ನಿಮ್ಮ ಫೋನ್ ಖರೀದಿಗೆ ಮುಖ್ಯ ಐದು ಅಂಶಗಳು

By Shwetha
|

ನೀವು ಹೊಸ ಫೋನ್ ಅನ್ನು ಖರೀದಿಸುತ್ತೀರಿ ಎಂದಾದಲ್ಲಿ ಯಾವೆಲ್ಲಾ ಅಂಶಗಳನ್ನು ಗಮನಿಸುತ್ತೀರಿ? ಅದರ ಬೆಲೆಯೇ, ರಚನಾ ಗುಣಮಟ್ಟವೇ? ಅಥವಾ ನಿಮ್ಮನ್ನು ಆಗಾಗ್ಗೆ ಅಪ್‌ಡೇಟ್ ಮಾಡುವ ಓಎಸ್ ಇದೆಯೇ ಎಂಬುದನ್ನು ನೋಡುತ್ತೀರಾ?

ಏಷ್ಯಾ ಪೆಸಿಫಿಕ್ ಪ್ರಾಂತ್ಯಕ್ಕೆ ಬಂದಾಗ ಭಾರತೀಯ ಮಾರುಕಟ್ಟೆಯ ದರ ಸ್ವಲ್ಪ ಹೆಚ್ಚಾಗಿದೆ ಎಂದೇ ಹೇಳಬಹುದು. ಅದರಲ್ಲೂ ಸ್ಮಾರ್ಟ್‌ಫೋನ್ ಅನ್ನು ಗುರುತಿಸುವುದು ತುಸು ಸಾಹಸದ ಕೆಲಸವೇ ಸರಿ. ಪ್ರತಿಯೊಬ್ಬ ಸ್ಮಾರ್ಟ್‌ಫೋನ್ ತಯಾರಕರೂ ಕೂಡ ಒಂದಿಲ್ಲೊಂದು ವಿಶೇಷತೆಗಳ ಮೂಲಕ ತಮ್ಮ ಫೋನ್ ಅನ್ನು ತಯಾರಿಸುತ್ತಿದ್ದು ಕಠಿಣ ಸ್ಪರ್ಧೆಗೆ ತಮ್ಮನ್ನು ಸಜ್ಜುಗೊಳಿಸುವ ತಯಾರಿಯಲ್ಲಿ ತೊಡಗಿದ್ದಾರೆ.

ಆದರೆ ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡಾಗ ನಾವು ವ್ಯಯಿಸುವಾಗ ಹೆಚ್ಚು ಗಮನ ಹರಿಸಬೇಕಾದ ಅಂಶಗಳೊಂದಿಗೆ ನಾವು ಕಾರ್ಯನಿರ್ವಹಿಸುತ್ತಿದ್ದೇವೆ ಎಂದು ನಮಗನಿಸಬಹುದು. ಇಲ್ಲಿ ನಾವು ಕೊಟ್ಟಿರುವ ಕೆಲವೊಂದು ಅಂಶಗಳ ಕಡೆಗೆ ನೀವು ಗಮನ ಹರಿಸಬೇಕಾದ ಅಗತ್ಯವಿದೆ. ಇದು ಬೆಲೆ ಮತ್ತು ಅಂಶಗಳಿಗಿಂತಲೂ ಹೆಚ್ಚು ಎಂಬುದನ್ನುನೆನಪಿನಲ್ಲಿಟ್ಟುಕೊಳ್ಳಬೇಕು.

ನಿಮ್ಮ ಹೊಸ ಆಂಡ್ರಾಯ್ಡ್ ಸೆಟ್ ಅನ್ನು ಖರೀದಿಸುವ ಮುನ್ನ ಗಮನ ಕೊಡಬೇಕಾದ ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದೇವೆ. ಅದರತ್ತ ಗಮನ ಹರಿಸಿ.

#1

#1

ಸ್ಮಾರ್ಟ್‌ಫೋನ್‌ನ ಆಂತರಿಕ ಸ್ಥಳಾವಕಾಶವನ್ನು ಕುರಿತು ಗಮನ ಹರಿಸಬೇಕಾಗುತ್ತದೆ. ಸ್ಮಾರ್ಟ್‌ಫೋನ್‌ನಲ್ಲಿ ಕೆಲವೊಂದು ನಿಮಗೆ ಹೆಚ್ಚುವರಿ ಆಂತರಿಕ ಸ್ಥಳಾವಕಾಶವನ್ನುನೀಡುವುದಿಲ್ಲ. ಆದ್ದರಿಂದ ಹೊಸ ಸ್ಮಾರ್ಟ್‌ಫೋನ್ ಅನ್ನು ನೀವು ಖರೀದಿಸುವ ಮುನ್ನ ಫೋನ್‌ನ ಆಂತರಿಕ ಸಂಗ್ರಹಣೆಯ ಕಡೆಗೆ ನೀವು ಗಮನಹರಿಸಬೇಕಾದ್ದು ಅತ್ಯವಶ್ಯಕವಾಗಿದೆ.

#2

#2

ಬ್ಯಾಟರಿ
ಸ್ಮಾರ್ಟ್‌ಫೋನ್ ಅನ್ನು ಖರೀದಿಸಿ ನಂತರ ಅದರ ಬ್ಯಾಟರಿಯತ್ತ ಗಮನ ಹರಿಸುವುದು ಮೂರ್ಖತನ. ನೀವು ಸ್ಮಾರ್ಟ್‌ಫೋನ್ ಅನ್ನು ಖರೀದಿಸುವ ಮುನ್ನ ಅದರ ಬ್ಯಾಟರಿ ಬಾಳಿಕೆಯತ್ತ ಗಮನ ಹರಿಸುವುದು ಮುಖ್ಯವಾಗಿರುತ್ತದೆ.

#3

#3

ಅಪ್‌ಡೇಟ್ ರೋಡ್‌ಮ್ಯಾಪ್
ಕಂಪೆನಿಯು ನವೀಕರಣಗಳೊಂದೊಗೆ ಪೂರಕವಾಗಿದೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿರುತ್ತದೆ. ಫೋನ್‌ನ ತಯಾರಕರು ಡಿವೈಸ್ ಕುರಿತಾದ ದೈನಂದಿನ ಮಾಹಿತಿಯನ್ನು ನಿಮಗೆ ಕಳುಹಿಸಲು ಸಮರ್ಥರೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿರುತ್ತದೆ.

#4

#4

2014 ರ ಮಧ್ಯ ಭಾಗದಲ್ಲಿ ಈಗಾಗಲೇ ನಾವಿದ್ದೇವೆ, ಇನ್ನೂ ಆಂಡ್ರಾಯ್ಡ್ ಜೆಲ್ಲಿ ಬೀನ್ ಚಾಲನೆಯಲ್ಲಿರುವ ಫೋನ್ ಅನ್ನು ಖರೀದಿಸುವುದೆಂದರೆ ಮೂರ್ಖತನವಾಗಿರುತ್ತದೆ. ಇತ್ತೀಚಿನ ಆವೃತ್ತಿಯಾಗಿರುವ ಕಿಟ್‌ಕ್ಯಾಟ್ ಚಾಲನೆಯಲ್ಲಿ ನಿಮ್ಮ ಫೋನ್ ಇದೆಯೇ ಎಂಬುದನ್ನು ಪರಿಶೀಲಿಸುವುದು ಅತೀ ಅಗತ್ಯವಾಗಿದೆ. ಓಎಸ್ ಅನ್ನು ಪರೀಕ್ಷಿಸಲು ಸೆಟ್ಟಿಂಗ್‌ನತ್ತ ಹೋಗಿ.

#5

#5

ಬೆಂಚ್‌ಮಾರ್ಕ್ ಫಲಿತಾಂಶಗಳು
ನೀವು ಹೊಸ ಫೋನ್ ಅನ್ನು ಖರೀದಿಸುವ ಮುನ್ನ ನಿಮ್ಮ ಸ್ವಲ್ಪ ಸಮಯವನ್ನು ವ್ಯಯಿಸಿ ಇಂಟರ್ನೆಟ್‌ನಾದ್ಯಂತ ನೀವು ಖರೀದಿಸುವ ಫೋನ್‌ನ ಬೆಂಚ್ ಮಾರ್ಕ್ ಅನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಬೆಂಚ್ ಮಾರ್ಕ್ ದರವು ನಿಮ್ಮ ಫೋನ್ ಯಾವುದಕ್ಕೆ ಅರ್ಹವಾಗಿದೆ ಎಂಬುದರ ನಿಖರ ಮಾಹಿತಿಯನ್ನು ನೀಡುತ್ತದೆ.

Best Mobiles in India

Read more about:
English summary
This article tells that Top 5 things to consider before buying a smartphone

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X