ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ಅಕೌಂಟ್ ತೆರೆಯಲೇಬೇಕಾದ ಕಾರಣಗಳೇನಿರಬಹುದು?

ಬ್ಯಾಂಕ್ ರೀತಿಯಲ್ಲಿ ಆದರೆ ಬ್ಯಾಂಕ್ ಅಲ್ಲದ ಈ ಪೇಮೆಂಟ್ ಬ್ಯಾಂಕ್ ಅನ್ನು ಒಂದು ನಂಬಿಕಸ್ಥ ವ್ಯವಹಾರದಾರ ಎನ್ನಬಹುದು.

Written By:

ಭಾರತದಲ್ಲಿ ಮೊಟ್ಟ ಮೊದಲ ಪೇಮೆಂಟ್ ಬ್ಯಾಂಕ್ ತೆರೆದ ಕೀರ್ತಿ ಏರ್‌ಟೆಲ್‌ ಪಾಲಾಗಿದೆ. ಕೆಲವೇ ದಿನಗಳಲ್ಲಿ ಭಾರತದಾದ್ಯಂತ ಸಾವಿರಾರು ಪೇಮೆಂಟ್ ಬ್ಯಾಂಕ್‌ಗಳನ್ನು ತೆರೆಯುವುದಾಗಿ ಏರ್‌ಟೆಲ್ ಹೇಳಿಕೊಂಡಿದ್ದು, ಪೇಮೆಂಟ್ ಬ್ಯಾಂಕ್ ಬಗ್ಗೆ ಜನರಿಗೆ ಕುತೋಹಲ ಹೆಚ್ಚಾಗಿದೆ. ಪೇಮೆಂಟ್ ಬ್ಯಾಂಕ್ ಎಂದರೇನು? ಅದು ಹೇಗೆ ಕಾರ್ಯನಿರ್ವಹಿಸುತ್ತದೆ? ಇದರಿಂದ ನಮಗೇನು ಉಪಯೋಗ? ಎನ್ನುವ ಪ್ರಶ್ನೆಗಳು ಜನಸಾಮಾನ್ಯರನ್ನು ಕಾಡುತ್ತಲೇ ಇದೆ.

ಬ್ಯಾಂಕ್ ರೀತಿಯಲ್ಲಿ ಆದರೆ ಬ್ಯಾಂಕ್ ಅಲ್ಲದ ಈ ಪೇಮೆಂಟ್ ಬ್ಯಾಂಕ್ ಅನ್ನು ಒಂದು ನಂಬಿಕಸ್ಥ ವ್ಯವಹಾರದಾರ ಎನ್ನಬಹುದು. ಆ ವ್ಯವಹಾರದಾರನಿಗೆ ಸರ್ಕಾರದಿಂದ ಲೈಸೆನ್ಸ್ ದೊರೆತಿದ್ದು, ಅವನು ಜನರಿಂದ ಹಣವನ್ನು ಸ್ವೀಕರಿಸಬಹುದು. ಮತ್ತು ಇದಕ್ಕೆ ಬಡ್ಡಿಯನ್ನು ನಿಡಬಹುದು.

ಓದಿರಿ:ಪೇಟಿಎಂ ಮೂಲಕ ಬ್ಯಾಂಕ್ ಅಕೌಂಟ್‌ಗೆ ಹಣ ವರ್ಗಾವಣೆ ಹೇಗೆ?

ಅಂದರೆ ಇಲ್ಲಿ ಏರ್‌ಟೆಲ್ ಒಬ್ಬ ನಂಬಿಕಸ್ಥ ವ್ಯವಹಾರದಾರ. ಹಾಗಾಗಿ ಏರ್‌ಟೆಲ್ ಜನರಿಂದ ಹಣವನ್ನು ಸಂಗ್ರಹಿಸಿ ವಾರ್ಷಿಕ ಬಡ್ಡಿ ಹಣವನ್ನು ಸೇರಿಸಿ ವಾಪಸ್ ನಿಡುತ್ತದೆ. ಇದರ ಜೊತೆಗೆ ಇನ್ನು ಹೆಚ್ಚಿನ ಸೇವೆಗಳನ್ನು ಏರ್‌ಟೆಲ್ ನೀಡುತ್ತಿದ್ದು, ಅವುಗಳು ಯಾವುವು ಎಂದು ಈ ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

ನೀವು ಏರ್‌ಟೆಲ್ ಕಸ್ಟಮರ್ ಆಗಬೇಕಿಲ್ಲ.

ಏರ್‌ಟೆಲ್ ಟೆಲಿಕಾಂ ಮತ್ತು ಏರ್‌ಟೆಲ್ ಪೇಮೆಂಟ್ ಬ್ಯಾಂಕ್ ವ್ಯವಹಾರಕ್ಕೂ ಯಾವ ಸಂಭಂದವಿಲ್ಲ ಆದರೆ ಏರ್‌ಟೆಲ್ ನಂಬರ್ ಹೊಂದಿರುವವರು ಅದೇ ನಂಬರ್‌ ಅನ್ನು ತಮ್ಮ ಪೇಮೆಂಟ್ ಅಕೌಂಟ್ ನಂಬರ್ ಆಗಿ ಮಾಡಿಕೊಳ್ಳಬಹುದು.

ಬಯೋಮೆಟ್ರಿಕ್ ವೆರಿಫಿಕೇಷನ್.

ಏರ್‌ಟೆಲ್ ಪೇಪರ್ ಲೆಸ್ ಸಿಸ್ಟಮ್ ಆಗಿದ್ದು, ಬಯೋಮೆಟ್ರಿಕ್ ವೆರಿಫಿಕೇಷನ್ ಸಿಸ್ಟಮ್ ಹೊಂದಿದೆ. ವೆರಿಫಿಕೇಷನ್‌ಗೆ ನಿಮ್ಮ ಆಧಾರ್ ಕಾರ್ಡ ಇದ್ದರೆ ಕೇವಲ ಐದು ನಿಮಿಷ ಸಾಕು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹಣಕ್ಕೆ ವಾರ್ಷಿಕ 7.25 ರೂ ಬಡ್ಡಿ

ಪೇಮೆಂಟ್ ಬ್ಯಾಂಕ್‌ನಲ್ಲಿ ಇಟ್ಟಹಣಕ್ಕೆ ಗ್ರಾಹಕರಿಗೆ ವಾರ್ಷಿಕ 7.25 ರೂ ಬಡ್ಡಿ ಹಣ ಸಿಗುತ್ತದೆ. ಆದರೆ ಹಣದ ಪ್ರಮಾಣ ಒಂದು ಲಕ್ಷಕ್ಕಿಂತ ಹೆಚ್ಚು ಇರುವ ಹಾಗಿಲ್ಲ ಎನ್ನಲಾಗಿದೆ.

ಇತರ ಸೇವೆಗಳೇನು?

ಗ್ರಾಹಕರು ಡಾಪಾಸಿಟ್ ಮಾಡಿದ ಹಣಕ್ಕೆ ಬಡ್ಡಿಹಣವನ್ನು ನಿಡುವ ಏರ್‌ಟೆಲ್ ಪೇಮಟಂಟ್ ಬ್ಯಾಂಕ್ ಆನ್‌ಲೈನ್ ಸೇವೆಗಳನ್ನು ನಿಡುತ್ತದೆ. ನೀವು ಯಾವುದೇ ಬಿಲ್‌ಗಳನ್ನು ಏರ್‌ಟೆಲ್ ಪೇಮೆಂಟ್‌ ಬ್ಯಾಂಕ್ ಅಕೌಂಟ್‌ ಮೂಲಕ ನೇರವಾಗಿ ಪಾವತಿಸಬಹುದು. ಇನ್ನು ಏರ್‌ಟೆಲ್ ಆಪ್ ಹೊಂದಿದ್ದರೆ ಎಲ್ಲವೂ ಏರ್‌ಟೆಲ್ ಆಪ್‌ನಲ್ಲಿಯೆ ಆಗುತ್ತದೆ!!

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
Airtel recently rolled out India's first live payment bank, allowing users to open a savings account easily. Here's everything you should know before availing the service. Read more at. to know more visit to kannada.gizbot.com
Please Wait while comments are loading...
Opinion Poll

Social Counting