ಮೈಕ್ರೋಸಾಫ್ಟ್‌ನ ಒಂದು ಉತ್ಪನ್ನ ಭಾರತದಲ್ಲಿಲ್ಲ ಏಕೆ ಗೊತ್ತೇ?

By Shwetha
|

ಮೇ 20, 2014 ರಂದು ನ್ಯುಯಾರ್ಕ್‌ನಲ್ಲಿ ನಡೆದ ಒಂದು ಸಮಾರಂಭದಲ್ಲಿ ಮೈಕ್ರೋಸಾಫ್ಟ್ ಸಿಇಒ ಸತ್ಯ ನಡೆಲ್ಲಾ ಹೊಸ ಸರ್ಫೇಸ್ ಪ್ರೊ 3 ಅನ್ನು ಪ್ರಸಾರಗೊಳಿಸಿದರು. ಇದೊಂದು ಹೊಸ ಟ್ಯಾಬ್ಲೆಟ್ ಆಗಿದ್ದು ಪಿಸಿ ಆಧಾರಿತವಾಗಿದೆ ಇದರಿಂದ ನಿಮ್ಮ ಟ್ಯಾಬ್ಲೆಟ್ ಕೆಲಸವನ್ನೆಲ್ಲಾ ಪೂರೈಸಬಹುದಾಗಿದೆ. ಇದೊಂದು ಹೆಚ್ಚು ಶಕ್ತಿಯುತವಾದ ತೆಳುವಾದ ಹಾಗೂ ಹಗುರವಾದ ಸರ್ಫೇಸ್ ಪ್ರೊ ಇದಾಗಿದೆ.

4 ನೇ ಜನರೇಶನ್ ಇಂಟೆಲ್ ಕೋರ್ ಪ್ರೊಸೆಸರ್, ದೊಡ್ಡದಾದ 12 ಇಂಚಿನ ಕ್ಲಿಯರ್ ಟೈಪ್ ಪೂರ್ಣ ಎಚ್‌ಡಿ ಡಿಸ್‌ಪ್ಲೇ, 8 ಜಿಬಿ ರ್‌ಯಾಮ್, 9 ಗಂಟೆಗಳ ಬ್ಯಾಟರಿ ಜೀವನ ಮತ್ತು 64 ಜಿಬಿಯಿಂದ 512 ಜಿಬಿಗೆ ಬದಲಾಗುತ್ತಿರುವ ಸಂಗ್ರಹಣೆ ಸಾಮರ್ಥ್ಯವನ್ನು ಸರ್ಫೆಸ್ ಪ್ರೊ ಹೊಂದಿದೆ. ಇಷ್ಟೆಲ್ಲಾ ಗುಣಲಕ್ಷಣಗಳನ್ನು ಹೊಂದಿರುವ ಸರ್ಫೆಸ್ ಪ್ರೋ ಹೊರದೇಶದಲ್ಲಿ ಮಾತ್ರವೇ ಲಾಂಚ್ ಆಗುತ್ತಿದೆ. ನಮ್ಮ ದೇಶದಲ್ಲಿ ಇದಿನ್ನೂ ಹೊರಬರುವ ನಿರೀಕ್ಷೆ ದೂರದಲ್ಲಿದೆ.

ಇದರ ಬೆಲೆ ಅಧಿಕವಾಗಿರುವುದು ಮತ್ತು ಭಾರತದಲ್ಲಿ ಇದನ್ನು ಖರೀದಿಸುವ ಅವಶ್ಯಕತೆಯನ್ನು ಭಾರತೀಯರು ಹೊಂದಿಲ್ಲದಿರುವುದು ಭಾರತದಲ್ಲಿ ಸರ್ಫೆಸ್ ಪ್ರೊ ಲಾಂಚ್ ಆಗದಿರಲು ಕಾರಣವಾಗಿದೆ. ಇಂದಿನ ಲೇಖನದಲ್ಲಿ ಇದರ ಬಗ್ಗೆ ಇನ್ನಷ್ಟು ಮಾಹಿತಿಯನ್ನು ನಾವು ನಿಮಗೆ ನೀಡಲಿದ್ದು ಅದರತ್ತ ಗಮನ ಹರಿಸಿ.

#1

#1

ಇದು ಡಾಕಿಂಗ್ ಸ್ಟೇಶನ್ ಅನ್ನು ಹೊಂದಿದ್ದು 1Gbps ನೆಟ್‌ವರ್ಕ್ ವೇಗ ಇದಕ್ಕಿದೆ. ಇದರಲ್ಲಿ ವೀಡಿಯೋ 3840x2600 ರೆಸಲ್ಯೂಶನ್‌ನಲ್ಲಿದ್ದು ಐದು ಯುಎಸ್‌ಬಿ ಪೋರ್ಟ್‌ಗಳು ಹಾಗೂ 48W ಚಾರ್ಜಿಂಗ್ ಸಿಸ್ಟಮ್ ಅನ್ನು ಹೊಂದಿದೆ.

#2

#2

ಇದು ಕ್ವಾರ್ಟಿ ಕೀಬೋರ್ಡ್ ಅನ್ನು ಹೊಂದಿದ್ದು, ಪೂರ್ಣ ಪ್ರಮಾಣದ ಫಂಕ್ಷನ್ ಕೀಗಳು, ವಿಂಡೋಸ್ ಶಾರ್ಟ್‌ಕಟ್ ಕೀಗಳು, ಮೀಡಿಯಾ ನಿಯಂತ್ರಣಗಳು ಹಾಗೂ ಸುಧಾರಿತ ಟಚ್‌ಪ್ಯಾಡ್ ಇದರಲ್ಲಿದೆ. ಇದು ಐದು ಬಣ್ಣಗಳಲ್ಲಿ ಲಭ್ಯವಿದ್ದು ಕೆಂಪು, ನೀಲಿ, ನೇರಳೆ, ಸಿಯಾನ್ ಹಾಗೂ ಕಪ್ಪು ಬಣ್ಣಗಳಲ್ಲಿದೆ.

#3

#3

ಸೂಕ್ತ ವೀಕ್ಷಣೆಗಾಗಿ ಇದು ನಿರಂತರವಾದ ಕಿಕ್‌ಸ್ಟ್ಯಾಂಡ್‌ನೊಂದಿಗೆ ಬಂದಿದೆ. ಇದು ನಿಮ್ಮನ್ನು ಟ್ಯಾಬ್ಲೆಟ್‌ನಿಂದ ಲ್ಯಾಪ್‌ಟಾಪ್‌ವರೆಗೆ ಕರೆದೊಯ್ಯಲಿದೆ.

#4

#4

ಇದು 1080p ವೀಡಿಯೋ ಕ್ಯಾಮೆರಾಗಳನ್ನು ಹೊಂದಿದ್ದು 5ಎಂಪಿ ರಿಯರ್ ಮತ್ತು ಫ್ರಂಟ್ ಫೇಸಿಂಗ್ ಕ್ಯಾಮೆರಾ ಇದರಲ್ಲಿದೆ. ಇದು 9 ಗಂಟೆಗಳ ವೆಬ್ ಬ್ರೌಸಿಂಗ್ ಬ್ಯಾಟರಿ ಲೈಫ್ ಅನ್ನು ನೀಡಿದ್ದು ಹಾಗೂ ಚಾರ್ಜಿಂಗ್ ಸಾಮಾಗ್ರಿಗಳನ್ನು ಹೊಂದಿದೆ.

#5

#5

ಇದು ಕಸ್ಟಮ್ ಸರ್ಫೇಸ್ ಪೆನ್ ಅನ್ನು ಹೊಂದಿದ್ದು, ಅಲ್ಯುಮಿನಿಯಂ ಫಿನ್ನಿಶ್ ಇದರಲ್ಲಿದೆ. ಇದು ಫೌಂಟೇನ್ ಪೆನ್ ಅನ್ನು ನೆನಪಿಸುತ್ತದೆ.

#6

#6

ಹೌದು ಈ ಹೊಸ ಟ್ಯಾಬ್ಲೆಟ್‌ನಲ್ಲಿ ವಿಂಡೋಸ್ 8.1 ಪ್ರೊ ಚಾಲನೆಗೊಳ್ಳುತ್ತಿದ್ದು ಇದು ಮೈಕ್ರೋಸಾಫ್ಟ್ ಆಫೀಸ್, ಮಲ್ಟಿಟಾಸ್ಕಿಂಗ್ ಮತ್ತು ಸರ್ಫೇಸ್ ಪೆನ್ ಅನ್ನು ಒಳಗೊಂಡಿದೆ. ಈ ಹೊಸದಾಗಿ ಲಾಂಚ್ ಮಾಡಿದ ಒನ್‌ನಾಟ್‌ನಲ್ಲಿ ನೀವು ಕ್ಯಾಪ್ಚರ್ ಮಾಡಬಹುದು, ಚಿತ್ರಿಸಬಹುದು ಮತ್ತು ಸ್ಕೆಚ್ ಕೂಡ ಮಾಡಬಹುದು.

#7

#7

ಇದು ಹೆಚ್ಚಿನ ಕಾನ್ಫಿಗರೇಶನ್‌ಗಳನ್ನು ಒದಗಿಸಲಿದ್ದು ನಾಲ್ಕನೇ ತಲೆಮಾರಿನ i3, i5 ಮತ್ತು i7 ಪ್ರೊಸೆಸರ್ ಇದರ ವಿಶೇಷತೆಯಾಗಿದೆ. ಇದು 64 ಜಿಬಿ, 128 ಜಿಬಿ, 256 ಜಿಬಿ ಮತ್ತು 512 ಜಿಬಿ ಒಳಗೊಂಡಂತೆ ಆಂತರಿಕ ಸಂಗ್ರಹಣಾ ಆಯ್ಕೆಗಳನ್ನು ಒಳಗೊಂಡಿದೆ.

#8

#8

ವಿಂಡೋಸ್ 8.1 ಪ್ರೊನೊಂದಿಗೆ ನೀವು ವಿಂಡೋಸ್ ಸ್ಟೋರ್‌ನಿಂದ ಅಪ್ಲಿಕೇಶನ್‌ಗಳನ್ನು ನೀವು ಡೌನ್‌ಲೋಡ್ ಮಾಡಿಕೊಳ್ಳಬಹುದು ಮತ್ತು ಸ್ನ್ಯಾಪ್ ವೀಕ್ಷಣೆಯೊಂದಿಗೆ ಅವುಗಳನ್ನು ಬಳಸಬಹುದು.

#9

#9

ಸರ್ಫೇಸ್ ಪೆನ್ ಒನ್‌ನೋಟ್ ಕ್ಲಿಕ್‌ನೊಂದಿಗೆ, ನಿಮಗೆ ಕ್ಯಾಪ್ಚರ್ ಮಾಡಬಹುದು, ಕೆಲಸ ಮತ್ತು ಉಳಿಸುವಿಕೆಯನ್ನು ಸ್ವಯಂಚಾಲಿತವಾಗಿ ಉಳಿಸಬಹುದು. ಪಾಮ್ ಬ್ಲಾಕ್ ತಂತ್ರಜ್ಞಾನದೊಂದಿಗೆ ಸರ್ಫೇಸ್ ಪೆನ್‌ನ ಹಿಂಬದಿ ಡಬಲ್-ಕ್ಲಿಕ್ ಮಾಡಿ.

Best Mobiles in India

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X