ ನಿಟ್ಟಿನಲ್ಲಿ ಈ ಓಎಸ್ ಅನ್ನು ರಚಿಸಲಾಗಿದ್ದು ಲಿನಕ್ಸ್ ಮತ್ತು ಇಂಟೆಲ್ಸಹಯೋಗದೊಂದಿಗೆ ಸ್ಯಾಮ್‌ಸಂಗ್ ಜೊತೆ ಇದನ್ನು ಅಭಿವೃದ್ಧಿಪಡಿಸಲಾಗಿದೆ. ನಿಮ್ಮ ಅಪ್ಲಿಕೇಶನ್‌ಗಳನ್ನು ಸಣ್ಣ ವಿಂಡೋಗಳಂತೆ ಮರು-ಗಾತ್ರಗೊಳಿಸುವ ಸಾಮರ್ಥ್ಯವನ್ನುನಿಮಗೊದಗಿಸಿ ಮೌಲ್ಯ ವರ್ಧಿತ ಸೇವೆಗಳಿಗೆ ನಿಮ್ಮನ್ನು ಪ್ರವೇಶಿಸುವಂತೆ ಈ ಓಎಸ್ ನಿಮಗೆ ಅವಕಾಶ ನೀಡುತ್ತದೆ.

#3

#3

ಇದರ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ ಏಕೆಂದರೆ ನಿಮ್ಮ ಸ್ನೇಹಿತರಲ್ಲಿ ಕೆಲವರಾದರೂ ಈ ಓಎಸ್‌ ಅನ್ನು ತಮ್ಮ ಫೋನ್‌ಗಳಲ್ಲಿ ಖಂಡಿತ ಬಳಸುತ್ತಾರೆ. ನಿಮ್ಮ ಡೆಸ್ಕ್‌ಟಾಪ್ ಹಾಗೂಮೊಬೈಲ್‌ನಲ್ಲಿ ಅಪ್ಲಿಕೇಶನ್‌ಗಳನ್ನು ನಿರ್ವಹಿಸಲು ಈ ಓಎಸ್ ನಿಮಗೆ ಸಹಾಯ ಮಾಡುತ್ತದೆ.

#4

#4

ಈ ಓಎಸ್‌ನ ರಚನೆಯನ್ನು ಫಿನ್ನಿಶ್ ಕಂಪೆನಿ ಮಾಡಿದ್ದು ಪ್ರಸ್ತುತ ಚಾಲ್ತಿಯಲ್ಲಿರುವ ಆಂಡ್ರಾಯ್ಡ್ ಮತ್ತು ಐಓಎಸ್‌ಗೆ ನೇರ ಪೈಪೋಟಿಯನ್ನು ಒಡ್ಡಲಿದೆ. ಯಾವುದೇ ಬದಲಾವಣೆಯಿಲ್ಲದೆಕೆಲವೊಂದು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ಬೆಂಬಲಿಸುವ ಗುಣ ಈ ಓಎಸ್‌ಗಿದೆ.

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X