ವಿಂಡೋಸ್ ಫೋನ್ 8 ಮೊಬೈಲ್ ಬರಲಿದೆ

By Super
|
ವಿಂಡೋಸ್ ಫೋನ್ 8 ಮೊಬೈಲ್ ಬರಲಿದೆ

ಮೊನ್ನೆಯಿಂದ ಸುದ್ದಿಯಲ್ಲಿರುವ ಮೈಕ್ರೋಸಾಫ್ಟ್ ಸ್ಯಾನ್ ಫ್ರಾನ್ಸಿಸ್ಕೋ ದಲ್ಲಿ ತನ್ನದೇ ಆದ ಸರ್ಫೇಸ್ ಟ್ಯಾಬ್ಲೆಟ್ ಅನ್ನು ಬಿಡುಗಡೆ ಮಾಡಿದ ಬೆನ್ನಲ್ಲೇ ವಿಂಡೋಸ್ 8 ಆಧಾರಿತ ಸ್ಮಾರ್ಟ್ ಫೋನ್ ಆಪರೇಟಿಂಗ್ ಸಿಸ್ಟಮ್ ಅನ್ನೂ ಅನಾವರಣಗೊಳಿಸಿ ಮತ್ತೊಂದು ಅಚ್ಚರಿ ಮೂಡಿಸಿದೆ.

ಬಹು ನಿರೀಕ್ಷಿತ ವಿಂಡೋಸ್ 8 ತಂತ್ರಾಂಶವನ್ನು ಕೇವಲ ಪಿಸಿ ಅಷ್ಟೇ ಅಲ್ಲದೆ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನುಗಳಿಗೂ ಅಭಿವೃದ್ಧಿ ಪಡಿಸಿ ತನ್ನ ವಿಂಡೋಸ್ 8 ಅನ್ನು ಮತ್ತೊಂದು ಯಶಸ್ವೀ ಹಾಗು ಜನಪ್ರಿಯ ಸಾಫ್ಟ್ವೇರ್ ಮಾಡಲು ಎಲ್ಲ ರೀತಿಯಲ್ಲಿ ತಯಾರಾಗಿರುವ ಮೈಕ್ರೋಸಾಫ್ಟ್, ತನ್ನದೇ ಆದ ಟ್ಯಾಬ್ಲೆಟ್ ಹಾಗು ಸ್ಮಾರ್ಟ್ ಫೋನ್ ಗೆ ಹೊಂದಿಕೊಳ್ಳುವ ವಿಂಡೋಸ್ 8 ತಂತ್ರಾಂಶ ಬಿಡುಗಡೆ ಮಾಡುವ ಮೂಲಕ ಆಪಲ್ ಹಾಗು ಗೂಗಲ್ ಜೊತೆ ನೇರವಾಗಿ ಸ್ಪರ್ಧೆಗಿಳಿದಿದೆ.

ವಿಶ್ವದ ಅತಿ ದೊಡ್ಡ ಸಾಫ್ಟ್ವೇರ್ ಕಂಪನಿಯಾಗಿರುವ ಮೈಕ್ರೋಸಾಫ್ಟ್, ಆಪಲ್ ನ iOS ಹಾಗು ಗೂಗಲ್ ನ ಆಂಡ್ರಾಯ್ಡ್ ತಂತ್ರಾಂಶಗಳಿಗೆ ತಕ್ಕ ಉತ್ತರವನ್ನು ವಿಂಡೋಸ್ 8 ಮೂಲಕ ಕೊಡಲು ಹಲವಾರು ಉತ್ತಮ ಫೀಚರುಗಳನ್ನು ಸೇರಿಸಿದೆ. ವಿಂಡೋಸ್ 8 ಸ್ಮಾರ್ಟ್ ಫೋನ್ ತಂತ್ರಾಂಶದ ವಿಶೇಷತೆಗಳಲ್ಲಿ ಪ್ರಮುಖವಾದವು ಇಲ್ಲಿವೆ:

1) ಮಲ್ಟಿ ಕೋರ್ ಪ್ರೋಸೆಸರ್- ಹಿಂದಿನ ವಿಂಡೋಸ್ ಆವೃತ್ತಿಗಳು ಸಿಂಗಲ್ ಕೋರ್ ಪ್ರೋಸೆಸರ್ ನಲ್ಲಿ ಮಾತ್ರ ಸರಿಯಾಗಿ ಕೆಲಸಮಾಡುತ್ತಿದ್ದವು. ಈಗ ವಿಂಡೋಸ್ 8 ಅನ್ನು ಮಲ್ಟಿ ಕೋರ್ ಪ್ರೋಸೆಸರ್ ನಲ್ಲೂ ಸಮರ್ಪಕವಾಗಿ ಕೆಲಸ ಮಾಡುವಂತೆ ಅಭಿವೃದ್ಧಿಪಡಿಸಲಾಗಿದೆ.

2 ) ದೊಡ್ಡ ಹಾಗು ತೀಕ್ಷ್ಣ ಸ್ಕ್ರೀನ್ - ವಿಂಡೋಸ್ 8 HD 720p ಡಿಸ್ಪ್ಲೇ ಅನ್ನೂ ಸಪೋರ್ಟ್ ಮಾಡಲಿದೆ.1280x768 ಹಾಗು 1280x720 ರೆಸಲ್ಯೂಶನ್ ಇರುವ ಸ್ಕ್ರೀನ್ ಗೂ ಸಪೋರ್ಟ್ ಮಾಡಲಿದೆ.

3) ಇನ್ನೂ ಹೆಚ್ಚು ಮಾಹಿತಿ ಶೇಖರಣಾ ಸಾಮರ್ಥ್ಯ- ವಿಂಡೋಸ್ 8, ದಿಟಾಚಬಲ್ ಮೈಕ್ರೋ SD ಕಾರ್ಡ್ ಅನ್ನೂ ಕೂಡ ಬೆಂಬಲಿಸುತ್ತದೆ. ಹಾಗಾಗಿ PC ಯಿಂದ ಮೊಬೈಲ್ ಗೆ ಮ್ಯೂಸಿಕ್ ಹಾಗು ಫೋಟೋಗಳನ್ನು ವರ್ಗಾಯಿಸಬಹುದು.

4) NFC ಶೇರಿಂಗ್- Near Field Connectivity ಇರುವ ಮತ್ತೊಂದು ಸಾಧನದಿಂದ ಫೈಲುಗಳನ್ನು ವರ್ಗಾಯಿಸಬಹುದು.

5) ಇಂಟರ್ನೆಟ್ Explorer 10 - ವಿಂಡೋಸ್ 8 ಸ್ಮಾರ್ಟ್ ಫೋನುಗಳಲ್ಲಿ ಮೈಕ್ರೋಸಾಫ್ಟ್ ನ ಇಂಟರ್ನೆಟ್ Explorer 10 ವೆಬ್ ಬ್ರೌಸರ್ ಇರಲಿದೆ.

6) ವಾಲೆಟ್- ವಿಂಡೋಸ್ ಫೋನ್ 8 ನಿಂದ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಹಾಗು ಡೆಬಿಟ್ ಕಾರ್ಡ್ ಮಾಹಿತಿ ಯನ್ನು ಫೀಡ್ ಮಾಡಿ ಆನ್ಲೈನ್ ಶಾಪಿಂಗ್ ಮಾಡಬಹುದು.

7) ಮ್ಯಾಪ್ಸ್- ಗೂಗಲ್ ನ ಮ್ಯಾಪ್ಸ್ ರೀತಿಯಲ್ಲಿ ನಕ್ಷೆಯ ಆಪ್ ಕೂಡ ಇದೆ.

ಇಷ್ಟೆಲ್ಲಾ ಫೀಚರುಗಳು ಇರುವ ಈ ವಿಂಡೋಸ್ ಫೋನ್ 8 ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಇರುವ ಸ್ಮಾರ್ಟ್ ಫೋನುಗಳು ಅಕ್ಟೋಬರ್ ವೇಳೆಗೆ ಬರುವ ಸಾಧ್ಯತೆ ಇದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X