ಶಿಯೋಮಿ ರೆಡ್‌ಮಿ 4A ಬಿಡುಗಡೆ: ಬೆಲೆ ಎಷ್ಟು,? ವಿಶೇಷತೆ ಏನು,? ದೊರೆಯುವುದು ಎಲ್ಲಿ.?

ಅಮೆಜಾನ್ ಶಾಪಿಂಗ್ ತಾಣಕ್ಕಾಗಿಯೇ ರೆಡ್‌ಮಿ 4A ಬಿಡುಗಡೆಗೊಳಿಸಿದ್ದು, ಮಾರ್ಚ್ 23 ರಂದು ಸೇಲ್ ಆರಂಭವಾಗಲಿದೆ.

|

ಚೀನಾ ಮೂಲದ ಶಿಯೋಮಿ ಕಂಪನಿ ಭಾರತೀಯ ಮೊಬೈಲ್ ಮಾರುಕಟ್ಟೆಯಲ್ಲಿ ಅಧಿಪತ್ಯ ಸ್ಥಾಪಿಸುವ ಹಾದಿಯಲ್ಲಿದ್ದು, ಆನ್‌ಲೈನ್ ಮೂಲಕವೇ ಜನರನ್ನು ತಲುಪಿದ್ದ ಶಿಯೋಮಿ, ಸದ್ಯ ಅಮೆಜಾನ್ ಶಾಪಿಂಗ್ ತಾಣಕ್ಕಾಗಿಯೇ ರೆಡ್‌ಮಿ 4A ಬಿಡುಗಡೆಗೊಳಿಸಿದ್ದು, ಮಾರ್ಚ್ 23 ರಂದು ಸೇಲ್ ಆರಂಭವಾಗಲಿದೆ.

ಶಿಯೋಮಿ ರೆಡ್‌ಮಿ 4A ಬಿಡುಗಡೆ

ಓದಿರಿ: ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

ಸೋಮವಾರ ಬಿಡುಗಡೆಗೊಂಡ ಶಿಯೋಮಿ ರೆಡ್‌ಮಿ 4A ಅಮೇಜಾನಲ್ಲಿ ಮಾತ್ರ ಲಭ್ಯವಿದ್ದು, ಮಾರ್ಚ್ 23 ರಂದು ಫ್ಲಾಷ್ ಸೇಲ್ ಆರಂಭವಾಗಲಿದೆ. 5,999 ರೂಗಳಿಗೆ ಈ ಪೋನು ದೊರೆಯಲಿದೆ. ಪ್ರತಿಯೊಬ್ಬರು ಡಿಜಿಟಲ್ ಕಡೆಗೆ ಹೆಜ್ಜೆ ಹಾಕುತ್ತಿರುವುದರಿಂದ ಈ ಪೋನು ಅವರೇಲ್ಲರಿಗೂ ಸಹಾಯಕವಾಗಲಿದೆ.

ಓದಿರಿ: ಆಪಲ್ ಪೋನಿನ ಬೆಲೆಯಲ್ಲೇ ಭಾರೀ ಕಡಿತ: ರೂ. 19,999ಕ್ಕೆ ಐಪೋನ್ ಲಭ್ಯ..!!

5 ಇಂಚಿನ HD ಡಿಸ್‌ಪ್ಲೇ

5 ಇಂಚಿನ HD ಡಿಸ್‌ಪ್ಲೇ

ರೆಡ್‌ಮಿ 4 A ಪೋನಿನಲ್ಲಿ 5 ಇಂಚಿನ HD ಡಿಸ್‌ಪ್ಲೇ ಇದ್ದು, 720x1280p ರೆಸಲ್ಯೂಷನ್ ಗುಣಮಟ್ಟವನ್ನು ಇದು ಹೊಂದಿದೆ. ಮೊನ್ನೆ ಲಾಂಚ್ ಆದ ನೋಟ್ 4 ನಲ್ಲಿಯೂ ಇದೇ ಮಾದರಿಯ ಸ್ಕ್ರಿನ್ ಇರುವುದನ್ನು ನಾವು ಕಾಣಬಹುದಾಗಿದೆ.

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:

ಸ್ನಾಪ್‌ಡ್ರಾಗನ್ 425 ಪ್ರೋಸೆಸರ್:

ವೇಗದ ಕಾರ್ಯ ನಿರ್ವಹಣೆಗಾಗಿ ರೆಡ್‌ಮಿ 4 A ಪೋನಿನಲ್ಲಿ ಸ್ನಾಪ್‌ಡ್ರಾಗನ್ 425 ಪ್ರೋಸೆಸರ್ ಅಳವಡಿಸಲಾಗಿದ್ದು 1.4Ghz ವೇಗವನ್ನು ಹೊಂದಿದೆ. 2GB RAM ಹಾಗೂ 16GB ಇಂಟರ್ನಲ್ ಮೆಮೊರಿ ಇದರಲಿದೆ. ಮೈಕ್ರೋ ಎಸ್‌ಡಿ ಕಾರ್ಡ್ ಹಾಕಿಕೊಳ್ಳುವ ಮೂಲಕ 128 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

13 MP ಕ್ಯಾಮೆರಾ:

13 MP ಕ್ಯಾಮೆರಾ:

ರೆಡ್‌ಮಿ 4 A ಪೋನಿನಲ್ಲಿ LED ಫ್ಲಾಷ್ ಸಮೇತ 13 MP ಹಿಂಬದಿ ಕ್ಯಾಮೆರಾ ಮತ್ತು ಮುಂಭಾಗದಲ್ಲಿ 5 MP ಕ್ಯಾಮೆರಾವನ್ನು ನೀಡಲಾಗಿದೆ. ಆಂಡ್ರಾಯ್ಡ್ 6.0ದಲ್ಲಿ ಇದು ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಅಲ್ಲದೇ MIUI8 ಸಹ ಇದರಲಿದೆ.

3120 mAh ಬ್ಯಾಟರಿ:

3120 mAh ಬ್ಯಾಟರಿ:

ರೆಡ್‌ಮಿ 4 A ಪೋನಿನ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಸಲುವಾಗಿ 3120 mAh ಬ್ಯಾಟರಿಯನ್ನು ಈ ಪೋನಿನಲ್ಲಿ ನೀಡಲಾಗಿದೆ. ಅಲ್ಲದೇ ಈ ಪೋನನ್ನು ಕೇವಲ ಭಾರತೀಯ ಗ್ರಾಹಕರಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ ಎನ್ನುವ ಮಾತು ಕೇಳಿ ಬಂದಿದೆ. 7 ದಿನ ಬ್ಯಾಟರಿ ಬಾಳಿಕೆ ಬರಲಿದೆಯಂತೆ.

2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಬಹುದು:

2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಬಹುದು:

ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಸ್ಮಾರ್ಟ್‌ಪೋನುಗಳಲ್ಲಿ ಎರಡು ಹೈಬ್ರಿಡ್ 2 ಸಿಮ್ ಕಾರ್ಡ್ ಹಾಕಬಹುದಾಗಿದೆ. ಆದರೆ ಮೊಮೊರಿ ಕಾರ್ಡ್ ಹಾಕಲು ಸಾಧ್ಯವಿರುವುದಿಲ್ಲ. ಒಂದು ಸಿಮ್ ಮತ್ತು ಮೊಮೊರಿ ಕಾರ್ಡ್ ಹಾಕಬಹುದಾಗಿರುತ್ತದೆ. ಆದರೆ ರೆಡ್‌ಮಿ 4 A ಪೋನಿನಲ್ಲಿ ಒಮ್ಮೆಗೆ 2 ನ್ಯಾನೋ ಸಿಮ್ ಮತ್ತು SD ಕಾರ್ಡ್ ಹಾಕಿಕೊಳ್ಳಬಹುದಾಗಿದೆ.

Best Mobiles in India

Read more about:
English summary
Xiaomi has launched the Redmi 4A in India today. The smartphone is Amazon Exclusive and will be available on sale on March 23rd at 12 Noon. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X