ಕ್ಸಿಯೊಮಿ ಮಿ 6: ಹೊಸ ವರದಿ ತೋರಿಸಿದೆ ವರ್ಟಿಕಲ್ ಡುಯಲ್ ಕ್ಯಾಮೆರಾ ಸೆಟಪ್, ಸುಂದರವಾದ ಮುಂದಿನ ಭಾಗ ಮತ್ತು ಇತ್ಯಾದಿ

ಕ್ಸಿಯೊಮಿ ಮಿ6 ಎಪ್ರಿಲ್ ನಲ್ಲಿ ಹೊರ ಬರುವುದು ಖಚಿತವಾಗಿದ್ದು ಅದರೊಂದಿಗೆ ಹಲವಾರು ಸುದ್ದಿಗಳು ತೇಲಿ ಬರುತ್ತಿವೆ. ಈ ಫೋನ್ ನೋಡಲು ಸುಂದರವಾಗಿದ್ದು ವರ್ಟಿಕಲ್ ಡುಯಲ್ ಕ್ಯಾಮೆರಾ ಸೆಟಪ್ ಮತ್ತು ಐರಿಸ್ ಸ್ಕ್ಯಾನರ್ ಹೊಂದಿರುವುದು ವಿಶೇಷವಾಗಿದೆ.

By Prateeksha
|

ಹೊಸ ದಿನದೊಂದಿಗೆ ಕ್ಸಿಯೊಮಿ ಮಿ 6ಬಗ್ಗೆ ಹೊಸ ವಿಷಯ ಹೊರ ಬಂದಿದೆ. ಸ್ವಲ್ಪ ದಿನಗಳ ಹಿಂದೆ ನೋಡಿದೆವು ಕಂಪನಿಯ ಸಿಇಒ ಲಿ ಜುನ್ ಮಿ6 ಎಪ್ರಿಲ್ ನಲ್ಲಿ ಹೊರ ಬರುವ ಬಗ್ಗೆ ಖಚಿತ ಪಡಿಸಿದ್ದರು.

ಕ್ಸಿಯೊಮಿ ಮಿ 6: ಹೊಸ ವರದಿ ತೋರಿಸಿದೆ ವರ್ಟಿಕಲ್ ಡುಯಲ್ ಕ್ಯಾಮೆರಾ ಸೆಟಪ್

ಖಚಿತ ಪಡಿಸಿದ ನಂತರ ಬಹಳಷ್ಟು ವಿಷಯ ಹೊರ ಬಂದವು ಹಾಗೆ ಕೆಲ ಗಾಳಿ ಸುದ್ದಿಯೂ ಕೂಡ. ಕೇಳಿ ಬಂದ ಸುದ್ದಿ ಪ್ರಕಾರ ಮಿ 6 ಡುಯಲ್ ಕ್ಯಾಮೆರಾ ಸೆಟಪ್ ಹೊಂದಿರಲಿದೆ ರೇರ್ ನಲ್ಲಿ ಇತ್ತೀಚಿನ ಇತರ ಮೊಬೈಲ್ ಗಳಂತೆ. ಇದರಲ್ಲಿ ಹಲವು ವಿಧಗಳು ಬರಲಿವೆ. ಮಧ್ಯಮ ದರದಿಂದ ಹೈ ಎಂಡ್ ತನಕ. ಇಂತಹ ಇನ್ನೂ ಹೆಚ್ಚಿನ ವರದಿಗಳು ದೊರಕುವ ನಿರೀಕ್ಷೆಯಿದೆ.

ಓದಿರಿ: ಶಿಯೋಮಿ ಮಿ ಪ್ಯಾಡ್ 3: 4GB RAM, 6,600 mAh ಬ್ಯಾಟರಿ

ನಮಗೆ ದೊರೆತ ಮಾಹಿತಿಗಳೊಂದಿಗೆ ನಾವಿಲ್ಲಿ ಬಂದಿದ್ದೇವೆ. ಬೇರೆ ಬೇರೆ ವಿಧಗಳಲ್ಲಿ ಬೇರೆ ಬೇರೆ ಸ್ಪೆಸಿಫಿಕೇಷನ್ಸ್ ಇರಲಿದೆಯೆಂದು ಕೇಳಿ ಬಂದಿದೆ. ಒಮ್ಮೆ ನೋಡಿ.

ಕ್ಸಿಯೊಮಿ ಮಿ 6 ಸುಂದರವಾಗಿದೆ

ಕ್ಸಿಯೊಮಿ ಮಿ 6 ಸುಂದರವಾಗಿದೆ

ಫೋನಿನ ಮುಂದಿನ ಭಾಗ ನೋಡಲು ತುಂಬಾ ಸುಂದರವಾಗಿದೆ. ಇದರಲ್ಲಿ ಕೇಳಿ ಬಂದ ಸುದ್ದಿಯ ಹಾಗೆ ಕರ್ವ್‍ಡ್ ಡಿಸ್ಪ್ಲೆ ಇಲ್ಲಾ . ಮಿ ಮಿಕ್ಸ್ ನಿಂದ ಪ್ರೇರಿತವಾದ ಹಾಗೆ ಕಾಣುತ್ತಿದೆ. ಇದರದು ಕೊಂಪಾಕ್ಟ್ ಬೊಡಿ ಮತ್ತು ರೌಂಡರ್ ಡಿಜೈನ್ ಹೊಂದಿರುವ ಕಾರಣ.

ಡುಯಲ್ ಕ್ಯಾಮೆರಾ ಸೆಟಪ್ ತಪ್ಪಿಸುವ ಹಾಗಿಲ್ಲಾ

ಡುಯಲ್ ಕ್ಯಾಮೆರಾ ಸೆಟಪ್ ತಪ್ಪಿಸುವ ಹಾಗಿಲ್ಲಾ

ಮಿ6 ಬಹಳ ಕಾಲದಿಂದ ಕೊಚ್ಚಿಕೊಳ್ಳುತ್ತಿರುವುದು ಡುಯಲ್ ಕ್ಯಾಮೆರಾ ಸೆಟಪ್ ಬಗ್ಗೆ. ಅದೇ ರೀತಿ ಬಂದ ಸುದ್ದಿಯ ಹಾಗೆ ಹೊರಿಜೊಂಟಲ್ ಇರದೆ ವರ್ಟಿಕಲ್ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ.

ಮಿ 6 ರೀಟೆಲ್ ಬಾಕ್ಸ್

ಮಿ 6 ರೀಟೆಲ್ ಬಾಕ್ಸ್

2 ಮಿ 6 ರಿಟೇಲ್ ಬಾಕ್ಸ್ ವೀಬೊ ಮೂಲಕ ದೊರೆತಿದೆ. ಅದರಲ್ಲಿ ಒಂದು ಕಪ್ಪು ಇನ್ನೊಂದು ಬಿಳಿ. ಬಣ್ಣದ ವಿಷಯ ಬಿಟ್ಟರೆ ಸ್ಪೆಸಿಫಿಕೇಷನ್ ಕೂಡ ಬೇರೆಯಾಗಿದೆ. ಇದರಿಂದ ನಮಗೆ ಕಪ್ಪು ಪೆಟ್ಟಿಗೆ ಮಿ 6 ಪ್ಲಸ್ ಮತ್ತು ಬಿಳಿಯದು ಮಿ6 ಎಂದು ಕಾಣುತ್ತದೆ.

ಸ್ಪೆಸಿಫಿಕೇಷನ್ ಮೇಲೆ ಬೆಳಕು ಚೆಲ್ಲುತ್ತದೆ

ಸ್ಪೆಸಿಫಿಕೇಷನ್ ಮೇಲೆ ಬೆಳಕು ಚೆಲ್ಲುತ್ತದೆ

ಕಪ್ಪು ಪೆಟ್ಟಿಗೆ ನೀಡುವ ವಿವರಣೆಗಳೆಂದರೆ ಸ್ನಾಪ್‍ಡ್ರಾಗನ್ 835 ಎಸ್‍ಒಸಿ, 5.15 ಇಂಚು ಡಿಸ್ಪ್ಲೆ, 6ಜಿಬಿ ರಾಮ್, 128 ಸ್ಟೊರೆಜ್ ಸಾಮಥ್ರ್ಯ, ವೊಪಿಂಗ್ 30 ಎಮ್‍ಪಿ ಸ್ನಾಪರ್ ಮತ್ತು 4000 ಎಮ್‍ಎಎಚ್ ಬ್ಯಾಟರಿ. ಇನ್ನೊಂದು ಪೆಟ್ಟಿಗೆ ತೋರಿಸುವುದು 3ಜಿಬಿ ರಾಮ್, 64ಜಿಬಿ ಸ್ಟೊರೆಜ್, 12 ಎಮ್‍ಪಿ ರೇರ್ ಕ್ಯಾಮೆರಾ ಮತ್ತು ಮುಂದೆ 4 ಎಮ್‍ಪಿ ಅಲ್ಟ್ರಾ ಪಿಕ್ಸೆಲ್ ಸೆನ್ಸರ್ .

ಐರಿಸ್ ಸ್ಕ್ಯಾನರ್

ಐರಿಸ್ ಸ್ಕ್ಯಾನರ್

ಕೆಲ ದಿನಗಳ ಹಿಂದೆ, ವೀಬೊ ಟೀಸರ್ ಖಚಿತ ಪಡಿಸಿತು ಮಿ6 ಐರಿಸ್ ಸ್ಕ್ಯಾನಿಂಗ್ ತಂತ್ರಜ್ಞಾನ ದೊಂದಿಗೆ ಬರಲಿದೆಯೆಂದು ಜೊತೆಗೆ ಫೋನಿನ ಮುಂದುಗಡೆ ಈ ಸ್ಕ್ಯಾನರ್ ಇರುವುದೆಂಬ ವಿಷಯವನ್ನೂ ಕೂಡ ಹೊರ ಹಾಕಿತು.

Source 1, 2

Best Mobiles in India

Read more about:
English summary
Xiaomi Mi 6 is said to arrive with a vertical dual camera setup, iris scanner, gorgeous front, etc. Read more...

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X