ರಿಲಾಯನ್ಸ್ ಜಿಯೋ 4ಜಿ ಸೇವೆ ನಿಮಗೆಷ್ಟು ಗೊತ್ತು?

By Shwetha
|

ರಿಲಾಯನ್ಸ್ ಜಿಯೋ ಸಿಮ್ ಹವಾ ಈಗ ಎಲ್ಲರ ಸ್ಮಾರ್ಟ್‌ಫೋನ್‌ಗೂ ಲಗ್ಗೆ ಇಡುತ್ತಿದೆ. ಹೆಚ್ಚಿನ ಫೋನ್ ಬಳಕೆದಾರರು ಜಿಯೋ ಸಿಮ್ ಒದಗಿಸುತ್ತಿರುವ ಆಫರ್‌ಗಳನ್ನು ತಮ್ಮ ಡಿವೈಸ್‌ಗಳಲ್ಲಿ ಪಡೆದುಕೊಳ್ಳಲು ಕಾತರರಾಗಿದ್ದಾರೆ. 90 ದಿನಗಳ ಉಚಿತ ಇಂಟರ್ನೆಟ್, ವಾಯ್ಸ್ ಕಾಲ್, ಎಸ್‌ಎಮ್ಎಸ್ ಹೀಗೆ ಹೆಚ್ಚಿನ ಸವಲತ್ತುಗಳನ್ನು ಕಂಪೆನಿ ಸಿಮ್ ಮೂಲಕ ಗ್ರಾಹಕರಿಗೆ ಒದಗಿಸುತ್ತಿದೆ.

ಓದಿರಿ: ಜಿಯೋ 4ಜಿ ಸಿಮ್ ಅನ್ನು 3ಜಿ ಫೋನ್‌ನಲ್ಲಿ ಬಳಸುವುದು ಹೇಗೆ?

ಮೊದಲಿಗೆ ರಿಲಾಯನ್ಸ್ ಎಲ್‌ವೈಎಫ್ ಫೋನ್, ಇಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿಗಳಿಗೆ ಮಾತ್ರವೇ ಇದ್ದ ಈ ಸಿಮ್ ಸೌಲಭ್ಯ ಇದೀಗ ಇತರ 4ಜಿ ಬ್ರ್ಯಾಂಡ್ ಸ್ಮಾರ್ಟ್‌ಫೋನ್‌ಗಳನ್ನೂ ಪ್ರವೇಶಿಸುತ್ತಿದೆ. ದಿನದಿಂದ ದಿನಕ್ಕೆ ಕಂಪೆನಿ ತನ್ನ ಜಿಯೋ ಸಿಮ್ ಪಡೆದುಕೊಳ್ಳಬಹುದಾದ ಫೋನ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ. ಇಂದಿನ ಲೇಖನದಲ್ಲಿ ರಿಲಾಯನ್ಸ್ ಜಿಯೋ ಸಿಮ್ 4ಜಿ ಸೇವೆಗಳ ಕುರಿತು ಒಂದಷ್ಟು ಮಾಹಿತಿಗಳನ್ನು ನಾವು ತಿಳಿಸುತ್ತಿದ್ದು ಇದು ನಿಮಗೆ ಸಿಮ್ ಅನ್ನು ಖರೀದಿಸುವ ಉತ್ಸಾಹವನ್ನು ಇಮ್ಮಡಿಸುವುದು ಖಂಡಿತ.

ರಿಲಾಯನ್ಸ್ ಜಿಯೋ ಲಾಂಚಿಂಗ್ ಎಂದರೇನು

ರಿಲಾಯನ್ಸ್ ಜಿಯೋ ಲಾಂಚಿಂಗ್ ಎಂದರೇನು

ಜಿಯೋ ಬ್ರ್ಯಾಂಡ್ ಹೆಸರಿನಡಿಯಲ್ಲಿ ರಿಲಾಯನ್ಸ್ ಇಂಡಸ್ಟ್ರಿ ತನ್ನ ನಾಲ್ಕನೇ ಜನರೇಶನ್ ವೈರ್‌ಲೆಸ್ ಬ್ರ್ಯಾಡ್‌ಬ್ಯಾಂಡ್ ಸೇವೆಯನ್ನು ಲಾಂಚ್ ಮಾಡಿದೆ. ವೈರ್‌ಲೆಸ್ ಟೆಲಿಫೋನ್ ಸೇವೆಯನ್ನು ನೀಡುವುದು ಮಾತ್ರವೇ ಇದರ ಉದ್ದೇಶವಲ್ಲ. 4ಜಿ ಎಲ್‌ಟಿಇ ಸರ್ವೀಸ್ ವೇಗವಾದ ಡೇಟಾ ಸ್ಪೀಡ್ ಅನ್ನು ಒದಗಿಸುತ್ತಿದೆ.

4ಜಿ ಅಂದರೇನು

4ಜಿ ಅಂದರೇನು

ಹೆಚ್ಚಿನ ಬ್ಯಾಂಡ್ ವಿಡ್ತ್ ಮತ್ತು ಉತ್ತಮ ಔಟ್‌ಪುಟ್‌ನ ಪ್ರಯೋಜನಗಳನ್ನು ನಾಲ್ಕನೇ ಜನರೇಶನ್ ತಂತ್ರಜ್ಞಾನ ಪಡೆದುಕೊಳ್ಳುತ್ತದೆ. 4ಜಿ ಡಿವೈಸ್ ಹೊಂದಿರುವ ಬಳಕೆದಾರರು ಹೆಚ್ಚು ವೇಗದ ಡೇಟಾವನ್ನು ಪ್ರವೇಶಿಸಬಹುದಾಗಿದ್ದು, ಹೈ ಡೆಫಿನೇಶನ್ ವಾಯ್ಸ್ ಮತ್ತು ರಿಯಲ್ ಟೈಮ್ ವೀಡಿಯೊ ಸಂವಹನವನ್ನು ನಡೆಸಬಹುದಾಗಿದೆ.

ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ 4ಜಿ ಸಂಪರ್ಕ ಕಾರ್ಯನಿರ್ವಹಿಸಲಿದೆಯೇ?

ಯಾವುದೇ ಸ್ಮಾರ್ಟ್‌ಫೋನ್‌ನಲ್ಲಿ 4ಜಿ ಸಂಪರ್ಕ ಕಾರ್ಯನಿರ್ವಹಿಸಲಿದೆಯೇ?

ಸೇವೆಯನ್ನು ಪಡೆದುಕೊಳ್ಳಲು ಬಳಕೆದಾರರು 4ಜಿ ಸಕ್ರಿಯವಾಗಿರುವ ಡಿವೈಸ್ ಅನ್ನು ಖರೀದಿಸಬೇಕು. 4ಜಿ ಫೋನ್‌ಗಳು ಒಮ್ಮೊಮ್ಮೆ 3ಜಿ/2ಜಿ ನಲ್ಲೂ ಕಾರ್ಯನಿರ್ವಹಿಸುತ್ತವೆ. ಆದರೆ ಹ್ಯಾಂಡ್ ಸೆಟ್ 4ಜಿ ಯಾಗಿರಲೇಬೇಕು.

4ಜಿ ನೆಟ್‌ವರ್ಕ್‌ನಲ್ಲಿ ಜಿಯೋ ಆಫರ್‌ಗಳೇನು

4ಜಿ ನೆಟ್‌ವರ್ಕ್‌ನಲ್ಲಿ ಜಿಯೋ ಆಫರ್‌ಗಳೇನು

ಟ್ರಯಲ್ ವೇಳೆಯಲ್ಲಿ ಜಿಯೋ 70 ಎಮ್‌ಬಿಪಿಎಸ್ ವೇಗದಲ್ಲಿ ಡೌನ್‌ಲೋಡ್ ಅನ್ನು ಒದಗಿಸಲಿದೆ. ಏರ್‌ಟೆಲ್ 4ಜಿಯು 10-20 ಎಮ್‌ಬಿಪಿಎಸ್ ಅನ್ನು ತನ್ನ 3ಜಿ ನೆಟ್‌ವರ್ಕ್‌ನಲ್ಲಿ ನೀಡುತ್ತಿದೆ.

ವಾಯ್ಸ್ ಕರೆಗಳು ಸಾಧ್ಯವೇ

ವಾಯ್ಸ್ ಕರೆಗಳು ಸಾಧ್ಯವೇ

ವಾಯ್ಸ್ ಓವರ್ ಎಲ್‌ಟಿಇ ನಲ್ಲಿ ಜಿಯೋ 4ಜಿ ಸೇವೆಗಳನ್ನು ಬಳಸುತ್ತಿರುವ ಗ್ರಾಹಕರು ವಾಯ್ಸ್ ಕರೆಗಳನ್ನು ಮಾಡಬಹುದಾಗಿದೆ. ನೆಟ್‌ವರ್ಕ್ ಟೆಸ್ಟ್‌ನಲ್ಲಿ ಕೂಡ ಈ ಕರೆಗಳನ್ನು ಮಾಡಬಹುದು ಎಂಬುದಾಗಿ ದೃಢೀಕರಣವನ್ನು ನೀಡಲಾಗಿದೆ.

ಜಿಯೋ ಬಳಸಬಹುದಾದ 4ಜಿ ಹ್ಯಾಂಡ್‌ಸೆಟ್‌ಗಳು

ಜಿಯೋ ಬಳಸಬಹುದಾದ 4ಜಿ ಹ್ಯಾಂಡ್‌ಸೆಟ್‌ಗಳು

RJio ನ ಎಲ್‌ವೈಎಫ್ ಬ್ರ್ಯಾಂಡ್ ಫೋನ್‌ಗಳು, ಸ್ಯಾಮ್‌ಸಂಗ್, ಎಲ್‌ಜಿ, ಲೆನೊವೊ, ZTE, ಇಂಟೆಕ್ಸ್ ಆಕ್ವಾ 4ಜಿ ಮೊದಲಾದ ಸ್ಮಾರ್ಟ್‌ಫೋನ್‌ಗಳು.

Best Mobiles in India

English summary
Reliance Industries is launching its next generation fourth generation wireless broadband service under the brand name Jio.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X