ಬರುತ್ತಿದೆ Redmi Note 4X: ಸ್ನಾಪ್‌ಡ್ರಾಗನ್ 653 ಮತ್ತು 4GB RAM

ಚೀನಾದ ಪತ್ರಿಕೆಯೊಂದು ವರದಿ ಮಾಡಿದ್ದು, ರೆಡ್‌ಮಿ ನೋಟ್ 4 ನಂತರ ಶ್ಯೋಮಿ ಭಾರತೀಯ ಮಾರುಕಟ್ಟೆಗೆ ನೋಟ್ 4X ಪೋನನ್ನು ಪರಿಚಯಿಸಲಿದೆ ಎಂದು ತಿಳಿಸಿದೆ. ಈ ಪೋನ್‌ನಲ್ಲಿ ವೇಗಕ್ಕೆ ಮತ್ತು ಮೆಮೊರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.

|

ಶ್ಯೋಮಿ ಭಾರತೀಯ ಮಾರುಕಟ್ಟೆಯನ್ನು ಗುರಿಯಾಗಿಟ್ಟುಕೊಂಡು ಹೊಸದೊಂದು ನೋಟ್ ಸರಣಿಯ ಮತ್ತೊಂದು ವೇಗದ ಸ್ಮಾರ್ಟ್‌ಪೋನ್ ವೊಂದನ್ನು ಪರಿಚಯಿಸುತ್ತದೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಈಗಾಗಲೇ ರೆಡ್‌ಮಿ ನೋಟ್ 4 ಬಿಡುಗಡೆಗೆ ಸಿದ್ಧತೆ ನಡೆದಿದ್ದು, ಇದು ಮಾರುಕಟ್ಟೆಗೆ ಬರುವ ಮೊದಲೇ ನೋಟ್ 4X ಎಂಬ ಮತ್ತೊಂದು ಪೋನ್ ಬರಲಿದೆ ಎನ್ನಲಾಗಿದೆ.

ಬರುತ್ತಿದೆ Redmi Note 4X: ಸ್ನಾಪ್‌ಡ್ರಾಗನ್ 653 ಮತ್ತು 4GB RAM

ಲೀಕೊ ಜೊತೆ ಸೇರಿ ಕೂಲ್‌ಪ್ಯಾಡ್ ನಿಂದ ಹೊಸ ವರ್ಷಕ್ಕೆ ಹೊಸ ಪೋನ್ ಬಿಡುಗಡೆ

ಈ ಕುರಿತು ಚೀನಾದ ಪತ್ರಿಕೆಯೊಂದು ವರದಿ ಮಾಡಿದ್ದು, ರೆಡ್‌ಮಿ ನೋಟ್ 4 ನಂತರ ಶ್ಯೋಮಿ ಭಾರತೀಯ ಮಾರುಕಟ್ಟೆಗೆ ನೋಟ್ 4X ಪೋನನ್ನು ಪರಿಚಯಿಸಲಿದೆ ಎಂದು ತಿಳಿಸಿದೆ. ಈ ಪೋನ್‌ನಲ್ಲಿ ವೇಗಕ್ಕೆ ಮತ್ತು ಮೆಮೊರಿಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.

ನೋಟ್ ಸರಣಿಗೆ ಮತ್ತೊಂದು ಪೋನ್

ನೋಟ್ ಸರಣಿಗೆ ಮತ್ತೊಂದು ಪೋನ್

ಶ್ಯೋಮಿ ಕಂಪನಿಯು ರೆಡ್‌ಮಿ ನೋಟ್ ಸರಣಿಯ ಸ್ಮಾರ್ಟ್‌ಪೋನ್ ಗಳನ್ನು ಮಾರುಕಟ್ಟೆಗೆ ಪರಿಚಯಿಸಿ ಯಶಸ್ವಿ ಕಂಡಿದೆ. ರೆಡ್‌ಮಿ ನೋಟ್. ರೆಡ್‌ಮಿ ನೋಟ್ 2, ರೆಡ್‌ಮಿ ನೋಟ್ 3 ಪೋನ್ ಗಳು ಭಾರತೀಯರ ಮನಗೆಲ್ಲುವಲ್ಲಿ ಯಶಸ್ವಿಯಾಗಿದ್ದು, ಇದೇ ಹಿನ್ನಲೆಯಲ್ಲಿ ನೋಟ್ 4 ಬಿಡುಗಡೆಯಾಗುತ್ತಿದ್ದು, ಅದರ ಹಿಂದೆಯೇ ನೋಟ್ 4X ಪೋನು ಬರಲಿದೆ.

ವೇಗದ ಕಾರ್ಯಚರಣೆ

ವೇಗದ ಕಾರ್ಯಚರಣೆ

ರೆಡ್‌ಮಿ ನೋಟ್ 4X ಸ್ಮಾರ್ಟ್‌ಪೋನ್ ವೇಗಕ್ಕೆ ಹೆಸರುವಾಸಿಯಾಗಿದೆ. ಈ ಪೋನಿನಲ್ಲಿ ಸ್ನಾಪ್ ಡ್ರಾಗನ್ 653 ಪ್ರೋಸೆಸರ್ ಹಾಕಲಾಗಿದ್ದು, 1.95GHz ವೇಗದಲ್ಲಿ ಪೋನಿನ ಕಾರ್ಯಚರಣೆಯನ್ನು ನಡೆಸಲು ಸಹಕಾರಿಯಾಗಿದೆ. ಇದರೊಂದಿಗೆ 4GB RAM ಅಳವಡಿಸಲಾಗಿದ್ದು, 64GB ಇಂಟರ್ನಲ್ ಮೆಮೊರಿ ಇದೆ.

ಗುಣಮಟ್ಟದ HD ಡಿಸ್‌ಪ್ಲೇ

ಗುಣಮಟ್ಟದ HD ಡಿಸ್‌ಪ್ಲೇ

ರೆಡ್‌ಮಿ ನೋಟ್ 4X ಸ್ಮಾರ್ಟ್‌ಪೋನಿನಲ್ಲಿ 5.5 ಇಂಚಿನ ಐಪಿಎಸ್, Full HD ಡಿಸ್‌ಪ್ಲೇ ಅಳವಡಿಸಲಾಗಿದ್ದು, ಗುಣಮಟ್ಟದ ಚಿತ್ರ ಮತ್ತು ವಿಡಿಯೋ ವೀಕ್ಷಣೆಗೆ ಸಹಕಾರಿಯಾಗಿದೆ. ಈ ಪೋನಿನಲ್ಲಿ ಡುಯಲ್ ಕ್ಯಾಮೆರಾ ಹೊಂದಿದ್ದು, ಉತ್ತಮ ಛಾಯಾಚಿತ್ರಗಳನ್ನು ಸೆರೆಹಿಡಿಯಲು ಇದು ಸಹಾಯಕಾರಿಯಾಗಿದೆ.

ಬೆಲೆ 15 ಸಾವಿರದ ಒಳಗೆ

ಬೆಲೆ 15 ಸಾವಿರದ ಒಳಗೆ

ನೋಟ್ 3 ಪೋನು 10 ಸಾವಿರ ರೂ.ಗಳಿಗೆ ಲಭ್ಯವಿತ್ತು, ಹಾಗಾಗಿ ನೋಟ್ 4X ಸ್ಮಾರ್ಟ್‌ ಪೋನು 10 ಸಾವಿರದಿಂದ 15 ಸಾವಿರದ ಒಳಗೆ ಇರಲಿದೆ. ಒಟ್ಟಿನಲ್ಲಿ ಕೊಟ್ಟ ಕಾಸಿಗೆ ಮೋಸವಿರುವುದಿಲ್ಲ.

Best Mobiles in India

English summary
xiaomi Redmi Note 4 hasn’t yet arrived in India, though we’ve heard that it’s coming sometime in January. The Note 4X is said to be a variant of the Note 4. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X