2016ರಲ್ಲಿ ಬಿಡುಗಡೆಯಾದ ಉತ್ತಮ ಬ್ಯಾಟರಿ ಬಾಳಿಕೆಯ ಸ್ಮಾರ್ಟ್‌ಪೋನ್‌ಗಳ ಪಟ್ಟಿ

ಹೆಚ್ಚಾಗಿ ಖ್ಯಾತಿ ಪಡೆದ ಪೋನುಗಳ ಪ್ರಥಮ ವೈಶಿಷ್ಟ್ಯ ಎಂದರೆ ಬ್ಯಾಟರಿ ಬ್ಯಾಕಪ್. ಯಾವ ಪೋನ್ ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುವುದೋ ಅಂತ ಪೋನುಗಳು ಹೆಚ್ಚು ಮಾರಾಟವಾಗಿವೆ.

Written By:

ಈ ವರ್ಷದಲ್ಲಿ ಸ್ಮಾರ್ಟ್‌ಪೋನ್‌ಗಳ ಸುಗ್ಗಿಯೇ ನಡೆದಿದ್ದು, ಲೆಕ್ಕವಿಲ್ಲದಷ್ಟು ಸ್ಮಾರ್ಟ್‌ಪೋನುಗಳು ಮಾರುಕಟ್ಟೆಗೆ ಬಂದಿವೆ. ಅದರಲ್ಲಿ ಕೇಲವು ಮಾತ್ರ ಗ್ರಾಹಕರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅದರಲ್ಲಿ ಹೆಚ್ಚಾಗಿ ಖ್ಯಾತಿ ಪಡೆದ ಪೋನುಗಳ ಪ್ರಥಮ ವೈಶಿಷ್ಟ್ಯ ಎಂದರೆ ಬ್ಯಾಟರಿ ಬ್ಯಾಕಪ್. ಯಾವ ಪೋನ್ ದೀರ್ಘಕಾಲ ಬ್ಯಾಟರಿ ಬಾಳಿಕೆ ಬರುವುದೋ ಅಂತ ಪೋನುಗಳು ಹೆಚ್ಚು ಮಾರಾಟವಾಗಿವೆ.

 

ಆಂಡ್ರಾಯ್ಡ್ ಸ್ಮಾರ್ಟ್‌ಪೋನಿನಲ್ಲಿ ವಾಟ್ಸ್ಆಪ್ ಚಾಟ್ ಹೆಡ್ ಪಡೆಯುವುದು ಹೇಗೆ..?

ಹಾಗೆಯೇ 2016ರಲ್ಲಿ ಬಿಡುಗಡೆಯಾದ ಎಂಟ್ರಿ ಲೆವೆಲ್ ಸ್ಮಾರ್ಟ್‌ಪೋನುಗಳಲ್ಲಿ ಯಾವ ಪೋನುಗಳು ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿತ್ತು, ಯಾವ ಪೋನುಗಳು ಗ್ರಾಹಕರನ್ನು ಸಂತೋಷಪಡಿಸಿತ್ತು ಎಂಬುದುದನ್ನು ಮುಂದೆ ನೋಡುವ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Motorola Moto Z Play

ಈ ವರ್ಷ ಬಿಡುಗಡೆಯಾದ ಸ್ಮಾರ್ಟ್‌ಪೋನುಗಳಲ್ಲಿ ದೀರ್ಘಕಾಲದ ಬ್ಯಾಟರಿ ಬಾಳಿಕೆ ನೀಡಿದ ಪೋನುಗಳಲ್ಲಿ ಮೋಟೋ ಜೆಡ್ ಪ್ಲೆಸ್ ಬೆಸ್ಟ್‌ ಆಗಿದೆ. ಸ್ನ್ಯಾಪ್‌ಡ್ರಾಗನ್ 625 ಪ್ರೊಸೆಸರ್ ಹೊಂದಿದ್ದ ಈ ಪೋನು, ಎರಡು ದಿನಗಳ ಕಾಲ ಬ್ಯಾಟರಿ ಬಾಳಿಕೆ ನೀಡುತ್ತಿತ್ತು. ಸ್ಕ್ರೀನ್ ಆನ್ ಆಗಿದ್ದರೆ ಸತತ 6 ಗಂಟೆಕಾಲ ಕಾರ್ಯನಿರ್ವಹಿಸುತ್ತಿತ್ತು. ಫ್ಲೀಪ್ ಕಾರ್ಟ್‌ನಲ್ಲಿ ಮಾತ್ರ ಸೇಲಿಗಿದ್ದ ಈ ಪೋನ್ 24,999 ರೂಗಳಿಗೆ ಮಾರಾಟವಾಗುತ್ತಿತ್ತು.

Lenovo Z2 Plus

ಈ ವರ್ಷದಲ್ಲಿ ಬಿಡುಗಡೆಯಾದ ಸ್ಮಾರ್ಟ್‌ಪೋನುಗಳ ಪೈಕಿ ಕಡಿಮೆ ಬೆಲೆಗೆ ಸ್ನ್ಯಾಪ್‌ಡ್ರಾಗನ್ 820 ಪ್ರೋಸೆಸರ್ ನೊಂದಿಗೆ ಉತ್ತಮ ಬ್ಯಾಟರಿ ಬಾಳಿಕೆಗೆ ಹೆಸರುವಾಗಿಯಾಗಿತ್ತು. ಸ್ಕ್ರಿನ್ ಆನ್ ಆಗಿದ್ದರು 5 ಗಂಟೆಗಳ ಕಾಲ ಕಾರ್ಯನಿರ್ವಹಿಸುತ್ತಿತ್ತು.

Xiaomi Redmi 3s/ 3s Prime

ಕ್ಸಿಯೋಮಿಯ ರೆಡ್‌ಮಿ 3 ಮತ್ತು ರೆಡ್‌ಮಿ 3 ಪ್ರೈಮ್ ಪೋನುಗಳು ಉತ್ತಮ ಬ್ಯಾಟರಿ ಬ್ಯಾಕಪ್ ಹೊಂದಿದ ಪೋನುಗಳಾಗಿದ್ದು, ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮುಖ್ಯತೆಯನ್ನು ಪಡೆದುಕೊಂಡಿವೆ. ಈ ಪೋನುಗಳಲ್ಲಿ 4100 mAh ಬ್ಯಾಟರಿ ಇದ್ದು, 720p ಡಿಸ್‌ಪ್ಲೇ ಹೊಂದಿವೆ. ಈ ಪೋನಿ ಬ್ಯಾಟರಿಯೂ 2 ದಿನ ಬಾಳಿಕೆ ಬರುತ್ತಲ್ಲದೇ, ಸ್ಕ್ರಿನ್ ಆನ್ ಆಗಿದ್ದರೆ 8 ಗಂಟೆ ಕಾಲ ಬಾಳಿಕೆ ಬರಲಿದೆಯಂತೆ.

Google Pixel XL

ಗೂಗಲ್ ಕಂಪನಿಯ ಪಿಕ್ಸಲ್ ಏಕ್ಸ್ ಎಲ್ ಪೋನು ಬ್ಯಾಟರಿ ಬಾಳಿಕೆಯಲ್ಲಿ ಮುಂದಿದೆ. ಈ ವಿಷಯದಲ್ಲಿ ಗೂಗಲ್ ಮೊದಲ ಪ್ರಯತ್ನದಲ್ಲೇ ಗೆಲುವು ಸಾಧಿಸಿದೆ. ಈ ಪೋನ್ ಸಹ ಸ್ಕ್ರಿನ್ ಆನ್ ಮಾಡಿಟ್ಟರು ಸುಮಾರು 5 ಗಂಟೆಕಾಲ ಕಾರ್ಯ ನಿರ್ವಹಿಸುತ್ತಿತ್ತು.

Samsung Galaxy S7 Edge

ಟಾಪ್ ಎಂಡ್ ಪೋನಿನಲ್ಲಿ ಸ್ಯಾಮ್‌ಸಂಗ್‌ನ Galaxy S7 Edge ಉತ್ತಮ ಬ್ಯಾಟರಿ ಬಾಳಿಕೆಯನ್ನು ಹೊಂದಿತ್ತು. ಸ್ಕ್ರಿನ್ ಆನ್ ಮಾಡಿಟ್ಟ 4.5 ಗಂಟೆಗಳ ಕಾಲ ಬ್ಯಾಟರಿ ಬ್ಯಾಕಾಪ್ ಉಳಿಯುತ್ತಿತ್ತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Now, we can proudly say that there are a bunch of smartphones released this year offering the best battery life.
Please Wait while comments are loading...
Opinion Poll

Social Counting