ಗೂಗಲ್‌ ಹೆಣೆದ ಹೊಸ ತಂತ್ರ ನೆಕ್ಸಸ್ 6

By Shwetha
|

ನೆಕ್ಸಸ್ 6 ಎಲ್ಲಾ ವೈಶಿಷ್ಟ್ಯಪೂರ್ಣ ಅಂಶಗಳಿಂದ ಕಣ್ಸೆಳೆಯುವಂತಿದೆ. ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ಮಾರಾಟ ಮಾಡಿ ಹೊಸ ನೆಕ್ಸಸ್ 6 ಅನ್ನು ಖರೀದಿಸುವ ಬಯಕೆ ಉಂಟಾಗುವುದು ಸಹಜವಾಗಿದೆ. ನೀವು ನಿಜಕ್ಕೂ ಭಾವಿಸಿದಕ್ಕಿಂತಲೂ ಇದು ಕಡಿಮೆ ಬೆಲೆಯಲ್ಲಿ ಬರುತ್ತಿದ್ದು ಇದರ ಖರೀದಿ ನಿಜಕ್ಕೂ ಪರಿಪೂರ್ಣ ಎಂದೆನಿಸಲಿದೆ.

ಇದನ್ನೂ ಓದಿ: ಇನ್ನು ಬೇಟೆಯಾಡಿ ಐಫೋನ್ 6 ಅನ್ನು ಈ ತಾಣಗಳಲ್ಲಿ

ಆಂಡ್ರಾಯ್ಡ್ 5.0 ನಲ್ಲಿ ಬರುತ್ತಿರುವ ನೆಕ್ಸಸ್ 6 ಆಂಡ್ರಾಯ್ಡ್‌ನ ಲೋಲಿಪಪ್ ಆವೃತ್ತಿಯಲ್ಲಿ ಹೊರಹೊಮ್ಮುತ್ತಿದೆ. ಇದು ಅತ್ಯುನ್ನತ ಹೊಸ ವಿಶೇಷತೆಗಳು ಮತ್ತು ಕಣ್ಸೆಳೆಯುವ ಫೀಚರ್‌ಗಳೊಂದಿಗೆ ಬಂದಿದ್ದು ಇತರ ಆಂಡ್ರಾಯ್ಡ್ ಡಿವೈಸ್‌ಗಳನ್ನು ಹಿಮ್ಮೆಟ್ಟಿಸುವಂತಹ ಛಾತಿಯನ್ನು ನೆಕ್ಸಸ್ 6 ಹೊಂದಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ.

ಇದನ್ನೂ ಓದಿ: ಮನತಣಿಸುವ ದೀಪಾವಳಿ ಧಮಾಕಾ ಫೋನ್‌ಗಳು

ಮೋಟೋರೋಲಾ ನೆಕ್ಸಸ್ 6 ಅನ್ನು ವಿನ್ಯಾಸಗೊಳಿಸಿದ್ದು, ಮೋಟೋ ಎಕ್ಸ್ 2014 ರ ಅದೇ ನವೀಕರಣದಂತೆ ಇದು ಕಂಡುಬರುತ್ತಿದೆ. ಇಂದಿನ ಲೇಖನದಲ್ಲಿ ಹೊಸ ನೆಕ್ಸಸ್ 6 ನ ಮನಸೆಳೆಯುವ ವಿಶೇಷತೆಗಳು ಮತ್ತು ಅತಿ ಮುಖ್ಯ ಅಂಶಗಳನ್ನು ನಾವಿಲ್ಲಿ ನೀಡುತ್ತಿದ್ದು ಇದು ನಿಜಕ್ಕೂ ಕಣ್ಮನಸೆಳೆಯುವಂತಿದೆ.

#1

#1

ನೆಕ್ಸಸ್ 6, ದೊಡ್ಡದಾದ ಕ್ವಾಡ್ ಎಚ್‌ಡಿ ಡಿಸ್‌ಪ್ಲೇಯೊಂದಿಗೆ ಬಂದಿದ್ದು ಗ್ಯಾಲಕ್ಸಿ ನೋಟ್ 4 ಹಾಗೂ ಎಲ್‌ಜಿ ಜಿ3 ನಂತಹ 2ಕೆ ಡಿಸ್‌ಪ್ಲೇಯನ್ನು ಇದು ಹೊಂದಿದೆ. 5.96 ಇಂಚಿನ ಡಿಸ್‌ಪ್ಲೇಯನ್ನು ಡಿವೈಸ್ ಹೊಂದಿದ್ದು 2,560 x 1,440 ರೆಸಲ್ಯೂಶನ್ ಇದರಲ್ಲಿದೆ.

#2

#2

ಇದು ದೊಡ್ಡದಾದ 3,220 mAh ಬ್ಯಾಟರಿಯನ್ನು ಒಳಗೊಂಡಿದ್ದು ನೆಕ್ಸಸ್ 6 ಮತ್ತು ಗೂಗಲ್ ಟರ್ಬೋ ಚಾರ್ಜರ್ ಅನ್ನು ಇದರಲ್ಲಿ ಸೇರಿಸಿದೆ. ಇದು ಆರು ಗಂಟೆಗಳ ಬ್ಯಾಟರಿ ಜೀವನವನ್ನು ನೀಡುತ್ತಿದ್ದು 15 ನಿಮಿಷಗಳ ಚಾರ್ಜಿಂಗ್ ಸಮಯವನ್ನು ಇದು ಒದಗಿಸುತ್ತಿದೆ.

#3

#3

13 ಎಮ್‌ಪಿಗಳ ರಿಯರ್ ಫೇಸಿಂಗ್ ಕ್ಯಾಮೆರಾವನ್ನು ಒಳಗೊಂಡಿದ್ದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ ಇದರಲ್ಲಿದೆ. ಇದು ಉತ್ತಮ ಫೋಟೋಗಳನ್ನು ತೆಗೆಯಲು ನಿಮ್ಮನ್ನು ಪ್ರೇರೇಪಿಸುವಂತಿದ್ದು, ಫೋಟೋಗಳಲ್ಲಿ ಬ್ಲರ್‌ನೆಸ್ ಅನ್ನು ನಿವಾರಿಸುತ್ತದೆ.

#4

#4

ಆಂಡ್ರಾಯ್ಡ್ 5.0 ಲೋಲಿಪಾಪ್ ಬಿಡಯಗಡೆಯು ನೆಕ್ಸಸ್ 6 ಸೇರಿದಂತೆ ಆಂಡ್ರಾಯ್ಡ್ ಡಿವೈಸ್‌ಗಳಿಗೆ ಹೊಸ ನೋಟವನ್ನು ನೀಡಲಿದೆ. ಇದರಲ್ಲಿ ಆಂಟಿ ಥೆಪ್ಟ್ ಸೌಲಭ್ಯವಿದ್ದು ಫೋನ್ ಅನ್ನು ಮರುಹೊಂದಿಸಲು ನಿಮಗೆ ಪಾಸ್‌ವರ್ಡ್‌ನ ಅವಶ್ಯಕತೆ ಇರುತ್ತದೆ.

#5

#5

ಮೋಟೋ ಎಕ್ಸ್ 2014 ನಲ್ಲಿದ್ದಂತೆ ನೆಕ್ಸಸ್ 6 ಮುಂಭಾಗ ಸ್ಪೀಕರ್ ಅನ್ನು ಹೊಂದಿದೆ.

#6

#6

ನೆಕ್ಸಸ್ 6 ಜಲಪ್ರತಿರೋಧಕ ಸಾಮರ್ಥ್ಯವನ್ನು ಹೊಂದಿದ್ದು ನೀರಿನ ಬಳಿ ಇದನ್ನು ಬಳಸುವಾಗ ನೀವೇನು ಹೆದರಬೇಕಾಗಿಲ್ಲ. ಇದು ಕೆಳಗೆ ಬಿದ್ದರೂ ಫೋನ್‌ಗೆ ಪೆಟ್ಟಾಗುವ ಸಾಧ್ಯತೆ ಕಡಿಮೆ ಇದೆ.

#7

#7

ನೆಕ್ಸಸ್ 6 ತನ್ನಲ್ಲಿ ವೈರ್‌ಲೆಸ್ ಚಾರ್ಜಿಂಗ್ ಅನ್ನು ಒಳಗೊಂಡಿದೆ.

Best Mobiles in India

Read more about:
English summary
This article containing New Google Nexus 6 tremendous Features which we never miss to see.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X