ಗೂಗಲ್ ನೆಕ್ಸಸ್ 6 ಕುರಿತ ಟಾಪ್ ವದಂತಿಗಳು

By Shwetha
|

ನೆಕ್ಸಸ್ 5 ಮಾರುಕಟ್ಟೆಯಲ್ಲಿ ತನ್ನ ಜಾದೂವನ್ನು ಪಸರಿಸುತ್ತಿರುವಾಗಲೇ ಗೂಗಲ್ ನೆಕ್ಸಸ್‌ನ ಇನ್ನೊಂದು ಆವೃತ್ತಿಯನ್ನು ಹೊರತರುವ ಧಾವಂತದಲ್ಲಿದೆ. ಗೂಗಲ್ ನೆಕ್ಸಸ್ 6 ಅನ್ನು ಮಾರುಕಟ್ಟೆಗೆ ತರುವ ಎಲ್ಲಾ ತಯಾರಿಯನ್ನು ಗೂಗಲ್ ಸದ್ಯಕ್ಕೆ ಪೂರೈಸಿದೆ.

ಎಲ್‌ಜಿ ಯೊಂದಿಗೆ ಸೇರಿಕೊಂಡು ಗೂಗಲ್ ನೆಕ್ಸಸ್ 5 ಅನ್ನು ಮಾರುಕಟ್ಟೆಗೆ ತಂದಿತ್ತು. ಈ ಫೋನ್ ಮೇಲೆ ಬಾರೀ ಯಶಸ್ಸನ್ನು ಕೂಡ ಗೂಗಲ್ ಪಡೆದಿತ್ತು ಎಂಬುದು ಈಗ ಇತಿಹಾಸ. ಮಾರುಕಟ್ಟೆಯಲ್ಲಿ ನೆಕ್ಸಸ್ ಫೋನ್‌ಗಳು ಬೀರಿರುವ ಪ್ರಭಾವ ಇನ್ನೂ ಇದೆ ಎಂಬುದನ್ನು ಇದರ ಬೇಡಿಕೆಯೇ ನಿಶ್ಚಯಿಸಿದೆ.

ಗೂಗಲ್ ತನ್ನ ಮುಂಬರುವ ನೆಕ್ಸಸ್ ಆವೃತ್ತಿಯಲ್ಲಿ ಹಿಂದಿಗಿಂತ ಏನೇನು ಮಾರ್ಪಾಡುಗಳನ್ನು ಮಾಡಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಎಲ್‌ಜಿಯೊಂದಿಗೆ ಸೇರಿಕೊಂಡು ಇದನ್ನು ಬಿಡುಗಡೆಗೊಳಿಸಲಿದೆಯೇ ಅಥವಾ ಹೊಸ ಮಾರ್ಪಾಡುಗಳನ್ನು ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.

ಗೂಗಲ್ ನೆಕ್ಸಸ್ 6 ಅನ್ನು ಕುರಿತ ಕೆಲವೊಂದು ಊಹಿತ ಮಾಹಿತಿಗಳನ್ನು ಗಿಜ್‌ಬಾಟ್ ಸಂಗ್ರಹಿಸಿದ್ದು ಅದನ್ನು ಈ ಲೇಖನದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲಿದೆ. ಫೋನ್ ಡಿಸ್‌ಪ್ಲೇ, ಬಿಡುಗಡೆ ದಿನಾಂಕ, ರ್‌ಯಾಮ್ ವಿವರ, ಆಪರೇಟಿಂಗ್ ಮಾಹಿತಿ ಇದೆಲ್ಲಾವನ್ನು ನೀವು ಈ ಲೇಖನದಲ್ಲಿ ಪಡೆದುಕೊಳ್ಳಬಹುದು.

#1

#1

ನೆಕ್ಸಸ್ 5 ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿಯನ್ನು ತನ್ನೊಂದಿಗೆ ಪರಿಚಯ ಮಾಡಿಕೊಂಡಿತ್ತು. ನೆಕ್ಸಸ್ 6 ಕೂಡ ಆಂಡ್ರಾಯ್ಡ್‌ನ ಹೊಸ ಆವೃತ್ತಿಯನ್ನು ಹೊರತರಲಿದೆ ಎಂಬ ನಿರೀಕ್ಷೆ ಇದೆ.

#2

#2

5.2 ಇಂಚಿನ ಕ್ಯೂಎಚ್‌ಡಿ ಡಿಸ್‌ಪ್ಲೇಯನ್ನು ನೆಕ್ಸಸ್ 6 ಹೊಂದಿರಬಹುದಾಗಿದ್ದು ದೊಡ್ಡದಾದ ಸ್ಕ್ರೀನ್ ಅನ್ನು ಹೊಂದಿರುವ ನಿರೀಕ್ಷೆ ಇದೆ. ಬಿಡುಗಡೆಯಾದ ಸಮಯದಲ್ಲೇ ಇದರ ಸ್ಕ್ರೀನ್ ಗಾತ್ರ ಎಷ್ಟಿದೆ ಎಂಬುದರ ಲೆಕ್ಕ ನಮಗೆ ಸಿಗಬಹುದು

#3

#3

4 ಜಿಬಿ ರ್‌ಯಾಮ್ ನೊಂದಿಗೆ ಬರಲಿರುವ ನೆಕ್ಸಸ್ 6 ಫೋನ್ ಪ್ರಿಯರಲ್ಲಿ ಭಾರೀ ನಿರೀಕ್ಷೆಯನ್ನೇ ಹುಟ್ಟು ಹಾಕಲಿದೆ. ಇದರ ಬಿಡುಗಡೆಯವರೆಗೂ ಕಾದು ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ಪಡೆಯಬೇಕಿದೆ.

#4

#4

ಬೆರಳಚ್ಚು ತಂತ್ರಜ್ಞಾನವನ್ನು ನೆಕ್ಸಸ್ 6 ಹೊಂದಲಿದ್ದು ಐ ಫೋನ್ 5ಎಸ್ ಮತ್ತು ಸ್ಯಾಮ್‌ಸಂಗ್ ಗ್ಯಾಲಕ್ಸಿ S5 ನಂತತಿರುವಂತಹ ತಂತ್ರಜ್ಞಾನವನ್ನು ಇದು ಹೊಂದಲಿದೆ.

#5

#5

ಈ ಸಮಯದ ಬಗ್ಗೆ ಇನ್ನೂ ಚರ್ಚೆಗಳು ನಡೆಯುತ್ತಿದ್ದು ತೀರ್ಮಾನಕ್ಕೆ ಇನ್ನೂ ಬಂದಿಲ್ಲ. ಆದರೆ ಅಂದಾಜಿನ ಪ್ರಕಾರ ಅಕ್ಟೋಬರ್ ತಿಂಗಳಿನಲ್ಲಿ ಈ ಹ್ಯಾಂಡ್ ಸೆಟ್ ನಮ್ಮ ಕೈ ಸೇರಲಿರುವುದು ಖಚಿತವಾಗಿದೆ. ಗೂಗಲ್‌ನ ಐಒ ಡೆವಲಪರ್ ಕಾನ್ಫರೆನ್ಸ್‌ನಲ್ಲಿ ಇನ್ನಷ್ಟು ಮಾಹಿತಿ ನಮಗೆ ದೊರೆಯಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X