ಗೂಗಲ್ ಇಂಡಿಯಾದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಮಾರ್ಟ್ ಫೋನುಗಳು.

ಭಾರತೀಯರು 2016ರಲ್ಲಿ ಈ ಫೋನುಗಳನ್ನು ಹೆಚ್ಚಿನ ಸಲ ಹುಡುಕಿದ್ದಾರೆ.

|

ಪ್ರತಿ ವರ್ಷ ಗೂಗಲ್ ತನ್ನ ಸರ್ಚ್ ಇಂಜಿನ್ನಿನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವಿಷಯಗಳನ್ನು ವರುಷದ ಕೊನೆಯಲ್ಲಿ ಹಂಚಿಕೊಳ್ಳುತ್ತದೆ. ಗೂಗಲ್ ಇಂಡಿಯಾದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಮಾರ್ಟ್ ಫೋನುಗಳ ಪಟ್ಟಿಯನ್ನಿಲ್ಲಿ ನಾವು ನೀಡುತ್ತಿದ್ದೇವೆ.

ಗೂಗಲ್ ಇಂಡಿಯಾದಲ್ಲಿ ಈ ವರ್ಷ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಮಾರ್ಟ್ ಫೋನುಗಳು.

ರಿಂಗಿಂಗ್ ಬೆಲ್ಸ್ ಸಂಸ್ಥೆಯ 251 ರುಪಾಯಿಯ ಸ್ಮಾರ್ಟ್ ಫೋನ್ ಫ್ರೀಡಮ್ 251 ಈ ವರುಷ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಮಾರ್ಟ್ ಫೋನ್ ಎನ್ನುವುದು ತುಂಬಾ ಅಚ್ಚರಿಯ ವಿಷಯವೇನಲ್ಲ. ಆದರೆ ಈ ವರ್ಷದ ಬಹುನಿರೀಕ್ಷಿತ ಫ್ಲಾಗ್ ಶಿಪ್ ಸ್ಮಾರ್ಟ್ ಫೋನ್ ಆ್ಯಪಲ್ ಐಫೋನ್ 7ಗಿಂತಲೂ ಫ್ರೀಡಮ್ 251 ಹುಡುಕಿದವರ ಸಂಖೈ ಹೆಚ್ಚು ಎನ್ನುವುದು ಸ್ವಲ್ಪ ಅಚ್ಚರಿ ಮೂಡಿಸುವುದು ಸುಳ್ಳಲ್ಲ.

ಓದಿರಿ: ಏರ್‌ಟೆಲ್ ಆಯ್ತು ಈಗ ವೊಡೋಪೋನ್ ಸರದಿ: ಗ್ರಾಹಕರಿಗೆ ಉಚಿತ ಕರೆ, 4G ಡೇಟಾ

ಈ ವರ್ಷ ಗೂಗಲ್ ಇಂಡಿಯಾದಲ್ಲಿ ಹೆಚ್ಚು ಹುಡುಕಲ್ಪಟ್ಟ ಹತ್ತು ಸ್ಮಾರ್ಟ್ ಫೋನುಗಳ ಪಟ್ಟಿಯನ್ನು ನೋಡಲು ಕೆಳಗೆ ಸ್ಕ್ರಾಲ್ ಮಾಡಿ. ಭಾರತೀಯ ಗ್ರಾಹಕರಲ್ಲಿ ಆಸಕ್ತಿ ಮೂಡಿಸಿದ ಫೋನುಗಳ್ಯಾವುವು ಎನ್ನುವುದನ್ನು ತಿಳಿದುಕೊಳ್ಳಿ.

ಫ್ರೀಡಮ್ 251.

ಫ್ರೀಡಮ್ 251.

ಈ ವರ್ಷದ ಮೊದಲ ಭಾಗದಲ್ಲಿ ರಿಂಗಿಂಗ್ ಬೆಲ್ಸ್ ನ ಫ್ರೀಡಮ್ 251 ತುಂಬಾ ಸುದ್ದಿ ಮಾಡಿತು. ಇಷ್ಟು ಕಮ್ಮಿ ಬೆಲೆಗೆ ಸ್ಮಾರ್ಟ್ ಫೋನ್ ಲಭಿಸುವುದು ಹೇಗೆ ಸಾಧ್ಯ ಎನ್ನುವ ಅನುಮಾನವನ್ನೂ ಮೂಡಿಸಿಕೊಳ್ಳದೆ ಮಿಲಿಯಾಂತರ ಜನರು 251 ರುಪಾಯಿಯ ಸ್ಮಾರ್ಟ್ ಫೋನನ್ನು ಆರ್ಡರ್ ಮಾಡಿದರು. ಕಂಪನಿ ಮುಂಚೆ ಹೇಳಿದ ದಿನಾಂಕಕ್ಕೆ ಮೊಬೈಲನ್ನು ಮಾರುಕಟ್ಟೆಗೆ ಬಿಡದೇ ಇದ್ದಾಗ ಜನರು ಪ್ರಶ್ನೆ ಕೇಳಲಾರಂಭಿಸಿದರು. ಈಗ ಕಂಪನಿಯೇ ಮುಚ್ಚಿ ಹೋಗಿದೆ ಎನ್ನಲಾಗುತ್ತಿದೆ, ಸರಿಯಾದ ಮಾಹಿತಿ ಇನ್ನೂ ಸಹಿತ ಲಭ್ಯವಿಲ್ಲ.

ಆ್ಯಪಲ್ ಐಫೋನ್ 7.

ಆ್ಯಪಲ್ ಐಫೋನ್ 7.

ಭಾರತದಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ಸ್ಮಾರ್ಟ್ ಫೋನುಗಳಲ್ಲಿ ಎರಡನೆಯ ಸ್ಥಾನ ಆ್ಯಪಲ್ ಐಫೋನ್ 7. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಭಾರತದಲ್ಲಿ ಐಫೋನ್ ಮಾರಾಟ 50 ಪರ್ಸೆಂಟಿನಷ್ಟು ಹೆಚ್ಚಾಗಿದೆ. ಗ್ಯಾಲಕ್ಸಿ ನೋಟ್ 7 ಅನೇಕ ಕಡೆ ಸ್ಪೋಟವಾದ ಮಾಹಿತಿಯಿಂದಾಗಿ ಐಫೋನ್ 7 ಅನ್ನು ಆಯ್ದುಕೊಳ್ಳುವವರ ಸಂಖೈಯಲ್ಲೂ ಏರಿಕೆಯಾಯಿತು.

ಶಿಯೋಮಿ ರೆಡ್ ಮಿ ನೋಟ್3.

ಶಿಯೋಮಿ ರೆಡ್ ಮಿ ನೋಟ್3.

ಭಾರತೀಯರ ಹುಡುಕಾಟದಲ್ಲಿ ರೆಡ್ ಮಿ ನೋಟ್ 3ಗೆ ಮೂರನೇ ಸ್ಥಾನ. ಬಿಡುಗಡೆಯಾದಂದಿನಿಂದ ರೆಡ್ ಮಿ ನೋಟ್ 3 ಅತ್ಯಂತ ಹೆಚ್ಚು ಮಾರಾಟವಾಗುತ್ತಿರುವ ಸ್ಮಾರ್ಟ್ ಫೋನಾಗಿದೆ. ಬಿಡುಗಡೆಯಾದ ಏಳು ತಿಂಗಳಲ್ಲಿ 23 ಲಕ್ಷ ಮೊಬೈಲುಗಳನ್ನು ಮಾರಾಟ ಮಾಡಲಾಗಿದೆ ಎಂದು ಇತ್ತೀಚೆಗೆ ಶಿಯೋಮಿ ಘೋಷಿಸಿದೆ. ಇದು ಚೀನಾದ ಮೊಬೈಲ್ ತಯಾರಕ ಶಿಯೋಮಿಯ ದಾಖಲೆಯೇ ಹೌದು.

ಲಿನೊವೊ ಕೆ4 ನೋಟ್.

ಲಿನೊವೊ ಕೆ4 ನೋಟ್.

ಭಾರತೀಯರ ಹುಡುಕಾಟದಲ್ಲಿ ಲಿನೊವೊ ಕೆ4 ನೋಟ್ 3ಗೆ ನಾಲ್ಕನೇ ಸ್ಥಾನ. ಕಡಿಮೆ ಬೆಲೆಯ ಈ ಫೋನಿನಲ್ಲಿ ಉತ್ತಮ ಪರದೆಯಿದೆ, ವಿ.ಆರ್ ತಂತ್ರಜ್ಞಾನವಿದೆ ಮತ್ತು ದೀರ್ಘ ಬಾಳಿಕೆಯ ಬ್ಯಾಟರಿಯಿದೆ. ಭಾರತೀಯ ಮಾರುಕಟ್ಟೆಯ ಮಟ್ಟಿಗೆ ಕೊಡುವ ಬೆಲೆಗೆ ತಕ್ಕುದಾದ ಫೋನಿದು.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆ7.

ಗ್ಯಾಲಕ್ಸಿ ಜೆ ಸರಣಿಗೆ ಸೇರಿದ ಗ್ಯಾಲಕ್ಸಿ ಜೆ7 ಸ್ಮಾರ್ಟ್ ಫೋನ್ ಮಧ್ಯಮ ಬೆಲೆಯ ಸ್ಮಾರ್ಟ್ ಫೋನುಗಳಲ್ಲಿ ಆಕರ್ಷಕವಾದ ಫೋನಾಗಿದೆ. ಇದು ತುಂಬ ಉತ್ತಮವಾಗಿ ಮಾರಾಟವಾಯಿತು ಮತ್ತು ಗೂಗಲ್ ಹುಡುಕಾಟದಲ್ಲಿ ಐದನೇ ಸ್ಥಾನವನ್ನು ಪಡೆದಿದೆ. ಇದರಲ್ಲಿ 4ಜಿ ಸಂಪರ್ಕವಿದೆ, ದೀರ್ಘ ಬಾಳಿಕೆಯ ಬ್ಯಾಟರಿಯಿದೆ ಮತ್ತು ಬೆಲೆಯೂ ಕಡಿಮೆಯೇ ಇದೆ.

ಮೊಟೊ ಜಿ4.

ಮೊಟೊ ಜಿ4.

ಬಿಡುಗಡೆಯಾದಂದಿನಿಂದ ಮೊಟೊ ಜಿ ಸರಣಿಯ ಫೋನುಗಳು ಪ್ರಪಂಚದಾದ್ಯಂತ ಉತ್ತಮವಾಗಿ ಮಾರಾಟವಾಗಿದೆ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಇದಕ್ಕೆ ಕಾರಣ ಇವುಗಳ ಕೈಗೆಟುಕುವ ದರ. 2016ರ ಮಧ್ಯಭಾಗದಲ್ಲಿ ಮೊಟೊ ಜಿ4 ಬಿಡುಗಡೆಯಾಯಿತು, ಮಧ್ಯಮ ಬೆಲೆಯ ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಉತ್ತಮವಾಗಿ ಮಾರಾಟವಾಯಿತು. ಸ್ಮಾರ್ಟ್ ಫೋನಿನಲ್ಲಿ ಇರಬೇಕಾದ ಎಲ್ಲಾ ವಿಶೇಷತೆಗಳೂ ಇದರಲ್ಲಿದೆ.

ಒನ್ ಪ್ಲಸ್ 3.

ಒನ್ ಪ್ಲಸ್ 3.

ಈ ಫ್ಲಾಗ್ ಶಿಪ್ ಫೋನು ಗೂಗಲ್ ಹುಡುಕಾಟದಲ್ಲಿ ಏಳನೇ ಸ್ಥಾನದಲ್ಲಿದೆ. ಫ್ಲಾಗ್ ಶಿಪ್ ಫೋನಿನಲ್ಲಿ ಇರಬೇಕಾದ ಎಲ್ಲಾ ಅಂಶಗಳೂ ಇದರಲ್ಲಿದೆ, ಮತ್ತು ಇದರ ಬೆಲೆ ಆ್ಯಪಲ್ ಹಾಗೂ ಸ್ಯಾಮ್ಸಂಗ್ ಫೋನುಗಳಿಗೆ ಹೋಲಿಸಿದರೆ ಅರ್ಧದಷ್ಟು ಕಡಿಮೆಯಿದೆ. ಹಾಗಾಗಿ ಇದು ಗ್ರಾಹಕರ ಆಯ್ಕೆಯಾಗಿದೆ.

ಐಫೊನ್ ಎಸ್.ಇ.

ಐಫೊನ್ ಎಸ್.ಇ.

ಭಾರತದ ಗ್ರಾಹಕರಿಗೆ ಐಫೋನ್ 7 ಮತ್ತು ಐಫೋನ್ 7ಪ್ಲಸ್ ದುಬಾರಿಯಾದವು, ಹಾಗಾಗಿ ಈ ವರುಷದ ಮೊದಲ ಭಾಗದಲ್ಲಿ ಬಿಡುಗಡೆಯಾದ ಐಫೋನ್ ಎಸ್.ಇ ಉತ್ತಮ ಆಯ್ಕೆ. ಇದರ ಬೆಲೆ ಕಡಿಮೆ. ಜೊತೆಗೆ ಇ - ಕಾಮರ್ಸ್ ಪೋರ್ಟಲ್ ಗಳು ಐಫೋನ್ ಎಸ್.ಇ ಮೇಲೆ ಅನೇಕ ಕೊಡುಗೆಗಳನ್ನು ನೀಡಿದವು, ದುಬಾರಿಯಲ್ಲದ ಐಫೋನ್ ಕೊಳ್ಳುವವರಿಗೆ ಇದು ಅನುಕೂಲಕರವಾಯಿತು.

ಗೂಗಲ್ ಪಿಕ್ಸೆಲ್.

ಗೂಗಲ್ ಪಿಕ್ಸೆಲ್.

ಗೂಗಲ್ ಪಿಕ್ಸೆಲ್ ಉತ್ತಮ ಫೋನಾಗಿದ್ದರೂ ಗೂಗಲ್ ಇಂಡಿಯಾದ ಹುಡುಕಾಟದಲ್ಲಿ ಇದು ಒಂಭತ್ತನೇ ಸ್ಥಾನ ಪಡೆದುಕೊಳ್ಳಲಷ್ಟೇ ಸಾಧ್ಯವಾಯಿತು. ಇದಕ್ಕೆ ಹಲವು ಕಾರಣಗಳಿವೆ. ಪ್ರೀಮಿಯಂ ಸ್ಮಾರ್ಟ್ ಫೋನ್ ವಿಭಾಗದಲ್ಲಿ ಗೂಗಲ್ ಪಿಕ್ಸೆಲ್ ಹತ್ತು ಪರ್ಸೆಂಟ್ ಶೇರ್ ಹೊಂದಿದೆ ಎಂದು ಗೂಗಲ್ ಹೇಳಿಕೊಳ್ಳುತ್ತದೆ, ಆದರೂ ಈ ಫೋನುಗಳು ತುಂಬಾ ದುಬಾರಿ.

ಲಿನೊವೊ ಕೆ5 ನೋಟ್.

ಲಿನೊವೊ ಕೆ5 ನೋಟ್.

ಗೂಗಲ್ ಇಂಡಿಯಾದ ಟಾಪ್ ಹತ್ತು ಹುಡುಕಾಟದಲ್ಲಿ ಸ್ಥಾನ ಗಿಟ್ಟಿಸಿದ ಮೂರನೇ ಚೀನಾ ಫೋನಿದು. ಮೊಟೊ ಜಿ4 ಸೇರಿಸಿಕೊಂಡರೆ ಇದು ಮೂರನೆಯದು. ಕೆ4 ನೋಟಿನಂತೆಯೇ ಇದರಲ್ಲೂ ದೀರ್ಘ ಬಾಳಿಕೆಯ ಬ್ಯಾಟರಿಯಿದೆ, 4ಜಿ ಸಂಪರ್ಕವಿದೆ, ಬೆಲೆಯೂ ಕಡಿಮೆಯಿದೆ.

Best Mobiles in India

English summary
The most searched smartphones on Google India include Xiaomi Redmi Note 3, Samsung Galaxy J7, Apple iPhone 7, OnePlus 3, Lenovo K4 note, Moto G4 Plus and more. Take a look!

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X