ವಾಟ್ಸಾಪ್ ವರ್ಸಸ್ ವಿಚಾಟ್: ಗೆಲುವು ಯಾರಿಗೆ?

By Shwetha
|

ಇಂದು ಸಾಮಾಜಿಕ ಜಾಲತಾಣದಲ್ಲಿ ವಾಟ್ಸಾಪ್ ಜನಪ್ರಿಯ ತುತ್ತತುದಿಗೇರಿರುವುದು ನಿಮಗೆ ತಿಳಿದೇ ಇದೆ. ಆದರೆ ಈಗ ಇದೇ ಸಾಲಿಗೆ ಇನ್ನೊಂದು ಅಪ್ಲಿಕೇಶನ್ ಆದ ವಿಚಾಟ್ ಕೂಡ ಸೇರ್ಪಡೆಗೊಳ್ಳುತ್ತಿದ್ದು ಯುವಜನಾಂಗದ ಮೆಚ್ಚಿನ ಅಪ್ಲಿಕೇಶನ್ ಆಗಿ ಮಾರ್ಪಡುತ್ತಿದೆ. ಮೆಸೇಜಿಂಗ್ ಸೇವೆ ಮಾತ್ರವಲ್ಲದೆ ವೀಡಿಯೊ ಕಾಲಿಂಗ್ ವ್ಯವಸ್ಥೆಯನ್ನು ಇದು ಒಳಗೊಂಡಿದ್ದು ಯುವಜನಾಂಗ ಮೆಚ್ಚದೆ ಇರಲು ಕಾರಣವೇ ಇಲ್ಲ.

ಓದಿರಿ: ನೀವು ಅರಿಯದ ವಾಟ್ಸಾಪ್ ನಿಗೂಢ ರಹಸ್ಯಗಳು

ಇಂದಿನ ಲೇಖನದಲ್ಲಿ ಇದರ ಜನಪ್ರಿಯ ವಿಶೇಷತೆಗಳನ್ನು ಅರಿತುಕೊಂಡು ಅದನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸೋಣ.

ಗುಂಪು ಸಂದೇಶ

ಗುಂಪು ಸಂದೇಶ

ವಾಟ್ಸಾಪ್‌ನಂತೆಯೇ ಗುಂಪು ಸಂದೇಶ ಫೀಚರ್ ವಿಚಾಟ್‌ನಲ್ಲಿದೆ.

ವೀಡಿಯೊ ಕರೆ

ವೀಡಿಯೊ ಕರೆ

ವೀಡಿಯೊ ಕರೆ ವ್ಯವಸ್ಥೆಯನ್ನು ವಿಚಾಟ್‌ನಲ್ಲಿ ಕೂಡ ನೀವು ಬಳಸಬಹುದಾಗಿದೆ.

ಹೋಲ್ಡ್ ಟು ಟಾಕ್

ಹೋಲ್ಡ್ ಟು ಟಾಕ್

ವಿ ಚಾಟ್‌ನಲ್ಲಿರುವ ಹೋಲ್ಡ್ ಟು ಟಾಕ್ ಆಪ್ಶನ್ ಅನ್ನು ಬಳಸಿಕೊಂಡು, ನಿಮ್ಮೆಲ್ಲಾ ಸಂದೇಶವನ್ನು ದಾಖಲಿಸಬಹುದಾಗಿದೆ. ನಂತರ ಅದನ್ನು ಸಂಬಂಧಿಸಿದವರಿಗೆ ಕಳುಹಿಸಬಹುದಾಗಿದೆ.

ಎಮೋಟಿಕನ್ಸ್

ಎಮೋಟಿಕನ್ಸ್

ಎಮೋಟಿಕನ್ಸ್ ಯಾರಿಗೆ ಇಷ್ಟವಿಲ್ಲ ಹೇಳಿ! ನಿಮ್ಮ ಭಾವನೆಗಳನ್ನು ಪ್ರಕಟಿಸಲು ಇದೊಂದು ಸೂಕ್ತ ವೇದಿಕೆಯಾಗಿದೆ.

ಸೋಶಿಯಲ್ ನೆಟ್‌ವರ್ಕ್ ಇಂಟಿಗ್ರೇಶನ್

ಸೋಶಿಯಲ್ ನೆಟ್‌ವರ್ಕ್ ಇಂಟಿಗ್ರೇಶನ್

ವಾಟ್ಸಾಪ್‌ನಂತೆಯೇ ವಿಚಾಟ್ ಕೂಡ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್ ಆಗಿದೆ. ನಿಮ್ಮ ಫೇಸ್‌ಬುಕ್ ಪ್ರೊಫೈಲ್‌ಗೆ ವಿಚಾಟ್ ಅನ್ನು ಲಿಂಕ್ ಮಾಡಬಹುದಾಗಿದೆ.

ಮುಮೆಂಟ್ಸ್

ಮುಮೆಂಟ್ಸ್

ವಿಚಾಟ್‌ನಲ್ಲಿರುವ ವಿಶೇಷ ಫೀಚರ್ ಆದ ಮುಮೆಂಟ್ಸ್ ಅನ್ನು ಬಳಸಿಕೊಂಡು ಚಿತ್ರಗಳನ್ನು ನಿಮಗೆ ಹಂಚಿಕೊಳ್ಳಬಹುದಾಗಿದೆ.

ಲುಕ್ ಅರೌಂಡ್

ಲುಕ್ ಅರೌಂಡ್

ಲುಕ್ ಅರೌಂಡ್ ಫೀಚರ್ ಅನ್ನು ಬಳಸಿಕೊಂಡು, ನಿರ್ದಿಷ್ಟ ಪ್ರದೇಶದಲ್ಲಿರುವ ಸಕ್ರಿಯ ವಿಚಾಟ್ ಬಳಕೆದಾರರೊಂದಿಗೆ ಸಂಪರ್ಕವನ್ನು ಸಾಧಿಸಬಹುದಾಗಿದೆ.

ಡ್ರಿಫ್ಟ್ ಬಾಟಲ್

ಡ್ರಿಫ್ಟ್ ಬಾಟಲ್

ವಾಯ್ಸ್ ಅಥವಾ ಪಠ್ಯ ಸಂದೇಶದೊಂದಿಗೆ ಸಮುದ್ರಕ್ಕೆ ಬಾಟಲಿಯನ್ನು ಎಸೆಯಿರಿ. ಮತ್ತು ಜಗತ್ತಿನಲ್ಲಿ ಯಾವ ಮೂಲೆಯಲ್ಲಿಂದಾದರೂ ಯಾರಾದರೂ ಅದನ್ನು ಎತ್ತಿಕೊಳ್ಳುತ್ತಾರೆ.

ಶೇಕ್

ಶೇಕ್

ಇನ್ನೊಂದು ಮೋಜುದಾಯಕ ಫೀಚರ್ ಆಗಿದೆ ಶೇಕ್. ಈ ಫೀಚರ್ ಅನ್ನು ಸಕ್ರಿಯಗೊಳಿಸಿ ಬಳಕೆದಾರರು ಫೋನ್ ಅನ್ನು ಶೇಕ್ ಮಾಡಬಹುದಾಗಿದೆ. ಹೀಗೆಯೇ ಫೋನ್ ಶೇಕ್ ಮಾಡುತ್ತಿರುವ ಇನ್ನೊಬ್ಬ ವ್ಯಕ್ತಿಯೊಂದಿಗೆ ನಿಮ್ಮನ್ನು ಸಂಪರ್ಕಪಡಿಸುತ್ತದೆ.

ವೆಬ್ ವಿಚಾಟ್

ವೆಬ್ ವಿಚಾಟ್

ನಿಮ್ಮ ಪಿಸಿಯಲ್ಲಿ ವಿಚಾಟ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ ನಿಮ್ಮ ಪಿಸಿ ಮೂಲಕ ಲಾಗಿನ್ ಮಾಡಿ ಮತ್ತು ಸಂವಾದವನ್ನು ಮುಂದುವರಿಸಿ.

Best Mobiles in India

English summary
WeChat the new messenger app has features that outdoes most of the well-known messenger apps across all systems. Look at some of their best features.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X