ಮೋಟೋ ಇ ಗೆ ಪೈಪೋಟಿ ಕ್ಸೋಲೋ ಕ್ಯು600 ನಿಂದ

By Shwetha
|

ಈ ಬಾರಿ ಕ್ಸೋಲೋ ಕ್ಯಾಂಪ್‌ನಿಂದ ಮತ್ತೊಂದು ಮೋಟೋ ಇ ಕಾಂಪಿಟೀಟರ್ ಪ್ರವರ್ಧಮಾನಕ್ಕೆ ಬಂದಿದೆ. ರೂ. 10,000 ದ ಒಳಗಿನ ಆಕರ್ಷಕ ಫೋನ್ ಶ್ರೇಣಿಯನ್ನು ಕ್ಸೋಲೋ ಜಾರಿಗೆ ತಂದಿದ್ದು ಕ್ಸೋಲೋ Q700, Xolo A500s ಹೆಸರುಗಳಿಂದ ಮಾರುಕಟ್ಟೆಯಲ್ಲಿ ಈ ಕಂಪೆನಿಯ ಫೋನ್‌ಗಳು ಚಿರಪರಿಚಿತವಾಗುತ್ತಿವೆ.

ಕಿಟ್‌ಕ್ಯಾಟ್ ಆವೃತ್ತಿಯೊಂದಿಗೆ ಬಳಕೆದಾರರ ಕೈಗೆ ಲಭ್ಯವಾಗುತ್ತಿರುವ ಈ ಫೋನ್ ಇತರ ಕಿಟ್‌ಕ್ಯಾಟ್ ಡಿವೈಸ್‌ಗಳಿಗೆ ಭರ್ಜರಿ ಪೈಪೋಟಿಯನ್ನು ನೀಡುವುದು ಖಚಿತವಾಗುತ್ತಿದೆ. ವಿಜಿಎ ಫ್ರಂಟ್ ಶೂಟರ್ ಫೋನ್‌ನಲ್ಲಿದ್ದು ವೀಡಿಯೋ ಕರೆಯ ಸೌಲಭ್ಯವನ್ನು ಒದಗಿಸಲಿದೆ. 4ಜಿಬಿ ಆಂತರಿಕ ಮೆಮೊರಿಯನ್ನು ಡಿವೈಸ್ ನೀಡುತ್ತಿದ್ದು ಇದನ್ನು ಎಸ್‌ಡಿ ಕಾರ್ಡ್ ಬಳಸಿಕೊಂಡು 64ಜಿಬಿಗೆ ವಿಸ್ತರಿಸಬಹುದಾಗಿದೆ.

ನಿಮ್ಮ ಸ್ಟೋರೇಜ್‌ನ ಎಲ್ಲಾ ಸಮಸ್ಯೆಗಳನ್ನು ದೂರಮಾಡುವಂತೆ ಈ ಫೋನ್ ಅವತರಿಸುತ್ತಿದ್ದು ಇದರ ಇನ್ನಷ್ಟು ಕೂಲಂಕುಷ ವಿವರಗಳನ್ನು ತಿಳಿದುಕೊಳ್ಳಿ.

#1

#1

ಕ್ಸೋಲೋ ಕ್ಯು600 5 ಎಮ್‌ಪಿ ರಿಯರ್ ಕ್ಯಾಮೆರಾ ಮತ್ತು ಎಲ್‌ಇಡಿ ಫ್ಲ್ಯಾಶ್ ಬೆಂಬಲದೊಂದಿಗೆ ಬಂದಿದ್ದು ವಿಜಿಎ ಫ್ರಂಟ್ ಶೂಟರ್ ಇದರಲ್ಲಿದೆ. ವೀಡಿಯೋ ಕರೆ ಮಾಡುವ ಸೌಲಭ್ಯವನ್ನು ಪೋನ್ ಒದಗಿಸುತ್ತಿದೆ. ಇದು ಎಚ್‌ಡಿ ವೀಡಿಯೋಗಳನ್ನು ರೆಕಾರ್ಡ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಕ್ಸೋಲೋ ಮೈಕ್ರೋ ಎಸ್‌ಡಿ ಬೆಂಬಲದೊಂದಿಗೆ 64 ಜಿಬಿ ಸಂಗ್ರಹಣೆಯನ್ನು ನೀಡುತ್ತಿದ್ದು ನಿಮ್ಮ ಸಂಗ್ರಹಣೆ ಸಮಸ್ಯೆಗಳನ್ನು ದೂರಮಾಡುವ ಸೌಲಭ್ಯವನ್ನು ಕೂಡ ಫೋನ್ ಹೊಂದಿದೆ.

#2

#2

ಕ್ಸೋಲೋ ಕ್ಯು600 1.2GHz ಕ್ವಾಡ್ ಕೋರ್ ಪ್ರೊಸೆಸರ್‌ನೊಂದಿಗೆ ಬಂದಿದ್ದು, 1 ಜಿಬಿ RAM ಮೃದುವಾದ ಚಾಕಚಕ್ಯವುಳ್ಳ ಕಾರ್ಯನಿರ್ವಹಣೆಯನ್ನು ನೀಡುತ್ತಿದೆ. ಇದರ ಚಿಪ್‌ಸೆಟ್ ಎಚ್‌ಡಿ ವೀಡಿಯೋಗಳನ್ನು ಪ್ಲೇ ಮಾಡುವ ಗುಣ ಈ ಡಿವೈಸ್‌ಗಿದೆ. ಇದರ ಬ್ಯಾಟರಿ ಸಾಮರ್ಥ್ಯ 2000 mAh ಇದ್ದು 400 ಗಂಟೆಗಳ ಸ್ಟ್ಯಾಂಡ್‌ಬೈ ಸಮಯ ಮತ್ತು 11 ಗಂಟೆಗಳ ಟಾಕ್ ಟೈಮ್ ಅನ್ನು ನೀಡುತ್ತಿದೆ.

#3

#3

ಕ್ಸೋಲೋ ಕ್ಯು600 ಡಿಸ್‌ಪ್ಲೇಯು 4.5 ಇಂಚಿನ ಗಾತ್ರದಲ್ಲಿದ್ದು 960 x 540 ಪಿಕ್ಸೆಲ್‌ಗಳಾಗಿದೆ. ಇದರ ಪಿಕ್ಸೆಲ್ ಡೆನ್ಸಿಟಿ 245 PPI ಆಗಿದೆ. ಇದು ಡ್ಯುಯೆಲ್ ಸಿಮ್‌ ವೈಶಿಷ್ಟ್ಯವನ್ನು ಹೊಂದಿದ್ದು ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ಫೋನ್‌ನಲ್ಲಿ ಚಾಲನೆಯಾಗುತ್ತಿದೆ.

#4

#4

ಕ್ಸೋಲೋ ಡಿವೈಸ್ 7.9 ಎಮ್‌ಎಮ್ ದಪ್ಪವಾಗಿದ್ದು 115 ಗ್ರಾಮ್‌ ತೂಕವನ್ನು ಹೊಂದಿದೆ. ಆಂಡ್ರಾಯ್ಡ್ ಕಿಟ್‌ಕ್ಯಾಟ್ ಆವೃತ್ತಿ 4.4 ಇದರಲ್ಲಿದ್ದು ಡ್ಯುಯೆಲ್ ಸಿಮ್‌ನಲ್ಲಿ ಕ್ಸೋಲೋ ಫೋನ್ ಲಭ್ಯವಿದೆ. ಇದರ ಬ್ಯಾಟರಿ ಗಂಭೀರವಾಗಿದ್ದು ಉತ್ತಮವಾಗಿದೆ. ಮತ್ತು ಎಚ್‌ಡಿ ವೀಡಿಯೋವನ್ನು ದಾಖಲಿಸುವ ಸಾಮರ್ಥ್ಯವನ್ನು ಫೋನ್ ಹೊಂದಿದೆ.

<center><iframe width="100%" height="390" src="//www.youtube.com/embed/zGIekC5MuMU" frameborder="0" allowfullscreen></iframe></center>

Best Mobiles in India

Read more about:

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X