ಐಫೋನ್ ಗಾಗಿ ವಿಕಿರಣ ನಿಯಂತ್ರಿಸುವ ಹೆಡ್ ಸೆಟ್

|
ಐಫೋನ್ ಗಾಗಿ ವಿಕಿರಣ ನಿಯಂತ್ರಿಸುವ ಹೆಡ್ ಸೆಟ್

ಇಂದು ಮೊಬೈಲ್ ಫೋನ್ ಬಳಕೆ ನಮ್ಮ ಬದುಕಿನ ಒಂದು ಅಂಗವಾಗಿ ಬಿಟ್ಟಿದೆ. ಮೊಬೈಲ್ ಫೋನ್ ನಲ್ಲಿರುವ ವಿಕಿರಣಗಳು ದೇಹದ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತದೆ ಎಂದು ಗೊತ್ತಿದ್ದರೂ ಮೊಬೈಲ್ ಬಳಸುತ್ತೇವೆ. ಮೊಬೈಲ್ ನ ನೇರ ಬಳಕೆ ತಪ್ಪಿಸಲು ಬ್ಲೂಟೂಥ್ ಹೆಡ್ ಫೋನ್ ಗಳು ಬಂದವು, ಆದರೂ ಇದರಲ್ಲಿ ಸಹ ವಿಕಿರಣ ಸ್ವಲ್ಪ ಮಟ್ಟಿಗೆ ಹಾನಿಯನ್ನು ತರುವುದಾದರೂ ಮೊಬೈಲ್ ನ ನೇರ ಬಳಕೆಯಷ್ಟು ಹಾನಿ ಆಗುವುದಿಲ್ಲ.

ಆದರೆ ವೈರ್ ಹೆಡ್ ಸೆಟ್ ಬಳಸಿದರೆ ಅಷ್ಟೇನು ಕಿವಿಗೆ ಹಾನಿಯಾಗುವುದಿಲ್ಲ, ಅದರಲ್ಲೂ ರೆಟ್ರೊ ರೀತಿಯ ಹೆಡ್ ಬಳಸುವವರಿಗೆ ಐಮೊಬಿಫೋನ್ಸ್ ಹೆಡ್ ಸೆಟ್ ಉತ್ತಮವಾದ ಆಯ್ಕೆ ಆಗಿದೆ.ಈ ಹೆಡ್ ಸೆಟ್ ಈ ಕೆಳಗಿನ ಪ್ರಮುಖ ಲಕ್ಷಣಗಳನ್ನು ಹೊಂದಿದೆ.

* ನೋಡಲು ಆಕರ್ಷಕವಾಗಿದೆ

* ರೆಟ್ರೊ ಲುಕ್

* ಸ್ಪಷ್ಟವಾದ ಶಬ್ದ

* ಮುಖ್ಯವಾಗಿ ಸೆಲ್ ಫೋನ್ ವಿಕಿರಣವನ್ನು ತಡೆಯುತ್ತದೆ.

ಈ ಹೆಡ್ ಸೆಟ್ ವಿನ್ಯಾಸದಲ್ಲಿ ಲ್ಯಾಂಡ್ ಲೈನ್ ಫೋನ್ ರಿಸೀವರ್ ತರ ವಿನ್ಯಾಸವನ್ನು ಹೊಂದಿದ್ದು, ಇದನ್ನು ಲ್ಯಾಂಡ್ ಲೈನ್ ನಲ್ಲಿ ಸಹ ಬಳಸಬಹುದಾದ ಸಂಪರ್ಕ ವೈರ್ ಇದೆ. ಈ ಹೆಡ್ ಸೆಟ್ 98% ವಿಕಿರಣವನ್ನು ತಡೆಗಟ್ಟಿ ಗುಣಮಟ್ಟದ ಶಬ್ದವನ್ನು ನೀಡುತ್ತದೆ. ಈ ಹೆಡ್ ಬಳಸಿದರೆ ಜನರು ಹಾಸ್ಯ ಮಾಡಬಹುದು, ಆದರೆ ಇದನ್ನು ಬಳಸಿದರೆ ಮೊಬೈಲ್ ನಿಂದ ದೇಹದ ಮೇಲೆ ಬೀರುವ ಪರಿಣಾಮವನ್ನು ತಪ್ಪಿಸಬಹುದಾಗಿದೆ.

ಈ ಹೆಡ್ ಸೆಟ್ ಮಾರುಕಟ್ಟೆಯಲ್ಲಿ ಲಭ್ಯವಿದ್ದು ಇದರ ಬೆಲೆರು. 1,200 ಆಗಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X