ಆಂಡ್ರಾಯ್ಡ್ ಅಪ್ಲಿಕೇಶನ್ ಐಫೋನ್‌ಗಿಂತಲೂ ಹಿತಕಾರಿ

By Shwetha
|

ಐಫೋನ್‌ಗಳಲ್ಲೂ ನಾವು ಕಂಡರಿಯದ ಅತಿ ಹೆಚ್ಚಿನ ವಿಶೇಷತೆಗಳನ್ನು ಸ್ವಾತಂತ್ರ್ಯವನ್ನು ಆಂಡ್ರಾಯ್ಡ್ ಪಡೆದುಕೊಂಡಿದೆ. ಇಂದು ಹೆಚ್ಚಿನ ಅಪ್ಲಿಕೇಶನ್‌ಗಳನ್ನು ಐಫೋನ್ ಮತ್ತು ಆಂಡ್ರಾಯ್ಡ್‌ನಲ್ಲಿ ನಮಗೆ ಕಾಣಬಹುದು. ಆದರೆ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಮಾಡುವ ಮೋಡಿ ಅದು ಕೇವಲ ಆಂಡ್ರಾಯ್ಡ್ ಫೋನ್‌ಗಷ್ಟೇ ಸೀಮಿತವಾಗಿದೆ. ಐಫೋನ್‌ಗೆ ಈ ಎಲ್ಲಾ ಕಮಾಲನ್ನು ಮಾಡಲಾಗದು ಎಂಬುದು ನಿಮಗೆ ಗೊತ್ತೇ?

ಇದನ್ನೂ ಓದಿ: ನೀವು ಕಂಡರಿಯದ ಲಾಲಿಪಪ್ ಮೋಡಿ ಇದು

ಆ ವಿಶೇಷತೆಗಳನ್ನೇ ಇಂದಿನ ಲೇಖನದಲ್ಲಿ ನಾವು ನಿಮಗೆ ತೋರಿಸಲಿದ್ದೇವೆ. ಐಫೋನ್‌ ಅಪ್ಲಿಕೇಶನ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್‌ಗಳಿಗೆ ಅಜಗಜಾಂತರ ವ್ಯತ್ಯಾಸಗಳಿದ್ದು ಆಂಡ್ರಾಯ್ಡ್ ಅಪ್ಲಿಕೇಶನ್ ಐಫೋನ್‌ ಅಪ್ಲಿಕೇಶನ್‌ಗಳಿಗಿಂತಲೂ ಬಳಸಲು ಸರಳ ಅತ್ಯುತ್ತಮ ಹೇಗೆ ಎಂಬುದನ್ನು ಕಂಡುಕೊಳ್ಳೋಣ.

#1

#1

ಮೂಜೈ ನಿಮ್ಮ ಆಂಡ್ರಾಯ್ಡ್ ಫೋನ್‌ನ ಮುಖ್ಯ ಪರದೆಯನ್ನು "ಲಿವಿಂಗ್ ಮ್ಯೂಸಿಯಮ್" ನಂತೆ ಮಾರ್ಪಡಿಸುತ್ತದೆ. ಇದು ಲೈವ್ ವಾಲ್ ಪೇಪರ್ ಅಪ್ಲಿಕೇಶನ್ ಆಗಿದ್ದು ಇದು ನಿಮ್ಮ ಮುಖ್ಯ ಪರದೆಯನ್ನು ಪ್ರತೀ ದಿನ ವಿಭಿನ್ನ ಪ್ರಸಿದ್ಧ ಕಲಾಕೃತಿಯನ್ನಾಗಿ ರೂಪುಗೊಳಿಸುತ್ತದೆ.

#2

#2

ಇದೊಂದು ಮೆಸೇಜಿಂಗ್ ಅಪ್ಲಿಕೇಶನ್ ಆಗಿದ್ದು ನೀವು ಇನ್ನೊಂದು ಅಪ್ಲಿಕೇಶನ್ ಬಳಸುತ್ತಿರುವಾಗ ಇಲ್ಲವೇ ಚಲನ ಚಿತ್ರವನ್ನು ವೀಕ್ಷಿಸುತ್ತಿರುವಾಗ ನಿಮ್ಮ ಸಂವಾದಗಳನ್ನು ಮುಂದುವರಿಸಲು ಅನುಮತಿಸುತ್ತದೆ. ನೀವು ಮಾಡುತ್ತಿರುವ ಕೆಲಸವನ್ನು ಅನುಸರಿಸಿ ನಿಮ್ಮ ಮೆಸೇಜನ್ನು ಈ ಅಪ್ಲಿಕೇಶನ್ ಬಳಸಿ ಕಿರಿದುಗೊಳಿಸಬಹುದಾಗಿದೆ.

#3

#3

ನೋಟ್ ಟೇಕಿಂಗ್ ಹಾಗೂ ರಿಮೈಂಡರ್ ಅಪ್ಲಿಕೇಶನ್ ಆಗಿ ಗೂಗಲ್ ಕೀಪ್ ಕಾರ್ಯನಿರ್ವಹಿಸುತ್ತದೆ. ನಿಮ್ಮ ಟಿಪ್ಪಣಿಗಳಿಗೆ ಬಣ್ಣಗಳನ್ನು ತುಂಬಿ ಅಪ್ಲಿಕೇಶನ್‌ನೊಳಗೆ ಚಿತ್ರಗಳನ್ನು ತೆಗೆಯುವ ಸವಲತ್ತನ್ನು ಗೂಗಲ್ ಕೀಪ್ ನಿಮಗೆ ಒದಗಿಸುತ್ತದೆ. ವಾಯ್ಸ್ ಮೆಮೋಗಳನ್ನು ನಿಮಗೆ ದಾಖಲಿಸಬಹುದಾಗಿದೆ.

#4

#4

ನೀವು ಎದುರು ನೋಡುತ್ತಿರುವ ಅಪ್ಲಿಕೇಶನ್‌ಗಳ ಪುಟಗಳ ಹುಡುಕುವಿಕೆಯ ಕಷ್ಟವನ್ನು ಕವರ್ ನಿಮಗೆ ನಿವಾರಿಸುತ್ತದೆ. ನಿಮ್ಮ ಲಾಕ್ ಸ್ಕ್ರೀನ್‌ನಲ್ಲಿ ನೀವು ಹೆಚ್ಚು ಬಳಸುವ ಅಪ್ಲಿಕೇಶನ್‌ಗಳನ್ನು ನಿಮಗೆ ಒದಗಿಸಿಕೊಡುವ ಕೆಲಸವನ್ನು ಕವರ್ ಮಾಡುತ್ತದೆ.

#5

#5

ಅಧಿಸೂಚನೆಗಳಿಗೆ ನಿಮ್ಮ ಫೋನ್‌ ಎಲ್‌ಇಡಿ ಲೈಟ್ ಅನ್ನು ಹೊಂದಿದ್ದಲ್ಲಿ, ಲೈಟ್ ಫ್ಲೊ ನಿಮಗೆ ಸಂದೇಶ ಬಂದಾಗ, ಇಮೇಲ್ ಅಥವಾ ಫೋನ್‌ ಕರೆಗಳು ಬಂದಾಗ ಕಸ್ಟಮ್ ಬಣ್ಣಗಳಲ್ಲಿ ಈ ಸೂಚನೆಗಳನ್ನು ನಿಮಗೆ ನೀಡುತ್ತದೆ. ನಿಮ್ಮ ಫೋನ್ ಬ್ಯಾಟರಿ ಸಮಸ್ಯೆಯನ್ನು ಹೊಂದಿರುವಾಗ ಕೂಡ ಬಣ್ಣಗಳ ಆಟ ನಿಮ್ಮ ನೆರವಿಗೆ ಬರುತ್ತದೆ.

#6

#6

ನಿಮ್ಮ ಕಳೆದು ಹೋದ ಡಿವೈಸ್‌ ಅನ್ನು ಹುಡುಕುವಲ್ಲಿ ಈ ಅಪ್ಲಿಕೇಶನ್ ನಿಜಕ್ಕೂ ಕಮಾಲನ್ನೇ ಮಾಡಲಿದೆ. ವೆಬ್ ಸೈಟ್ ಅಥವಾ ಸಂದೇಶವನ್ನು ಬಳಸಿಕೊಂಡು, ಸೈಲೆಂಟ್ ಮೋಡ್‌ನಲ್ಲಿದ್ದಾಗ ಧ್ವನಿ ಪ್ರಯೋಗಿಸಿ, ಕೋಡ್ ಬಳಸಿ ಡಿವೈಸ್ ಲಾಕ್ ಮಾಡುವುದು ಹೀಗೆ ನಿಮ್ಮ ಫೋನ್‌ನ ನಿಯಂತ್ರಣವನ್ನು ನಿಮಗೆ ನಡೆಸಬಹುದಾಗಿದೆ. ಸೆರೆಬ್ರೆಸ್ ಅಪ್ಲಿಕೇಶನ್ ಬಳಸಿಕೊಂಡು ಕಳುಹಿಸಿದ ಮತ್ತು ಸ್ವೀಕರಿಸಿ ಕರೆಗಳನ್ನು ನಿಮಗೆ ನೋಡಬಹುದಾಗಿದೆ.

#7

#7

ನಿಮ್ಮ ಫೋನ್‌ನ ಬ್ರೈಟ್‌ನೆಸ್ ಸೆಟ್ಟಿಂಗ್ ಅನ್ನು ಇನ್ನಷ್ಟು ಉತ್ತಮಗೊಳಿಸಲು ಲಕ್ಸ್ ನಿಮ್ಮನ್ನು ಅನುಮತಿಸುತ್ತದೆ. ರಾತ್ರಿಯಲ್ಲಿ ಸೊನ್ನೆಗಿಂತಲೂ ಕನಿಷ್ಟಗೊಳಿಸುವ ಮೂಲಕ ಪರದೆಯ ಬ್ರೈಟ್‌ನೆಸ್ ಅನ್ನು ನಿಮಗೆ ಕಡಿಮೆ ಮಾಡಿಕೊಳ್ಳಬಹುದು. ಸೂರ್ಯಾಸ್ತದಲ್ಲಿ ಸ್ವಯಂಚಾಲಿತವಾಗಿ ನೈಟ್ ಮೋಡ್ ಆನ್ ಆಗುತ್ತದೆ.

#8

#8

ನೀವು ಎಲ್ಲಿದ್ದೀರಿ, ಯಾರು ಕರೆ ಮಾಡಿದ್ದಾರೆ, ಬ್ಯಾಟರಿ ಬಾಳ್ವಿಕೆ ಹೇಗಿದೆ ಎಂಬುದನ್ನು ಆಧರಿಸಿ ನಿಮ್ಮ ಫೋನ್ ವ್ಯವಹರಿಸುತ್ತದೆ. ನಿಮ್ಮ ಫೋನ್‌ನ ಬ್ಯಾಟರಿ 20% ಆಗಿದೆ ಎಂದಾದಲ್ಲಿ ನಿಮ್ಮ ಫೋನ್‌ನ ಬ್ರೈಟ್‌ನೆಸ್ ಅನ್ನು ಈ ಅಪ್ಲಿಕೇಶನ್ ಕಡಿಮೆ ಗೊಳಿಸಿ ಫೋನ್‌ನ ಬ್ಯಾಟರಿಯನ್ನು ಉಳಿಸುತ್ತದೆ.

#9

#9

ಗೂಗಲ್ ರಚಿಸಿರುವ ಸ್ಕೈ ಮ್ಯಾಪ್ ಬಾಹ್ಯಾಕಾಶದ ಅರಿವನ್ನು ನಿಮಗೆ ಉಂಟುಮಾಡುತ್ತದೆ. ನಿಮ್ಮ ಫೋನ್ ಅನ್ನು ಆಗಸದ ಕಡೆಗೆ ಮುಖ ಮಾಡಿ ನೀವು ಯಾವ ನಕ್ಷತ್ರ ಪುಂಜದತ್ತ ನೋಡುತ್ತಿದ್ದೀರಿ ಎಂಬುದನ್ನು ಈ ಅಪ್ಲಿಕೇಶನ್ ಬಳಸಿ ಅರಿಯಬಹುದಾಗಿದೆ.

#10

#10

ನಿಮ್ಮ ಸಮಯವನ್ನು ಉಳಿಸುವ ಅಪ್ಲಿಕೇಶನ್ ಇದಾಗಿದೆ. ಆನ್‌ಲೈನ್‌ನಲ್ಲಿ ಲಿಂಕ್ ಅನ್ನು ನೀವು ಕ್ಲಿಕ್ ಮಾಡಿದಾಗ, ಅಪ್ಲಿಕೇಶನ್ ಹಿನ್ನಲೆಯಲ್ಲಿ ಇದನ್ನು ಲೋಡ್ ಮಾಡುತ್ತದೆ, ಮತ್ತು ಬ್ರೌಸಿಂಗ್ ಮಾಡಲು ನಿಮ್ಮನ್ನು ಅನುಮತಿಸುತ್ತದೆ. ಇದು ಲೋಡ್ ಆಗುವುದು ಪೂರ್ಣಗೊಂಡ ನಂತರ, ಲಿಂಕ್ ಬಬ್ಬಲ್ ಲಿಂಕ್ ಅನ್ನು ಸ್ಪರ್ಶಿಸಿ ಮತ್ತು ಪೂರ್ಣವಾಗಿ ಲೋಡ್ ಆಗಿರುವ ಪುಟ ನಿಮಗೆ ದೊರೆತಿರುತ್ತದೆ.

Best Mobiles in India

English summary
This article tells about 10 Android Apps To Make IPhone Owners Jealous.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X