23MP ಕ್ಯಾಮೆರಾ ಇರುವ ನುಬಿಯಾ Z11 ಮಿನಿ ಎಸ್‌ ಬೆಲೆ ಎಷ್ಟು..?

ನುಬಿಯಾ Z11 ಮಿನಿ ಎಸ್‌ ಹೆಸರಿನ ಈ ಪೋನು, 23MP ಕ್ಯಾಮೆರಾವನ್ನು ಹೊಂದಿದ್ದು, ಉತ್ತಮ ಗುಣವಿಶೇಷತೆಗಳನ್ನು ತನ್ನದಾಗಿಸಿಕೊಂಡಿದೆ.

|

ZTE ಭಾರತೀಯ ಮಾರುಕಟ್ಟೆಗೆ ಸ್ಮಾರ್ಟ್‌ಪೋನುಗಳನ್ನು ಪರಿಚಯಿಸುತ್ತಿದ್ದು, ಇಷ್ಟು ದಿನ ಫೀಚರ್ ಪೋನುಗಳ ಮೂಲಕವೇ ಭಾರತೀಯರ ಮನಗೆದ್ದಿದ್ದ ZTE ಶಕ್ತಿಶಾಲಿ ಸ್ಮಾರ್ಟ್‌ಪೋನೊಂದನ್ನು ಮಾರುಕಟ್ಟೆಗೆ ಬಿಟ್ಟಿದ್ದು, ನುಬಿಯಾ Z11 ಮಿನಿ ಎಸ್‌ ಹೆಸರಿನ ಈ ಪೋನು, 23MP ಕ್ಯಾಮೆರಾವನ್ನು ಹೊಂದಿದ್ದು, ಉತ್ತಮ ಗುಣವಿಶೇಷತೆಗಳನ್ನು ತನ್ನದಾಗಿಸಿಕೊಂಡಿದೆ.

23MP ಕ್ಯಾಮೆರಾ ಇರುವ ನುಬಿಯಾ Z11 ಮಿನಿ ಎಸ್‌ ಬೆಲೆ ಎಷ್ಟು..?

ಓದಿರಿ: ಕಂಪ್ಯೂಟರ್ ವೇಗ ಹೆಚ್ಚಿಸಲು ಪೆನ್‌ಡ್ರೈವ್ ಅನ್ನೇ RAM ಆಗಿ ಬಳಸುವುದು ಹೇಗೆ..?

ಕಳೆದ ವರ್ಷ ಮಾರುಕಟ್ಟೆಗೆ ಬಂದಿದ್ದ ನುಬಿಯಾ Z11 ಮಿನಿ ಸ್ಮಾರ್ಟ್‌ಪೋನಿ ಮುಂದಿನ ಅವತರಣಿಕೆ ಇದಾಗಿದ್ದು, 16,999 ರೂ.ಗಳಿಗೆ ಮಾರಾಟವಾಗಲಿದೆ ಎನ್ನಲಾಗಿದೆ. ಶಿಯೋಮಿ ರೆಡ್‌ಮಿ ನೋಟ್ 4 ಸ್ಮಾರ್ಟ್‌ಪೋನಿಗೆ ಎದುರಾಗಿ ಈ ಪೋನನ್ನು ಲಾಂಚ್ ಮಾಡಲಾಗಿದೆ ಎನ್ನಲಾಗಿದೆ.

5.2 ಇಂಚಿನ Full HD ಡಿಸ್‌ಪ್ಲೇ:

5.2 ಇಂಚಿನ Full HD ಡಿಸ್‌ಪ್ಲೇ:

ZTE ನುಬಿಯಾ Z11 ಮಿನಿ ಎಸ್‌ 5.2 ಇಂಚಿನ Full HD ಡಿಸ್‌ಪ್ಲೇಯನ್ನು ಹೊಂದಿದ್ದು, 1080x1920 p ರೆಸಲ್ಯೂಷನ್ ಗುಣಮಟ್ಟದಿಂದ ಕೂಡಿದೆ. ಅಲ್ಲದೇ ಪರದೆ ರಕ್ಷಣೆಗಾಗಿ 2.5D ಕರ್ವಡ್ ಗ್ಲಾಸ್‌ ಡಿಸ್‌ಪ್ಲೇ ಡಿಸೈನ್ ಮಾಡಲಾಗಿದೆ. 450 nits ಬ್ರೈಟ್‌ನೆಸ್ ಹೊಂದಿರುವ ಡಿಸ್‌ಪ್ಲೇ ಇದಾಗಿದೆ.

2.0GHz ಆಕ್ವಾ ಕೋರ್ ಪ್ರೋಸೆಸರ್:

2.0GHz ಆಕ್ವಾ ಕೋರ್ ಪ್ರೋಸೆಸರ್:

ZTE ನುಬಿಯಾ Z11 ಮಿನಿ ಎಸ್‌ ಸ್ಮಾರ್ಟ್‌ಪೋನಿನಲ್ಲಿ ವೇಗದ ಕಾರ್ಯಚರಣೆಗಾಗಿಯೇ 2.0 GHz ಆಕ್ವಾ-ಕೋರ್ ಸ್ನಾಪ್‌ಡ್ರಾಗನ್ 625 ಪ್ರೋಸೆಸರ್ ಅಳವಡಿಸಲಾಗಿದ್ದು, 4GB RAM ಇದರಲ್ಲಿದೆ. ಅಲ್ಲದೇ ಆಂತರಿಕವಾಗಿ 64GB ಮೆಮೊರಿಯನ್ನು ಹೊಂದಿದೆ. ಮೆಮೊರಿ ಕಾರ್ಡ್‌ ಮೂಲಕ 200 GB ವರೆಗೂ ಮೆಮೊರಿ ವಿಸ್ತರಿಸಿಕೊಳ್ಳಬಹುದಾಗಿದೆ.

23MP ಕ್ಯಾಮೆರಾ:

23MP ಕ್ಯಾಮೆರಾ:

ZTE ನುಬಿಯಾ Z11 ಮಿನಿ ಎಸ್‌ ಸ್ಮಾರ್ಟ್‌ಪೋನಿನಲ್ಲಿ ಉತ್ತಮ ಪೋಟೋಗಳನ್ನು ತೆಗೆಯಬಹುದಾಗಿದ್ದು, ಹಿಂಭಾಗದಲ್ಲಿ 23MP ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ಕ್ಯಾಮೆರಾವೂ ಸೋನಿ ಸೆನ್ಸರ್ ಒಳಗೊಂಡಿದೆ ಎನ್ನಲಾಗಿದೆ. ಅಲ್ಲದೇ f/2.0 ಅಪರ್ಚರ್ ಇದೆ. ಇದಲ್ಲದೇ ಮುಂಭಾಗದಲ್ಲಿ 13MP ಸೆಲ್ಫಿ ಕ್ಯಾಮೆರಾವನ್ನು ಈ ಪೋನ್ ಒಳಗೊಂಡಿದೆ. ಇದು ಸಹ ವೈಡ್ ಆಂಗಲ್ ಆಯ್ಕೆಯನ್ನು ಹೊಂದಿದೆ.

ಇತರೆ ವಿಶೇಷತೆಗಳು:

ಇತರೆ ವಿಶೇಷತೆಗಳು:

3000mAh ತೆಗೆಯಲಾಗದ ಬ್ಯಾಟರಿಯನ್ನು ಈ ಫೋನಿನಲ್ಲಿ ಅಳವಡಿಸಲಾಗಿದ್ದು ವೇಗದ ಚಾರ್ಜಿಂಗ್ ಸಹ ಇದೆ. Bluetooth v4.1, GPS ಮತ್ತು USB Type-C ಇದ್ದು, 158 ಗ್ರಾಮ್ ತೂಕವಿದೆ ಎನ್ನಲಾಗಿದೆ.

Best Mobiles in India

Read more about:
English summary
ZTE brand Nubia has brought a new smartphone to India. Following its launch in China back in October, the Nubia Z11 mini S was on Monday launched in India. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X