ಭಾರತದ ಬಗ್ಗೆ ಆಪಲ್‌ ಸಿಇಓ ಹೇಳಿದ್ದೇನು ಗೊತ್ತೇ?

By Suneel
|

ಹಾಯ್‌ ಇಂಡಿಯಾ, ಕ್ಯುಪರ್ಟಿನೋ ದೈತ್ಯ ಆಪಲ್‌ ಕಂಪನಿಗೆ ಅತ್ಯುತ್ತಮ ಮಾರುಕಟ್ಟೆ ದೇಶ ಮಾತ್ರವಲ್ಲದೇ ಎರಡನೇ ತ್ರೈಮಾಸಿಕದಲ್ಲಿ ಉತ್ತಮ ಪ್ರದರ್ಶನಕ್ಕೆ ಭಾರತ ಸಹಾಯ ಮಾಡಿದಿದ್ದರಿಂದ ನೀರಸ ಪ್ರದರ್ಶನ ಕಾಣಲಿಲ್ಲ. ಆದರೆ 13 ವರ್ಷಗಳಲ್ಲಿ ಮೊದಲ ಬಾರಿಗೆ ಐಫೋನ್‌ ಮಾರಾಟದಲ್ಲಿ ಕಂಪನಿ ತನ್ನ ಲಾಭದಲ್ಲಿ ಕುಸಿತಕಂಡಿದ್ದು ಮಾತ್ರ ಇದೇ ಮೊದಲ ಭಾರಿಗೆ. ಅದು ಚೀನಾದಲ್ಲಿ. ಭಾರತ ಈಗ ಅಮೇರಿಕ ನಂತರದಲ್ಲಿ ಐಫೋನ್‌ ಮಾರುಕಟ್ಟೆಗೆ ಉತ್ತಮ ಸ್ಥಳವಾಗಿದೆ. ಆದರೆ ಚೀನಾ ಮಾರುಕಟ್ಟೆ 3ನೇ ತ್ರೈಮಾಸಿಕ ಆದಾಯದ ಜಾಗಿತಿಕ ಆದಾಯ ಕುಸಿತಕ್ಕೆ ಮತ್ತೆ ಮುನ್ಸೂಚನೆ ನೀಡಿದೆ.

ಚೀನಾದಲ್ಲಿ ಕಂಡ ಆದಾಯ ಕುಸಿತದ ನೋವಿನಿಂದ ಆಪಲ್‌ ಕಂಪನಿ ಈಗ ಭಾರತ ತನಗೆ ಮಹತ್ವದ ಮಾರುಕಟ್ಟೆ ಎಂದು ಭಾರತದಲ್ಲಿ ಆಪಲ್‌ ಕಂಪನಿಯನ್ನು ಅಭಿವೃದ್ದಿ ಪಡಿಸಲು ಮುಂದಾಗಿದೆ. ಅಂದಹಾಗೆ ಆಪಲ್‌ ಕಂಪನಿಯ ಸಿಇಓ 'ಟಿಮ್‌ ಕುಕ್‌' ಭಾರತದಲ್ಲಿ ಕೈಗೊಂಡಿರುವ ಪ್ರಮುಖ ಯೋಜನೆಗಳ ಬಗ್ಗೆ ಮತ್ತು ಭಾರತದ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಲೇಖನದ ಸ್ಲೈಡ್‌ನಲ್ಲಿ ಓದಿರಿ.

ಶೇಕಡ 56 ಐಫೋನ್ ಮಾರಾಟ ಹೆಚ್ಚಳ

ಶೇಕಡ 56 ಐಫೋನ್ ಮಾರಾಟ ಹೆಚ್ಚಳ

ವರ್ಷದ ಆಧಾರದಲ್ಲ ಹೇಳುವುದಾದರೆ ಐಫೋನ್‌ ಮಾರಾಟ ಭಾರತದಲ್ಲಿ ಶೇಕಡ 56 ರಷ್ಟು ಹೆಚ್ಚಾಗಿದೆ ಎಂದು ಆಪಲ್‌ ಸಿಇಓ 'ಟಿಮ್‌ ಕುಕ್‌' ಹೇಳಿದ್ದಾರೆ.

ಭಾರತ ಕೇಂದ್ರ ವೇದಿಕೆ

ಭಾರತ ಕೇಂದ್ರ ವೇದಿಕೆ

ಹೆಚ್ಚು ಬೆಳವಣಿಗೆ ಹೊಂದಿದ ಪ್ರದೇಶಕ್ಕಿಂತ ಐಫೋನ್ ಮಾರುಕಟ್ಟೆ ಬೆಳವಣಿಗೆ ಹೆಚ್ಚಿರುವ ಭಾರತದ ಪ್ರದೇಶಗಳಿಗೆ ಪ್ರಾಮುಖ್ಯತೆ ನೀಡಲಾಗುವುದು. ಭಾರತ ಐಫೋಣ್‌ ಮಾರಾಟದಲ್ಲಿ ಉತ್ತಮ ಪಾತ್ರವಹಿಸಿದೆ ಎಂದು 'ಟಿಮ್ ಕುಕ್‌' ಹೇಳಿದ್ದಾರೆ. ಕಾರಣ ಚೀನಾ ಅಭಿವೃದ್ದಿ ಹೊಂದಿದ ರಾಷ್ಟ್ರವಾದರೂ ಸಹ ಅಲ್ಲಿ ಜಾಗತಿಕ ಆದಾಯ ಕುಸಿತ ಕಂಡಿರಿವುದು ಇದೇ ಮೊದಲ ಭಾರಿ.

ಭಾರತ ನಂಬಿದ ಟಿಮ್ ಕುಕ್‌

ಭಾರತ ನಂಬಿದ ಟಿಮ್ ಕುಕ್‌

"ಟಿಮ್‌ ಕುಕ್‌"ರವರು ಭಾರತ ನಂಬಿದ್ದಾರೆ. ಕಾರಣ ಕಳೆದ7-10 ವರ್ಷಗಳಿಗೆ ಹೋಲಿಸಿದರೆ ಭಾರತದ ಜೊತೆಗೆ ಚೀನಾ ಉತ್ತಮ ನೆಟ್‌ವರ್ಕ್‌ ಹೊಂದಿದ್ದು ಚೀನಾಗೂ ಸಹ ಉತ್ತಮ ಆರ್ಥಿಕ ಮಾರುಕಟ್ಟೆ ಅವಕಾಶ ಇರುವುದರಿಂದ ಟಿಮ್‌ ಕುಕ್‌ ಸಹ ಭಾರತವನ್ನು ನಂಬಿದ್ದಾರೆ ಎಂದು ಟಿಮ್‌ ಕುಕ್‌ ಹೇಳಿದ್ದಾರೆ.

ಭಾರತದಲ್ಲಿ ಐಫೋನ್‌ ಬೆಳವಣಿಗೆಗೆ 4G

ಭಾರತದಲ್ಲಿ ಐಫೋನ್‌ ಬೆಳವಣಿಗೆಗೆ 4G

ಭಾರತದಲ್ಲಿ ಐಫೋನ್‌ ಮಾರಾಟದ ಬೆಳವಣಿಗೆಗೆ ಸ್ವತಃ ಆಪಲ್‌ ಕಂಪನಿ ಉತ್ತಮ ನೆಟ್‌ವರ್ಕ್‌ ಅನ್ನು ಪ್ರಾರಂಭಿಸಲಿದೆ. ಐಫೋನ್ ಸಾಮರ್ಥ್ಯ ಹೆಚ್ಚಿಸಲು ಈ ಮಾರ್ಗ ಅನುಸರಿಸಲಿದ್ದು, ಆಪಲ್‌ ಪ್ರಾರಂಭಿಸುವ ನೆಟ್‌ವರ್ಕ್‌ ಭಾರತದಲ್ಲಿನ 2.5G-3Gಗಿಂತ ಭಿನ್ನವಾಗಿರಲಿದೆ. ಈ ಯೋಜನೆಯನ್ನು ಸಹ ಕೈಗೊಂಡಿರುವುದಾಗಿ ಆಪಲ್‌ ಸಿಇಓ 'ಟಿಮ್‌ ಕುಕ್‌' ಹೇಳಿದ್ದಾರೆ. ಅಲ್ಲದೇ ಭಾರತ ಅತಿ ಕಡಿಮೆ ಇಂಟರ್ನೆಟ್‌ ವೇಗ ಹೊಂದಿರುವ ಬಗ್ಗೆ ಮಾತನಾಡುತ್ತಾ ಹೀಗೆ ಐಫೋನ್‌ ಮಾರಾಟ ಅಭಿವೃದ್ದಿಗಾಗಿ ನೆಟ್‌ವರ್ಕ್‌ ಚಾಲೆಂಜ್‌ ಅನ್ನು ಸಹ ತೆಗೆದುಕೊಂಡಿದ್ದಾರೆ.

 ಉತ್ತಮ ದೊಡ್ಡ ವಾಹಿನಿ

ಉತ್ತಮ ದೊಡ್ಡ ವಾಹಿನಿ

ಭಾರತದಲ್ಲಿ ಕಳೆದ ತಿಂಗಳುಗಳ ಹಿಂದೆ ಆಪಲ್‌ ಭಾರತದ ದೇಶದಲ್ಲಿ ಚಿಲ್ಲರೆ ವ್ಯಾಪಾರಿ ವಿತರಣೆಯನ್ನು ವಿಸ್ತರಣೆ ಮಾಡಿದೆ. ಭಾರತದಲ್ಲಿ ವಿತರಣಾ ವಾಹಿನಿಗಳ ಬಗ್ಗೆ ಮಾತನಾಡುತ್ತಾ "ಅಮೇರಿಕದಲ್ಲಿ ಕ್ಯಾರಿಯರ್ಸ್ ಅತಿ ಹೆಚ್ಚು ಫೋನ್‌ಗಳನ್ನು ಮಾರಾಟ ಮಾಡುತ್ತವೆ. ಆದರೆ ಭಾರತದಲ್ಲಿ ಚಿಲ್ಲರೆ ವ್ಯಾಪರಿಗಳು ಹೆಚ್ಚು. ಹೆಚ್ಚು ಸಣ್ಣ ಮೊಬೈಲ್‌ ಶಾಪ್‌ಗಳಿವೆ" ಎಂದು ಹೇಳಿದ್ದಾರೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಕರ್ನಾಟಕ ಕಂಪೆನಿ ಗ್ಲೋಬಲ್ ಡಿಲೈಟ್ ತಯಾರಿಸಿದ ಕ್ಯಾಮೆರಾ ಪ್ಲಸ್ ಅಪ್ಲಿಕೇಶನ್ ನಿಮ್ಮ ವಾಚ್‌ನಿಂದಲೇ ಫೋಟೋ ಅಥವಾ ವೀಡಿಯೊಗಳನ್ನು ಸೆರೆಹಿಡಿಯಬಹುದಾಗಿದೆ. ಅಪ್ಲಿಕೇಶನ್‌ಗಾಗಿ ವ್ಯೂ ಫೈಂಡರ್‌ನಂತೆ ಇದು ಕಾರ್ಯನಿರ್ವಹಿಸುತ್ತಿದ್ದು ಚಿತ್ರವನ್ನು ಸೆರೆ ಹಿಡಿದ ನಂತರ ಚಿತ್ರದ ಪೂರ್ವವೀಕ್ಷಣೆಯನ್ನು ಇದು ನಿಮಗೆ ನೀಡುತ್ತದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಟ್ರಾವೆಲ್ ಪೋರ್ಟಲ್ ಕ್ಲಿಯರ್ ಟ್ರಿಪ್ ಆಪಲ್ ವಾಚ್‌ನಲ್ಲಿ ಅಳವಡಿಸಲಾಗಿರುವ ಪ್ರಥಮ ಭಾರತೀಯ ಅಪ್ಲಿಕೇಶನ್ ಆಗಿದೆ. ಸ್ಮಾರ್ಟ್‌ವಾಚ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ನೀವು ತೆರೆದಾಗ ನಿಮಗೆ ಫ್ಲೈಟ್‌ಗಳ ಮಾಹಿತಿ ಲಭ್ಯವಾಗಲಿದೆ. ನಿಮ್ಮ ನಿರ್ಗಮನದ 24 ತಾಸಿನವರೆಗೆ ಮುಂಬರಲಿರುವ ಪ್ರಯಾಣಗಳ ಮಾಹಿತಿಯನ್ನು ಇದು ಒದಗಿಸುತ್ತದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಆಪಲ್ ವಾಚ್‌ನಲ್ಲಿ ಅಳವಡಿಸಲಾಗಿರುವ ಅಪ್ಲಿಕೇಶನ್ ಇದಾಗಿದ್ದು ವಾಚ್ ಬ್ಯಾಂಕಿಂಗ್ ಎಂಬ ಹೆಸರನ್ನು ಈ ಅಪ್ಲಿಕೇಶನ್ ಪಡೆದುಕೊಂಡಿದೆ. ಬ್ಯಾಲೆನ್ಸ್ ತನಿಖೆ, ಪ್ರಿಪೈಡ್ ಮೊಬೈಲ್ ಫೋನ್‌ಗಳ ರಿಚಾರ್ಜ್, ಚೆಕ್ ಬುಕ್ ವಿನಂತಿ ಮೊದಲಾದ ಮಾಹಿತಿಯನ್ನು ಇನ್ನು ವಾಚ್‌ನಲ್ಲೇ ನಿಮಗೆ ಪಡೆದುಕೊಳ್ಳಬಹುದಾಗಿದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ತಮಿಳು ಸಾಹಿತಿ ಮಧನ್ ಕಾರ್ಕಿ ಆಪಲ್ ವಾಚ್‌ಗಾಗಿ ಎರಡು ಭಾಷಾ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿಪಡಿಸಿದೆ. 'ಅಗರಾದಿ ಅಪ್ಲಿಕೇಶನ್' ಶಬ್ಧಕೋಶ ಆಗಿದ್ದು ಇನ್ನೊಂದು ಅಪ್ಲಿಕೇಶನ್ ಕವಿತೆಗಳ ಸಂಗ್ರಹವನ್ನು ಪಡೆದುಕೊಂಡಿದೆ.

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಆಪಲ್ ವಾಚ್‌ನಲ್ಲಿ ಭಾರತದ ಕೊಡುಗೆ

ಬ್ಯುಸಿನೆಸ್ ಮೆಸೇಜಿಂಗ್ ಅಪ್ಲಿಕೇಶನ್ ಅವಾಮೊ ಬೆಂಗಳೂರಿಗರಿಂದ ಅಭಿವೃದ್ಧಿಯನ್ನು ಕಂಡುಕೊಂಡ ಅಪ್ಲಿಕೇಶನ್ ಆಗಿದ್ದು ಆಪಲ್ ವಾಚ್‌ಗಾಗಿಯೇ ನಿರ್ದಿಷ್ಟವಾಗಿ ತಯಾರಾಗಿದೆ. ಏಪ್ರಿಲ್ 24 ರಿಂದ ಈ ಅಪ್ಲಿಕೇಶನ್ ಅನ್ನು ಆಪ್ ಸ್ಟೋರ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದ್ದು ಸ್ಮಾರ್ಟ್‌ವಾಚ್ ಅನ್ನು ಈಗಾಗಲೇ ಪ್ರಿ ಆರ್ಡರ್ ಮಾಡಿಕೊಂಡವರಿಗೆ ಕಂಪೆನಿ ಅಪ್ಲಿಕೇಶನ್‌ನ ಸಾಗಾಣೆ ಮಾಡುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?ಆಂಡ್ರಾಯ್ಡ್‌ಗಿಂತ ಆಪಲ್ ಫೋನ್ ಅತ್ಯುತ್ತಮ ಹೇಗೆ?

ಟೆಕ್ ಲೋಕದಲ್ಲೇ ದಾಖಲೆ ಬರೆಯಲಿರುವ ಅತಿದೊಡ್ಡ ಡೀಲ್ ಏನು?ಟೆಕ್ ಲೋಕದಲ್ಲೇ ದಾಖಲೆ ಬರೆಯಲಿರುವ ಅತಿದೊಡ್ಡ ಡೀಲ್ ಏನು?

ಆಪಲ್‌ನ ತೆಳು ಮ್ಯಾಕ್‌ಬುಕ್‌ನ ವಿಶೇಷತೆಗಳೇನು?ಆಪಲ್‌ನ ತೆಳು ಮ್ಯಾಕ್‌ಬುಕ್‌ನ ವಿಶೇಷತೆಗಳೇನು?

Best Mobiles in India

English summary
5 things Apple CEO Tim Cook said about India.Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X