ಭಾರತೀಯ ಮಾರುಕಟ್ಟೆಯಲ್ಲಿ ಬಜೆಟ್ ಬೆಲೆಯ ಫೋನ್ ಮೇಳ

By Shwetha
|

ಭಾರತೀಯ ಸ್ಮಾರ್ಟ್‌ಫೋನ್ ಮರುಕಟ್ಟೆ ಪ್ರಸ್ತುತ ಗ್ರಾಹಕರ ಬೇಡಿಕೆಗಳಿಗೆ ಅನುಸಾರವಾಗಿರುವ ಡಿವೈಸ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ. ಪ್ರಪಂಚದ ಹೆಚ್ಚಿನ ಟಾಪ್ ಬ್ರ್ಯಾಂಡ್‌ಗಳು ಭಾರತೀಯ ಮಾರುಕಟ್ಟೆಯತ್ತ ತಮ್ಮ ಕಣ್ಣಿರಿಸಿದ್ದು ಬಜೆಟ್ ಬೆಲೆಯಲ್ಲಿ ಫೋನ್ ಮಾರಾಟ ಮಾಡುವ ತಂತ್ರಗಾರಿಕೆಯನ್ನು ಕಂಡುಕೊಂಡಿದೆ.

ಹಾಗಿದ್ದರೆ ಇಂದಿನ ಲೇಖನದಲ್ಲಿ ಬಜೆಟ್ ಬೆಲೆಯಲ್ಲಿ ನಿಮಗೆ ಲಭ್ಯವಾಗುವ ಟಾಪ್ ಫೋನ್‌ಗಳ ವಿವರಗಳನ್ನು ನಾವು ನೀಡುತ್ತಿದ್ದು ಈ ಫೋನ್‌ಗಳ ಆಯ್ಕೆಯನ್ನು ನಾವು ಏಕೆ ಮಾಡಬೇಕು ಎಂಬುದನ್ನು ಇಲ್ಲಿ ತಿಳಿಸಲಿದ್ದೇವೆ.

ಮೋಟೋ ಎಕ್ಸ್ ಪ್ಲೇ

ಮೋಟೋ ಎಕ್ಸ್ ಪ್ಲೇ

ಕಳೆದ ವರ್ಷ ಮೋಟೋರೋಲಾ ಲಾಂಚ್ ಮಾಡಿರುವ ಡಿವೈಸ್ ಮೋಟೋ ಎಕ್ಸ್ ಪ್ಲೇಯಾಗಿದೆ. 3630 mAh ಬ್ಯಾಟರಿ, ಸ್ನ್ಯಾಪ್‌ಡ್ರ್ಯಾಗನ್ 615 ಪ್ರೊಸೆಸರ್ ಹಾಗೂ ಸ್ಟಾಕ್ ಆಂಡ್ರಾಯ್ಡ್ ಮಾರ್ಶ್ ಮಲ್ಲೊವನ್ನು ಒಳಗೊಂಡಿದೆ. ಇದರ ಬೆಲೆ ರೂ 17,000 ಆಗಿದೆ.

ಒನ್ ಪ್ಲಸ್ ಎಕ್ಸ್

ಒನ್ ಪ್ಲಸ್ ಎಕ್ಸ್

ಮಧ್ಯಮ ಕ್ರಮಾಂಕದ ಇನ್ನೊಂದು ಡಿವೈಸ್ ಆಗಿರುವ ಒನ್ ಪ್ಲಸ್ ಎಕ್ಸ್ 2015 ರಲ್ಲಿ ಲಾಂಚ್‌ಗೊಂಡಿದೆ. ಅನನ್ಯ ವಿನ್ಯಾಸವನ್ನು ಈ ಫೋನ್ ಹೊಂದಿದ್ದು ಗ್ಲಾಸ್ ಮತ್ತು ಮೆಟಲ್ ಅಂಶಗಳನ್ನು ಇದರಲ್ಲಿ ಕಂಡುಕೊಳ್ಳಬಹುದಾಗಿದೆ. 5 ಇಂಚಿನ ಪೂರ್ಣ ಎಚ್‌ಡಿ ಸ್ಕ್ರೀನ್‌ನಿಂದ ಈ ಫೋನ್ ಅತ್ಯುತ್ತಮ ರಚನೆ ಎಂಬ ಬಿರುದಿಗೆ ಪಾತ್ರವಾಗಿದೆ. 3 ಜಿಬಿ RAM ಅನ್ನು ಡಿವೈಸ್ ಪಡೆದುಕೊಂಡಿದ್ದು ರೂ 17,000 ಕ್ಕೆ ಲಭ್ಯವಿದೆ.

ನೆಕ್ಸಸ್ 5 ಎಕ್ಸ್

ನೆಕ್ಸಸ್ 5 ಎಕ್ಸ್

ನೆಕ್ಸಸ್ 6ಪಿಯೊಂದಿಗೆ ಮಾರುಕಟ್ಟೆಗೆ ಲಾಂಚ್ ಆದ ನೆಕ್ಸಸ್ 5 ಎಕ್ಸ್‌ 2015 ರ ಉತ್ತಮ ಸ್ಮಾರ್ಟ್‌ಫೋನ್ ಎಂಬ ಹಿರಿಮೆಗೆ ಪಾತ್ರವಾಗಿದೆ. ಸ್ನ್ಯಾಪ್‌ಡ್ರ್ಯಾಗನ್ 808 ಚಿಪ್‌ಸೆಟ್, 2 ಜಿಬಿ RAM, ಫಿಂಗರ್ ಪ್ರಿಂಟ್ ಸೆನ್ಸಾರ್, 12 ಎಮ್‌ಪಿ ಕ್ಯಾಮೆರಾ ಮತ್ತು ಪೂರ್ಣ ಎಚ್‌ಡಿ ಡಿಸ್‌ಪ್ಲೇ ಇದರಲ್ಲಿದೆ. ಆಂಡ್ರಾಯ್ಡ್ 6.0 ಮಾರ್ಶ್ ಮಲ್ಲೊ ನೆಕ್ಸಸ್ 5 ಎಕ್ಸ್‌ನಲ್ಲಿ ಚಾಲನೆಗೊಳ್ಳಲಿದೆ.

ಜೆನ್‌ಫೋನ್ ಜೂಮ್

ಜೆನ್‌ಫೋನ್ ಜೂಮ್

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಅಸೂಸ್ ಹೆಸರು ಅವಿಸ್ಮರಣೀಯವಾಗಿರುವಂಥದ್ದು. ಜೆನ್‌ಫೋನ್ 2, 4ಜಿಬಿ RAM ಅನ್ನು ಹೊಂದಿರುವ ಪ್ರಥಮ ಸ್ಮಾರ್ಟ್‌ಫೋನ್ ಆಗಿದ್ದು ಇದೀಗ ಜೆನ್‌ಫೋನ್ ಜೂಮ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಮೂಲಕ ಅಸೂಸ್ ಪ್ರಿಯರ ಮನತಣಿಸಿದೆ. 2.5 GHz ಪ್ರೊಸೆಸರ್, 4ಜಿಬಿ RAM ಅನ್ನು ಡಿವೈಸ್ ಒಳಗೊಂಡಿದ್ದು 128 ಜಿಬಿ ಇದರಲ್ಲಿದೆ. ಆಪ್ಟಿಕಲ್ ಜೂಮ್ ಮತ್ತು ಓಐಎಸ್ ಇದರಲ್ಲಿದೆ.

ಹೋನರ್ 7

ಹೋನರ್ 7

ಹುವಾವೆ ಹೋನರ್ ಶ್ರೇಣಿಯ ಫೋನ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಫೋನ್ ಇತಿಹಾಸಲ್ಲಿ ಹೊಸ ದಾಖಲೆ ಸೃಷ್ಟಿಸಿದೆ ಎಂದೇ ಹೇಳಬಹುದು. ಕಡಿಮೆ ದರದಲ್ಲಿ ಅತ್ಯಾಕರ್ಷಕ ಫೋನ್ ಅನ್ನು ಬಳಕೆದಾರರಿಗೆ ನೀಡುವುದೇ ಈ ಕಂಪೆನಿಯ ಉದ್ದೇಶವಾಗಿದೆ. 2015 ರಲ್ಲಿ ಕಂಪೆನಿಯು ಹೋನರ್ 7 ಅನ್ನು ಲಾಂಚ್ ಮಾಡಿದ್ದು 2.2 GHz ಓಕ್ಟಾ ಕೋರ್ Hisilicon Kirin ಪ್ರೊಸೆಸರ್, 3 ಜಿಬಿ RAM, 20 ಎಮ್‌ಪಿ ಕ್ಯಾಮೆರಾ ಡಿವೈಸ್‌ನಲ್ಲಿದೆ. ಹೋನರ್ 7 ರೂ 21,999 ಕ್ಕೆ ಲಭ್ಯವಿದೆ.

ಎಲ್‌ಜಿ ವಿ10

ಎಲ್‌ಜಿ ವಿ10

2015 ಕ್ಕಾಗಿ ಎಲ್‌ಜಿ ಹೊರತಂದಿರುವ ಡಿವೈಸ್ ಆಗಿದೆ ವಿ10. ಕ್ಯಾಮೆರಾ ಅಪ್ಲಿಕೇಶನ್ ಫೋಟೋಗಳು ಮತ್ತು ವೀಡಿಯೊಗಳ ಮೇಲೆ ಸಂಪೂರ್ಣ ನಿಯಂತ್ರಣವನ್ನು ಒದಗಿಸಿರುವ ಪ್ರಥಮ ಸ್ಮಾರ್ಟ್‌ಫೋನ್ ಇದಾಗಿದೆ. ಸ್ನ್ಯಾಪ್‌ಡ್ರ್ಯಾಗನ್ 808 ಚಿಪ್‌ಸೆಟ್ ಇದರಲ್ಲಿದ್ದು, 4 ಜಿಬಿ RAM, 32 ಜಿಬಿ ಆಂತರಿಕ ಸಂಗ್ರಹಣೆಯನ್ನು ಇದು ಪಡೆದುಕೊಂಡಿದೆ. 16 ಎಮ್‌ಪಿ ಕ್ಯಾಮೆರಾ ಇದರಲ್ಲಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್</a><br /><a href=ಮೆಸೇಂಜರ್‌ನಲ್ಲಿ ರಹಸ್ಯ ಬ್ಯಾಸ್ಕೆಟ್‌ಬಾಲ್‌ ಗೇಮ್‌: ಆಟ ಹೇಗೆ?
ಫ್ಲಿಪ್‌ಕಾರ್ಟ್/ಅಮೆಜಾನ್‌'ಗೆ ಚಳ್ಳೆ ಹಣ್ಣು ತಿನ್ನಿಸಿದ ಹೈದರಾಬಾದ್ ಸ್ಟೂಡೆಂಟ್ಸ್
ಡೆಲ್ ನೀಡುತ್ತಿದೆ ರೂ.1 ಕ್ಕೆ ಹೊಸ ಲ್ಯಾಪ್‌ಟಾಪ್" title="ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್
ಮೆಸೇಂಜರ್‌ನಲ್ಲಿ ರಹಸ್ಯ ಬ್ಯಾಸ್ಕೆಟ್‌ಬಾಲ್‌ ಗೇಮ್‌: ಆಟ ಹೇಗೆ?
ಫ್ಲಿಪ್‌ಕಾರ್ಟ್/ಅಮೆಜಾನ್‌'ಗೆ ಚಳ್ಳೆ ಹಣ್ಣು ತಿನ್ನಿಸಿದ ಹೈದರಾಬಾದ್ ಸ್ಟೂಡೆಂಟ್ಸ್
ಡೆಲ್ ನೀಡುತ್ತಿದೆ ರೂ.1 ಕ್ಕೆ ಹೊಸ ಲ್ಯಾಪ್‌ಟಾಪ್" loading="lazy" width="100" height="56" />ಸ್ಮಾರ್ಟ್‌ಫೋನ್ ಬ್ಯಾಟರಿ ಆರೋಗ್ಯಕ್ಕಾಗಿ ಟಾಪ್ ಟಿಪ್ಸ್
ಮೆಸೇಂಜರ್‌ನಲ್ಲಿ ರಹಸ್ಯ ಬ್ಯಾಸ್ಕೆಟ್‌ಬಾಲ್‌ ಗೇಮ್‌: ಆಟ ಹೇಗೆ?
ಫ್ಲಿಪ್‌ಕಾರ್ಟ್/ಅಮೆಜಾನ್‌'ಗೆ ಚಳ್ಳೆ ಹಣ್ಣು ತಿನ್ನಿಸಿದ ಹೈದರಾಬಾದ್ ಸ್ಟೂಡೆಂಟ್ಸ್
ಡೆಲ್ ನೀಡುತ್ತಿದೆ ರೂ.1 ಕ್ಕೆ ಹೊಸ ಲ್ಯಾಪ್‌ಟಾಪ್

Best Mobiles in India

English summary
Here is a look at the top 6 underrated smartphones that got lost in the storm, but are still worth buying.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X