ಐಫೋನ್ ಗೆಲುವಿಗೆ ಬೆನ್ನೆಲುಬಾಗಿರುವ ಟಾಪ್ ಅಂಶಗಳು

By Shwetha
|

ಮುಂದಿನ ಐಫೋನ್ ಬರಲು ಬಹು ಹೆಚ್ಚು ಕಾಲಾವಕಾಶ ಇದೆ ಆದರೂ ಮುಂದಿನ ಐಫೋನ್‌ನಲ್ಲಿ ಏನೆಲ್ಲಾ ವೈಶಿಷ್ಟ್ಯಗಳು ಇರಬಹುದು ಎಂಬ ಕಾತರ ನಿಮ್ಮಲ್ಲಿದೆಯೇ? ಆಪಲ್ ತನ್ನ ಇತ್ತೀಚಿನವರೆಗಿನ ಲಾಂಚ್‌ಗಳಲ್ಲಿ ಏನಾದರೂ ವೈಶಿಷ್ಟ್ಯತೆಗಳನ್ನು ಬಳಕೆದಾರರಿಗೆ ನೀಡುತ್ತಿತ್ತು. ಹೆಲ್ತ್ ಅಪ್ಲಿಕೇಶನ್, ಅತ್ಯುತ್ತಮ ಕ್ಯಾಮೆರಾ, ಬಳಕೆದಾರ ಸ್ನೇಹಿ ಓಎಸ್‌ಗಳು ಹೀಗೆ ಕಾತರಮಯ ವಿಶೇಷತೆಗಳಿಂದ ಆಪಲ್ ತನ್ನ ಬಳಕೆದಾರರನ್ನು ಸಮೀಪಿಸುತ್ತಿದೆ.

ಓದಿರಿ: ಟಾಪ್ 10 ಉಚಿತ ಅಪ್ಲಿಕೇಶನ್‌ಗಳು: ಆಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ

ಆಪಲ್ ತನ್ನ ಮುಂದಿನ ಐಫೋನ್ ಅನ್ನು ಜಾರಿಗೆ ತರುವ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿದ್ದು ಅದು ಏನೆಲ್ಲಾ ವಿಶೇಷತೆಗಳನ್ನು ಒಳಗೊಂಡಿದೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ನೋಡೋಣ.

ನ್ಯೂ ರೋಸ್ ಗೋಲ್ಡ್ ಎಡಿಶನ್

ನ್ಯೂ ರೋಸ್ ಗೋಲ್ಡ್ ಎಡಿಶನ್

ಕೇಸಿಂಗ್ ಬಣ್ಣದಲ್ಲಿ ಚಿನ್ನದ ಬಣ್ಣವನ್ನು ಆಪಲ್ ಸೇರಿಸಲಿದ್ದು, ರೋಸ್ ಗೋಲ್ಡ್ ಆಪಲ್ ವಾಚ್‌ನಂತೆಯೇ ಈ ಕೇಸ್ ಬರಲಿದೆ.

ಪಿಕ್ಸೆಲ್ ಅಪ್‌ಗ್ರೇಡ್

ಪಿಕ್ಸೆಲ್ ಅಪ್‌ಗ್ರೇಡ್

ಹೆಚ್ಚು ಮೆಗಾಪಿಕ್ಸೆಲ್ ಇರುವ ಅತ್ಯುನ್ನತ ಕ್ಯಾಮೆರಾವನ್ನು ಆಪಲ್ ತನ್ನ ಐಫೋನ್‌ನಲ್ಲಿ ಅಳವಡಿಸಲಿದೆ.

ಹೊಸ ಮೈಕ್ರೋಫೋನ್

ಹೊಸ ಮೈಕ್ರೋಫೋನ್

ಉತ್ತಮ ಧ್ವನಿ ಗುಣಮಟ್ಟಕ್ಕಾಗಿ ಐಫೋನ್ ಸ್ಪೀಕರ್ ಸಮೀಪದಲ್ಲಿ ಹೊಸ ಮೈಕ್ರೋಫೋನ್ ಅನ್ನು ಆಪಲ್ ಅಳವಡಿಸಲಿದೆ.

ಹೊಸ ಪ್ರೊಸೆಸರ್, RAM

ಹೊಸ ಪ್ರೊಸೆಸರ್, RAM

2 ಜಿಬಿ RAM ನೊಂದಿಗೆ ಅಪ್‌ಗ್ರೇಡ್ ಮಾಡಲಾದ ಆಪಲ್ ಎ9 ಪ್ರೊಸೆಸರ್ ಅನ್ನು ಹೊಸ ಐಫೋನ್ ಒಳಗೊಳ್ಳಲಿದೆ.

ಹೊಸ ಮೆಟೀರಿಯಲ್, ವಿನ್ಯಾಸ ಬದಲಾವಣೆಗಳು

ಹೊಸ ಮೆಟೀರಿಯಲ್, ವಿನ್ಯಾಸ ಬದಲಾವಣೆಗಳು

ವಿವಿಧ ಕೇಸಿಂಗ್ ಸಾಮಾಗ್ರಗಳನ್ನು ಆಪಲ್ ಬಳಸಲಿದ್ದು, ಫೋನ್‌ಗೆ ಹೆಚ್ಚಿನ ಬಲವನ್ನೊದಗಿಸಲು ಆಂತರಿಕ ಮೆಕ್ಯಾನಿಕಲ್ ವಿನ್ಯಾಸ ಬದಲಾವಣೆಗಳನ್ನು ಆಪಲ್ ಮಾಡಲಿದೆ.

ಸಫಾಯರ್ ಡಿಸ್‌ಪ್ಲೇ

ಸಫಾಯರ್ ಡಿಸ್‌ಪ್ಲೇ

5.5 ಇಂಚಿನ ಸ್ಕ್ರೀನ್‌ನೊಂದಿಗೆ ಸಫಾಯರ್ ಡಿಸ್‌ಪ್ಲೇಯನ್ನು ಫೋನ್ ಹೊಂದಲಿದ್ದು ಸಮಸ್ಯೆಗಳನ್ನು ನಿವಾರಿಸುವ ಸಾಮರ್ಥ್ಯವನ್ನು ಪಡೆದುಕೊಳ್ಳಲಿದೆ.

ಗೆಸ್ಚರ್ ಕಂಟ್ರೋಲ್

ಗೆಸ್ಚರ್ ಕಂಟ್ರೋಲ್

ಮುಂಬರಲಿರುವ ಐಫೋನ್ ಗೆಸ್ಚರ್ ಕಂಟ್ರೋಲ್ ಅನ್ನು ಹೊಂದಲಿದೆ. ಐಓಎಸ್ 7 ಮತ್ತು 8 ಸೀಮಿತ ಪರಿಧಿಯವರೆಗಿನ ಫೀಚರ್ ಗೆಸ್ಚರ್ ಕಂಟ್ರೋಲ್ ಅನ್ನು ಪಡೆದುಕೊಂಡಿದ್ದು ಮುಂದಿನ ಐಓಎಸ್ ಆವೃತ್ತಿ ಹೆಚ್ಚಿನ ಗೆಸ್ಚರ್ ಕಂಟ್ರೋಲ್ ಫೀಚರ್ ಅನ್ನು ಹೊಂದಲಿದೆ.

ಫೋರ್ಸ್ ಟಚ್

ಫೋರ್ಸ್ ಟಚ್

ಫೋರ್ಸ್ ಟಚ್ ವಿಶೇಷತೆಯನ್ನು ಐಫೋನ್ ಹೊಂದಲಿದ್ದು, ಆಪಲ್ ವಾಚ್ ಮತ್ತು 12 ಇಂಚಿನ ಮ್ಯಾಕ್‌ಬುಕ್‌ನಲ್ಲಿ ಈ ಫೋರ್ಸ್ ಟಚ್ ವಿಶೇಷತೆ ಇದೆ.

ಟಚ್ ಐಡಿ ಸುಧಾರಣೆಗಳು

ಟಚ್ ಐಡಿ ಸುಧಾರಣೆಗಳು

ಆಪಲ್ ಪೇನಲ್ಲಿ ಇನ್ನಷ್ಟು ಸುಧಾರಣೆಗಳನ್ನು ತರುವುದಕ್ಕಾಗಿ ಟಚ್ ಐಡಿನಲ್ಲಿ ಕೆಲವೊಂದು ವೈಶಿಷ್ಟ್ಯತೆಗಳನ್ನು ಕಂಪೆನಿ ಮಾಡಲಿದೆ.

ಸಣ್ಣ ಪರದೆಯ ಐಫೋನ್ ಅಲ್ಲ

ಸಣ್ಣ ಪರದೆಯ ಐಫೋನ್ ಅಲ್ಲ

4.7 ಇಂಚು ಮತ್ತು 5.5 ಇಂಚಿನ ಐಫೋನ್ ಮಾಡೆಲ್‌ಗಳು ಒಂದೇ ಪರದೆ ರೆಸಲ್ಯೂಶನ್ ಅನ್ನು ಹೊಂದಿತ್ತು. ಆದರೆ ಮುಂಬರಲಿರುವ ಐಫೋನ್‌ನಲ್ಲಿ ಇನ್ನಷ್ಟು ಬದಲಾವಣೆಗಳನ್ನು ನಮಗೆ ಕಾಣಬಹುದಾಗಿದೆ.

Best Mobiles in India

English summary
The next iPhone’s unveiling is more than a quarter away but that doesn't stop the rumour mill from churning out new information related to Apple’s upcoming flagship.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X