ಒನ್ ಪ್ಲಸ್ 3ಟಿ ಬಗ್ಗೆ ಇರುವ ಟಾಪ್ 7 ಸುದ್ದಿಗಳು.

Written By:

ಈಗಿರುವುದು ಫ್ಯಾಬ್ಲೆಟ್ ಮತ್ತು ಸ್ಮಾರ್ಟ್ ಫೋನುಗಳ ನಡುವಣ ಯುದ್ಧ! ಇತ್ತೀಚೆಗೆ ಶಿಯೋಮಿ ಎಂಐ ನೋಟ್ 2 ಬಿಡುಗಡೆಯಾದ ನಂತರ ಈ ಕದನವು ಹೊಸ ರೂಪವನ್ನು ಪಡೆದುಕೊಳ್ಳಲಾರಂಭಿಸಿದೆ. ಈಗ ಒನ್ ಪ್ಲಸ್ ನ ಸರದಿ.

ಒನ್ ಪ್ಲಸ್ 3ಟಿ ಬಗ್ಗೆ ಇರುವ ಟಾಪ್ 7 ಸುದ್ದಿಗಳು.

ಚೀನಾದ ಸ್ಮಾರ್ಟ್ ಫೋನ್ ತಯಾರಕ ಒನ್ ಪ್ಲಸ್ 3 ಭಾರತದಲ್ಲಿ ರೋಸ್ ಗೋಲ್ಡ್ ಬಣ್ಣದ ಫೋನನ್ನು ಬಿಡುಗಡೆಗೊಳಿಸಿ ಇನ್ನೂ ಸರಿಯಾಗಿ ಒಂದು ತಿಂಗಳೂ ಆಗಿಲ್ಲ, ಆಗಲೇ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಹೊಸ ಫ್ಲಾಗ್ ಶಿಪ್ ಫೋನ್ ಹೊರಬರುವ ಬಗ್ಗೆ ಗಾಳಿ ಸುದ್ದಿಗಳು ಹರಿದಾಡುತ್ತಿವೆ.

ಓದಿರಿ: ಏರ್‌ಟೆಲ್‌ನಲ್ಲಿ ಉಚಿತ 3ಜಿಬಿ ಡೇಟಾ ಪಡೆದುಕೊಳ್ಳುವುದು ಹೇಗೆ?

ಈಗ ಮಾತು ನಡೆಯುತ್ತಿರುವುದು ಒನ್ ಪ್ಲಸ್ 3ಟಿ ಬಗ್ಗೆ. ಇದು ಒನ್ ಪ್ಲಸ್ 3 ಫೋನಿನ ಅಪ್ ಡೇಟೆಡ್ ಆವೃತ್ತಿ. ಈ ಒನ್ ಪ್ಲಸ್ 3ಟಿ ಫೋನ್ ಹಳೆಯ ಫೋನಿಗಿಂತ ದುಬಾರಿಯಾಗಿರುತ್ತದೆ ಎನ್ನುವ ಸುದ್ದಿಗಳಿವೆ. ಗಾಳಿ ಸುದ್ದಿಯ ಮೂಲಕ ಸದ್ದು ಮಾಡುತ್ತಿರುವ ಒನ್ ಪ್ಲಸ್ ಫ್ಲಾಗ್ ಶಿಪ್ ಫೋನಿನ ಬಗ್ಗೆ ನಿಮಗೆ ತಿಳಿದಿರಬೇಕಾದ ಮಾಹಿತಿಯೆಲ್ಲವೂ ಇಲ್ಲಿದೆ. ಒಮ್ಮೆ ಓದಿ.

ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿ

ಒನ್ ಪ್ಲಸ್ 3ಟಿ: ಬಿಡುಗಡೆ ಇನ್ನೂ ರಹಸ್ಯ.

ಇತ್ತೀಚಿನ ವರದಿಗಳ ಪ್ರಕಾರ ಚೀನಾದ ಪ್ರಮಾಣೀಕರಣ ಸಂಸ್ಥೆಯು ಎ3010 ನಂಬರಿನ ಹೊಸ ಒನ್ ಪ್ಲಸ್ ಸಾಧನ ಪರೀಕ್ಷೆಯಲ್ಲಿ ಉತ್ತೀರ್ಣವಾಗಿದೆ ಎಂದು ವರದಿ ಮಾಡಿದೆ. ಇದರರ್ಥ ಹೊಸತೊಂದು ಒನ್ ಪ್ಲಸ್ ಫೋನು ಮಾರುಕಟ್ಟೆಗೆ ಬರಲು ತಯಾರಾಗಿದೆ ಎಂದು. ಗಾಳಿ ಸುದ್ದಿಗಳ ಪ್ರಕಾರ ಈ ಹೊಸ ಫೋನ್ ಒಂದೋ ಕ್ರಿಸ್ ಮಸ್ ಗೆ ಉಡುಗೊರೆಯಾಗಿ ಬರುತ್ತದೆ ಅಥವಾ ಮುಂದಿನ ವರ್ಷದ ಜೂನ್ ನಲ್ಲಿ ಹೊರಬರುತ್ತದೆ.

ಒನ್ ಪ್ಲಸ್ 3ಟಿ: ಇದು ದುಬಾರಿಯಾಗಿದೆ.

ಬೆಲೆಯ ವಿಷಯಕ್ಕೆ ಬಂದರೆ ಒನ್ ಪ್ಲಸ್ 3ಟಿ ಫೋನಿನ ಬೆಲೆ ಪ್ರಸ್ತುತವಿರುವ ಫೋನಿನ ಬೆಲೆಗಿಂತ 80 ಡಾಲರ್ ದುಬಾರಿಯಾಗಲಿದೆ. ಈಗಿರುವ ಒನ್ ಪ್ಲಸ್ 3ಯ ಮಾರುಕಟ್ಟೆ ಬೆಲೆ 399 ಡಾಲರ್, ಅಂದರೆ ಸುಮಾರು 28,000ದಷ್ಟಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಒನ್ ಪ್ಲಸ್ 3ಟಿ: ಅತ್ಯುತ್ತಮ ಹಾರ್ಡ್ ವೇರ್.

ಸದ್ಯಕ್ಕಿರುವ ಸುದ್ದಿಗಳ ಪ್ರಕಾರ ಹೊಸ ಒನ್ ಪ್ಲಸ್ 3ಟಿ ಫೋನಿನಲ್ಲಿ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 821 ಪ್ರೊಸೆಸರ್ ಇರುತ್ತದೆ, ಒನ್ ಪ್ಲಸ್ 3 ನಲ್ಲಿದ್ದ ಸ್ನಾಪ್ ಡ್ರಾಗನ್ 820 ಪ್ರೊಸೆಸರ್ ಗಿಂತ ಇದು ಉತ್ತಮವಾಗಿದೆ.

ಹೊಸ ಎಸ್.ಡಿ 821 ಚಿಪ್ ವರ್ಚುಯಲ್ ರಿಯಾಲಿಟಿಗೆ ಉತ್ತಮ ಬೆಂಬಲ ಕೊಡುತ್ತದೆ. ಒನ್ ಪ್ಲಸ್ 3ಟಿಯಲ್ಲಿ ಇದನ್ನು ಇರಿಸಿರುವುದರಿಂದ ಗೂಗಲ್ಲಿನ ಹೊಸ ಫ್ಲಾಗ್ ಶಿಪ್ ಫೋನುಗಳಿಗೆ ಸವಾಲೊಡ್ಡುವುದಲ್ಲದೆ ಒನ್ ಪ್ಲಸ್ 3ಟಿ ಶಿಯೋಮಿ ಎಂಐ ನೋಟ್ 2ಗಿಂತ ಹೆಚ್ಚು ವಿ.ಆರ್ ಸ್ನೇಹಿಯಾಗಿರಲಿದೆ.

 

ಒನ್ ಪ್ಲಸ್ 3ಟಿ: ರ್ಯಾಮ್ ಮತ್ತು ಬ್ಯಾಟರಿ ಹಿಂದಿನಂತೆಯೇ ಇರಲಿದೆ.

ಪ್ರೊಸೆಸರ್ ಅನ್ನು ಹೊರತುಪಡಿಸಿದರೆ ಉಳಿದ ಹಾರ್ಡ್ ವೇರ್ ವಿಶೇಷತೆಗಳು ಹಿಂದಿನ ಒನ್ ಪ್ಲಸ್ 3 ಫೋನಿನಲ್ಲಿ ಇದ್ದಂತೆಯೇ ಇರಲಿದೆ. ಉದಾಹರಣೆಗೆ ಹೊಸ ಫೋನಿನಲ್ಲೂ 6ಜಿಬಿ ರ್ಯಾಮ್, 64ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಮತ್ತು 3,000ಎಂ.ಎ.ಹೆಚ್ ಬ್ಯಾಟರಿ ಇರಲಿದೆ. ಯು.ಎಸ್.ಬಿ ಟೈಪ್ ಸಿ ಇರುವುದರಲ್ಲಿ ಯಾವುದೇ ಅನುಮಾನಗಳಿಲ್ಲ.

ಒನ್ ಪ್ಲಸ್ 3ಟಿ: ಆ್ಯಂಡ್ರಾಯ್ಡ್ 7.0 ನೌಗಾಟ್.

ಒನ್ ಪ್ಲಸ್ 3ಯ ಹೊಸ ಫೋನಿನಲ್ಲಿ ಆ್ಯಂಡ್ರಾಯ್ಡ್ 7.0 ನೌಗಾಟ್ ಇರುವ ಸಾಧ್ಯತೆಗಳು ಅಧಿಕ. ಜೊತೆಗೆ ನೌಗಾಟ್ ಆಧಾರಿತ ಆಕ್ಸಿಜನ್ ಒಎಸ್ ಇರಲಿದೆ.

ಒನ್ ಪ್ಲಸ್ 3ಟಿ: ಉತ್ತಮ ಪರದೆ.

ಒನ್ ಪ್ಲಸ್ 3ಟಿಯಲ್ಲಿನ ಪರದೆ ಒನ್ ಪ್ಲಸ್ 3ಯಲ್ಲಿದ್ದಂತೆಯೇ ಇರಲಿದೆ. 5.5 ಇಂಚಿನ ಫುಲ್ ಹೆಚ್.ಡಿ ಪರದೆ, 401ಪಿಪಿಐ ಮತ್ತು ಆಪ್ಟಿಕ್ ಅಮೊಲೆಡ್ ಪರದೆಯಿರಲಿದೆ.

ಒನ್ ಪ್ಲಸ್ 3ಟಿ: ಉತ್ತಮ ಕ್ಯಾಮೆರ.

ಗಾಳಿಸುದ್ದಿಗಳ ಪ್ರಕಾರ ಒನ್ ಪ್ಲಸ್ 3ಟಿಯಲ್ಲಿ ಸೋನಿ ಸಂವೇದಕ, 1.12µm ಪಿಕ್ಸೆಲ್ಸ್, ಎಫ್/2.0 ಅಪರ್ಚರ್ ಮತ್ತು 4ಕೆ ವೀಡಿಯೋ ಸೌಲಭ್ಯವಿರುವ 16 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರಾ ಇರಲಿದೆ.

ಮುಂಬದಿಯಲ್ಲಿ ಫಿಕ್ಸೆಡ್ ಫೋಕಸ್, 1080 ವೀಡಿಯೋ ರೆಕಾರ್ಡಿಂಗ್ ಸೌಲಭ್ಯವಿರುವ 8 ಮೆಗಾಪಿಕ್ಸೆಲ್ಲಿನ ಕ್ಯಾಮೆರಾ ಇರಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೆಚ್ಚಿನ ಸುದ್ದಿಗಳಿಗಾಗಿ ಕನ್ನಡ ಗಿಜ್‌ಬಾಟ್‌ಗೆ ಭೇಟಿ ನೀಡುತ್ತಿರಿRead more about:
English summary
Here's everything you need to know about the mystery OnePlus smartphone.
Please Wait while comments are loading...
Opinion Poll

Social Counting