ಅಬ್ಬಾ..ಭಾರತದ ಮಾರುಕಟ್ಟೆ ತಲ್ಲಣಗೊಳಿಸಲು ಬರುತ್ತಿವೆ ಲಾವ ಫೋನ್‌ಗಳು!!!

ಸೆಲ್ಫಿ ಕ್ಯಾಮೆರಾ ಮತ್ತು RAM ಮೇಲೆ ಲಾವ ಗಮನ ಹರಿಸಿದ್ದು, ಲಾವದ ಇತ್ತೀಚಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್ ಆಗಿವೆ.!!

Written By:

ಭಾರತದಲ್ಲಿ ಮಿಂಚಿ ಮರೆಯಾದ ಮೊಬೈಲ್ ಕಂಪೆನಿಗಳು ಬೇಕಾದಷ್ಟಿವೆ. ಆದರೆ, ಲಾವ ಕಂಪೆನಿ ಮಾತ್ರ ಹೆಚ್ಚು ಹೆಸರು ಪಡೆಯದಿದ್ದರೂ ಭಾರತದ ಮೊಬೈಲ್ ಮಾರುಕಟ್ಟೆಯಲ್ಲಿ ಗಟ್ಟಿಯಾಗಿ ನೆಲೆಯೂರಿದೆ.! ಶಿಯೋಮಿ, ಒಪ್ಪೊ,ವಿವೊ, ಮತ್ತೊ ಲೆನೊವೊ ಸ್ಮಾರ್ಟ್‌ಫೋನ್‌ಗಳು ಇಂದು ಭಾರತದ ಮಾರುಕಟ್ಟೆಯನ್ನು ಆಳುತ್ತಿದ್ದರೂ ಲಾವ ಕಂಪೆನಿ ಮಾತ್ರ ನಿಧಾನವಾಗಿ ಜನರನ್ನು ಸೆಳೆಯುತ್ತಿದೆ.!!

ಲಾವ ಇದೀಗ ಹೆಚ್ಚು ಫಿಚರ್ ಹೊಂದಿರುವಂತಹ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುತ್ತಿದೆ. ಇಂದಿನ ಕಾಲದ ಟ್ರೆಂಡ್ ಆಘಿರುವ ಫಿಂಗರ್‌ಪ್ರಿಂಟ್, ಸೆಲ್ಫಿ ಕ್ಯಾಮೆರಾ ಮತ್ತು RAM ಮೇಲೆ ಲಾವ ಗಮನ ಹರಿಸಿದ್ದು, ಲಾವದ ಇತ್ತೀಚಿನ ಎಲ್ಲಾ ಸ್ಮಾರ್ಟ್‌ಫೋನ್‌ಗಳು ಅಪ್‌ಡೇಟ್ ಆಗಿವೆ.!!

ಅಬ್ಬಾ..ಭಾರತದ ಮಾರುಕಟ್ಟೆ ತಲ್ಲಣಗೊಳಿಸಲು ಬರುತ್ತಿವೆ ಲಾವ ಫೋನ್‌ಗಳು!!!

ಇನ್ನು ಸ್ಮಾರ್ಟ್‌ಫೋನ್ ಬ್ಯಾಟರಿ ಚಾರ್ಜ್ ಖಾಲಿಯಾಗುವುದೇ ಇಲ್ಲ!!

ಇದಕ್ಕೆ ಉದಾಹರಣೆ ಲಾವ ಜೆಡ್ 25 ಮತ್ತು ಲಾವ ಜೆಡ್10 ಸ್ಮಾರ್ಟ್‌ಫೋನ್‌ಗಳು.ಹೌದು, ಮಧ್ಯಮ ಬಜೆಟ್‌ ಸ್ಮಾರ್ಟ್‌ಫೋನ್‌ಗಳಾಗಿರುವ ಲಾವ ಜೆಡ್ 25 ಮತ್ತು ಲಾವ ಜೆಡ್10 ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಫೀಚರ್‌ಗಳನ್ನು ಒಳಗೊಂಡಿದ್ದು, ಏನೇನು ವಿಶೇಷತೆಯನ್ನು ಹೊಂದಿವೆ ಮತ್ತು ಬೆಲೆ ಎಷ್ಟು ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಸ್ಟೈಲಿಶ್ ಮತ್ತು ಗಟ್ಟಿಮುಟ್ಟಾಗಿವೆ ಲಾವ ಫೋನ್‌ಗಳು !!

ಲಾವ ಕಂಪೆನಿ ಬಿಡುಗಡೆ ಮಾಡಿರುವ ನೂತನ ಲಾವ ಜೆಡ್ 25 ಮತ್ತು ಲಾವ ಜೆಡ್ 10 ಸ್ಮಾರ್ಟ್‌ಫೋನ್‌ಗಳು ಸ್ಟೈಲಿಶ್ ಮತ್ತು ಗಟ್ಟಿಮುಟ್ಟಾದ್ದು, ಅತ್ಯಾಕರ್ಶಕ ವಿನ್ಯಾಸವನ್ನು ಹೊಂದಿವೆ. ಜೊತೆಗೆ ಮೆಟಲ್ ಬಾಡಿ ಹೊಂದಿರುವ ಈ ಸ್ಮಾರ್ಟ್‌ಫೋನ್‌ಗಳನ್ನು ಹಿಡಿಯಲು ಹಿತಕರ ಅನುಭವವಾಗುತ್ತದೆ.

ಹೆಚ್‌ಡಿ ಮತ್ತು ಸಿನಿಮ್ಯಾಟಿಕ್ ಸ್ಕ್ರೀನ್.

ಇಂದಿನ ಸ್ಮಾರ್ಟ್‌ಫೋನ್‌ಗಳ ವಿನ್ಯಾಸದಲ್ಲಿ ಹೆಚ್‌ಡಿ ಮತ್ತು ಸಿನಿಮ್ಯಾಟಿಕ್ ಸ್ಕ್ರೀನ್‌ಗಳದ್ದೆ ಕಾರುಬಾರು.!! 5.5 ಹೆಚ್‌ಡಿ ಡಿಸ್‌ಪ್ಲೇ ಹೊಂದಿರದ ಸ್ಮಾರ್ಟ್‌ಫೋನ್ ಖರಿದಿಸುವವರೆ ಇಲ್ಲವಾಗಿದ್ದಾರೆ. ಆದರೆ, ಲಾವ ಜೆಡ್ 25 ಮತ್ತು ಲಾವ ಜೆಡ್10 ಸ್ಮಾರ್ಟ್‌ಫೋನ್‌ಗಳು 5.5 ಹೆಚ್‌ಡಿ ಐಪಿಎಸ್ ಡಿಸ್‌ಪ್ಲೇ ಮತ್ತು ಸಿನಿಮ್ಯಾಟಿಕ್ ಸ್ಕ್ರೀನ್ ಹೊಂದಿದೆ. ಸಿನಿಮ್ಯಾಟಿಕ್ ಸ್ಕ್ರೀನ್ 3D ಗೇಮಿಂಗ್‌ಗೆ ಸಪೋರ್ಟ್ ಆಗುತ್ತದೆ.!!

ಹಾರ್ಡ್‌ವೇರ್ ಆಯ್ತು ..ಸಾಫ್ಟವೇರ್ ಹೇಗಿದೆ.?

ಲಾವ ಜೆಡ್‌10 ಮೀಡಿಯಾ ಟೆಕ್ ಕ್ವಾಡ್‌ಕೋರ್ ಚಿಪ್‌ಸೆಟ್ ಹೊಂದಿದ್ದರೆ, ಲಾವ ಜೆಡ್ 25 ಮೀಡಿಯಾ ಟೆಕ್ MT6750 ಚಿಪ್‌ಸೆಟ್ ಹೊಂದಿವೆ. ಲಾಗ್ ಫ್ರೀ ಪರ್‌ಫಾರ್ಮೆನ್ಸ್, ಮಲ್ಟಿ ಟಾಸ್ಕಿಂಗ್ ಕಾರ್ಯನಿರ್ವಹಣೆಯನ್ನು ಈ ಸ್ಮಾರ್ಟ್‌ಫೋನ್‌ಗಳು ನೀಡುತ್ತವೆ. 4GB RAM ಮತ್ತು 32 ಮೆಮೊರಿನ್ನು ಹೊಂದಿರುವ ಎರಡು ಸ್ಮಾರ್ಟ್‌ಫೋನ್‌ಗಳು 6.0 ಮಾರ್ಶಮಲ್ಲೊ ಆಪರೇಟಿಂಗ್ ಸಿಸ್ಟಮ್ ಮೂಲಕ ರನ್ ಆಗುತ್ತವೆ.!!

ಲಾವ ಕ್ಯಾಮೆರಾ ಯಾವುದಕ್ಕೂ ಕಮ್ಮಿ ಇಲ್ಲಾ!!

ನಂಬಿದ್ರೆ ನಂಬಿ ಬಿಟ್ರೆ ಬಿಡಿ ಲಾವ ಕಂಪೆನಿಯ ಲಾವ ಜೆಡ್ 25 ಮತ್ತು ಲಾವ ಜೆಡ್10 ಸ್ಮಾರ್ಟ್‌ಫೋನ್‌ಗಳು ತೆಗೆಯಬಹುದಾದ ಫೋಟೊ ಮತ್ತು ವಿಡಿಯೋಗಳನ್ನು ಬೇರೆ ಕಂಪೆನಿಯ ಹೈ ಎಂಡ್ ಸ್ಮಾರ್ಟ್‌ಫೋನ್‌ಗಳ ಮೂಲಕವೂ ತೆಗೆಯುವುದು ಕಷ್ಟವಿದೆ.!! ಬ್ಯೂಟಿ-ಫೈ, ಎಕ್ಸ್‌ಟ್ರೀಮ್ ನ್ಯೂಟಿ, ನೈಟ್ ಪ್ರೊ, ತಡೆರಹಿತ ಶಾಟ್‌ಗಳನ್ನು ತೆಗೆಯಬಹುದಾದ ಈ ಸ್ಮಾರ್ಟ್‌ಫೋನ್‌ಗಳು ಅತ್ಯುತ್ತಮ ಕ್ಯಾಮೆರಾ ಹೊಂದಿವೆ. ಇನ್ನು 1080 ಪಿಕ್ಸೆಲ್ ವಿಡಿಯೋವನ್ನು ತೆಗೆಯಬಹುದಾದ ಈ ಲಾವ ಜೆಡ್ 25 ಸ್ಮಾರ್ಟ್‌ಫೋನ್‌ 13 ಮತ್ತು 8 ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ.

ಫಿಂಗರ್‌ಪ್ರಿಂಟ್ ಫೀಚರ್!!

ಮೊದಲೇ ಹೇಳಿದ ಹಾಗೆ ಲಾವ ಜೆಡ್ 25 ಅತ್ಯಾಧುನಿಕ ಫಿಂಗರ್‌ಪ್ರಿಂಟ್ ಫೀಚರ್ ಹೊಂದಿದ್ದು, ಅಲ್ಟ್ರಾಫಾಸ್ಟ್ ವೇಗದಲ್ಲಿ ಲಾಕ್ ಆಗುವ ತಂತ್ರಜ್ಞಾನವನ್ನು ಹೊಂದಿದೆ. ಕ್ವಿಕ್ ಆಪ್ ಲಾಂಚರ್, ಎನ್‌ಸ್ಕ್ರಿಫ್ಟನ್‌ನಂತಹ ಇತರ ಕಾರ್ಯಗಳನ್ನು ಕೂಡ ಫಿಂಗರ್‌ಪ್ರಿಂಟ್ ಫೀಚರ್ ನಿರ್ವಹಿಸುತ್ತವೆ, ಹಾಗಾಗಿ, ಲಾವ ಜೆಡ್ 25 ಮತ್ತು ಲಾವ ಜೆಡ್10 ಸ್ಮಾರ್ಟ್‌ಫೋನ್‌ಗಳು ಮಾರುಕಟ್ಟೆಯಲ್ಲಿ ಲಾವ ಕಂಪೆನಿ ಬಿಡುಗಡೆ ಮಾಡಿರುವ ಎರಡು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳಾಗಿವೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

Know moreEnglish summary
Upcoming Lava smartphones set to create some stir in Indian market . to know more visit to kannada.gizbot.com
Please Wait while comments are loading...
Opinion Poll

Social Counting