ಹೆಚ್ಚು ನಿರೀಕ್ಷಿತ ರೆಡ್ಮೀ 2 ಭಾರತಕ್ಕೆ ಶೀಘ್ರದಲ್ಲಿ

By Shwetha
|

ಹೆಚ್ಚು ನಿರೀಕ್ಷಿತ ರೆಡ್ಮೀ 1ಎಸ್‌ನ ಸಕ್ಸೆಸರ್ ರೆಡ್ಮೀ 2 ನ ಅನ್ನು ಶ್ಯೋಮಿ ಭಾನುವಾರ ಅಂತಿಮವಾಗಿ ಲಾಂಚ್ ಮಾಡಿದೆ. ಜನವರಿ 9 ರಂದು ಚೀನಾದಲ್ಲಿ ಈ ಫೋನ್ ಮಾರಾಟವಾಗುತ್ತಿದ್ದು ಇದರ ಬೆಲೆ ರೂ 7,100 ಎಂದು ಖಚಿತಪಡಿಸಲಾಗಿದೆ. ಈ ಫೋನ್ ಬಗ್ಗೆ ಹೆಚ್ಚಿನ ಮಾಹಿತಿಗಳು ಇನ್ನೂ ದೊರಕದೇ ಇರುವುದರಿಂದ ಭಾರತ ಮತ್ತು ಇಂಡೋನೇಷ್ಯಾದಲ್ಲಿ ಈ ಡಿವೈಸ್ ಲಾಂಚ್ ಅನ್ನು ನಿರೀಕ್ಷಿಸಲಾಗಿದೆ.

ಇದನ್ನೂ ಓದಿ: ಬ್ಲ್ಯೂಟೂತ್‌ನಲ್ಲಿ ಫೋನ್ ಸಂಪರ್ಕಗಳನ್ನು ಉಳಿಸುವುದು ಹೇಗೆ?

ಡ್ಯುಯಲ್ ಸಿಮ್ ಡ್ಯುಯಲ್ ಸ್ಟ್ಯಾಂಡ್‌ಬೈ ಸ್ಯೋಮಿ ರೆಡ್ಮೀ2, 4.7 ಇಂಚಿನ ಐಪಿಎಸ್ ಡಿಸ್‌ಪ್ಲೇಯೊಂದಿಗೆ ಬಂದಿದೆ ಮತ್ತು ಎಚ್‌ಡಿ ರೆಸಲ್ಯೂಶನ್ ಅನ್ನು ಡಿವೈಸ್ ಒಳಗೊಂಡಿದೆ. ರೆಡ್ಮೀ 1ಎಸ್‌ನಲ್ಲಿರುವ ಅದೇ ಪ್ರಿಡ್ರೆಸಸರ್ ಅನ್ನು ಈ ಫೋನ್‌ನಲ್ಲೂ ನಮಗೆ ಕಾಣಬಹುದಾಗಿದೆ. ಆಂಡ್ರಾಯ್ಡ್ 4.4 ಕಿಟ್‌ಕ್ಯಾಟ್ ಡಿವೈಸ್‌ನಲ್ಲಿ ಚಾಲನೆಯಾಗುತ್ತಿದೆ.

 ಹೆಚ್ಚು ನಿರೀಕ್ಷಿತ ರೆಡ್ಮೀ 2 ಭಾರತಕ್ಕೆ ಶೀಘ್ರದಲ್ಲಿ

ಶ್ಯೋಮಿ ರೆಡ್ಮೀ 2 64 ಬಿಟ್ 1.2GHZ ಕ್ವಾಲ್‌ಕಾಮ್ ಸ್ನ್ಯಾಪ್‌ಡ್ರಾಗನ್ 410 ಪ್ರೊಸೆಸರ್ ಅನ್ನು ಹೊಂದಿದ್ದು 1 ಜಿಬಿ RAM ಡಿವೈಸ್‌ನಲ್ಲಿದೆ. ಅಡ್ರೆನೊ 306 ಜಿಪಿಯು ಫೋನ್‌ನಲ್ಲಿದೆ. ಇನ್ನು ಫೋನ್‌ನ ಕ್ಯಾಮೆರಾದತ್ತ ಗಮನ ಹರಿಸಿದಾಗ 8 ಮೆಗಾಪಿಕ್ಸೆಲ್ ರಿಯರ್ ಕ್ಯಾಮೆರಾ ಮತ್ತು 2 ಮೆಗಾಪಿಕ್ಸೆಲ್ ಮುಂಭಾಗ ಕ್ಯಾಮೆರಾ ಡಿವೈಸ್‌ನಲ್ಲಿದೆ.

 ಹೆಚ್ಚು ನಿರೀಕ್ಷಿತ ರೆಡ್ಮೀ 2 ಭಾರತಕ್ಕೆ ಶೀಘ್ರದಲ್ಲಿ

ಇನ್ನು ಫೋನ್‌ನ ಸಂಗ್ರಹಣಾ ಸಾಮರ್ಥ್ಯ 8 ಜಿಬಿಯಾಗಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿ 32ಜಿಬಿಗೆ ವಿಸ್ತರಿಸಬಹುದಾಗಿದೆ. ಇನ್ನು ಫೋನ್‌ನ ಸಂಪರ್ಕ ಅಂಶಗಳತ್ತ ಗಮನಹರಿಸಿದಾಗ ವೈಫೈ, ಬ್ಲ್ಯೂಟೂತ್, ಜಿಪಿಎಸ್ 4ಜಿ ಎಲ್‌ಟಿಇ ನೆಟ್‌ವರ್ಕ್ ಬೆಂಬಲವನ್ನು ಕಾಣಬಹುದು.

ಇನ್ನು ಫೋನ್ ಹಳದಿ, ಪಿಂಕ್, ಹಸಿರು, ಬಿಳಿ ಮತ್ತು ಕಪ್ಪು ಹೀಗೆ ಐದು ಬಣ್ಣಗಳಲ್ಲಿ ಲಭ್ಯವಿದ್ದು ಫೋನ್‌ನ ಬ್ಯಾಟರಿ 2200mAh ಆಗಿದೆ.

Best Mobiles in India

English summary
Xiaomi on Sunday finally launched the much-anticipated successor to the Redmi 1S, the Redmi 2. The new entry-level smartphone will go on sale in China starting January 9 and is priced at CNY 699 (roughly Rs. 7,100).

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X