ನಿಮ್ಮಲ್ಲಿ ಇರಲೇಬೇಕಾದ ಟಾಪ್ ಐದು ಅಪ್ಲಿಕೇಶನ್‌ಗಳು

By Shwetha
|

ಉತ್ತಮ ಸ್ಮಾರ್ಟ್‌ಫೋನ್ ಅನ್ನು ಪ್ರತಿಯೊಬ್ಬರೂ ಬಳಸುತ್ತಾರೆ ಎಂಬುದಕ್ಕೆ ಒಂದು ಮಹತ್ವವಾದ ಕಾರಣವಿದೆ. ಏನೆಂದರೆ ಅದು ಸಂಪೂರ್ಣ ವಿಶ್ವವನ್ನು ನಿಮ್ಮ ಸಂಪರ್ಕಕ್ಕೆ ತರುತ್ತದೆ ಎಂಬುದು ಒಂದು ಕಾರಣವಾದರೆ, ಬೇರೆ ಬೇರೆ ಆಯ್ಕೆಗಳ ಹಲವಾರು ಅಪ್ಲಿಕೇಶನ್‌ಗಳನ್ನು ಅದರಲ್ಲಿ ಚಾಲನೆ ಮಾಡಬಹುದೆಂಬುದು ಇನ್ನೊಂದು ಕಾರಣವಾಗಿದೆ.

ಹೆಚ್ಚಿನ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಅಪ್ಲಿಕೇಶನ್‌ಗಳು ಒಂದು ಮುಖ್ಯ ವಿಷಯವಾಗಿದೆ, ಏಕೆಂದರೆ ನಿಮ್ಮ ಕೆಲಸವನ್ನು ಸುಲಭಗೊಳಿಸುವ ಒಂದು ಪರಿಕರಗಳ ಸೆಟ್‌ಗೆ ನಿಮ್ಮನ್ನು ಇದು ಕರೆದೊಯ್ಯುತ್ತದೆ. ಬೇರೆ ಬೇರೆ ಡೆವಲಪರ್‌ಗಳ ಸಮೂಹದಿಂದ ಗೂಗಲ್ ಮತ್ತು ಆಪಲ್ ಈಗಾಗಲೇ ಸಾಕಷ್ಟು ಅಪ್ಲಿಕೇಶನ್‌ಗಳನ್ನು ಹೊರತಂದಿದ್ದು ದಿನದಿನಕ್ಕೆ ಅಪ್ಲಿಕೇಶನ್‌ಗಳಿಗಿರುವ ಬೇಡಿಕೆ ಏರುತ್ತಿದೆ.

ಈ ಹೊಸ ತಿಂಗಳು ನಮ್ಮನ್ನು ಹೊಸದಾಗಿ ಸ್ವಾಗತಿಸಿದೆ, ಈ ಸಮಯದಲ್ಲಿ ಏನಾದರೂ ಹೊಸದನ್ನು ಮಾಡುವ ತುಡಿತದೊಂದಿಗೆ ನಿಮ್ಮ ಫೋನ್‌ನಲ್ಲಿ ಪ್ರಯತ್ನ ಮಾಡಬಹುದಾದ ಉತ್ತಮ ಅಪ್ಲಿಕೇಶನ್‌ಗಳೊಂದಿಗೆ ನಾವಿಂದು ಬಂದಿದ್ದೇವೆ. ಹಾಗಿದ್ದರೆ ಈ ಜುಲೈನಲ್ಲಿ ನಿಮ್ಮ ಪೋನ್‌ಗೆ ನೀವು ಡೌನ್‌ಲೋಡ್ ಮಾಡಬಹುದಾದ ಟಾಪ್ ಐದು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ.

#1

#1

ವಿಕಿಪೀಡಿಯಾ ಬೀಟಾ
ವಿಕಿಪೀಡಿಯಾವನ್ನು ಇನ್ನಷ್ಟು ವೇಗ ಮತ್ತು ಸ್ನೇಹಪರವನ್ನಾಗಿಸಲು ಇದನ್ನು ಇನ್ನಷ್ಟು ಮಾರ್ಪಾಡುಗೊಳಿಸಲಾಗಿದೆ. ಈ ಅಪ್ಲಿಕೇಶನ್ ಅನ್ನು ನೀವು ತೆರೆದಂತೆಲ್ಲಾ ನಿಮಗೆ ಅತ್ಯವಶ್ಯಕವಾಗಿರುವ ಎಲ್ಲಾ ಮಾಹಿತಿಗಳು ಇದರಲ್ಲಿ ನಿಮಗೆ ದೊರೆಯಲಿದೆ.

#2

#2

ಫೇಸ್‌ಬುಕ್‌ನಿಂದ ಸ್ಲಿಂಗ್‌ಶಾಟ್
ಇತ್ತೀಚೆಗಷ್ಟೇ, ಫೇಸ್‌ಬುಕ್ ತನ್ನ ಸ್ನ್ಯಾಪ್‌ಚಾಟ್ ಅನ್ನು ಸ್ಲಿಂಗ್‌ಶಾಟ್ ಮಾದರಿಯಲ್ಲಿ ಬಿಡುಗಡೆಗೊಳಿಸಿದೆ. ನಿಮ್ಮ ಸ್ನೇಹಿತರು ಫೋಟೋ ಅಥವಾ ವೀಡಿಯೋವನ್ನು ಇದರ ಮೂಲಕ ಕಳುಹಿಸಿದರೆ ಪ್ರತಿಯಾಗಿ ನೀವು ಹೀಗೆಯೇ ಉತ್ತರಿಸಬೇಕಾಗುತ್ತದೆ.

#3

#3

ಪೀಕ್
ನಿಮ್ಮ ಫೋನ್‌ನ ಅದೇ ಲುಕ್ ಅನ್ನು ನೋಡಿ ನೀವು ಬೇಸರಗೊಂಡ ಸಂದರ್ಭದಲ್ಲಿ, ಪೀಕ್ ನಿಮಗೆ ಮೋಜನ್ನು ನೀಡುವ ಅಪ್ಲಿಕೇಶನ್ ಆಗಿ ಬಂದಿದೆ. ವಿಶೇಷವಾಗಿ ಅಧಿಸೂಚನೆ ವೈಶಿಷ್ಟ್ಯವನ್ನು ಎಳೆಯಲು. ಸಂಘಟಿತ ಮಾದರಿಯಲ್ಲಿ ಒಂದೇ ಸ್ಥಳದಲ್ಲಿ ಎಲ್ಲಾ ಅಪ್ಲಿಕೇಶನ್‌ಗಳಿಂದ ಅಧಿಸೂಚನೆಗಳನ್ನು ಪೀಕ್ ಸಂಘಟಿಸುತ್ತದೆ.

#4

#4

ಕಾಪಿ ಬಬ್ಬಲ್
ಪಠ್ಯವನ್ನು ಕಾಪಿ ಪೇಸ್ಟ್ ಮಾಡುವ ಸಂದರ್ಭದಲ್ಲಿ ನಾವು ಎಷ್ಟು ಬಾರಿ ನಮ್ಮ ಫೋನ್ ಅನ್ನು ಬೈಯ್ದಿದ್ದೀವೋ ತಿಳಿದಿಲ್ಲ. ಆದರೆ ಈಗ ಆ ದಿನಗಳು ಮುಗಿದು ಹೋದವು ಎಂದು ತಿಳಿದುಕೊಳ್ಳಿ. ಕಾಪಿ ಬಬ್ಬಲ್ ಎಂಬ ಅಪ್ಲಿಕೇಶನ್‌ನಲ್ಲಿ ನೀವು ಪ್ರಸ್ತುತ ಪರದೆಯನ್ನು ಬಿಡದೆಯೇ ನಿಮಗೆ ಎಷ್ಟು ಬೇಕಾದರೂ ಪಠ್ಯವನ್ನು ಕಾಪಿ ಮಾಡಬಹುದಾಗಿದೆ. ಮತ್ತು ಒಂದೇ ಸ್ಪರ್ಶದೊಂದಿಗೆ ಎಲ್ಲಾವನ್ನು ಪ್ರವೇಶಿಸುವ ಅವಕಾಶವನ್ನು ಈ ಅಪ್ಲಿಕೇಶನ್ ನಿಮಗೆ ಒದಗಿಸುತ್ತದೆ.

#5

#5

ಟ್ರೋವರ್
ಇದು ಫೋಟೋ ಅನ್ವೇಷಕ ಅಪ್ಲಿಕೇಶನ್ ಆಗಿದ್ದು ತಾಜಾ ನೋಟದೊಂದಿಗೆ ಈಗ ತಾನೇ ಬಿಡುಗಡೆಯಾಗಿದೆ. ಈ ಅಪ್ಲಿಕೇಶನ್ ಬಳಸಿ ಬಳಕೆದಾರರು ತಮ್ಮ ಪ್ರಯಾಣ ಅನುಭವಗಳನ್ನು ಹಂಚಿಕೊಳ್ಳಬಹುದು ಮತ್ತು ಹೋಟೆಲ್‌ಗಳು ಹಾಗೂ ಖಾದ್ಯಗಳ ಬಗೆಗೆ ತಿಳಿದುಕೊಳ್ಳಬಹುದಾಗಿದೆ. ಆದ್ದರಿಂದ ಪ್ರಯಾಣ ಮಾಡುವವರಿಗೆ ಇದೊಂದು ಸಾಮಾಜಿಕ ನೆಟ್‌ವರ್ಕಿಂಗ್ ಅಪ್ಲಿಕೇಶನ್ ಆಗಿದೆ.

Best Mobiles in India

Read more about:
English summary
This article tells that Top 5 android apps to download on your smartphones...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X