ಶಿಯೋಮಿ ಎಂಐಯುಐ9ರ ಟಾಪ್ 7 ವಿಶೇಷತೆಗಳು.

ಶಿಯೋಮಿ ಈಗಾಗಲೇ ಆ್ಯಂಡ್ರಾಯ್ಡ್ ನೌಗಾಟ್ ಇರುವ ಎಂಐಯುಐ 9 ಅನ್ನು ಬಿಡುಗಡೆಗೊಳಿಸಲು ಸಜ್ಜಾಗುತ್ತಿದೆ. ಈ ಹೊಸ ಅಪ್ ಡೇಟ್ ನಲ್ಲಿ ಏನೇನನ್ನು ನಿರೀಕ್ಷಿಸಬಹುದು ಮತ್ತು ಈ ಅಪ್ ಡೇಟ್ ಪಡೆಯುವ ಸಾಧನಗಳ್ಯಾವುವು ಎನ್ನುವುದರ ಬಗೆಗಿನ ವರದಿಯಿದು.

|

ಈ ವರ್ಷದ ಆಗಷ್ಟಿನಲ್ಲಿ ಶಿಯೋಮಿ ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಆಧಾರಿತ ಎಂಐಯುಐ ಅನ್ನು ಬಿಡುಗಡೆಗೊಳಿಸಿತ್ತು. ಗಾಳಿ ಸುದ್ದಿಗಳ ಪ್ರಕಾರ ಪೂರ್ವದ ಆ್ಯಪಲ್ ಶಿಯೋಮಿಯು ಆ್ಯಂಡ್ರಾಯ್ಡ್ 7.0 ನೌಗಾಟ್ ಆಧಾರಿತ ಎಂಐಯುಐ 9 ರ ಮೇಲೆ ಕೆಲಸ ಮಾಡುತ್ತಿದೆ.

ಶಿಯೋಮಿ ಎಂಐಯುಐ9ರ ಟಾಪ್ 7 ವಿಶೇಷತೆಗಳು.

ಓದಿರಿ: ಯೂಟ್ಯೂಬ್ ವೀಡಿಯೊಗಳನ್ನು ಜಿಫ್ ಆಗಿ ಕನ್‌ವರ್ಟ್ ಮಾಡುವುದು ಹೇಗೆ?

ಇತ್ತೀಚೆಗೆ ಎಂಐಯುಐ 9ರದು ಎನ್ನಲಾದ ಸ್ಕ್ರೀನ್ ಶಾಟ್ ಅನ್ನು ಆನ್ ಲೈನಿನಲ್ಲಿ ಬಿಡಲಾಗಿದೆ. ಅದರ ವರ್ಷನ್ ಸಂಖೈ 9.6.9.23. ಜೊತೆಗೆ, ಎಂಐಯುಐ ಫೋರಮ್ಮಿನ ಲೇಖನವೊಂದರಲ್ಲಿ ಎಂಐಯುಐ 9 ಪಡೆಯಲಿರುವ ಮೊಬೈಲುಗಳ ಪಟ್ಟಿಯನ್ನು ನೀಡಲಾಗಿತ್ತು. ಕಂಪನಿಯಿಂದ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಬಂದಿಲ್ಲವಾದರೂ ಗಾಳಿ ಸುದ್ದಿಗಳು ಏನನ್ನೇಳುತ್ತವೆ ನೋಡೋಣ ಬನ್ನಿ.

ರೆಡ್ ಮಿ ನೋಟ್ 3 ಯಿಂದ ಎಂಐ 4ಐ ವರೆಗೆ ಎಂಐಯುಐ 9 ಬೆಂಬಲ.

ರೆಡ್ ಮಿ ನೋಟ್ 3 ಯಿಂದ ಎಂಐ 4ಐ ವರೆಗೆ ಎಂಐಯುಐ 9 ಬೆಂಬಲ.

ಗಾಳಿಸುದ್ದಿಯ ಪ್ರಕಾರ ರೆಡ್ ಮಿ ನೋಟ್ 3, ರೆಡ್ ಮಿ 2 ಪ್ರೈಮ್, ರೆಡ್ ಮಿ 3, ರೆಡ್ ಮಿ 3ಎಸ್, ಎಂಐ 4ಎಸ್, ಎಂಐ 4ಸಿ, ಎಂಐ 4ಐ, ಎಂಐ 5, ಎಂಐ ಮ್ಯಾಕ್ಸ್, ಎಂಐ ನೋಟ್ ಮತ್ತು ಎಂಐ ಪ್ಯಾಡ್ 2 ಅಪ್ ಡೇಟ್ ಪಡೆದುಕೊಳ್ಳಲಿವೆ. ಇತ್ತೀಚೆಗೆ ಬಿಡುಗಡೆಯಾದ ಎಂಐ 5ಎಸ್ ಮತ್ತು ಎಂಐ 5ಎಸ್ ಪ್ಲಸ್ ಈ ಪಟ್ಟಿಯಲ್ಲಿಲ್ಲ. ಆದರೆ, ನಮ್ಮ ನಂಬಿಕೆಯ ಪ್ರಕಾರ ಶಿಯೋಮಿ ಅಧಿಕೃತ ಪಟ್ಟಿಯಲ್ಲಿ ಇನ್ನೂ ಹೆಚ್ಚಿನ ಸಾಧನಗಳಿರುತ್ತವೆ.

ಮಲ್ಟಿ ವಿಂಡೋ ಬೆಂಬಲ.

ಮಲ್ಟಿ ವಿಂಡೋ ಬೆಂಬಲ.

ಎಂಐಯುಐ 9 ಅಪ್ ಡೇಟ್ ನಲ್ಲಿ ಸ್ಯಾಮ್ಸಂಗ್ ಸ್ಮಾರ್ಟ್ ಫೋನುಗಳಲ್ಲಿರುವ ಮಲ್ಟಿ ವಿಂಡೋ ಬೆಂಬಲ ಇರುವ ನಿರೀಕ್ಷೆಯಿದೆ. ಈ ವಿಶೇಷತೆಯಿಂದ ನೀವು ಒಂದೇ ಬಾರಿ ಎರಡು ತಂತ್ರಾಂಶಗಳನ್ನು ಒಂದರ ಪಕ್ಕ ಮತ್ತೊಂದನ್ನಿರಿಸಿ ಕೆಲಸ ಮಾಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನೋಟಿಫಿಕೇಶನ್ ಪ್ಯಾನೆಲ್ ನಿಂದಲೇ ಮರುತ್ತರಿಸಿ.

ನೋಟಿಫಿಕೇಶನ್ ಪ್ಯಾನೆಲ್ ನಿಂದಲೇ ಮರುತ್ತರಿಸಿ.

ಆ್ಯಪಲ್ ನ ಕ್ವಿಕ್ ರಿಪ್ಲೈ ರೀತಿಯಲ್ಲಿಯೇ ಎಂಐಯುಐ 9ನಲ್ಲಿ ನೋಟಿಫಿಕೇಶನ್ ಪ್ಯಾನೆಲ್ ನಿಂದಲೇ ಮರುತ್ತರಿಸುವ ಅವಕಾಶವಿರಲಿದೆ. ಮೆಸೇಜಿಂಗ್ ತಂತ್ರಾಂಶಗಳಾದ ವಾಟ್ಸಪ್, ಹೈಕ್ ಮತ್ತು ಟೆಲಿಗ್ರಾಮ್ ಕೂಡ ಇದನ್ನು ಉಪಯೋಗಿಸಬಹುದು.

ಡೋಝ್ ಮೋಡ್.

ಡೋಝ್ ಮೋಡ್.

ಆ್ಯಂಡ್ರಾಯ್ಡ್ 6.0 ಮಾರ್ಷ್ ಮೆಲ್ಲೋ ಜೊತೆಗೆ ಗೂಗಲ್ ಡೋಝ್ ಮೋಡ್ ಅನ್ನು ಒದಗಿಸಿತು, ಹಿಂಬದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಂತ್ರಾಂಶಗಳನ್ನು ಮುಚ್ಚಿ ಬ್ಯಾಟರಿಯ ಆಯಸ್ಸನ್ನು ಹೆಚ್ಚಿಸಲು ಇದು ಸಹಾಯಕ. ಎಂಐಯುಐ 9ನಲ್ಲಿ ಇದೇ ರೀತಿಯ ಮತ್ತಷ್ಟು ಉತ್ತಮಗೊಳಿಸಿದ ವಿಶೇಷತೆಯನ್ನು ಎಂಐಯುಐ 9 ನೀಡಲಿದೆ, ಗೂಗಲ್ ಡೋಝ್ ಮೋಡ್ ಗೆ ಆ್ಯಂಡ್ರಾಯ್ಡ್ 7.0 ನೌಗಾಟ್ ನಲ್ಲಿ ಮಾಡಿದ ಬದಲಾವಣೆಯಂತೆ.

ಪ್ರಾಜೆಕ್ಟ್ ಸ್ವೆಲ್ಟೆ.

ಪ್ರಾಜೆಕ್ಟ್ ಸ್ವೆಲ್ಟೆ.

ಹೊಸತಾದ ಪ್ರಾಜೆಕ್ಟ್ ಸ್ವೆಲ್ಟೆ ಆಯ್ಕೆಯು ರ್ಯಾಮ್ ಬಳಕೆಯನ್ನು ಉತ್ತಮಗೊಳಿಸುತ್ತದೆ ಮತ್ತು ಸಿಸ್ಟಮ್ ಹಾಗೂ ಇನ್ನಿತರೆ ತಂತ್ರಾಂಶಗಳು ಉಪಯೋಗಿಸುವ ಮೆಮೊರಿಯ ಗಾತ್ರವನ್ನು ಕನಿಷ್ಟದಲ್ಲಿಡುತ್ತದೆ ಎನ್ನಲಾಗಿದೆ.

ಉತ್ತಮಗೊಂಡ ಡೇಟಾ ಸೇವರ್.

ಉತ್ತಮಗೊಂಡ ಡೇಟಾ ಸೇವರ್.

ಎಂಐಯುಐ 9ನಲ್ಲಿ ಈಗಿರುವ ಡೇಟಾ ಸೇವರ್ ಆಯ್ಕೆಯನ್ನು ಮತ್ತಷ್ಟು ಉತ್ತಮಗೊಳಿಸಲಾಗುತ್ತದೆ ಎಂಬ ನಿರೀಕ್ಷೆಯಿದೆ. ಇದರಿಂದ ಹೆಚ್ಚಿನ ಡೇಟಾ ಬ್ಯಾಕ್ ಗ್ರೌಂಡಿನಲ್ಲಿ ನಷ್ಟವಾಗುವುದನ್ನು ತಪ್ಪಿಸಬಹುದು.

ವಿಪಿಎನ್ ಯಾವಾಗಲೂ ಚಾಲ್ತಿಯಲ್ಲಿರುತ್ತದೆ.

ವಿಪಿಎನ್ ಯಾವಾಗಲೂ ಚಾಲ್ತಿಯಲ್ಲಿರುತ್ತದೆ.

ಎಂಐಯುಐ 9ನಲ್ಲಿ ವಿಪಿಎನ್ ಯಾವಾಗಲೂ ಚಾಲ್ತಿಯಲ್ಲಿರುತ್ತದೆ ಎನ್ನಲಾಗಿದೆ. ಇದರರ್ಥ, ಮತ್ತಷ್ಟು ಭದ್ರತೆ.

ಕಾಲ್ ಬ್ಲಾಕ್ ಮಾಡುವ ಸೌಲಭ್ಯ.

ಕಾಲ್ ಬ್ಲಾಕ್ ಮಾಡುವ ಸೌಲಭ್ಯ.

ಹೊಸ ಅಪ್ ಡೇಟ್ ನಲ್ಲಿ ಬಳಕೆದಾರರಿಗೆ ಬೇಡದ ಕರೆಗಳನ್ನು ಬ್ಲಾಕ್ ಮಾಡುವ ಸೌಲಭ್ಯವಿರಲಿದೆ. ಜೊತಗೆ ಕಾಲ್ ಸ್ಕ್ರೀನಿಂಗ್ ಬೆಂಬಲವೂ ಇರುವುದೆಂಬ ಸುದ್ದಿಗಳಿವೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Xiaomi unveiled the Android 6.0 Marshmallow-based MIUI 8 back in August this year. And what appears from the rumours, the Apple of East is working on the Android 7.0 Nougat flavoured MIUI 9 already.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X