ಅದ್ಭುತ ಪರಿಕಲ್ಪನೆಯ 'ನೋಕಿಯಾ ಪ್ರಿಸ್ಮ್' ಫೋನ್: ರಹಸ್ಯ ಮಾಹಿತಿ ಬಹಿರಂಗ!

ನೋಕಿಯಾ ಪ್ರಿಸ್ಮ್ ಪರಿಕಲ್ಪನೆ, ವಿಚಿತ್ರವಾಗಿ ಹಲವು ಮಾರ್ಗಗಳಲ್ಲಿ ಪ್ರದರ್ಶನವಾಗಿದೆ. ನೋಕಿಯಾದ ಭವಿಷ್ಯದ ಫೋನ್ ಹೇಗಿದೆ ಎಂಬುದರ ಗಾಳಿಸುದ್ದಿ ತಿಳಿಯಿರಿ.

Written By:

ಸ್ಮಾರ್ಟ್‌ಫೋನ್ ಕ್ಷೇತ್ರದಲ್ಲಿ ಇಂದು ಅದ್ಭುತ ಪ್ರಯೋಗಗಳು ನಡೆಯುತ್ತಿವೆ. ಶ್ಯೋಮಿ ಇತ್ತೀಚೆಗೆತಾನೆ ತನ್ನ ಮೊಟ್ಟ ಮೊದಲ ಜಿರೋ ಬೆಜೆಲ್ಸ್, ಎಡ್ಜ್‌ಲೆಸ್ ವಿನ್ಯಾಸದ ಸ್ಮಾರ್ಟ್‌ಫೋನ್‌ ಅನ್ನು ಲಾಂಚ್‌ ಮಾಡಿದೆ. ಆದರೆ ಈಗ ಸ್ಮಾರ್ಟ್‌ಫೋನ್‌ ಬಳಕೆದಾರರ ಕಣ್ಣನ್ನು ಕೆಂಪಾಗಿಸುವ ಮಾಹಿತಿ ಎಂದರೆ, ಅಪರಿಚಿತ ಮೂಲವೊಂದು ನೋಕಿಯಾ ಫೋನ್‌ ಮತ್ತು ಅದರ ಬೆರಗುಗೊಳಿಸುವ ವಿನ್ಯಾಸ ಪರಿಕಲ್ಪನೆಯನ್ನು ಬಹಿರಂಗಗೊಳಿಸಿದೆ.

ನೋಕಿಯಾದ ಹಲವು ಉದ್ಯೋಗಿಗಳ ಪ್ರಕಾರ, ನಾವು ಈಗಾಗಲೇ ತಿಳಿದಂತೆ ಫಿನ್ನಿಶ್ ಸ್ಮಾರ್ಟ್‌ಫೋನ್ ದೈತ್ಯ ಆಂಡ್ರಾಯ್ಡ್ ಪವರ್‌ನ ಸ್ಮಾರ್ಟ್‌ಫೋನ್‌ ಅನ್ನು ಈ ವರ್ಷದ ಅಂತ್ಯದಲ್ಲಿ ಅಥವಾ 2017 ಆರಂಭಿಕ ದಿನಗಳಲ್ಲಿ ಅಥವಾ MWC2017 ರಲ್ಲಿ ಲಾಂಚ್‌ ಮಾಡಲಿದೆ. ಲಾಂಚ್‌ ದಿನಾಂಕದ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ. ಆದರೆ ಗಾಳಿಸುದ್ದಿಯು ನೋಕಿಯಾ ಸ್ಮಾರ್ಟ್‌ಫೋನ್‌ ಬಗ್ಗೆ ವಿವಿಧ ರೀತಿಯಲ್ಲಿ ಹಬ್ಬಿದೆ. ಅಂದಹಾಗೆ ಈಗಾಗಲೇ ಸ್ಮಾರ್ಟ್‌ಫೋನ್‌ ಅನ್ನು ನೋಕಿಯಾ ಡಿ1ಸಿ(Nokia D1C) ಹೆಸರಿಸಿದ್ದು, ಡಿವೈಸ್‌ ಬಗ್ಗೆ ಲೀಕ್‌ ಆದ ಮಾಹಿತಿಗಳನ್ನು ಇಂದಿನ ಲೇಖನದಲ್ಲಿ ಓದಿರಿ.

ಸ್ಯಾಮ್‌ಸಂಗ್ 'ಗ್ಯಾಲಕ್ಸಿ ಎಸ್8' ಶೀರ್ಘದಲ್ಲಿ ಲಾಂಚ್: ಟಾಪ್‌ 8 ಗಾಳಿಸುದ್ದಿಗಳು

ಅಂದಹಾಗೆ ನೋಕಿಯಾ ಪ್ರಿಸ್ಮ್ ಪರಿಕಲ್ಪನೆ, ವಿಚಿತ್ರವಾಗಿ ಹಲವು ಮಾರ್ಗಗಳಲ್ಲಿ ಪ್ರದರ್ಶನವಾಗಿದೆ. ನೋಕಿಯಾದ ಭವಿಷ್ಯದ ಫೋನ್ ಹೇಗಿದೆ ಎಂಬುದರ ಗಾಳಿಸುದ್ದಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೋಕಿಯಾ ಪ್ರಿಸ್ಮ್, ಫೋನ್‌ ರೀತಿಯಲ್ಲಿ ಕಾಣುವುದೇ ಇಲ್ಲ

ಮೊದಲ ನೋಟದಲ್ಲಿ ಹೇಳುವುದಾದರೆ, ನೋಕಿಯಾ ಪ್ರಿಸ್ಮ್ ಫೋನ್‌ ರೀತಿಯಲ್ಲಿ ಯಾವುದೇ ದಿಕ್ಕುಗಳಿಂದಲೂ ಕಾಣುವುದಿಲ್ಲ. ಒಂದು ರೀತಿಯಲ್ಲಿ ಟ್ಯಾಬ್ಲೆಟ್‌ ರೀತಿ ಕಾಣುತ್ತದೆ. ಹೆಚ್ಚಿನ ಉದ್ದನೆಯ ಬೆಜೆಲ್ಸ್'ಗಳಿರುವುದರಿಂದ ಟ್ಯಾಬ್ಲೆಟ್‌ ಎಂದು ಹೇಳಲು ಸಹ ಆಗುವುದಿಲ್ಲ.

ವಿಂಡೋಸ್ ಫೋನ್‌ ಓಎಸ್‌'ನಿಂದ ರನ್‌

ನೋಕಿಯಾ ಪ್ರಿಸ್ಮ್ ಪರಿಕಲ್ಪನೆಯ ಪ್ರಕಾರ, ವಿಲಕ್ಷಣ ನೋಕಿಯಾ ಫೋನ್ ವಿಂಡೋಸ್ ಫೋನ್ ಓಎಸ್'ನಿಂದ ರನ್‌ ಆಗಲಿದೆ ಎನ್ನಲಾಗಿದೆ. ಓಎಸ್‌ ಸಂಬಂಧಪಟ್ಟಂತೆ ಇತರೆ ಯಾವುದೇ ಮಾಹಿತಿಗಳು ಲೀಕ್‌ ಆಗಿಲ್ಲ.

ಎರಡು ಹಿಂಭಾಗ ಕ್ಯಾಮೆರಾ ಫ್ಲ್ಯಾಶ್‌ಗಳು

ಕ್ಯಾಮೆರಾ ಫೀಚರ್‌ನಲ್ಲಿ, ನೋಕಿಯಾ ಪ್ರಿಸ್ಮ್ ಪರಿಕಲ್ಪನೆಯ ಫೋನ್ ಹಿಂಭಾಗ ಕ್ಯಾಮೆರಾದಲ್ಲಿ ಎರಡು ಫ್ಲ್ಯಾಶ್‌ಗಳನ್ನು ಹೊಂದಿದೆ. ಇದೊಂದು ರೀತಿಯಲ್ಲಿ ವಿಚಿತ್ರವಾಗಿದೆ.

ಎರಡು ಕೈಗಳಿಂದಲೂ ಹಿಡಿದಿಡಲೂ ಸಾಧ್ಯವಿಲ್ಲ ಅನಿಸುತ್ತೆ!

ಪ್ರಸ್ತುತದಲ್ಲಿ ಮೊಬೈಲ್‌ ಮಾರುಕಟ್ಟೆಯಲ್ಲಿರುವ ಸ್ಮಾರ್ಟ್‌ಫೋನ್‌ಗಳಿಗಿಂತ ವಿಭಿನ್ನವಾಗಿ ನೋಕಿಯಾ ಪ್ರಿಸ್ಮ್‌ ಕಾಣುತ್ತಿದ್ದು, ಎರಡು ಕೈಗಳಿಂದ ಹಿಡಿಯಲು ಸಹ ಸುಲಭವಲ್ಲ.

ಇದು ಜಸ್ಟ್ ಪರಿಕಲ್ಪನೆ ಅಷ್ಟೆ

ಎಲ್ಲರೂ ಸಹ ಹೆಚ್ಚು ಕುತೂಹಲವಾಗಿದ್ದು, ಇದು ಪರಿಕಲ್ಪನೆ ಆಗಿದೆ. ಆದರೆ ನಿಜವಾಗಿ ಬರಬಹುದು ಅಥವಾ ಬರದೇ ಸಹ ಇರಬಹುದು. ಈ ಪ್ರಿಸ್ಮ್‌ ಪರಿಕಲ್ಪನೆ ವಿಚಿತ್ರವಾಗಿದ್ದು, ನಿಜವಾದ ಸ್ಮಾರ್ಟ್‌ಫೋನ್‌ ತಯಾರಕರ ಪರಿಕಲ್ಪನೆ ಎಂದು ಸಹ ಕಾಣುತ್ತಿಲ್ಲ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
Upcoming Nokia Prism Concept is Simply Amazing! To know more visit kannada.gizbot.com
Please Wait while comments are loading...
Opinion Poll

Social Counting