ಇತ್ತ ಗಮನಿಸಿ...!! ಇಂದಿನಿಂದ ಎಟಿಎಂನಲ್ಲಿ ಹಣ ಇರಲ್ಲ: 'ವನ್ನಾಕ್ರೈ' ದಾಳಿ ನಿಲ್ಲುವರೆಗೂ ದುಡ್ಡು ಸಿಗಲ್ಲ..!!!!

ಮೊನ್ನೆ ತಾನೇ ನೋಟ ನಿಷೇಧದಿಂದ ತೊಂದರಿಗೆ ಗುರಿಯಾಗಿದ್ದ ಜನರಿಗೆ ಮತ್ತೆ ಬಿಸಿ ಮುಟ್ಟಲಿದೆ. 'ವಾನಕ್ರೈ' ದಾಳಿ ನಿಲ್ಲುವರೆಗೂ ಎಟಿಎಂನಲ್ಲಿ ದುಡ್ಡು ಸಿಗುವುದಿಲ್ಲ ಎನ್ನಲಾಗಿದೆ.

|

ಸದ್ಯ ಇಡೀ ವಿಶ್ವದ ಅಂತರ್ಜಾಲದ ತನ್ನ ಮೇಲೆ ವಕ್ರದೃಷ್ಟಿಯನ್ನು ಬೀರಿ ತನ್ನ ಕಪಿಮುಷ್ಟಿಯಲ್ಲಿ ನಿಯಂತ್ರಣಕ್ಕೆ ಪಡೆದುಕೊಂಡಿರುವ 'ವನ್ನಾಕ್ರೈ' ರಾನ್ಸಂವೇರ್ ನಿಂದಾಗಿ ಭಾರತದಲ್ಲೂ ಸಮಸ್ಯೆ ದೊಡ್ಡಮಟ್ಟದಲ್ಲಿ ಉದ್ಭವಾಗಿದ್ದು, ಮೊನ್ನೆ ತಾನೇ ನೋಟ ನಿಷೇಧದಿಂದ ತೊಂದರೆಗೆ ಗುರಿಯಾಗಿದ್ದ ಜನರಿಗೆ ಮತ್ತೆ ಬಿಸಿ ಮುಟ್ಟಲಿದೆ.

ಇಂದಿನಿಂದ ಎಟಿಎಂನಲ್ಲಿ ಹಣ ಇರಲ್ಲ:ವನ್ನಾಕ್ರೈ ದಾಳಿ ನಿಲ್ಲುವರೆಗೂ ದುಡ್ಡು ಸಿಗಲ್ಲ

'ವನ್ನಾಕ್ರೈ' ದಾಳಿ ನಿಲ್ಲುವರೆಗೂ ಎಟಿಎಂನಲ್ಲಿ ದುಡ್ಡು ಸಿಗುವುದಿಲ್ಲ ಎನ್ನಲಾಗಿದೆ. ಶುಕ್ರವಾರ ರಾತ್ರಿಯಿಂದ ಭಾರತ ದಲ್ಲಿನ ಎಟಿಎಂಗಳು ಎಷ್ಟು ಸುರಕ್ಷಿತ ಎಂಬ ಪ್ರಶ್ನೆ ಎದುರಾಗಿದ್ದು, ಜಗತ್ತಿನ ಶೇ.70 ರಷ್ಟು ಎಟಿಎಂಗಳು ಕಾರ್ಯನಿರ್ವಹಿಸುತ್ತಿರುವುದು ವಿಂಡೋಸ್‌ ಎಕ್ಸ್‌ಪಿ, ವಿಂಡೋಸ್‌ ವಿಸ್ಟಾದಿಂದ ಹಾಗಾಗಿ ಇವುಗಳನ್ನು ಹ್ಯಾಕ್‌ ಮಾಡುವುದು ಸುಲಭವಾಗಿದೆ.

ವಿಂಡೋಸ್‌ ಎಕ್ಸ್‌ಪಿ ಮೇಲೆ ಹೆಚ್ಚಿನ ದಾಳಿ:

ವಿಂಡೋಸ್‌ ಎಕ್ಸ್‌ಪಿ ಮೇಲೆ ಹೆಚ್ಚಿನ ದಾಳಿ:

ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂ ಮೇಲೆ ಹೆಚ್ಚಿನ'ವನ್ನಾಕ್ರೈ' ದಾಳಿ ನಡೆಯುತ್ತಿದ್ದು, ವಿಂಡೋಸ್‌ ಎಕ್ಸ್‌ಪಿ ಒಎಸ್ ಬೇಗನೇ ವಾನಕ್ರೈ ರಾನ್ಸಂವೇರ್‌ ಬಲೆಗೆ ಬಿಳಲಿವೆ. ಇಂಗ್ಲೆಂಡ್ ಆಸ್ಪತ್ರೆಗಳು, ಸ್ಕಾಟ್‌ಲೆಂಡ್ ಯಾರ್ಡ್ ಪೊಲೀಸರ ಕಚೇರಿಗಳು ಈ ದಾಳಿಗೆ ಸಿಲುಕಿವೆ.

150 ದೇಶಗಳ 2 ಲಕ್ಷ ಕಂಪ್ಯೂಟರ್‌ಗಳು:

150 ದೇಶಗಳ 2 ಲಕ್ಷ ಕಂಪ್ಯೂಟರ್‌ಗಳು:

ರಾನ್ಸಂವೇರ್ ವೈರಸ್‌ ದಾಳಿಗೆ ಭಾರತ ಸೇರಿದಂತೆ 150 ದೇಶಗಳ 2 ಲಕ್ಷ ಕಂಪ್ಯೂಟರ್‌ಗಳು ತುತ್ತಾಗಿವೆ. ಈ ಕಂಪ್ಯೂಟರ್ ದಾಖಲೆಗಳನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡು ಹಣ ಸುಲಿಗೆ ಮಾಡುವುದು ಪ್ರಯತ್ನ ಇದಾಗಿದ್ದು, ಒಂದು ಕಂಪ್ಯೂಟರ್ ಅನ್ನು ಬಂಧಮುಕ್ತಗೊಳಿಸಲು 300 ಅಮೆರಿಕನ್ ಡಾಲರ್ ನೀಡುವಂತೆ ಬೆದರಿಕೆ ಓಡ್ಡಿದ್ದು, ನೀಡದರೆ ಹೊದರೆ ಡೇಟಾವನ್ನ ಅಳಿಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ಇಂದು ಮತ್ತೆ ದಾಳಿ:

ಇಂದು ಮತ್ತೆ ದಾಳಿ:

ಶನಿವಾರ ಮತ್ತು ರವಿವಾರ ರಜೆಯಾದ್ದರಿಂದ ಹೀಗಾಗಿ ಶುಕ್ರವಾರ ಸಂಜೆ ನಡೆದಿದ್ದ ದಾಳಿಯ ಹೆಚ್ಚಿನ ಪ್ರಭಾವ ತಿಳಿಸಿದ್ದು ಸೋಮವಾರ ಬೆಳಗ್ಗೆಯೇ. ಸೈಬರ್‌ ಭದ್ರತಾ ಸಂಸ್ಥೆ ಯುರೋಪೋಲ್ ಈ ಕುರಿತು ಹೇಳಿಕೆ ನೀಡಿದ್ದು, ಸೋಮವಾರ ಹೆಚ್ಚಿನ ಕಂಪ್ಯೂಟರ್‌ಗಳು ಕೆಲಸ ಆರಂಭಿಸುವುದರಿಂದ ಮತ್ತೇ ದಾಳಿ ನಡೆಯಲಿದೆ ಎನ್ನಲಾಗಿದೆ.

ವಿಂಡೋಸ್‌ ಎಕ್ಸ್‌ಪಿಗೆ ಸುರಕ್ಷೆ:

ವಿಂಡೋಸ್‌ ಎಕ್ಸ್‌ಪಿಗೆ ಸುರಕ್ಷೆ:

ವಿಂಡೋಸ್‌ ಎಕ್ಸ್‌ಪಿ ಹ್ಯಾಕರ್ಸ್‌ಗಳಿಂದ ದಾಳಿಗೆ ಒಳಗಾಗಿರುವ ವಿಂಡೋಸ್‌ ಎಕ್ಸ್‌ಪಿ ಆಪರೇಟಿಂಗ್‌ ಸಿಸ್ಟಂಗೆ ಶನಿವಾರ ಮೈಕ್ರೋಸಾಫ್ಟ್ ಕೆಲವು ಪ್ಯಾಚಸ್‌ಗಳನ್ನು ಬಿಡುಗಡೆ ಮಾಡಿದೆ. ಇದನ್ನು ಅಪ್‌ಡೇಟ್ ಮಾಡಿಕೊಂಡರೆ ವೈರಸ್ ದಾಳಿಯಿಂದ ರಕ್ಷಣೆ ದೊರೆಯಲಿದೆ.

ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್:

ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್:

ಭಾರತೀಯ ರಿಸರ್ವ್ ಬ್ಯಾಂಕ್ ಎಟಿಎಂಗಳ ಸಾಫ್ಟ್ ವೇರ್ ಅಪ್ ಡೇಟ್ ಮಾಡುವಂತೆ ಎಲ್ಲ ಬ್ಯಾಂಕ್ ಗಳಿಗೆ ತಿಳಿಸಿದ್ದು, ಎಟಿಎಂ ಗಳ ಸಿಸ್ಟಂ ಅಪ್ ಡೇಟ್ ಆಗುವವರೆಗೂ ಎಟಿಎಂಗಳಿಗೆ ಹಣ ತುಂಬದಂತೆಯೂ ಸೂಚನೆ ನೀಡಿದೆ. ಸೈಬರ್ ದಾಳಿಗೆ ಎಟಿಎಂಗಳು ಸಿಲುಕುವ ಸಾಧ್ಯತೆ ಹೆಚ್ಚಾಗಿದೆ.

ಮತ್ತೆ ನಗದು ಹಣಕ್ಕೆ ಕೊರತೆ:

ಮತ್ತೆ ನಗದು ಹಣಕ್ಕೆ ಕೊರತೆ:

ದೇಶಾದ್ಯಂತ ಎಟಿಎಂಗೆ ಹಣ ತುಂಬಿಸುವ ಕಾರ್ಯವನ್ನು ಈಗಾಗಲೇ ನಿಲಿಸಲಾಗಿದ್ದು, ಬ್ಯಾಂಕ್ ಗಳ ಎಟಿಎಂಗಳು ಕಾರ್ಯ ಸ್ಥಗಿತಗೊಳಿಸಲಿವೆ. ದೇಶದಲ್ಲಿ ಶೇಕಡಾ 60% ಎಟಿಎಂಗಳಲ್ಲಿ ವಿಂಡೋಸ್‌ ಎಕ್ಸ್‌ಪಿ ಸಾಫ್ಟ್​ವೇರ್ ಅನ್ನು ಬಳಸಲಾಗುತ್ತಿದ್ದು, ಅಪಡೇಟೆಡ್ ವಿಂಡೋಸ್ ಸಾಫ್ಟ್​ವೇರ್ ಅಳವಡಿಸುವವರೆಗೆ ಎಟಿಎಂಗಳಿಗೆ ಹಣ ತುಂಬುವುದಿಲ್ಲ ಎನ್ನಲಾಗಿದೆ.

Best Mobiles in India

Read more about:
English summary
India was among the 99 countries affected by a global cyber attack that took down. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X