ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್...!

ಕ್ಯೋಸೆರಾ ಕಂಪನಿಯೂ ಮೊಟ್ಟ ಮೊದಲ ತೊಳೆಯಬಹುದಾದ ಸ್ಮಾರ್ಟ್‌ಪೋನನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ rafre ಎಂದು ನಾಮಕರಣ ಮಾಡಿದೆ.

|

ಜಪಾನ್ ಮೂಲದ ಸ್ಮಾರ್ಟ್‌ಪೋನ್ ತಯಾರಕ ಕಂಪನಿ ಕ್ಯೋಸೆರಾ, ಸ್ಮಾರ್ಟ್‌ಪೋನ್‌ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ಆರಂಭಿಸಿದ್ದು, ಬಿಸಿ ನೀರು ಹಾಕಿ ತೊಳೆಯಲು ಸಾಧ್ಯವಿರುವ ಸ್ಮಾರ್ಟ್‌ಪೋನ್‌ವೊಂದನ್ನು ಮಾರುಕಟ್ಟೆಗೆ ಪರಿಚಯಿಸಲಿದೆ.

ಮಾರುಕಟ್ಟೆಗೆ ಬಂದಿದೆ ನೀರಿನಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್...!

ಓದಿರಿ: ಬ್ಲಾಕ್‌ಬೆರಿಯಿಂದ ಬಜೆಟ್ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ

ಸದ್ಯದ ಸ್ಮಾರ್ಟ್‌ಪೋನ್ ಗಳು ತೊಟ್ಟು ನೀರು ಬಿದ್ದರು ಹಾಳಾಗುವ ಸಾಧ್ಯತೆ ಅಧಿಕವಾಗಿದ್ದು, ಈ ಹಿನ್ನಲೆಯಲ್ಲಿ ಟಾಪ್ ಎಂಡ್ ಸ್ಮಾರ್ಟ್‌ಪೋನ್ ಗಳು ಮಾತ್ರ ವಾಟರ್ ಪ್ರೂಫ್ ಆಗಿದ್ದವು. ಈ ಸಂದರ್ಭದಲ್ಲಿ ತೊಳೆಯಬಹುದಾದ ಸ್ಮಾರ್ಟ್‌ಪೋನ್ ಮಾರುಕಟ್ಟೆಗೆ ಬಂದಿರುವುದು ಉತ್ತಮ ಸಂಗತಿಯಾಗಿದೆ.

ಈ ಪೋನನ್ನು ತೊಳೆಯಬಹುದು ಈ ಪೋನನ್ನು:

ಈ ಪೋನನ್ನು ತೊಳೆಯಬಹುದು ಈ ಪೋನನ್ನು:

ಕ್ಯೋಸೆರಾ ಕಂಪನಿಯೂ ಮೊಟ್ಟ ಮೊದಲ ತೊಳೆಯಬಹುದಾದ ಸ್ಮಾರ್ಟ್‌ಪೋನನ್ನು ಅಭಿವೃದ್ಧಿಪಡಿಸಿದ್ದು, ಇದಕ್ಕೆ rafre ಎಂದು ನಾಮಕರಣ ಮಾಡಿದೆ. ಈ ಪೋನನ್ನು ನೀರಿನಲ್ಲಿ ತೊಳೆಯಬಹುದಾಗಿದ್ದು, ಬಿಸಿ ನೀರನ್ನು ಬಳಸಿಯೂ ವಾಷ್ ಮಾಡಬಹುದಾಗಿದೆ. ಇದರಿಂದ ಪೋನ್‌ಗೆ ಯಾವುದೇ ತೊಂದರೆ ಆಗುವುದಿಲ್ಲ ಎನ್ನಲಾಗಿದೆ.

ಒದ್ದೆ ಕೈನಲ್ಲೂ ಬಳಸಬಹುದು:

ಒದ್ದೆ ಕೈನಲ್ಲೂ ಬಳಸಬಹುದು:

ಸಾಮಾನ್ಯ ಸ್ಮಾರ್ಟ್‌ಪೋನುಗಳ ಪರದೆಯನ್ನು ಒದ್ದೆ ಕೈನಿಂದ ಬಳಸಲು ಸಾಧ್ಯವಿಲ್ಲ ಆದರೆ ರಫ್ರಿ ಸ್ಮಾರ್ಟ್‌ಪೋನನ್ನು ಒದ್ದೆ ಕೈಯಿಂದಲೂ ಬಳಸಬಹುದಾಗಿದೆ. ಅಲ್ಲದೇ ಕೈಗೆ ಗ್ಲೌಸ್ ಧರಿಸಿಯೂ ಈ ಸ್ಮಾರ್ಟ್‌ಪೋನನ್ನು ಬಳಸಬಹುದಾಗಿದೆ.

ಮೂರು ಬಣ್ಣದಲ್ಲಿ ಲಭ್ಯ:

ಮೂರು ಬಣ್ಣದಲ್ಲಿ ಲಭ್ಯ:

2017 ಮಾರ್ಚ್‌ ವೇಳೆಗೆ ಈ ಪೋನು ಜಪಾನ್ ಮಾರುಕಟ್ಟೆಯನ್ನು ಪ್ರವೇಶಿಸಲಿದ್ದು, ಮೂರು ಬಣ್ಣಗಳಲ್ಲಿ ಲಭ್ಯವಿರಲಿದೆ. ಪಿಲೇ ಪಿಂಕ್, ಕ್ಲಿಯರ್ ವೈಟ್ ಮತ್ತು ಲೈಟ್ ಬ್ಲೂ ಬಣ್ಣಗಳಲ್ಲಿ ದೊರೆಯಲಿದೆ.

ಆಂಡ್ರಾಯ್ಡ್ 7.0 ನಲ್ಲಿ ಕಾರ್ಯನಿರ್ವಹಣೆ:

ಆಂಡ್ರಾಯ್ಡ್ 7.0 ನಲ್ಲಿ ಕಾರ್ಯನಿರ್ವಹಣೆ:

ಈ ರಫ್ರಿ ಸ್ಮಾರ್ಟ್‌ಪೋನು ಆಂಡ್ರಾಯ್ಡ್ 7.0 ನಲ್ಲಿ ಕಾರ್ಯನಿರ್ವಹಿಸಲಿದ್ದು, ಹಿಂಭಾಗದಲ್ಲಿ 13MP ಕ್ಯಾಮೆರಾ ಹೊಂದಿದ್ದು, 2GB RAM ಮತ್ತು 16GB ಇಂಟರ್ನಲ್ ಮೆಮೊರಿ ಈ ಪೋನಿನಲ್ಲಿದ್ದು, 3,000mAh ಬ್ಯಾಟರಿ ಸಹ ಇದೆ.

Best Mobiles in India

Read more about:
English summary
Japan-based Kyocera has introduced a new “rafre” washable smartphone to know more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X