2014 ವೇಳೆಗೆ ಪ್ರತಿ ಹಳ್ಳಿಗೂ ಇಂಟರ್ನೆಟ್ :BSNL

By Super
|
2014 ವೇಳೆಗೆ ಪ್ರತಿ ಹಳ್ಳಿಗೂ ಇಂಟರ್ನೆಟ್ :BSNL

ಕೇಂದ್ರ ಸರ್ಕಾರದ ಒಡೆತನದಲ್ಲಿರುವ ಭಾರತ ಸಂಚಾರ್ ನಿಗಮ್ ಲಿಮಿಟೆಡ್ (BSNL ) , ತನ್ನ ಬಳಿ ಇರುವ ಮೀಸಲು ನಗದಿನಿಂದ 20 ಸಾವಿರ ಕೋಟಿಯನ್ನು ಮಹತ್ವಾಕಾಂಕ್ಷಿ ಯೋಜನೆಯೊಂದಕ್ಕೆ ಖರ್ಚು ಮಾಡಲು ಉದ್ದೇಶಿಸಿದೆ.

ಕೇಂದ್ರ ಸರ್ಕಾರದ ಪ್ರಮುಖ ಯೋಜನೆಗಳಲ್ಲಿ ಒಂದಾದ ಇ-ಆಡಳಿತವನ್ನು ಭಾರತದ ಪ್ರತಿ ಹಳ್ಳಿಗೂ ತಲುಪಿಸುವ ಉದ್ದೇಶವನ್ನು ಕಾರ್ಯರೂಪಕ್ಕೆ ತರಲು BSNL ಇನ್ನೆರಡು ವರ್ಷದಲ್ಲಿ ದೇಶದ ಎಲ್ಲ ಹಳ್ಳಿಗೂ ದೂರವಾಣಿ ಸಂಪರ್ಕದ ಜೊತೆಗೆ ಅಂತರ್ಜಾಲದ ಸೇವೆ ಒದಗಿಸಲು "ನ್ಯಾಷನಲ್ ಆಪ್ಟಿಕಲ್ ಫೈಬರ್ ನೆಟ್ವರ್ಕ್" (NOFN) ಹೆಸರಿನ ಈ ಯೋಜನೆಗೆ ಚಾಲನೆ ಕೊಟ್ಟಿದೆ.

ಅದರ ಪ್ರಕಾರ NOFN ಯೋಜನೆಯಿಂದಾಗಿ ಪ್ರತಿ ಹಳ್ಳಿಗೂ ಇ-ಆಡಳಿತ, ಬ್ಯಾಂಕಿಂಗ್, ಆರೋಗ್ಯ ಹಾಗು ಇತರ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಹಾಯಕವಾಗಲಿದೆ. ಭಾರತದಲ್ಲಿ ಕೇವಲ 37 % ನಷ್ಟು ಹಳ್ಳಿಗಳಲ್ಲಿ ಮಾತ್ರ ದೂರವಾಣಿ ಸಂಪರ್ಕವಿದ್ದು BSNL ಯೋಜನೆ ತುಂಬಾ ಉಪಯುಕ್ತವಾಗಲಿದೆ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X