ಮಾರುಕಟ್ಟೆಯಲ್ಲಿ Xiaomi Mi 3ಗೆ ಉತ್ತಮ ಭವಿಷ್ಯವಿದೆಯೇ?

By Shwetha
|

ಈ ದಿನಗಳಲ್ಲಿ ಜನಪ್ರಿಯ ಸ್ಮಾರ್ಟ್‌ಫೋನ್ ಆದ Xiaomi ಕುರಿತು ಧನಾತ್ಮಕ ಮತ್ತು ಋಣಾತ್ಮಕ ಅಂಶಗಳು ಹರಡುತ್ತಿದೆ. ಭಾರತದಲ್ಲಿ Xiaomi Mi3 ಯ ಅಧಿಕೃತ ಬಿಡುಗಡೆ ಜುಲೈ 15 ರಂದು ನಡೆಯುತ್ತಿದೆ. ಭಾರತದ ಮಾರುಕಟ್ಟೆಗೆ ಈ ಚೀನಾ ಬ್ರ್ಯಾಂಡ್ ಕಾಲಿಡುತ್ತಿರುವುದು ಸ್ಯಾಮ್‌ಸಂಗ್, ನೋಕಿಯಾ ಮತ್ತು ಮೈಕ್ರೋಮ್ಯಾಕ್ಸ್ ಹಾಗೂ ಲಾವಾದ ಉತ್ಪನ್ನವನ್ನು ಕೊನೆಗೊಳಿಸಲು ಎಂದಾಗಿದೆ.

ಚೀನಾ ಮೂಲವಾಗಿರುವ Xiaomi ತನ್ನ ಸ್ಥಳೀಯ ಮಾರುಕಟ್ಟೆಯಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿದೆ. ಸ್ಯಾಮ್‌ಸಂಗ್ ಅಥವಾ ಸೋನಿಯಂತೆ ಈ ಮೂರು ವರ್ಷ ಹಳೆಯ ಹ್ಯಾಂಡ್‌ಸೆಟ್ ಮಾಲೀಕರು ಯಾವುದೇ ಮಾರುಕಟ್ಟೆ ಬಜೆಟ್ ಅನ್ನು ಹೊಂದಿಲ್ಲದಿದ್ದರೂ ಜಗತ್ತಿನಲ್ಲೇ ಇದೊಂದು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ತಂತ್ರಜ್ಞಾನವಾಗಿದೆ.

ಇದೇ ತಂತ್ರಜ್ಞಾನ ಸಂಸ್ಥೆಯು ತನ್ನ ಹೆಚ್ಚು ಚರ್ಚಿತ ಹ್ಯಾಂಡ್‌ಸೆಟ್ ಆದ, Xiaomi Mi 3 ಅನ್ನು ಭಾರತದಲ್ಲಿ ಜುಲೈ 15 ರಂದು ಲಾಂಚ್ ಮಾಡುತ್ತಿದೆ. ಫ್ಲಿಪ್‌ಕಾರ್ಟ್‌ನಲ್ಲಿ ಈ ಸ್ಮಾರ್ಟ್‌ಫೋನ್ ವಿಶೇಷವಾಗಿ ಮಾರಾಟವಾಗುತ್ತಿದ್ದು ಇದರ ಬೆಲೆ ರೂ 14,999 ಆಗಿದೆ ಎಂದು ವದಂತಿಗಳು ಸುದ್ದಿ ಹಬ್ಬಿಸಿವೆ. ಈಗಾಗಲೇ ಮಾರುಕಟ್ಟೆಯಲ್ಲಿ ತಮ್ಮ ಫೋನ್‌ಗಳಿಂದ ಬಳಕೆದಾರರ ಮೇಲೆ ಜಾದೂವನ್ನುಂಟು ಮಾಡುತ್ತಿರುವ ಜಿಯೋನಿ, ಒಪ್ಪೊ, ಸ್ಯಾಮ್‌ಸಂಗ್ ಮತ್ತು ಮೈಕ್ರೋಮ್ಯಾಕ್ಸ್‌ಗೆ Xiaomi Mi 3 ಭರ್ಜರಿ ಪೈಪೋಟಿಯನ್ನು ನೀಡುವುದು ನಿಚ್ಚಳವಾಗಿದೆ.

ಹಾಗಿದ್ದರೆ ಭಾರತೀಯ ಮಾರುಕಟ್ಟೆಯಲ್ಲಿ ಈ ಸ್ಮಾರ್ಟ್‌ಫೋನ್ Xiaomi Mi 3 ಏನಾದರೂ ಜಾದು ಮಾಡಬಹುದು ಎಂಬುದನ್ನು ತಿಳಿಸಲಿರುವ ಐದು ಅಂಶಗಳೊಂದಿಗೆ ಇಂದಿನ ಗಿಜ್‌ಬಾಟ್ ಲೇಖನ ಬಂದಿದ್ದು ಇದರ ಕಾರಣಗಳನ್ನು ವಿವರವಾಗಿ ಇಲ್ಲಿ ತಿಳಿಸಲಾಗಿದೆ.

#1

#1

Xiaomi ತನ್ನ ಹ್ಯಾಂಡ್‌ಸೆಟ್ ಆದ Mi 3 ಅನ್ನು ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಮಾಡುತ್ತಿದೆ. ಈ ಡಿವೈಸ್ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 800 ರಲ್ಲಿ ಚಾಲನೆಯಾಗುತ್ತಿದ್ದು ಇದರಲ್ಲಿ 2.3GHz ಕ್ವಾಡ್‌ಕೋರ್ ಪ್ರೊಸೆಸರ್ ಇದ್ದು 2ಜಿಬಿ RAM ಮತ್ತು 16ಜಿಬಿ ಆಂತರಿಕ ಸಂಗ್ರಹಣಾ ಸಾಮರ್ಥ್ಯವಿದೆ. ಇದರ ಬ್ಯಾಟರಿಯು 3,050mAh ಆಗಿದ್ದು ಪೂರ್ಣ ಎಚ್‌ಡಿ ಡಿಸ್‌ಪ್ಲೇಯನ್ನು ಡಿವೈಸ್ ಹೊಂದಿದೆ. ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್5 ನ ಅರ್ಧದಷ್ಟು ಮೌಲ್ಯವನ್ನು ಹೊಂದಿರುವ ಈ ಡಿವೈಸ್ ಭಾರತದಲ್ಲಿ ಉತ್ತಮವಾಗಿ ಮಾರಾಟವಾಗುತ್ತದೆ ಎಂಬುದು ನೂರು ಶೇಕಡಾ ನಿಜ.

#2

#2

ಮೋಟೋರೋಲಾದ ಹೆಜ್ಜೆಗುರುತನ್ನೇ ಹಿಡಿದು Xiaomi ತನ್ನ Mi 3 ಡಿವೈಸ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ ಮಾರಾಟ ಮಾಡುವ ನಿಟ್ಟಿನಲ್ಲಿದೆ. ಇದು ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರ ವಿಶೇಷವಾಗಿ ಲಭ್ಯವಿರುತ್ತದೆ ಮತ್ತು ಇದರ ಮಾರಾಟ ಹೇಗಿರುತ್ತದೆ ಎಂಬುದು ಮಾತ್ರ ಇನ್ನೂ ತಿಳಿದುಬಂದಿಲ್ಲ.

#3

#3

ಮಧ್ಯಮ ಶ್ರೇಣಿಯಲ್ಲಿ ಯಾವುದಾದರೂ ಪ್ರೀಮಿಯಮ್ ಫೋನ್ ದೊರೆಯಲು ಸಾಧ್ಯವೇ? ಹೆಚ್ಚಿನ ದುಬಾರಿ ಫೋನ್‌ಗಳು ರೂ 20,000 ಕ್ಕಿಂತ ಮೇಲ್ಪಟ್ಟೇ ಇವೆ. ಆದರೆ ದುಬಾರಿ ಫೋನ್ ಆಗಿಯೂ Mi 3 ರೂ 14999 ದರದಲ್ಲಿ ಬಂದಿರುವುದು ಆಸಕ್ತಿಕರವಾಗಿದೆ.

#4

#4

Xiaomi Mi3 ಇತರ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದಾಗ 2ಜಿಬಿ RAM ಅನ್ನು ಹೊಂದಿದ್ದು ಬೇರೆಯದಕ್ಕಿಂತ ಇದನ್ನು ವಿಶೇಷವಾಗಿಸಿದೆ.

#5

#5

ಆಪಲ್ ಮತ್ತು ಸ್ಯಾಮ್‌ಸಂಗ್ ತಮ್ಮ ಫೋನ್‌ಗಳನ್ನು ಹೆಚ್ಚು ಲಕ್ಶುರಿಯಸ್ ಆಗಿ ಲಾಂಚ್ ಮಾಡುತ್ತವೆ ಆದರೆ ಚೀನಾ ಕಂಪೆನಿಯಾಗಿರುವ Xiaomi ತನ್ನ ಬೆಲೆಯನ್ನು ಆದಷ್ಟು ಕಡಿಮೆ ಮಾಡಿಕೊಂಡು ಯಾವುದೇ ಲಾಭವನ್ನು ಇಟ್ಟುಕೊಳ್ಳದೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಆದ್ದರಿಂದಲೇ Xiaomi ಇಂದಿನ ತಾಂತ್ರಿಕ ಉದ್ಯಮದಲ್ಲಿ ಹೆಚ್ಚು ಯಶಸ್ವಿಯಾಗುತ್ತಿರುವುದು. Xiaomi ತನ್ನ ಹ್ಯಾಂಡ್‌ಸೆಟ್‌ನಲ್ಲಿ ಗಳಿಸದೇ ಇರುವ ಆದಾಯವನ್ನು ಗೂಗಲ್ ಆಂಡ್ರಾಯ್ಡ್ ಓಎಸ್‌ನಲ್ಲಿ ತನ್ನ ಅಪ್ಲಿಕೇಶನ್‌ಗಳನ್ನು ಮತ್ತು ಚಲನಚಿತ್ರಗಳನ್ನು ಮಾರಾಟ ಮಾಡುವ ಮೂಲಕ ಗಳಿಸಿಕೊಳ್ಳುತ್ತಿದೆ.

Best Mobiles in India

English summary
This article tells that xiaomi MI 3 could easily beat Samsung and Micromax in India.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X