ವಾಟ್ಸಾಪ್‌ನಲ್ಲಿರುವ ಮೋಸದ ಬಲೆಯಿಂದ ಹೊರಬರುವುದು ಹೇಗೆ?

By Shwetha
|

ಪ್ರಸ್ತುತ ವಾಟ್ಸಾಪ್ ವಿಶ್ವದಾದ್ಯಂತ ಹೆಚ್ಚು ಚಾಲ್ತಿಯಲ್ಲಿರುವ ಸಾಮಾಜಿಕ ತಾಣ ಎಂದೆನಿಸಿದೆ. ಬಳಸಲು ಹೆಚ್ಚು ಸರಳವಾಗಿರುವ ಈ ಅಪ್ಲಿಕೇಶನ್ ಯಾವುದೇ ಷರತ್ತುಗಳನ್ನು ಹಾಕದೆಯೇ ಜಾಹೀರಾತುಗಳನ್ನು ಒಳಗೊಳ್ಳದೆಯೇ ಬಳಸಲು ಅನುಕೂಲಕರವಾಗಿದೆ.

ಓದಿರಿ: ಬರೇ ರೂ 1 ಕ್ಕೆ ರೆಡ್ಮೀ 3 ಎಸ್, ರೆಡ್ಮೀ ನೋಟ್ 3 ಸ್ಮಾರ್ಟ್‌ಫೋನ್ ನಿಮ್ಮದಾಗಿಸಿಕೊಳ್ಳಿ!

ಅದಾಗ್ಯೂ ವಾಟ್ಸಾಪ್ ಕೆಲವೊಂದು ಮೋಸಗಳನ್ನು ಒಳಗೊಂಡಿದೆ ಎಂಬುದು ನಿಮಗೆ ಆಘಾತಕಾರಿಯಾಗಿದ್ದರೂ ವಾಟ್ಸಾಪ್‌ನಲ್ಲಿ ಇತ್ತೀಚೆಗೆ ಇದು ಕಂಡುಬರುತ್ತಿದೆ. ಹಾಗಿದ್ದರೆ ಈ ಮೋಸದ ಜಾಲದಿಂದ ಬಿಡುಗಡೆಯನ್ನು ಹೊಂದುವುದು ಹೇಗೆ ಎಂಬುದನ್ನು ಟಿಪ್ಸ್‌ಗಳ ಮೂಲಕ ನಾವು ತಿಳಿಸುತ್ತಿದ್ದು ಅದನ್ನು ನಾವಿಲ್ಲಿ ಲಿಸ್ಟ್ ಮಾಡುತ್ತಿದ್ದೇವೆ.

ಓದಿರಿ: ಆಂಡ್ರಾಯ್ಡ್ ಫೋನ್‌ನಲ್ಲಿ ಜಿಪಿಎಸ್ ವೇಗಗೊಳಿಸುವುದು ಹೇಗೆ?

ವೈರಸ್ ಮತ್ತು ಮಾಲ್‌ವೇರ್‌ನಿಂದ ದೂರವಿರುವುದು ಹೇಗೆ

ವೈರಸ್ ಮತ್ತು ಮಾಲ್‌ವೇರ್‌ನಿಂದ ದೂರವಿರುವುದು ಹೇಗೆ

ಹ್ಯಾಕರ್‌ಗಳು ನಿಮಗೆ ಸುಳ್ಳಿನ ಮೇಲ್‌ಗಳನ್ನು ಹಾಕುವುದರ ಮೂಲಕ ಲಿಂಕ್‌ಗಳನ್ನು ನೀಡಿ ಅದನ್ನು ಕ್ಲಿಕ್ ಮಾಡುವಂತೆ ನಿಮ್ಮನ್ನು ಪ್ರೇರೇಪಿಸಬಹುದಾಗಿದೆ. ನೀವು ಅಪ್ಪಿತಪ್ಪಿ ಎಲ್ಲಾದರೂ ಲಿಂಕ್ ಮೇಲೆ ಕ್ಲಿಕ್ ಮಾಡಿದಲ್ಲಿ ಮಾಲ್‌ವೇರ್ ಇಲ್ಲವೇ ವೈರಸ್ ನಿಮ್ಮ ಫೋನ್ ಅನ್ನು ಅಟ್ಯಾಕ್ ಮಾಡಬಹುದು. ಆದ್ದರಿಂದ ಇಂತಹ ಸಂದೇಶಗಳನ್ನು ಕ್ಲಿಕ್ ಮಾಡಲು ಹೋಗದಿರಿ ಎಂಬುದಾಗಿ ನಾವು ನಿಮಗೆ ಸಲಹೆ ನೀಡುತ್ತೇವೆ.

ಚೈನ್ ಮೆಸೇಜ್ ಹಾಕ್ಸ್

ಚೈನ್ ಮೆಸೇಜ್ ಹಾಕ್ಸ್

ನಿಮ್ಮ ಸಂದೇಶವನ್ನು 10 ಕ್ಕಿಂತ ಹೆಚ್ಚು ಜನರಿಗೆ ಕಳುಹಿಸುವಂತಹ ಸಂದೇಶ ಕೂಡ ಹಾಕ್ಸ್ ಆಗಿರುತ್ತದೆ ಎಂಬುದನ್ನು ಮರೆಯದಿರಿ. ನೀವು ಹೀಗೆ ಮಾಡಲು ಮರೆತಲ್ಲಿ ನಿಮ್ಮ ವಾಟ್ಸಾಪ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂಬ ಸಂದೇಶವನ್ನು ನೀವು ಪಡೆದುಕೊಳ್ಳಬಹುದು. ಇಂತಹ ಸಂದೇಶಗಳಿಗೆ ಎಂದಿಗೂ ಒಳಗಾಗದಿರಿ. ಇದೆಲ್ಲಾ ಸುಳ್ಳು.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿರ್ದಿಷ್ಟ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಸ್ನೇಹಿತರ ಮೇಲೆ ಗೂಢಚಾರಿಕೆ

ನಿರ್ದಿಷ್ಟ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಸ್ನೇಹಿತರ ಮೇಲೆ ಗೂಢಚಾರಿಕೆ

ನಿರ್ದಿಷ್ಟ ಅಪ್ಲಿಕೇಶನ್ ಬಳಸಿಕೊಂಡು ನಿಮ್ಮ ಸ್ನೇಹಿತರ ಚಾಟಿಂಗ್ ಮೇಲೆ ಗಮನ ಹರಿಸಬಹುದು ಎಂಬ ಸಂದೇಶವನ್ನು ನೀವು ಪಡೆದುಕೊಳ್ಳುತ್ತಿದ್ದೀರಿ ಎಂದಾದಲ್ಲಿ ಇದು ಮೋಸದ ಸಂದೇಶವಾಗಿರುತ್ತದೆ ಎಂಬುದನ್ನು ಅರಿತುಕೊಳ್ಳಲು ಮರೆಯದಿರಿ. ಈ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡುವುದರಿಂದ ಮಾಲ್‌ವೇರ್ ನಿಮ್ಮ ಫೋನ್‌ಗೆ ನೇರವಾಗಿ ಬರಬಹುದು.

ಸಕ್ರಿಯರಲ್ಲದ ಬಳಕೆದಾರರಿಗೆ ಹೆಚ್ಚುವರಿ ಚಾರ್ಜ್

ಸಕ್ರಿಯರಲ್ಲದ ಬಳಕೆದಾರರಿಗೆ ಹೆಚ್ಚುವರಿ ಚಾರ್ಜ್

ಸಕ್ರಿಯರಲ್ಲದೆ ಇರುವುದಕ್ಕೆ ವಾಟ್ಸಾಪ್ ಹೆಚ್ಚುವರಿ ದರವನ್ನು ವಿಧಿಸುತ್ತದೆ ಎಂಬ ಸಂದೇಶ ಕೂಡ ನಿಮಗೆ ಬರುತ್ತಿದೆ ಎಂದಾದಲ್ಲಿ ಇದಕ್ಕೆ ಗಮನ ಕೊಡದಿರಿ. ವಾಟ್ಸಾಪ್ ಎಂದಿಗೂ ಹೆಚ್ಚುವರಿ ದರವನ್ನು ವಿಧಿಸುವುದಿಲ್ಲ. ಇದು ಹಾಕ್ಸ್ ಸಂದೇಶವಾಗಿದೆ.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬ್ಯಾಂಕ್ ಖಾತೆ ಮಾಹಿತಿಗಳನ್ನು ಹಂಚಿಕೊಳ್ಳದಿರಿ

ಬ್ಯಾಂಕ್ ಖಾತೆ ಮಾಹಿತಿಗಳನ್ನು ಹಂಚಿಕೊಳ್ಳದಿರಿ

ನಿಮ್ಮ ಯಾವುದೇ ಬೆಲೆಬಾಳುವ ದಾಖಲೆಗಳು ಮತ್ತು ಗೌಪ್ಯ ಮಾಹಿತಿಗಳನ್ನು ವಾಟ್ಸಾಪ್ ಎಂದಿಗೂ ಕೇಳುವುದಿಲ್ಲ ಎಂಬುದನ್ನು ಮರೆಯದಿರಿ. ನಿಮ್ಮ ಬ್ಯಾಂಕ್ ಖಾತೆಯನ್ನು ಹಂಚಿಕೊಳ್ಳುವಂತಹ ತಪ್ಪು ಕೆಲಸವನ್ನು ಮಾಡದಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
we at GizBot, have decided to collate a list of few common scams and hoaxes that frequently appear on WhatsApp and tips and tricks to stay away from the same. Take a look at them below.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X