ಝೊಪೊ ಕಲರ್ ಎಫ್2 vs ಶಿಯೋಮಿ ರೆಡ್ ಮಿ 3ಎಸ್: ಉತ್ತಮ ಸ್ಮಾರ್ಟ್ ಫೋನ್ ಪಟ್ಟಕ್ಕಾಗಿ ಪೈಪೋಟಿ.

ಪ್ರಪಂಚದ ಅತ್ಯಂತ ವೇಗದ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಿದ ನಂತರ ಝೊಪೊ ಹೊಸ ಬಜೆಟ್ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಿದೆ, ಕಲರ್ ಎಫ್2 ಹೆಸರಿನಲ್ಲಿ. ಶಿಯೋಮಿ ರೆಡ್ ಮಿ 3ಎಸ್ ಮತ್ತು ಝೊಪೊ ಕಲರ್ ಎಫ್2 ನಡುವಿನ ಹೋಲಿಕೆಗಳು ಇಲ್ಲಿವೆ.

|

ಚೀನಾದ ಸ್ಮಾರ್ಟ್ ಫೋನ್ ಕಂಪನಿ ಝೊಪೊ ಇತ್ತೀಚೆಗೆ ಭಾರತದ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಹೊಸ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆಗೊಳಿಸಿತು. ಝೊಪೊ ಕಲರ್ ಎಫ್2 ಹೆಸರಿನ ಈ ಸ್ಮಾರ್ಟ್ ಫೋನಿನ ಬೆಲೆ ಹತ್ತು ಸಾವಿರಕ್ಕಿಂತ ಕೊಂಚ ಹೆಚ್ಚು, ಶಿಯೋಮಿ ರೆಡ್ ಮಿ 3ಎಸ್ ಮತ್ತು ಕೂಲ್ ಪ್ಯಾಡ್ ನೋಟ್ 5ಗೆ ಇದು ಸ್ಪರ್ಧೆ ಕೊಡುತ್ತಿದೆ.

ಝೊಪೊ ಕಲರ್ ಎಫ್2 vs ಶಿಯೋಮಿ ರೆಡ್ ಮಿ 3ಎಸ್

ಒಂದೆಡೆ, ಶಿಯೋಮಿ ತನ್ನ ಎಲ್ಲಾ ಸ್ಮಾರ್ಟ್ ಫೋನ್ ಗಳ ಮೂಲಕ ಚೀನಾ ಮತ್ತು ಭಾರತೀಯ ಗ್ರಾಹಕರ ಮನಗೆದ್ದಿದೆ. ಚೀನಾದ ಆ್ಯಪಲ್ ಎಂದೇ ಕರೆಯಲಾಗುವ ಶಿಯೋಮಿ ಇತ್ತೀಚೆಗಷ್ಟೇ 6,999 ರುಪಾಯಿಗಳಿಂದ ಪ್ರಾರಂಭವಾಗುವ ರೆಡ್ ಮಿ 3ಎಸ್ ಅನ್ನು ಪರಿಚಯಿಸಿತ್ತು.

ಓದಿರಿ: ಹೊಸ ಫೇಸ್‌ಬುಕ್ ಮೆಸೇಂಜರ್ 'ಬೋಟ್‌' ಸಹಾಯದಿಂದ ಹಳೆಯ ನೋಟುಗಳ ಬದಲಾವಣೆ ಮಾಡಿರಿ

ಇನ್ನೊಂದೆಡೆ ಝೊಪೊ ಭಾರತದಲ್ಲಿ ತುಂಬಾ ಯಶಸ್ಸನ್ನೇನು ಕಂಡಿಲ್ಲ. ಹೊಸ ಝೊಪೊ ಫೋನು ಶಿಯೋಮಿ ರೆಡ್ ಮಿ 3ಎಸ್ ಗೆ ಸ್ಪರ್ಧೆ ನೀಡಿ ಗೆಲ್ಲಬಲ್ಲದಾ? ನೋಡೋಣ ಬನ್ನಿ.

ಝೊಪೊ ಕಲರ್ ಎಫ್2ನಲ್ಲಿ ದೊಡ್ಡ ಪರದೆ!

ಝೊಪೊ ಕಲರ್ ಎಫ್2ನಲ್ಲಿ ದೊಡ್ಡ ಪರದೆ!

ಪರದೆಯ ವಿಚಾರಕ್ಕೆ ಬಂದರೆ, ಝೊಪೊ ಕಲರ್ ಎಫ್2ನಲ್ಲಿ 5.5 ಇಂಚಿನ 720 ಪಿಕ್ಸೆಲ್ಲಿನ ಪರದೆಯಿದೆ. ಶಿಯೋಮಿ ರೆಡ್ ಮಿ 3ಎಸ್ ನಲ್ಲಿ 720 ಪಿಕ್ಸೆಲ್ಲಿನ 5 ಇಂಚಿನ ಪರದೆಯಿದೆ.

ಶಿಯೋಮಿ ರೆಡ್ ಮಿ 3ಎಸ್ ನಲ್ಲಿ ಉತ್ತಮ ಹಾರ್ಡ್ ವೇರ್.

ಶಿಯೋಮಿ ರೆಡ್ ಮಿ 3ಎಸ್ ನಲ್ಲಿ ಉತ್ತಮ ಹಾರ್ಡ್ ವೇರ್.

ಶಿಯೋಮಿ ರೆಡ್ ಮಿ 3ಎಸ್ ನಲ್ಲಿ ಹೊಸ ಆಕ್ಟಾಕೋರ್ ಕ್ವಾಲ್ ಕಮ್ ಸ್ನಾಪ್ ಡ್ರಾಗನ್ 430 ಚಿಪ್ ಇದೆ. ಝೊಪೊ ಕಲರ್ ಎಫ್2ನಲ್ಲಿ ಆಕ್ಟಾ ಕೋರ್ ಮೀಡಿಯಾ ಟೆಕ್ ಎಂಟಿ6737 ಚಿಪ್ ಸೆಟ್ ಇದೆ. ಮೀಡಿಯಾಟೆಕ್ ಚಿಪ್ ಗಳು ಹೆಚ್ಚು ಬಿಸಿಯಾಗುತ್ತವೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರೆಡ್ ಮಿ 3ಎಸ್ ನಲ್ಲಿ 2ಜಿಬಿ/3ಜಿಬಿ ರ್ಯಾಮ್.

ರೆಡ್ ಮಿ 3ಎಸ್ ನಲ್ಲಿ 2ಜಿಬಿ/3ಜಿಬಿ ರ್ಯಾಮ್.

ಶಿಯೋಮಿ ರೆಡ್ ಮಿ 3ಎಸ್ ಎರಡು ಆವೃತ್ತಿಗಳಲ್ಲಿ ಲಭ್ಯ. ಒಂದು 2ಜಿಬಿ ರ್ಯಾಮ್, ಮತ್ತೊಂದು ಪ್ರೈಮ್ ಆವೃತ್ತಿ ಎಂದು ಕರೆಯಲಾಗುವ 3ಜಿಬಿ ರ್ಯಾಮ್. ಮತ್ತೊಂದೆಡೆ ಝೊಪೊ ಕಲರ್ ಎಫ್2ನಲ್ಲಿ ಒಂದೇ ಆವೃತ್ತಿ ಲಭ್ಯ, ಅದೂ 2ಜಿಬಿ ರ್ಯಾಮ್. ಇದು ಸ್ವಲ್ಪ ಹಿನ್ನಡೆಯೇ ಸರಿ.

ಕ್ಯಾಮೆರಾದಲ್ಲಿ ಶಿಯೋಮಿ ಉತ್ತಮ.

ಕ್ಯಾಮೆರಾದಲ್ಲಿ ಶಿಯೋಮಿ ಉತ್ತಮ.

ಶಿಯೋಮಿ ರೆಡ್ ಮಿ 3ಎಸ್ ನಲ್ಲಿ 13 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಮತ್ತು 8 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದೆ. ಝೊಪೊ ಕಲರ್ ಎಫ್2ನಲ್ಲಿ ಎಲ್.ಇ.ಡಿ ಫ್ಲಾಷ್ ಇರುವ 8 ಮೆಗಾಪಿಕ್ಸೆಲ್ಲಿನ ಹಿಂಬದಿಯ ಕ್ಯಾಮೆರ ಮತ್ತು 5 ಮೆಗಾಪಿಕ್ಸೆಲ್ಲಿನ ಮುಂಬದಿಯ ಕ್ಯಾಮೆರಾ ಇದೆ.

ರೆಡ್ ಮಿ 3ಎಸ್ ನಲ್ಲಿ ದೊಡ್ಡ ಬ್ಯಾಟರಿ.

ರೆಡ್ ಮಿ 3ಎಸ್ ನಲ್ಲಿ ದೊಡ್ಡ ಬ್ಯಾಟರಿ.

ಈ ವರ್ಷ ಹೊರಬಂದ ಶಿಯೋಮಿಯ ಎಲ್ಲಾ ಫೋನುಗಳಲ್ಲೂ ಬ್ಯಾಟರಿಯ ಸಾಮರ್ಥ್ಯ 4000 ಎಂ.ಎ.ಹೆಚ್ ಇದೆ. ಶಿಯೋಮಿ ರೆಡ್ ಮಿ 3ಎಸ್ ಫೋನಿನಲ್ಲಿ 4100 ಎಂ.ಎ.ಹೆಚ್ ಬ್ಯಾಟರಿ ಇದೆ, ಇದು ಸಲೀಸಾಗಿ ಎರಡು ದಿನಗಳವರೆಗೆ ಬರುತ್ತದೆ. ಝೊಪೊ ಕಲರ್ ಎಫ್2ನಲ್ಲಿ ಕೇವಲ 2300 ಎಂ.ಎ.ಹೆಚ್ ಬ್ಯಾಟರಿ ಇದೆ, ಸ್ಪರ್ಧೆಯ ಸಮೀಪದಲ್ಲೂ ಇದಿಲ್ಲ.

ಫಲಿತಾಂಶ.

ಫಲಿತಾಂಶ.

ವಿಶೇಷತೆಗಳ ವಿಚಾರಕ್ಕೆ ಬಂದರೆ, ಶಿಯೋಮಿ ರೆಡ್ ಮಿ 3ಎಸ್ ಖಂಡಿತವಾಗಿ ಗೆದ್ದುಬಿಡುತ್ತದೆ, ಅದರ ಬೆಲೆಯೂ ಕಡಿಮೆಯೇ ಇದೆ. ಝೊಪೊ ಕಲರ್ ಎಫ್2ನ ಬೆಲೆ 10,790; ನಮ್ಮ ಪ್ರಕಾರ ಈ ಫೋನಿಗೆ ಈ ಬೆಲೆ ನಿಜಕ್ಕೂ ಹೆಚ್ಚಾಯಿತು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Zopo Color F2 is the new smartphone from the Chinese smartphone company which was launched in India yesterday. Here's how it goes against Xiaomi Redmi 3s.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X