5000 ರೂ. ಬೆಲೆಯಲ್ಲಿ ಖರೀದಿಸಿ ಅತ್ಯುತ್ತಮ 4G ಸ್ಮಾರ್ಟ್‌ಫೋನ್ಸ್

ನಿಮ್ಮ ಬಜೆಟ್‌ಗೆ ತಕ್ಕಂತೆ ಫೀಚರ್ಸ್ ಸಹ ಹೊಂದಿರುವ ಈ ಟಾಪ್ ಐದು ಮೊಬೈಲ್‌ಗಳು ನಿಮಗೆ ಸರಿಹೋಗಬವಹುದು

|

ನನ್ ಹತ್ರ ಕೇವಲ 5000 ರೂಪಾಯಿ ಮಾತ್ರ ಇದೆ. ಅದ್ರೆ ಇದೆ ದುಡ್ಡಲ್ಲಿ 5 ಇಂಚ್ ಡಿಸ್‌ಪ್ಲೇ ಇರೊ ಒಂದು ಒಳ್ಳೆ 4G ಮೊಬೈಲ್‌ ತಗೊಬೇಕು. ಇರಬೇಕು ಅಂತ ಮೊಬೈಲ್‌ಗಾಗಿ ಹುಡುಕುತ್ತಿದ್ದೀರಾ? ಹಾಗಾದ್ರೆ ನಿಮ್ಮ ಬಜೆಟ್‌ಗೆ ತಕ್ಕಂತೆ ಫೀಚರ್ಸ್ ಸಹ ಹೊಂದಿರುವ ಈ ಟಾಪ್ ಐದು ಮೊಬೈಲ್‌ಗಳು ನಿಮಗೆ ಸರಿಹೋಗಬವಹುದು. ಟ್ರೈಮಾಡಿ ನೋಡಿ!!

ನಾವು ಯಾವಾಗಲೂ ಅಷ್ಟೆ ಕಡಿಮೆ ಬೆಲೆಯಲ್ಲಿ ಉತ್ತಮ ಫೀಚರ್ ಒಳಗೊಂಡಿರುವ ಮೊಬೈಲ್‌ಗಳನ್ನು ಹುಡುಕುತ್ತಿರುತ್ತೀವಿ. ಎಲ್ಲಾ ಫೀಚರ್ಸ್ ಹೊಂದಿರುವ ಮೊಬೈಲ್ ಬೇಕು ಅಂದುಕೊಳ್ಳತ್ತೇವೆ. ಅಂತಹ ಮೊಬೈಲ್‌ ಹೇಗೆ ಹುಡುಕುವುದು ಎಂಬುದು ಕಷ್ಟವಾಗಿರುತ್ತದೆ. ಹಾಗಾಗಿ ನಾವು ಅಂತಹ ಟಾಪ್ ಐದು ಕಡಿಮೆ ಬೆಲೆಯ ಐದು ಮೊಬೈಲ್‌ಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.

ಓದಿರಿ: 15,000 ರುಪಾಯಿಗಳೊಳಗಿನ ಹತ್ತು ಉತ್ತಮ ಬ್ಯಾಟರಿ ಸ್ಮಾರ್ಟ್ ಫೋನುಗಳು

ಗ್ರಾಹಕರ ಬೇಡಿಕೆಗೆ ತಕ್ಕಂತೆ ಮೊಬೈಲ್‌ಗಳನ್ನು ರೂಪಿಸಿ ಬಿಡುಗಡೆ ಮಾಡಿರುವ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್‌ಗಳು ಇಲ್ಲಿವೆ.

ಯು ಯುನಿಕ್ ( YU Yunique (4G VoLTE)

ಯು ಯುನಿಕ್ ( YU Yunique (4G VoLTE)

ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಮೊದಲ ಆಯ್ಕೆಯಾಗಿ ಯು ಯುನಿಕ್ ಮೊಬೈಲ್ ನಿಲ್ಲುತ್ತದೆ. 4000-5000 ರೂಪಾಯಿಗಳಿಗೆ ದೊರೆಯುವ ಮತ್ತು ಹಲವು ವಿಶೇಷಗಳನ್ನು ಹೊಂದಿರುವ ಈ ಮೊಬೈಲ್ ಕೊಂಡುಕೊಂಡರೆ ನಿಮ್ಮ ದುಡ್ಡಿಗೆ ಮೋಸವಾಗುವುದಿಲ್ಲ ಎನ್ನಬಹುದು. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು.

  • 4.7 ಇಂಚ್ ಡಿಸ್‌ಪ್ಲೇ
  • ಗೋರಿಲ್ಲಾ ಗ್ಲಾಸ್ 3
  • 8MP ಕ್ಯಾಮರಾ
  • 2 MP ಸೆಲ್ಫಿ ಕ್ಯಾಮರಾ
  • 1 GB ರ್ಯಾಮ್
  • 8 GB ಮೆಮೊರಿ
  • 2000 mAhಬ್ಯಾಟರಿ
  • ಝೆನ್ ಸಿನಿ ಮ್ಯಾಕ್ಸ್( zen cinemax)

    ಝೆನ್ ಸಿನಿ ಮ್ಯಾಕ್ಸ್( zen cinemax)

    5000 ಕ್ಕಿಂತ ಕಡಿಮೆ ಬಜೆಟ್ ಸ್ಮಾರ್ಟ್‌ಫೋನ್‌ಗಳಲ್ಲಿ ಎರಡನೇ ಉತ್ತಮ ಆಯ್ಕೆ ಎಂದರೆ ಅದು ಝೆನ್ ಸಿನಿ ಮ್ಯಾಕ್ಸ್ ಎನ್ನಬಹುದು. ಇದರ ಬೆಲೆ 4000 ರಿಂದ 5000 ರೂಪಾಯಿಗಳಲ್ಲಿದೆ. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು.

    • 5.5 ಇಂಚ್ ಡಿಸ್‌ಪ್ಲೇ
    • 5MP ಕ್ಯಾಮರಾ
    • 2GB ರ್ಯಾಮ್
    • 2900mAh ಬ್ಯಾಟರಿ
    • ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

      ಜ್ಹೋಲೋ ಇರಾ  1X  (Xolo Era 1X (4G VoLTE)

      ಜ್ಹೋಲೋ ಇರಾ 1X (Xolo Era 1X (4G VoLTE)

      ಕಡಿಮೆ ದರದಲ್ಲಿ ಮೂರನೆ ಅತ್ಯುತ್ತಮ ಮೊಬೈಲ್ ಎಂದರೆ ಜ್ಹೋಲೋ ಇರಾ ಎಂದು ಹೇಳಬಹುದು. ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿರುವುದು ಇದರ ವಿಶೇಷಗಳಲ್ಲೊಂದು. 3500 ರಿಂದ 4500 ರರೂಪಾಯಿಗಳಲ್ಲಿ ದೊರೆಯುವ ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು.

      • 5 ಇಂಚ್ ಡಿಸ್‌ಪ್ಲೇ
      • 8MP ಕ್ಯಾಮರಾ
      • 5 MP ಸೆಲ್ಫಿ ಕ್ಯಾಮರಾ
      • 1 GB ರ್ಯಾಮ್
      • 8 GB ಮೆಮೊರಿ
      • 2500 mAhಬ್ಯಾಟರಿ
      •  ಇನ್ಫೋಕಸ್  M370  ( Infocus M370)

        ಇನ್ಫೋಕಸ್ M370 ( Infocus M370)

        ನೋಡಲು ಸ್ಟೈಲಿಶ್ ಆಗಿರಬೇಕು. ಫೀಚರ್ಸ್ ಸಹ ಉತ್ತಮವಾಗಿರಬೇಕು ಎಂದು ಮೊಬೈಲ್ ಹುಡುಕುತ್ತಿರುವವರಿಗೆ ನಾಲ್ಕನೆ ಆಯ್ಕೆ ಇನ್ಫೋಕಸ್ ಎಂದು ಖಡಾಖಂಡಿತವಾಗಿ ಹೇಳಬಹುದು.ಇದರ ಬೆಲೆ 4000 ರಿಂದ 5000 ರೂಪಾಯಿಗಳಲ್ಲಿದೆ. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು.

        • 5 ಇಂಚ್ ಡಿಸ್‌ಪ್ಲೇ
        • 8MP ಕ್ಯಾಮರಾ
        • 2 MP ಸೆಲ್ಫಿ ಕ್ಯಾಮರಾ
        • 1 GB ರ್ಯಾಮ್
        • 8 GB ಮೆಮೊರಿ
        • 2230 mAhಬ್ಯಾಟರಿ
        • ಇನ್‌ಟೆಕ್ಸ್ ಆಕ್ವ ಸ್ಟಾರ್ ( Intex Aqua Star 4G)

          ಇನ್‌ಟೆಕ್ಸ್ ಆಕ್ವ ಸ್ಟಾರ್ ( Intex Aqua Star 4G)

          ನಿಮ್ಮ ಕೊನೆಯ ಆಯ್ಕೆಯಾಗಿ ನಾವು ಇನ್‌ಟೆಕ್ಸ್ ಆಕ್ವ ಸ್ಟಾರ್ ಮೊಬೈಲನ್ನು ತೆಗೆದುಕೊಂಡಿದ್ದೇವೆ. ಉತ್ತಮ ಫೀಚರ್ಸ್ ಒಳಗೊಂಡಿದ್ದು, ಇದರ ಬೆಲೆ 4000 ರಿಂದ 5000 ರೂಪಾಯಿಗಳಲ್ಲಿದೆ. ಸಾಧಾರಣ ಪ್ರೋಸೆಸರ್ ಹೊಂದಿರುವ ಇನ್‌ಟೆಕ್ಸ್ ಆಕ್ವ ಸ್ಟಾರ್ ಮೊಬೈಲ್ ನಿಮ್ಮ ಐದನೆ ಆಯ್ಕೆಯಾಗಬಹುದು. ಈ ಮೊಬೈಲ್ ವಿಶೇಷತೆಗಳನ್ನು ಈ ಕೆಳಗೆ ನೀವು ನೋಡಬಹುದು.

Best Mobiles in India

English summary
Top 4G mobiles under Rs.5000. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X