ರಿಲಾಯನ್ಸ್ ಜಿಯೋ 4G, ಸಿಮ್ ಉಚಿತದ ಬಗ್ಗೆ ತಿಳಿಯಲೇಬೇಕಾದ 5 ಮಾಹಿತಿಗಳು

By Suneel
|

ಭಾರತದ ಟೆಲಿಕಾಂ ಇತಿಹಾಸದಲ್ಲೇ ಇಂತಹ ಒಂದು ಸನ್ನಿವೇಶ ನಡೆದಿರಲಿಲ್ಲ. ಇಂದು ರಿಲಾಯನ್ಸ್ ಜಿಯೋ 4G ಸಿಮ್ ಖರೀದಿಸಲು ಭಾರತದಾದ್ಯಂತ ರಿಲಾಯನ್ಸ್‌ ಡಿಜಿಟಲ್‌ ಸ್ಟೋರ್‌ಗಳ ಮುಂದೆ ಜನರು ಸಾಲಿನಲ್ಲಿ ನಿಂಲ್ಲುತ್ತಿದ್ದಾರೆ. ವಿಶೇಷ ಅಂದ್ರೆ ಸ್ಟೋರ್‌ಗಳು ಓಪನ್‌ ಆಗೋದು ಬೆಳಿಗ್ಗೆ 10 ಗಂಟೆಯ ನಂತರವಾದ್ರು ಸಹ ಜನರು ಮಾತ್ರ ಮಧ್ಯರಾತ್ರಿಯಿಂದಲೇ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಲೇಖನದ ಸ್ಲೈಡರ್‌ನಲ್ಲಿ ಫೋಟೋಗಳನ್ನು ತೋರಿಸುತ್ತೇವೆ. ನೀವು ನೋಡಬಹುದು ಹೇಗೆ ಸಾಲಿನಲ್ಲಿ ನಿಲ್ಲುತ್ತಿದ್ದಾರೆ ಎಂದು.

90 ದಿನ ಉಚಿತ ಅನ್‌ಲಿಮಿಟೆಡ್‌ ಇಂಟರ್ನೆಟ್ ಡಾಟಾ, ವಾಯ್ಸ್‌ ಕರೆ. ಮೆಸೇಜ್‌ಗಳ ಆಫರ್‌ ಜನರು ಸಿಮ್‌ ಖರೀದಿಸಲು ಮುಗಿಬೀಳಲು ಕಾರಣವಾಗಿರಬಹುದು. ರಿಲಾಯನ್ಸ್‌ ಜಿಯೋ ಈಗ ನೀಡುತ್ತಿರುವುದು ಕೇವಲ ಪ್ರಿವೀವ್‌ ಆಫರ್‌ ಸಿಮ್ ಅನ್ನು. ವಿಶೇಷ ಅಂದ್ರೆ ರಿಲಾಯನ್ಸ್ ಇದುವರೆಗೂ ಸಹ ವಾಣಿಜ್ಯಾತ್ಮಕವಾಗಿ 4G ನೆಟ್‌ವರ್ಕ್‌ ಅನ್ನು ಲಾಂಚ್‌ ಮಾಡಿಲ್ಲ. ಈ ಮಾಹಿತಿ ಎಷ್ಟು ಜನರಿಗೆ ತಿಳಿದಿದೆಯೋ ಇಲ್ವೋ ಗೊತ್ತಿಲ್ಲ.

ಭಾರತದಲ್ಲಿ ಈಗಾಗಲೇ 1.5 ದಶಲಕ್ಷ ಜನರು ರಿಲಾಯನ್ಸ್ ಜಿಯೋ 4G ಸಿಮ್‌ನಿಂದ ವಾಯ್ಸ್‌ ಕರೆ, ವೀಡಿಯೊ ಕರೆ, ಮೆಸೇಜ್‌ ಸೆಂಡ್ ಮಾಡುವಿಕೆ ಮತ್ತು ಇಂಟರ್ನೆಟ್‌ ಅನ್ನು ಸಹ ಬಳಸುತ್ತಿದ್ದಾರೆ. ಈ ಸೇವೆ ಉಚಿತವಾಗಿದೆ. ಆದರೆ ರಿಲಾಯನ್ಸ್‌ ಜಿಯೋ 4G ಸಿಮ್‌ ಬಳಕೆದಾರರು ಅದರ ಬಗ್ಗೆ ಮತ್ತು ಉಚಿತ ಸೇವೆ ಬಗ್ಗೆ ತಿಳಿಯಲೇ ಬೇಕಾದ 5 ಪ್ರಮುಖ ಮಾಹಿತಿಗಳಿವೆ. ಆ ಮಾಹಿತಿಗಳನ್ನು ಲೇಖನದ ಸ್ಲೈಡರ್‌ ಓದಿ ತಿಳಿಯಿರಿ.

ಉಚಿತವಾಗಿ ರಿಲಾಯನ್ಸ್ ಜಿಯೋ 4G ಸಿಮ್ ಖರೀದಿ ಮತ್ತು ಆಕ್ಟಿವೇಟ್ ಹೇಗೆ?

ಜಿಯೋ 4G ಸಿಮ್‌ ಆಫರ್‌ 90 ದಿನಗಳ ನಂತರ ಎನಾಗಲಿದೆ?

ಜಿಯೋ 4G ಸಿಮ್‌ ಆಫರ್‌ 90 ದಿನಗಳ ನಂತರ ಎನಾಗಲಿದೆ?

ಪ್ರಿವೀವ್‌ ಆಫರ್ 90 ದಿನಗಳ ಉಚಿತ ಡಾಟಾ, ವಾಯ್ಸ್ ಕರೆ, ಮೆಸೇಜ್‌ ಸೇವೆ ಮುಗಿದ ನಂತರ ಸಿಮ್ ಗ್ರಾಹಕರು ಟ್ರಾರಿಫ್ ಪ್ಲಾನ್‌ ಅನ್ನು ಆಯ್ಕೆ ಮಾಡಿಕೊಂಡು, ರಿಲಾಯನ್ಸ್ ಸೇವೆಯನ್ನು ಮುಂದುವರೆಸಬಹುದು. ರಿಲಾಯನ್ಸ್ ಜಿಯೋ ಟ್ಯಾರಿಫ್‌ ಪ್ಲಾನ್‌ಗಳಲ್ಲಿ ಡಾಟಾ ಬೆಲೆ 1MB ಗೆ 50 ಪೈಸೆ ಆಗಲಿದೆ ಎಂಬುದನ್ನು ಲೀಕ್‌ ಆದ ಟ್ಯಾರಿಫ್‌ ಪ್ಲಾನ್‌ ಮಾಹಿತಿಯಿಂದ ತಿಳಿಯಲಾಗಿದೆ.

ರಿಲಾಯನ್ಸ್ ಜಿಯೋ 4G ಕಮರ್ಷಿಯಲ್ ಲಾಂಚ್‌ ಯಾವಾಗ?

ರಿಲಾಯನ್ಸ್ ಜಿಯೋ 4G ಕಮರ್ಷಿಯಲ್ ಲಾಂಚ್‌ ಯಾವಾಗ?

ಉನ್ನತ ಮೂಲದ ವರದಿಗಳ ಪ್ರಕಾರ ರಿಲಾಯನ್ಸ್ ಜಿಯೋ 4G ಕಮರ್ಷಿಯಲ್‌ ಲಾಂಚ್‌ ಬಗ್ಗೆ ಮುಕೇಶ್ ಅಂಬಾನಿಯವರು ಸೆಪ್ಟೆಂಬರ್‌ 1 ರಂದು ಆರ್‌ಐಎಲ್‌ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಪ್ರಕಟಣೆಗೊಳಿಸುತ್ತಾರೆ ಎಂದು ತಿಳಿಯಲಾಗಿದೆ. ಆದರೆ ರಿಲಾಯನ್ಸ್ ಜಿಯೋ ಸೇವೆ ಆಗಸ್ಟ್‌ 15 ರಂದೇ ಲಾಂಚ್‌ ಆಗಿದೆ.

 ಜಿಯೋ 4G ಪ್ರಿವೀವ್‌ ಆಫರ್‌ ಕಾನೂನಿನಾತ್ಮಕವೇ?

ಜಿಯೋ 4G ಪ್ರಿವೀವ್‌ ಆಫರ್‌ ಕಾನೂನಿನಾತ್ಮಕವೇ?

ಏರ್‌ಟೆಲ್‌, ವೊಡಾಫೋನ್ ಮತ್ತು ಐಡಿಯಾ ಟೆಲಿಕಾಂಗಳು, 'ರಿಲಾಯನ್ಸ್ ಅನ್ಯಾಯವಾಗಿ ತನ್ನ ವಾಣಿಜ್ಯಾತ್ಮಕ ಆಪರೇಷನ್‌ ಅನ್ನು ಕೈಗೊಂಡಿದೆ ಎಂದು ಟ್ರಾಯ್‌ ಜೊತೆ ವಾದಿಸುತ್ತಿವೆ'. ರಿಲಾಯನ್ಸ್‌ ಸರ್ಕಾರದ ಸ್ಪೆಕ್ಟ್ರಂ ಚಾರ್ಜ್‌ ನೀಡದೆ ಬ್ಯುಸಿನೆಸ್‌ ನಡೆಸುತ್ತಿದೆ. ವಾಣಿಜ್ಯಾತ್ಮಕವಾಗಿ ನೆಟ್‌ವರ್ಕ್‌ ಲಾಂಚ್‌ ಮಾಡಿದ ನಂತರ ಸ್ಪೆಕ್ಟ್ರಂ ಚಾರ್ಜ್‌ ಕಟ್ಟಬೇಕಾಗುತ್ತದೆ. ಈ ಬಗ್ಗೆ ಟ್ರಾಯ್‌ ಪರಿಶೀಲನೆ ನೆಡೆಸುತ್ತಿದೆ.

ವಾಯ್ಸ್‌ ಕರೆ ಬಗ್ಗೆ ಮಾಹಿತಿ

ವಾಯ್ಸ್‌ ಕರೆ ಬಗ್ಗೆ ಮಾಹಿತಿ

ಶೀಘ್ರವಾಗಿ ಇತ್ತೀಚೆಗೆ ಜಿಯೋ ನೆಟ್‌ವರ್ಕ್‌ ಅಳವಡಿಸಿದವರು ವಾಯ್ಸ್‌ ಕರೆ ನಿರ್ವಹಣೆಯಲ್ಲಿ ಕಠಿಣತೆ ಅನುಭವ ಪಡೆದಿದ್ದಾರೆ. ರಿಲಾಯನ್ಸ್ ಜಿಯೋ ಟ್ರಾಯ್‌ಗೆ ಬರೆದ ಪತ್ರದ ಪ್ರಕಾರ, ಅದರ ನೆಟ್‌ವರ್ಕ್‌ನಲ್ಲಿ ಕರೆ ಡ್ರಾಪ್‌ ದರ ಶೇಕಡ 65 ಕ್ಕಿಂತ ಹೆಚ್ಚಾಗಿದೆ. 1.6 ಕೋಟಿ ಕರೆಗಳು ಜಿಯೋ, ವೊಡಾಫೋನ್, ಏರ್‌ಟೆಲ್‌, ಐಡಿಯಾ ನೆಟ್‌ವರ್ಕ್‌ನಲ್ಲಿ ಫೇಲ್‌ ಆಗಿವೆ. ಜಿಯೋ ನೆಟ್‌ವರ್ಕ್‌ ಶೇರ್‌ ನೆಟ್‌ವರ್ಕ್‌ ಅನ್ನು ಫಾಲೋ ಮಾಡುವುದಿಲ್ಲ.

ಇತರೆ ನೆಟ್‌ವರ್ಕ್‌ನಿಂದ ರಿಲಾಯನ್ಸ್ ಜಿಯೋಗೆ ಪೋರ್ಟ್‌ ಆಗಬಹುದೇ ?

ಇತರೆ ನೆಟ್‌ವರ್ಕ್‌ನಿಂದ ರಿಲಾಯನ್ಸ್ ಜಿಯೋಗೆ ಪೋರ್ಟ್‌ ಆಗಬಹುದೇ ?

ರಿಲಾಯನ್ಸ್ ಜಿಯೋ ಇದುವರೆಗೂ ಸಹ ವಾಣಿಜ್ಯಾತ್ಮಕವಾಗಿ ಅಧಿಕೃತವಾಗಿ ಲಾಂಚ್‌ ಆಗಿಲ್ಲ. ಆದ್ದರಿಂದ ಯಾವುದೇ ನೆಟ್‌ವರ್ಕ್‌ನಿಂದ ರಿಲಾಯನ್ಸ್‌ ಜಿಯೋಗೆ ಪೋರ್ಟ್‌ ಆಗಲು ಸಾಧ್ಯವಿಲ್ಲ. ಅಲ್ಲದೇ ವಾಯ್ಸ್ ಕರೆಯು ಸಹ ಉತ್ತಮವಾಗಿಲ್ಲ.

#1

#1

ರಿಲಾಯನ್ಸ್‌ ಜಿಯೋ 4G ಸಿಮ್ ಖರೀದಿಸುವವರು ಸಾಲಿನಲ್ಲಿ ನಿಂತಿರುವ ಬಗ್ಗೆ ಟ್ವೀಟ್ ಮಾಡಿರುವ ಫೋಟೋ

#2

#2

ರಿಲಾಯನ್ಸ್‌ ಜಿಯೋ 4G ಸಿಮ್ ಖರೀದಿಸುವವರು ಸಾಲಿನಲ್ಲಿ ನಿಂತಿರುವ ಬಗ್ಗೆ ಟ್ವೀಟ್ ಮಾಡಿರುವ ಫೋಟೋ

#3

#3

ರಿಲಾಯನ್ಸ್‌ ಜಿಯೋ 4G ಸಿಮ್ ಖರೀದಿಸುವವರು ಸಾಲಿನಲ್ಲಿ ನಿಂತಿರುವ ಬಗ್ಗೆ ಟ್ವೀಟ್ ಮಾಡಿರುವ ಫೋಟೋ

#4

#4

ರಿಲಾಯನ್ಸ್‌ ಜಿಯೋ 4G ಸಿಮ್ ಖರೀದಿಸುವವರು ಸಾಲಿನಲ್ಲಿ ನಿಂತಿರುವ ಬಗ್ಗೆ ಟ್ವೀಟ್ ಮಾಡಿರುವ ಫೋಟೋ

Best Mobiles in India

Read more about:
English summary
5 Things You Didn’t Know About Reliance Jio 4G and the ‘Free’ Hype. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X