ಏರ್‌ಟೆಲ್‌ನೊಂದಿಗೆ ಕೈಜೋಡಿಸಿದ ನೋಕಿಯಾ, ಜಿಯೋಗೆ ಕಾದಿದೆ ಸಂಕಷ್ಟ

ಏರ್‌ಟೆಲ್ ನೋಕಿಯಾ ಜತೆಗೂಡಿ 4ಜಿ ತಂತ್ರಜ್ಞಾನವನ್ನು ಇನ್ನೂ 3 ವಲಯಗಳಲ್ಲಿ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದು ಜಿಯೋಗೆ ಇದು ಸಂಕಷ್ಟವನ್ನು ಒಡ್ಡುವುದು ನಿಖರವಾಗಿದೆ.

Written By:

ಜಿಯೋಗೆ ಸರ್ವ ರೀತಿಯಲ್ಲೂ ಪೈಪೋಟಿಯನ್ನು ನೀಡಬೇಕು ಎಂಬುದಾಗಿ ಏರ್‌ಟೆಲ್ ಅಂತಿಮವಾಗಿ ತೀರ್ಮಾನಿಸಿದಂತಿದೆ. ಈಗ ಫಿನ್ನಿಶ್ ಕಂಪೆನಿ ನೋಕಿಯಾದೊಂದಿಗೆ ಏರ್‌ಟೆಲ್ ಜತೆಗೂಡಿದ್ದು 4ಜಿ ತಂತ್ರಜ್ಞಾನವನ್ನು 3 ಹೆಚ್ಚಿನ ವಲಯಗಳಲ್ಲಿ ವಿಸ್ತರಿಸುವ ಯೋಜನೆಯನ್ನು ಹಮ್ಮಿಕೊಂಡಿದೆ.

ಓದಿರಿ: ಇಂಟರ್ನೆಟ್ ಇಲ್ಲದೆಯೇ ಬ್ಯಾಂಕ್ ಮಿನಿ ಸ್ಟೇಟ್‌ಮೆಂಟ್‌ ಕಂಡುಕೊಳ್ಳುವುದು ಹೇಗೆ?

ಮುಂದಿನ 20 ವರ್ಷಗಳಿಗೆ 173.8MHZ ಸ್ಪೆಕ್ಟ್ರಮ್ ಅನ್ನು ವಶಪಡಿಸಿಕೊಳ್ಳುವ ಮೂಲಕ ತನ್ನ ಆಟವನ್ನು ಇನ್ನಷ್ಟು ಉನ್ನತಿಗೆ ಏರಿಸಿಕೊಂಡಿದೆ. ಜಿಯೋಗೆ ಭರ್ಜರಿ ಸ್ಪರ್ಧೆಯನ್ನು ಒಡ್ಡುವ ಸಲುವಾಗಿಯೇ ಏರ್‌ಟೆಲ್ ನೋಕಿಯಾದೊಂದಿಗೆ ಕೈ ಜೋಡಿಸಿ ಮುಂದುವರಿಯುತ್ತಿದೆ. ಇಂದಿನ ಲೇಖನದಲ್ಲಿ ಈ ಒಗ್ಗೂಡುವಿಕೆಯು ಜಿಯೋಗೆ ಹೇಗೆ ತೊಂದರೆಯನ್ನು ತಂದೊಡ್ಡಲಿದೆ ಎಂಬುದನ್ನು ಅರಿತುಕೊಳ್ಳೋಣ.

ಓದಿರಿ: ಸೂಪರ್ ಫಾಸ್ಟ್ ಆಗಿ ಜಿಯೋ 4ಜಿ ಸ್ಪೀಡ್ ಹೆಚ್ಚಿಸಲು ಇಲ್ಲಿದೆ ಸೂಪರ್ ಟಿಪ್ಸ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

4ಜಿ ತಂತ್ರಜ್ಞಾನ 3 ವಲಯಗಳಲ್ಲಿ

ಆರು ವಲಯಗಳಲ್ಲಿ ತನ್ನ ಸೇವೆಯನ್ನು ಏರ್‌ಟೆಲ್ ಈಗಾಗಲೇ ಹಮ್ಮಿಕೊಂಡಿದ್ದು ಮೂರು ಹೊಸ ವಲಯಗಳನ್ನು ಇದರೊಂದಿಗೆ ಸೇರಿಸಿಕೊಂಡಿದೆ. ಹೆಚ್ಚಿನ ವಲಯಗಳಲ್ಲಿ ತನ್ನ ಪ್ರಾಬಲ್ಯವನ್ನು ಸಾಧಿಸಿಕೊಳ್ಳುವ ಯೋಜನೆ ಕಂಪೆನಿಯದ್ದಾಗಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉತ್ತಮ ಕವರೇಜ್

ಗ್ರಾಹಕರ ಅಭಿಲಾಷೆಯನ್ನು ಸಂಪೂರ್ಣವಾಗಿ ಈಡೇರಿಸುವ ನಿಟ್ಟಿನಲ್ಲಿ ಕಂಪೆನಿ 4ಜಿ ತಂತ್ರಜ್ಞಾನದಲ್ಲಿ ಎಲ್ಲಾ ಬಗೆಯ ಅಭಿವೃದ್ಧಿಯನ್ನು ಮಾಡುವ ತಯಾರಿಯಲ್ಲಿದೆ.

ವೇಗದ ಮೊಬೈಲ್ ಇಂಟರ್ನೆಟ್ ಆಕ್ಸೆಸ್

ಎಲ್ಲಾ ಏರ್‌ಟೆಲ್ ಬಳಕೆದಾರರಿಗೆ ಇನ್ನಷ್ಟು ವೇಗವಾಗಿ ಇಂಟರ್ನೆಟ್ ಸೌಲಭ್ಯವನ್ನು ಒದಗಿಸುವ ಯೋಜನೆ ಕಂಪೆನಿಯದ್ದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

3ಜಿ ಮತ್ತು 2ಜಿ ನೆಟ್‌ವರ್ಕ್‌ಗಳ ಅಭಿವೃದ್ಧಿ

ಭಾರತದಲ್ಲಿ ಹೆಚ್ಚಿನ ಮೊಬೈಲ್ ಬಳಕೆದಾರರು ಈಗ 3ಜಿ ಸರಿಯುತ್ತಿದ್ದಾರೆ. ಆದ್ದರಿಂದ ಇದನ್ನು ಗಮನದಲ್ಲಿಟ್ಟುಕೊಂಡೇ ನೋಕಿಯಾ 3ಜಿ ಯನ್ನು ಇನ್ನಷ್ಟು ಪೂರಕವಾಗಿ ಅಭಿವೃದ್ಧಿಗೊಳಿಸಲಿದೆ.

ಸುಧಾರಿತ ಸ್ಪೆಕ್ಟ್ರಮ್ ಪೋರ್ಟ್‌ಪೋಲಿಯೊ

ದೇಶದಲ್ಲಿ ತನ್ನ ಸ್ಪೆಕ್ಟ್ರಮ್ ಅನ್ನು ಸುಧಾರಿಸುವ ಸಲುವಾಗಿ ಕಂಪೆನಿ 173.8MHZ ಅನ್ನು ವಿಸ್ತರಿಸಿದೆ. 14,244 ಕೋಟಿಯನ್ನು ವಶಪಡಿಸಿಕೊಂಡು 1800MHZ, 2100MHZ ಮತ್ತು 230MHZ ಬ್ಯಾಂಡ್‌ಗಳನ್ನು ವಶಪಡಿಸಿಕೊಂಡು ತನ್ನ ಪ್ರಾಬಲ್ಯವನ್ನು ಸಂಪೂರ್ಣವಾಗಿ ಉನ್ನತೀಕರಣಗೊಳಿಸುವ ಮಟ್ಟದಲ್ಲಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 English summary
5 Reasons Why Nokia’s Collab With Airtel Could Be a Huge Peril to Reliance Jio.
Please Wait while comments are loading...
Opinion Poll

Social Counting