ಜಿಯೋಫೈ, ವರ್ಸಸ್ 4ಜಿ ಸ್ಮಾರ್ಟ್‌ಫೋನ್ ನಿಮ್ಮ ಆಯ್ಕೆ ಯಾವುದು?

By Shwetha
|

ರಿಲಾಯನ್ಸ್ ಜಿಯೋ ಸಿಮ್ 4ಜಿ ಸ್ಮಾರ್ಟ್‌ಫೋನ್‌ಗಳು ಮತ್ತು ಜಿಯೋಫೈ ಮೈಫೈ ಡಿವೈಸ್ ಎರಡಕ್ಕೂ ಪ್ರಸ್ತುತ ಲಭ್ಯವಿದೆ. ಆದರೆ ಜಿಯೋ ಸಿಮ್‌ನಿಂದ ಇನ್ನಷ್ಟು ಅನುಭವಗಳನ್ನು ಪಡೆದುಕೊಳ್ಳಬೇಕು ಎಂದು ಬಯಸುವ ಬಳಕೆದಾರರಿಗೆ ಯಾವುದರಲ್ಲಿ ಸಿಮ್ ಉತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂಬ ಕನ್‌ಪ್ಯೂಶನ್ ಉಂಟಾಗುವುದು ಸಹಜವೇ ಆಗಿದೆ.

ಓದಿರಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಕೀಲಿಕೈ ಈ 10 ಅಂಶಗಳು

ಇತ್ತೀಚಿನ ದಿನಗಳಲ್ಲಿ ರೂ 5,000 ದ ಬೆಲೆಗಳಲ್ಲಿ ನಿಮಗೆ 4ಜಿ ಸ್ಮಾರ್ಟ್‌ಫೋನ್ ಅನ್ನು ನಿಮ್ಮದಾಗಿಸಿಕೊಳ್ಳಬಹುದಾಗಿದೆ. ಜಿಯೋಫೈ ಡಿವೈಸ್ ಕೂಡ ರೂ 1,999 ಕ್ಕೆ ಲಭ್ಯವಿದೆ ಹಾಗಿದ್ದರೆ ಯಾವುದನ್ನು ನೀವು ಆರಿಸಿಕೊಳ್ಳುತ್ತೀರಿ ಎಂಬುದು ನಿಮಗೆ ಬಿಟ್ಟಿರುವ ಸಂಗತಿಯಾಗಿದೆ. ಯಾವುದು ಅತ್ಯುತ್ತಮ ಎಂಬುದನ್ನು ಕೆಳಗಿನ ಅಂಶಗಳ ಮೂಲಕ ಅರಿತುಕೊಳ್ಳೋಣ.

ಓದಿರಿ: ಫೋನ್ ನಂಬರ್ ಇಲ್ಲದೆಯೇ ಫೇಸ್‌ಬುಕ್ ಖಾತೆ ರಚಿಸುವುದು ಹೇಗೆ?

ಸಿಗ್ನಲ್ ರಿಸೆಪ್ಶನ್ ಪವರ್

ಸಿಗ್ನಲ್ ರಿಸೆಪ್ಶನ್ ಪವರ್

ಸಿಗ್ನಲ್ ರಿಸೆಪ್ಶನ್ ಪವರ್ ಅನುಸಾರವಾಗಿ, ಜಿಯೋಫೈ ಡಿವೈಸ್ 4ಜಿ ಸ್ಮಾರ್ಟ್‌ಫೋನ್‌ಗಳಿಗೆ ಹೋಲಿಸಿದಾಗ ಅಷ್ಟೊಂದು ಉತ್ತಮವಲ್ಲ. ಸ್ಮಾರ್ಟ್‌ಫೋನ್‌ಗಳು 4ಜಿ ಸಿಗ್ನಲ್ ಬ್ಯಾಂಡ್ ಅನ್ನು ಆರಿಸುತ್ತಿದ್ದು ಬ್ಯಾಂಡ್ 5 ಅಥವಾ ಬ್ಯಾಂಡ್ 40 ಗೆ ಇವುಗಳು ಸಂಪರ್ಕಗೊಳ್ಳುತ್ತವೆ. ಆದರೆ ಜಿಯೋಫೈ ಡಿವೈಸ್ ಬ್ಯಾಂಡ್ 3 ಅನ್ನು ಸಂಪರ್ಕಕ್ಕಾಗಿ ಬಳಸಿಕೊಳ್ಳುತ್ತದೆ.

ಕರೆಗಳ ಗುಣಮಟ್ಟ

ಕರೆಗಳ ಗುಣಮಟ್ಟ

ಹೆಚ್ಚಿನ ಸಂದರ್ಭಗಳಲ್ಲಿ ಜಿಯೋಫೈ ಡಿವೈಸ್ ಕರೆಗಳಿಗೆ ಉತ್ತಮವಾಗಿರುತ್ತದೆ. ಕಡಿಮೆ ಮುಂಭಾಗ ಕ್ಯಾಮೆರಾ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ವೀಡಿಯೊ ಕರೆಗಳನ್ನು ಮಾಡಲು ನಿಮಗೆ ಅನುಮತಿಸುವುದಿಲ್ಲ. ಆದರೆ ವಾಯ್ಸ್ ಕರೆಗಳು ಉತ್ತಮ ಗುಣಮಟ್ಟವನ್ನು ಹೊಂದಿರುತ್ತವೆ. ಜಿಯೋಫೈ ಡಿವೈಸ್ ಬಳಸಿಕೊಂಡು ಎಚ್‌ಡಿ ವೀಡಿಯೊ ಮತ್ತು ವಾಯ್ಸ್ ಕರೆಗಳನ್ನು ಜಿಯೋಜಾಯಿನ್ ಅಪ್ಲಿಕೇಶನ್ ಮೂಲಕ ಮಾಡಬಹುದಾಗಿದೆ ಇದು ಬಿಲ್ಡ್ ಇನ್ ವೋಲ್ಟ್ ಅನ್ನು ಪಡೆದುಕೊಂಡಿದೆ.

ಆರ್‌ಎಫ್ ಬ್ಯಾಂಡ್ ಆಯ್ಕೆ

ಆರ್‌ಎಫ್ ಬ್ಯಾಂಡ್ ಆಯ್ಕೆ

ಮೇಲೆ ತಿಳಿಸಿದಂತೆ, ಜಿಯೋಫೈ ಡಿವೈಸ್ ಬ್ಯಾಂಡ್ 3 ಗೆ ಹೆಚ್ಚು ಸಂಪರ್ಕವನ್ನು ಪಡೆದುಕೊಳ್ಳುತ್ತದೆ. ಸ್ಮಾರ್ಟ್‌ಫೋನ್‌ಗಳಲ್ಲಿ ಕನೆಕ್ಶನ್ ಸಂಪರ್ಕವನ್ನು ಬ್ಯಾಂಡ್ 40 ಗೆ ಅಲ್ಟರ್ ಮಾಡುವುದರ ಮೂಲಕ ನಿಮಗೆ ವ್ಯವಸ್ಥೆಗೊಳಿಸಬಹುದಾಗಿದೆ. ಬ್ಯಾಂಡ್ 40 ಗರಿಷ್ಟ ಸಿಗ್ನಲ್ ಸಾಮರ್ಥ್ಯವನ್ನು ಪಡೆದುಕೊಂಡಿದೆ. ಇದು ಹೆಚ್ಚುವರಿ 4ಜಿ ವೇಗವನ್ನು ನೀಡುತ್ತದೆ. ಜಿಯೋಫೈ ಡಿವೈಸ್‌ನೊಂದಿಗೆ ಆರ್ಎಫ್ ಬ್ಯಾಂಡ್ ಅನ್ನು ಬದಲಾಯಿಸಬೇಕಾಗಿಲ್ಲ.

ಎಸ್‌ಡಿ ಕಾರ್ಡ್ ಶೇರಿಂಗ್

ಎಸ್‌ಡಿ ಕಾರ್ಡ್ ಶೇರಿಂಗ್

ಜಿಯೋಫೈ ಡಿವೈಸ್ ನಿಮ್ಮನ್ನು ಎಸ್‌ಡಿ ಕಾರ್ಡ್ ಶೇರಿಂಗ್ ಮಾಡಲು ಅನುಮತಿಸುತ್ತದೆ ಇದು ನಿಮ್ಮದೇ ಆದ 32 ಜಿಬಿ ಕ್ಲೌಡ್ ಸ್ಪೇಸ್ ಅನ್ನು ರಚಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ ಇದನ್ನು ನೀವು ಇಂಟರ್ನೆಟ್ ಅಥವಾ ವೈಫೈಯಿಂದ ಕೂಡ ಮಾಡಬಹುದಾಗಿದೆ. ಈ ಸ್ಟೋರೇಜ್ ಪಾಸ್‌ವರ್ಡ್‌ನೊಂದಿಗೆ ಸುಭದ್ರವಾಗಿರುತ್ತದೆ ಮತ್ತು ಲಾಗಿನ್ ವಿವರಗಳನ್ನು ನಮೂದಿಸಿ ಇದನ್ನು ಪ್ರವೇಶಿಸಬಹುದಾಗಿದೆ. ಸ್ಮಾರ್ಟ್‌ಫೋನ್‌ನಲ್ಲಿ ಈ ಫೀಚರ್ ಇರುವುದಿಲ್ಲ.

ಬ್ಯಾಟರಿ ಬ್ಯಾಕಪ್

ಬ್ಯಾಟರಿ ಬ್ಯಾಕಪ್

ರಿಲಾಯನ್ಸ್ ಜಿಯೋ ವೆಲ್‌ಕಮ್ ಆಫರ್ ಅನ್ನು ನಿಮ್ಮ ಫೋನ್‌ನಲ್ಲಿ ನೀವು ಎಷ್ಟು ಬಳಸುತ್ತಿದ್ದೀರಿ ಎಂಬುದನ್ನು ಆಧರಿಸಿ ಇದು ಇದೆ. ಜಿಯೋಫೈ ಡಿವೈಸ್ 2,300 mAh ಬ್ಯಾಟರಿಯನ್ನು ಹೊಂದಿದ್ದು ಡಿವೈಸ್‌ಗೆ 5 ಗಂಟೆಗಳ ಬ್ಯಾಕಪ್ ಅನ್ನು ನೀಡುತ್ತದೆ. ನಿಮ್ಮ ಫೋನ್ ಉತ್ತಮ ಬ್ಯಾಟರಿ ಬ್ಯಾಕಪ್ ಅನ್ನು ಹೊಂದಿದೆ ಎಂದಾದಲ್ಲಿ ಇದು ಈ ಸೆಗ್ಮೆಂಟ್‌ನಲ್ಲಿ ಇರುತ್ತದೆ.

ವೈಫೈ ಹಾಟ್‌ಸ್ಪಾಟ್ ಶ್ರೇಣಿ

ವೈಫೈ ಹಾಟ್‌ಸ್ಪಾಟ್ ಶ್ರೇಣಿ

ಸ್ಮಾರ್ಟ್‌ಫೋನ್‌ಗಳಲ್ಲಿ, ನಿಮಗೆ 802.11 ಮೋಡ್ ಅನ್ನು ಬದಲಾಯಿಸಲು ಆಗುವುದಿಲ್ಲ. ಇದನ್ನು ಡೀಫಾಲ್ಟ್ ಮೂಲಕ B/G/N ಮೋಡ್‌ಗೆ ನೀವು ಹೊಂದಿಸಬೇಕು. ಹೆಚ್ಚಾಗಿ ಇದನ್ನು ಬಿಗೆ ಹೊಂದಿಸಲಾಗುತ್ತದೆ ಇದು ಕಡಿಮೆ ವೈಫೈ ಶ್ರೇಣಿಯನ್ನು ಪಡೆದುಕೊಂಡಿದೆ. ಜಿಯೋಫೈ ಡಿವೈಸ್‌ನೊಂದಿಗೆ, ನಿಮಗೆ 802.11 ಮೋಡ್‌ಗೆ ನಿಮಗೆ ಹೊಂದಿಸಬಹುದಾಗಿದೆ ಮತ್ತು ಚಾನಲ್ ಮೋಡ್‌ಗೂ ಇದನ್ನು ಸೆಟ್ ಮಾಡಿಕೊಳ್ಳಬಹುದು. ಈ ವಿಧಾನದಲ್ಲಿ ವೈಫೈ ರೇಂಜ್ ಅನ್ನು ಸುಲಭವಾಗಿ ಹೆಚ್ಚಿಸಬಹುದು ಅಥವಾ ಕಡಿಮೆಗೊಳಿಸಬಹುದು.

ವ್ಯತ್ಯಾಸ

ವ್ಯತ್ಯಾಸ

ಜಿಯೋ ಸಿಮ್ ಅನ್ನು ಬಳಸಿಕೊಳ್ಳಲು 4ಜಿ ಸ್ಮಾರ್ಟ್‌ಫೋನ್ ಅಥವಾ ಜಿಯೋಫೈ ಡಿವೈಸ್ ಎಂಬುದು ಸಂಪೂರ್ಣವಾಗಿ ನಿಮ್ಮನ್ನು ಅವಲಂಬಿಸಿದೆ. ಏಕೈಕ ಜಿಯೋ ಸಿಮ್‌ನೊಂದಿಗೆ ಹೆಚ್ಚಿನ ಡಿವೈಸ್‌ಗಳನ್ನು ನಿಮಗೆ ಸಂಪರ್ಕಪಡಿಸಬೇಕು ಎಂದಾದಲ್ಲಿ ಜಿಯೋಫೈ ಹಾಟ್‌ಸ್ಪಾಟ್ ಡಿವೈಸ್‌ ನಿಮ್ಮ ಆಯ್ಕೆಯಾಗಿರಲಿ.

Best Mobiles in India

English summary
Here, GizBot has come up with a few points that will let you know if the Reliance Jio 4G SIM will be better on a smartphone or the JioFi device. Get to know more about this from below..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X