ಆಂಡ್ರಾಯ್ಡ್ ಫೋನ್ ಬಳಕೆಗೆ ಸಹಕಾರಿ ಈ ಸಲಹೆಗಳು

By Shwetha
|

ಆಂಡ್ರಾಯ್ಡ್‌ಗೆ ನೀವು ಹೊಸಬರಾಗಿದ್ದಾಗ ಪರದೆಯಲ್ಲಿ ಬರುವ ಪ್ರತೀ ಲಭ್ಯವಿರುವ ಆಯ್ಕೆಯನ್ನು ಪ್ರಯತ್ನಿಸಲು ಉತ್ಸುಕರಾಗಿರುತ್ತೀರಾ, ಅಥವಾ ಸಿಸ್ಟಮ್‌ನಲ್ಲಿ ನೀವು ಯಾವಾಗಲೂ ಅನುಭವಿಸುವ ಸಮಸ್ಯೆಗಳು, ಕಿರಿಕಿರಿಗಳನ್ನು ನಿವಾರಿಸಿಕೊಳ್ಳುವ ಸಲಹೆಗಳು ಮತ್ತು ಸೂಚನೆಗಳನ್ನು ಪಡೆದುಕೊಳ್ಳಲು ಉತ್ಸುಕರಾಗಿರುತ್ತೀರಾ? ಇಂತಹುದ್ದೇ ಕೆಲವೊಂದು ಸರಳ ಸಲಹೆಗಳು ಮತ್ತು ತಂತ್ರಗಳೊಂದಿಗೆ ನಾವು ಬಂದಿದ್ದು ಇದು ನಿಮಗೆ ಸಹಕಾರಿಯಾಗಲಿರುವುದು ಅತ್ಯಗತ್ಯವಾಗಿದೆ.

ಇದನ್ನೂ ಓದಿ: ಬ್ಲ್ಯೂಟೂತ್ ಮತ್ತು ವೈಫೈ ನಡುವಿನ ಸರಳ ವ್ಯತ್ಯಾಸಗಳು

ಇಂದಿನ ಲೇಖನದಲ್ಲಿ ಟಾಪ್ ಹತ್ತು ಉಪಯೋಗಕಾರಿ ಸಲಹೆಗಳನ್ನು ನಾವು ನೀಡಿದ್ದು ನಿಮ್ಮ ಆಂಡ್ರಾಯ್ಡ್ ಡಿವೈಸ್‌ನ ಬಳಕೆಗೆ ಈ ಸಲಹೆಗಳು ಪ್ರಯೋಜನಕಾರಿಯಾಗಲಿವೆ. ಇದು ತುಂಬಾ ಸರಳ ಮತ್ತು ಪ್ರಯೋಜನಕಾರಿ ಸಲಹೆಯಾಗಿದ್ದು ಇದು ಅತ್ಯುತ್ತಮ ಎಂದೆನಿಸಲಿದೆ.

ಇದನ್ನೂ ಓದಿ: ಕಂಪ್ಯೂಟರ್‌ನ ವೇಗವನ್ನು ತ್ವರಿತಗೊಳಿಸಲು ಸಲಹೆಗಳು

#1

#1

ಕೆಲವೊಮ್ಮೆ ಅನಗತ್ಯವಾಗಿ ನಿಮ್ಮ ಡಿವೈಸ್‌ಗೆ ಲಗ್ಗೆ ಇಡುವ ಅಪ್ಲಿಕೇಶನ್ ಅಧಿಸೂಚನೆಗಳು ನಿಮ್ಮ ಬ್ಯಾಟರಿಯನ್ನು ಮುಗಿಸಿಬಿಡಬಹುದು. ಫೋನ್ ಸೆಟ್ಟಿಂಗ್‌ಗೆ ಹೋಗಿ ಇದನ್ನು ನಿಷ್ಕ್ರಿಯಗೊಳಿಸಬಹುದು.

#2

#2

ಯಾವಾಗಲಾದರೂ ಸಂಪರ್ಕದಲ್ಲಿರುವುದು ನಿಮಗೆ ಅನಗತ್ಯ ಎಂದೆನಿಸಿದಲ್ಲಿ, ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸುವುದು ಬ್ಯಾಟರಿ ವೇಗವಾಗಿ ಮುಗಿಯುವುದರಿಂದ ರಕ್ಷಿಸುತ್ತದೆ.
ಸೆಟ್ಟಿಂಗ್‌ಗಳು > ಡೇಟಾ ಬಳಕೆ
ಸೆಟ್ಟಿಂಗ್ ಅನ್ನು ಆಫ್ ಮತ್ತು ಆನ್ ಮಾಡಿಕೊಳ್ಳುವುದರಿಂದ ಮೊಬೈಲ್ ಡೇಟಾವನ್ನು ನಿಷ್ಕ್ರಿಯಗೊಳಿಸಿ.

#3

#3

  • ನಿಮ್ಮ ಮೊಬೈಲ್ ಡೇಟಾ ಮಿತಿಗಿಂತಲೂ ನೀವು ಹೆಚ್ಚಿನ ಡೇಟಾವನ್ನು ಬಳಸುತ್ತಿದ್ದೀರಾ ಎಂಬುದರ ಮೇಲೆ ಕಣ್ಣಿಡಲು ಸೆಟ್ಟಿಂಗ್ಸ್ > ಡೇಟಾ ಬಳಕೆ ಇಲ್ಲಿಗೆ ಹೋಗಿ.
  • ೨. ನಿಮ್ಮ ಮಾಸಿಕ ಡೇಟಾ ಮಿತಿಯನ್ನು ತಿಳಿಸುವ ಕಿತ್ತಳೆ ಬಣ್ಣದ ಮೂಲಕ ನಿಮ್ಮ ಡೇಟಾ ಮಿತಿಯನ್ನು ಹೊಂದಿಸಿ.
  • ೩. ನಿಮ್ಮ ತಿಂಗಳ ಪ್ರಾರಂಭ ಮತ್ತು ಕೊನೆಯನ್ನು ಅನುಸರಿಸಿ ನಿಮ್ಮ ಡೇಟಾ ಬಳಕೆ ಚಕ್ರವನ್ನು ಹೊಂದಿಸಿ ನಿಮ್ಮ ಮಿತಿಯನ್ನು ನೀವು ತಲುಪಿದಾಗ ಇದು ನಿಮಗೆ ಸೂಚನೆಯನ್ನು ನೀಡುತ್ತದೆ.
  • #4

    #4

    ನಿಮ್ಮ ಆಂಡ್ರಾಯ್ಡ್ ಡಿವೈಸ್‌ನಲ್ಲಿ ಒಂದು ಖಾತೆಗಿಂತ ಹೆಚ್ಚಿನದ್ದನ್ನು ಚಾಲನೆ ಮಾಡಲು ನೀವು ಆರಿಸಬಹುದಾಗಿದೆ. ನಿಮ್ಮ ಗೂಗಲ್ ಸೇವೆಗಳ ಹೆಚ್ಚಿನದ್ದನ್ನು ಬಳಸಲು ಒಂದು ಖಾತೆಗಿಂತ ಹೆಚ್ಚಿನದ್ದನ್ನು ನೀವು ಬಳಸಿದರೆ ಇದು ಉತ್ತಮವಾಗಿರುತ್ತದೆ.

    #5

    #5

    • ಅಪ್ಲಿಕೇಶನ್ ಅನುಮತಿಗಳ ಮೂಲಕ ಓದುವುದಕ್ಕೆ ಆದ್ಯತೆ ನೀಡಿ ಹಾಗೂ ಯಾವ ಅಪ್ಲಿಕೇಶನ್ ಅನ್ನು ಅನ್ವಯಿಸಿಕೊಳ್ಳಬೇಕೆಂಬುದನ್ನು ಆರಿಸಿ. ನೀವು ಇಲ್ಲಿ ನಿಮ್ಮ ಸ್ವಯಂಚಾಲಿತ ಅಪ್ಲಿಕೇಶನ್ ನವೀಕರಣಗಳನ್ನು ನಿಷ್ಕ್ರಿಯಗೊಳಿಸಬೇಕಾಗುತ್ತದೆ. ಇದನ್ನು ಹೀಗೆ ಮಾಡಿ
    • ಪ್ಲೇ ಸ್ಟೋರ್ ಅನ್ನು ತೆರೆಯಿರಿ ಮತ್ತು ಇಲ್ಲಿ ಸೆಟ್ಟಿಂಗ್ಸ್‌ಗೆ ಹೋಗಿ.
    • ಆಟೋ ಅಪ್‌ಡೇಟ್ ಅಪ್ಲಿಕೇಶನ್‌ಗಳು ಇಲ್ಲಿ ತಟ್ಟಿರಿ.
    • ಆಟೋ ಅಪ್‌ಡೇಟ್‌ ಅಪ್ಲಿಕೇಶನ್ ಬೇಡ ಇದನ್ನು ಆರಿಸಿ.
    • #6

      #6

      ಸ್ಟಾಕ್ ರಾಮ್ ಅನ್ನು ಬಳಸುವಂತಹ ಆಂಡ್ರಾಯ್ಡ್ ಬಳಕೆದಾರರಿಗಾಗಿ, ನಿಮ್ಮ ಸಿಸ್ಟಮ್‌ನಲ್ಲಿ ಹೊಸ ನವೀಕರಣಗಳಿಗಾಗಿ ಹುಡುಕಿ

      • ಸೆಟ್ಟಿಂಗ್ಸ್ ಇಲ್ಲಿಗೆ ಹೋಗಿ.
      • ಸಿಸ್ಟಮ್ ನವೀಕರಣಗಳನ್ನು ಸ್ಪರ್ಶಿಸಿ.
      • ಸಿಸ್ಟಮ್ ನವೀಕರಣಗಳಿಗಾಗಿ ಇದೀಗ ಪರಿಶೀಲಿಸಿ ಟ್ಯಾಪ್ ಮಾಡಿ.
      • #7

        #7

        ನಿರ್ದಿಷ್ಟ ಟಾಸ್ಕ್‌ಗಳಿಗಾಗಿ ಕೆಲವು ಡೀಫಾಲ್ಟ್ ಅಪ್ಲಿಕೇಶನ್ ಅನ್ನು ಹೊಂದಿಸಿದ್ದರೆ ಇದನ್ನು ಬದಲಾಯಿಸಲು

        • ಸೆಟ್ಟಿಂಗ್ಸ್> ಅಪ್ಲಿಕೇಶನ್ ಇಲ್ಲಿಗೆ ಹೋಗಿ
        • ಎಲ್ಲಾ ಟ್ಯಾಬ್‌ಗಳಿಗಾಗಿ ಬಲಕ್ಕೆ ಸ್ವೈಪ್ ಮಾಡಿ.
        • ಡೀಫಾಲ್ಟ್‌ನಂತೆ ತೆಗೆದುಹಾಕಲು ಅಪ್ಲಿಕೇಶನ್ ಆಯ್ಕೆಮಾಡಿ.
        • ಕ್ಲಿಯರ್ ಡೀಫಾಲ್ಟ್ ಇಲ್ಲಿ ಸ್ಪರ್ಶಿಸಿ.

Best Mobiles in India

English summary
This article tells about 10 Useful Android Tips And Tricks You Should Know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X