11,999 ರೂ.ನ ನುಬಿಯಾ ಸ್ಮಾರ್ಟ್‌ಫೋನ್‌ ಬಗ್ಗೆ ತಿಳಿದರೆ ಖರೀದಿಸಲು ಕ್ಯೂ ನಿಲ್ಲುತ್ತೀರಾ!!

ಅತ್ಯಾಧುನಿಕ ಎನ್ನುವ 2GHz ಆಕ್ಟ-ಕೋರ್ ಸ್ನಾಪ್‌ಗಾರ್ಡನ್ 625 ಪ್ರೊಸೆಸರ್ ಮತ್ತು 4GB RAM ಹೊಂದಿರುವ ನುಬಿಯಾ Z11 ಸ್ಮಾರ್ಟ್‌ಫೋನ್ ಪ್ರಸ್ತುತ ತನ್ನ ಸರಣಿ ಮೊಬೈಲ್‌ಗಳಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಎನ್ನಬಹುದು.

Written By:

2016 ಅಕ್ಟೋಬರ್‌ನಲ್ಲಿ ಲಾಂಚ್ ಆದ "ನುಬಿಯಾ Z11 ಮಿನಿ ಎಸ್‌" ಸ್ಮಾರ್ಟ್‌ಫೋನ್‌ ಬಗ್ಗೆ ಹೆಚ್ಚಿನ ಜನರಿಗೆ ಮಾಹಿತಿ ತಲುಪಿಲ್ಲ ಎನ್ನಬಹುದು. ಅತ್ಯುತ್ತಮ ಫೀಚರ್‌ ಹೊಂದಿರುವ ನುಬಿಯಾ ಸ್ಮಾರ್ಟ್‌ಫೋನ್‌ಗಳು ಭಾರತೀಯ ಮಾರುಕಟ್ಟೆಗೆ ತಲುಪಿದ್ದರೂ ಜಾಹಿರಾತು ಇಲ್ಲದೆ ಈ ಫೋನ್‌ಗಳು ಹೆಚ್ಚು ಸದ್ದು ಮಾಡುತ್ತಿಲ್ಲ ಎನ್ನಬಹುದು.

ಅತ್ಯಾಧುನಿಕ ಎನ್ನುವ 2GHz ಆಕ್ಟ-ಕೋರ್ ಸ್ನಾಪ್‌ಗಾರ್ಡನ್ 625 ಪ್ರೊಸೆಸರ್ ಮತ್ತು 4GB RAM ಹೊಂದಿರುವ "ನುಬಿಯಾ Z11 ಮಿನಿ ಎಸ್‌" ಸ್ಮಾರ್ಟ್‌ಫೋನ್ ಪ್ರಸ್ತುತ ತನ್ನ ಸರಣಿ ಮೊಬೈಲ್‌ಗಳಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಅತ್ಯುತ್ತಮ ಮೊಬೈಲ್ ಎನ್ನಬಹುದು.

ಕ್ರೆಡಿಟ್‌ಕಾರ್ಡ್‌ ಸೈಜ್ ಮೊಬೈಲ್‌ ಬೆಲೆ ಕೇವಲ 4000!..ಆದ್ರೆ 10 ದಿನ ಚಾರ್ಜ್ ನೀಡುತ್ತೆ!!
ಹಾಗಾದರೆ "ನುಬಿಯಾ Z11 ಮಿನಿ ಎಸ್‌" ಸ್ಮಾರ್ಟ್‌ಫೋನ್ ಯಾವೆಲ್ಲಾ ಫಿಚರ್‌ಗಳನ್ನು ಹೊಂದಿದೆ, ಈ ಸ್ಮಾರ್ಟ್‌ಫೊನ್ ಯಾಕೆ ವಿಶೇಷ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ಡಿಸ್‌ಪ್ಲೇ ಹೇಗಿದೆ?

5.20 ಇಂಚ್ ಡಿಸ್‌ಪ್ಲೇ ಹೊಂದಿರುವ "ನುಬಿಯಾ Z11 ಮಿನಿ" ಸ್ಮಾರ್ಟ್‌ಫೊನ್ 1080*1920 ಪಿಕ್ಸೆಲ್ ರೆಸ್ಯೂಲೇಶನ್ ಹೊಂದಿದೆ. 5.2 ಇಂಚ್‌ ಡಿಸ್‌ಪ್ಲೇ ಸ್ಮಾರ್ಟ್‌ಫೋನ್‌ ಪ್ರಿಯರನ್ನು ಸೆಳೆಯುತ್ತದೆ.

4GB RAM ಮತ್ತು 32GB ROM

ಪ್ರಸ್ತುತ ಸರಣಿಯ ಸ್ಮಾರ್ಟ್‌ಫೋನ್‌ಗಳಲ್ಲಿಯೇ ಅತ್ಯುತ್ತ ಎನ್ನುವ 4GB RAM ಮತ್ತು 32GB ಆಂತರಿಕ ಮೆಮೊರಿಯನ್ನು ನುಬಿಯಾ Z11 ಮಿನಿ ಫೋನ್ ಹೊಂದಿದೆ. ಸ್ಮಾರ್ಟ್‌ಫೋನ್ ಬಳಕೆಗೆ ಅತ್ಯುತ್ತಮ ಅನುಭವ ಸಿಗಲಿದೆ.

23 ಮತ್ತು 13 ಮೆಗಾಪಿಕ್ಸೆಲ್ ಕ್ಯಾಮೆರಾ!!

ನುಬಿಯಾ Z11 ಮಿನಿ ಸ್ಮಾರ್ಟ್‌ಫೋನ್‌ ಬೆಲೆಯಲ್ಲಿ ಬೇರಾವ ಕಂಪೆನಿಗಳ ಸ್ಮಾರ್ಟ್‌ಪೊನ್‌ಗಳು ಇಷ್ಟು ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿರಲು ಸಾಧ್ಯವೆ ಇಲ್ಲ. ಕ್ಯಾಮೆರಾ ಪ್ರಿಯರಿಗೂ ಮತ್ತು ಸೆಲ್ಫಿ ಪ್ರಿಯರಿಗೂ ಇಷ್ಟವಾಗುವಂತೆ 13 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನುಬಿಯಾ ಹೊಂದಿದೆ.

ಬ್ಯಾಟರಿ ಬ್ಯಾಕಪ್ ಇದೆಯಾ?

ನುಬಿಯಾ Z11 ಮಿನಿ ಸ್ಮಾರ್ಟ್‌ಫೋನ್‌ಲ್ಲಿ ಕಾಣಬಹುದಾದ ಚಿಕ್ಕ ಕೊರೆತೆ ಎಂದರೆ ಬ್ಯಾಟರಿ. ಹೆಚ್ಚಿನದು ಅಲ್ಲ ಎಂದರು 3000Mah ಶಕ್ತಿಯನ್ನು ಸ್ಮಾರ್ಟ್‌ಫೋನ್‌ ಹೊಂದಿದ್ದು, 2 ದಿನಗಳ ಬ್ಯಾಟರಿ ಬ್ಯಾಕಪ್‌ ಕೊಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ.

ನುಬಿಯಾ Z11 ಮಿನಿ ಬೆಲೆ ಎಷ್ಟು?

ಇಷ್ಟೆಲ್ಲಾ ಹೈ ಎಂಡ್ ಫಿಚರ್‌ ಹೊಂದಿರುವ ನುಬಿಯಾ Z11 ಮಿನಿ ಸ್ಮಾರ್ಟ್‌ಪೋನ್‌ ಬೆಲೆ ಮಾರುಕಟ್ಟೆಯಲ್ಲಿ 11,999 ರೂಪಾಯಿಗಳಿಂದ 12,999 ರೂಗಳವರೆಗೂ ಇದೆ. ಹೆಚ್ಚು ಜಾಹಿರಾತು ನೀಡದಿರುವುದರಿಂದ ಸ್ಮಾರ್ಟ್‌ಫೊನ್‌ ಬೆಲೆ ಕಡಿಮೆ ಎನ್ನಬಹುದು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿEnglish summary
TE Nubia Z11 mini S packs a 23-megapixel primary camera on the rear and a 13-megapixel front shooter for selfies. to know more visit to kannada.gizbot.com
Please Wait while comments are loading...
Opinion Poll

Social Counting