2017 ರಲ್ಲಿ ಖರೀದಿಸಬುದಾದ ಟಾಪ್ 5 ಪೂರ್ಣ ಟಚ್‌ಸ್ಕ್ರೀನ್ ಸ್ಮಾರ್ಟ್‌ಫೋನ್ ಯಾವುವು?

2016 ರಲ್ಲಿ ಅಭಿವೃದ್ದಿಗೊಂಡು 2017 ನೇ ವರ್ಷದಲ್ಲಿ ಜನರ ಕೈ ಸೇರಲಿರುವ ಅತ್ಯಾಧುನಿಕ ಫೀಚರ್ ಎಂದರೆ ಪೂರ್ಣ ಟಚ್‌ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು.

Written By:

ಪ್ರತಿದಿನವೂ ಅತ್ಯಾಧುನಿಕ ಫೀಚರ್ ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿದ್ದು, ಗ್ರಾಹಕರನ್ನು ಸೆಳೆಯಲು ಎಲ್ಲಾ ಸ್ಮಾರ್ಟ್‌ಫೋನ್‌ ಕಂಪೆನಿಗಳು ಹೊಸ ಹೊಸ ಫೀಚರ್ ಸ್ಮಾರ್ಟ್‌ಫೋನ್ಗಳನ್ನು ಅವಿಷ್ಕಾರ ಮಾಡುತ್ತಲೇ ಇವೆ!

ಇನ್ನು 2016 ರಲ್ಲಿ ಅಭಿವೃದ್ದಿಗೊಂಡು 2017 ನೇ ವರ್ಷದಲ್ಲಿ ಜನರ ಕೈ ಸೇರಲಿರುವ ಅತ್ಯಾಧುನಿಕ ಫೀಚರ್ ಎಂದರೆ ಪೂರ್ಣ ಟಚ್‌ಸ್ಕ್ರೀನ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು. ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಿಗಿಂತ ಭಿನ್ನವಾಗಿ ನೋಡಲು ಆಕರ್ಷಕವಾಗಿರುವ ಪೂರ್ಣ ಸ್ಮಾರ್ಟ್‌ಫೋನ್‌ಗಳು ಮೊಬೈಲ್ ಪ್ರಿಯರ ಗಮನ ಸೆಳೆಯುವಲ್ಲಿ ಸಫಲವಾಗಿವೆ.

ಮೆಸೇಜ್ ಮಾಡಲು ಮೆಸೇಂಜರ್.."ಕಿಸ್" ಮಾಡಲು ಕಿಸೇಂಜರ್!!..ಯಾರು ನಂಬದ ರಿಯಲ್ ತಂತ್ರಜ್ಞಾನ!!

ಹಾಗಾದರೆ 2017 ರಲ್ಲಿ ಮಾರುಕಟ್ಟೆಗೆ ಬರಲಿರುವ ಪೂರ್ಣ ಟಚ್‌ಪ್ಯಾಡ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಯಾವುವು? ಅವುಗಳ ವಿಶೇಷತೆ ಏನು? ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಶ್ಯೋಮಿ ಮೈ ಮ್ಯಾಕ್ಸ್ (xiaomi mi max)

ಸ್ಮಾರ್ಟ್‌ಫೋನ್‌ ಪ್ರಿಯರು ಬಹುನಿರೀಕ್ಷೆಯಲ್ಲಿರುವ ಸ್ಮಾರ್ಟ್‌ಫೋನ್ ಎಂದರೆ ಶ್ಯೋಮಿ ಮೈ ಮ್ಯಾಕ್ಸ್. ಕಡಿಮೆ ಬೆಲೆಯಲ್ಲಿ ಅತ್ಯಾಧುನಿಕ ಫೀಚರ್ ನೀಡುವ ಚೀನಾದ ಆಪಲ್ ಕಂಪೆನಿ ಶ್ಯೋಮಿ ತನ್ನ ನೂತನ ಸ್ಮಾರ್ಟ್‌ಫೋನ್‌ನಲ್ಲಿ 91.4 ಪರ್ಸೆಂಟ್ ಸ್ಕ್ರೀನ್ ಜಾಗವನ್ನು ಟಚ್‌ಪ್ಯಾಡ್‌ಗೆ ಮೀಸಲಿಟ್ಟಿದೆ!!

ನುಬಿಯಾ ಜಡ್ 11 ( Nubia Z11)

ಚೀನಾದಲ್ಲಿ ಅತ್ಯಧಿಕ ಮಾರುಕಟ್ಟೆಯನ್ನು ಸೃಷ್ಟಿಸಿಕೊಂಡಿರುವ ನುಬಿಯಾ ಕಂಪೆನಿ ತನ್ನ ಸ್ಮಾರ್ಟ್‌ಫೋನ್‌ಗಳನ್ನು ಇತ್ತೀಚಿಗಷ್ಟೆ ಬಿಡುಗಡೆ ಮಾಡಿದೆ. ನುಬಿಯಾ ಜಡ್ 11 ಸ್ಮಾರ್ಟ್‌ಫೋನ್ ಶೇ.83.27 ರಷ್ಟು ಟಚ್‌ಪ್ಯಾಡ್ ಹೊಂದಿದ್ದು, ಮೊಬೈಲ್ ಪ್ರಿಯರಿಗೆ ಉತ್ತಮ ಸ್ಮಾರ್ಟ್‌ಫೋನ್‌ ಎನ್ನಬಹುದು.

ಎಲಿಫೋನ್ ಎಸ್3 ( Elephone s3)

ಎಲಿಫೋನ್ ಎಸ್3 ಸ್ಮಾರ್ಟ್‌ಫೋನ್ ಶೇ. 83 ಪರ್ಸೆಂಟ್‌ನಷ್ಟು ಪೂರ್ಣ ಟಚ್‌ಪ್ಯಾಡ್ ಹೊಂದಿ ಮಾರುಕಟ್ಟೆಗೆ ಬಂದಿದೆ. ಫೀಚರ್ ಮತ್ತು ವಿನ್ಯಾಸದಲ್ಲಿ ಅತ್ಯುತ್ತಮವಾಗಿರುವ ಎಲಿಫೋನ್ ಎಸ್3 ಹಾರ್ಡ್‌ವೇರ್ ಗುಣಮಟ್ಟ ಅಷ್ಟೇನು ಉತ್ತಮವಾಗಿಲ್ಲ ಎನ್ನಲಾಗಿದೆ.

ಲೀಫೊನ್ ಫ್ಯೂಚರ್ ( Ulefone Future )

ಲೀಫೊನ್ ಫ್ಯೂಚರ್ ಸ್ಮಾರ್ಟ್‌ಫೋನ್ "ಆಪಲ್ ಐಫೋನ್ 6' ವಿನ್ಯಾಸವನ್ನು ಹೊತ್ತು ಬರುತ್ತಿರುವ ಸ್ಮಾರ್ಟ್‌ಫೋನ್‌ ಎಂದು ಹೇಳಬಹುದು. 4GB RAM ಮತ್ತು #32GB ಮೆಮೊರಿ ಹೊಒಂದಿರುವ ಲೀಫೊನ್ ಫ್ಯೂಚರ್ ಬೆಲೆಗೆ ತಕ್ಕಂತಹ ಅತ್ಯುತ್ತಮ ಆಯ್ಕೆ ಎನ್ನಬಹುದು.

ಲೆನೊವೋ ZUK ಎಡ್ಜ್ ( Lenovo ZUK Edge)

ಫ್ಲೆಕ್ಸಿಬಲ್ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುವುದಾಗಿ ಹೇಳಿಕೊಂಡಿರುವ ಲೆನೊವೋ ತನ್ನ ನೂತನ ಸ್ಮಾರ್ಟ್‌ಫೋನ್ ಲೆನೊವೋ ZUK ಎಡ್ಜ್ ನಲ್ಲಿ ಶೇ 86.4 ಪರ್ಸೆಂಟ್ ಟಚ್‌ಪ್ಯಾಡ್ ಇರುವ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡುತ್ತಿದೆ. 6GB RAM ಹೊಂದಿರುವ ಲೆನೊವೋ ZUK ಎಡ್ಜ್ ಸ್ಮಾರ್ಟ್‌ಫೋನ್‌ ಪ್ರಿಯರ ಮನಗೆಲ್ಲುತ್ತದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Smartphone display are advanced in 2016. to know more visit to kannada.gizbot.com
Please Wait while comments are loading...
Opinion Poll

Social Counting