ಆಪಲ್‌ನಲ್ಲಿ ಯಂಗೆಸ್ಟ್ ಡೆವೆಲಪರ್ 9 ವರ್ಷದ 'ಅನ್ವಿತ ವಿಜಯ್‌'!!

By Suneel
|

ಪ್ರಪಂಚದ ಬೃಹತ್‌ ದೊಡ್ಡ ಕಂಪನಿ 'ಆಪಲ್‌' ಸೋಮವಾರ (ಜೂನ್‌ 13) '2016 ರ ವರ್ಲ್ಡ್‌ವೈಡ್ ಡೆವೆಲಪರ್‌ ಕಾನ್ಫರೆನ್ಸ್‌ ' ಆಯೋಜಿಸಿತ್ತು. ಪ್ರತಿವರ್ಷದ ಟೆಕ್‌ ಕ್ಯಾಲೆಂಡರ್‌ನ ಬೃಹತ್‌ ದೊಡ್ಡ ಕಾರ್ಯಕ್ರಮವಿದು. ಈ ಕಾರ್ಯಕ್ರಮದ ಕೇಂದ್ರಬಿಂದು ಹಾಗೂ ಕುತೂಹಲಕಾರಿ ವಿಷಯ ಅಂದ್ರೆ ಕೇವಲ 9 ವರ್ಷದ ಬಾಲೆಯೊಬ್ಬಳು ಐಓಎಸ್‌ಗಳಿಗೆ ಅಪ್ಲಿಕೇಶನ್‌ಗಳನ್ನು ಅಭಿವದ್ದಿಪಡಿಸಿದ್ದಳು.

ಅಂದಹಾಗೆ WWDC' ಆಪಲ್‌ ಕಾನ್ಫರೆನ್ಸ್‌ನಲ್ಲಿ ಟಿಮ್‌ ಕುಕ್‌'ರನ್ನು ಐಓಎಸ್‌ ಆಪ್‌ಗಳ ಸಹಿತ ಭೇಟಿ ಮಾಡಲು ಬಂದ 9 ವರ್ಷದ ಬಾಲಕಿ ಯಾರು? 9 ವರ್ಷಕ್ಕೆ ಅವಳ ಕೊಡುಗೆ ಏನು? ಎಂಬಿತ್ಯಾದಿ ಮಾಹಿತಿಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

1

1

ಇತರೆ ಎಲ್ಲಾ ಟೆಕ್ನಾಲಜಿ ಕ್ಷೇತ್ರದ ಪ್ರಖ್ಯಾತ ವ್ಯಕ್ತಿಗಳಂತೆ '2016'ರ ವರ್ಲ್ಡ್‌ವೈಡ್‌ ಡೆವಲಪರ್ಸ್‌ ಕಾನ್ಫರೆನ್ಸ್‌ಗೆ ಕೇವಲ 9 ವರ್ಷದ ಬಾಲಕಿ 'ಅನ್ವಿತ ವಿಜಯ್‌' ಹಲವು ಐಓಎಸ್‌ ಆಪ್‌ಗಳ ಸಹಿತ 'ಟಿಮ್‌ ಕುಕ್‌'ರನ್ನು ಭೇಟಿ ಮಾಡಲು ಬಂದಿದ್ದಳು.
ಚಿತ್ರ ಕೃಪೆ:Fortune.com

2

2

ಕೇವಲ 9 ವರ್ಷದ 'ಅನ್ವಿತ ವಿಜಯ್‌' ವರ್ಲ್ಡ್‌ವೈಡ್ ಡೆವೆಲಪರ್ಸ್‌ ಕಾನ್ಫರೆನ್ಸ್‌ಗೆ ಪ್ರವಾಸ ಮಾಡಲು ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಹಾಕಿದ್ದಳು ಮತ್ತು ಹಾಗೆ ಅವಳನ್ನು ಆಪಲ್‌ ಕಂಪನಿ ಸಹ ಕಾನ್ಫರೆನ್ಸ್‌ಗೆ ಆಯ್ಕೆ ಮಾಡಿತ್ತು ಎಂದು Fortune ವರದಿ ಮಾಡಿತ್ತು. ಈಕೆ ಮೂಲತಃ ಆಸ್ಟ್ರೇಲಿಯಾ ಬಾಲಕಿ.

3

3

ವರದಿ ಪ್ರಕಾರ ಆಪಲ್‌ ಸ್ಕಾಲರ್‌ಶಿಪ್‌ ಪಡೆದ 350 ವ್ಯಕ್ತಿಗಳಲ್ಲಿ, 120 ಸ್ಕಾಲರ್‌ಶಿಪ್‌ ಪಡೆದವರು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಹಾಗೂ 22 ಶೇಕಡ ಮಹಿಳೆಯರು ಇದ್ದರು. ಈ ಮೂಲಕ ಆಪಲ್‌ ಡೆವಲಪರ್ಸ್‌ಗಳಲ್ಲಿ ವೈವಿದ್ಯತೆ ಕಾಣಲು ಉದ್ದೇಶಿಸಿತ್ತು.

4

4

9 ವರ್ಷದ 'ಅನ್ವಿತ ವಿಜಯ್' ಮೊಬೈಲ್ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಪಡಿಸಲು ಆಸಕ್ತಿ ಹೊಂದಿದ್ದಳು. ಅನ್ವಿತ ಯಾವುದೇ ರೀತಿಯ ತರಬೇತಿ ಹೊಂದಿರಲಿಲ್ಲ. ಆದರೆ ಆಕೆ ಕೋಡಿಂಗ್‌ ಮಾಡುವುದನ್ನು ಯೂಟ್ಯೂಬ್‌ ಟ್ಯುಟೋರಿಯಲ್‌ ನೋಡಿ ಕಲಿತಿದ್ದಳು. ಕೋಡಿಂಗ್‌ ಮಾಡುವುದು ಹೆಚ್ಚು ಕಷ್ಟವಾದರೂ ಸಹ ಕಲಿಯುವಲ್ಲಿ ಯಶಸ್ವಿಯಾಗಿದ್ದೇನೆ ಎಂದು ತಿಳಿಸಿದ್ದಾಳೆ.

5

5

ಅನ್ವಿತ'ಳು ಅಭಿವೃದ್ದಿಪಡಿಸಿರುವ 'Smartkins Animals' ಆಪ್‌ ಮಕ್ಕಳಿಗೆ ಪ್ರಾಣಿಗಳ ಹೆಸರು ಮತ್ತು ಧ್ವನಿಯನ್ನು ಟೀಚ್‌ ಮಾಡುತ್ತದೆ, ಆಪ್‌ ಸರಳವಾಗಿದ್ದು ಅನ್ವಿತ ಆಪ್‌ ಕ್ರಿಯೇಟ್‌ ಮಾಡಿದ ಪ್ರಕ್ರಿಯೆಯನ್ನು 'Fortune'ನೊಂದಿಗೆ ವಿವರಿಸಿದ್ದಾಳೆ.

6

6

ಅನ್ವಿತ ಆಪ್‌ ಅಭಿವೃದ್ದಿ ಬಗ್ಗೆ ವಿವರಿಸುತ್ತಾ "ಒಂದು ಆಪ್‌ ಕ್ರಿಯೇಟ್‌ ಮಾಡುವುದು ಹೆಚ್ಚು ಕಷ್ಟದ ಕೆಲಸವಾಗಿದೆ. ಹಲವು ಕಾಂಪೊನೆಂಟ್‌ಗಳು ಆಪ್‌ ಬಿಲ್ಡ್‌ ಮಾಡುತ್ತವೆ, ಪ್ರೋಟೋಟೈಪಿಂಗ್‌, ಡಿಸೈನ್‌, ವೈರ್‌ಫ್ರೇಮಿಂಗ್‌, ಬಳಕೆದಾರರ ಇಂಟರ್‌ಫೇಸ್ ಡಿಸೈನ್‌, ಕೋಡಿಂಗ್‌ ಮತ್ತು ಟೆಸ್ಟಿಂಗ್‌ಗಳೆಲ್ಲವನ್ನು ಹೊಂದಿದೆ" ಎಂದು ಹೇಳಿದ್ದಾಳೆ.

7

7

9 ವರ್ಷದ ಅನ್ವಿತ ವಿಜಯ್‌ ಮಕ್ಕಳಿಗೆ ಶೈಕ್ಷಣಿಕ ಅಪ್ಲಿಕೇಶನ್‌ಗಳನ್ನು ಅಭಿವೃದ್ದಿಪಡಿಸಿದ್ದಾಳೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್ಮನೆಯಲ್ಲೇ ನೀರಿನಿಂದ ಬಿಯರ್‌ ತಯಾರಿಸುವ ಮಷಿನ್

ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!ಆಧುನಿಕ ಟೆಕ್‌ನೊಂದಿಗೆ ಜನರು; ವ್ಯಂಗ್ಯಚಿತ್ರಗಳಲ್ಲಿ ಕಾಣಿಸಿದ್ದು ಹೀಗೆ!

ಗಿಜ್‌ಬಾಟ್‌

ಗಿಜ್‌ಬಾಟ್‌

ಟೆಕ್ನಾಲಜಿ ಬಗೆಗಿನ ನಿರಂತರ ಸುದ್ದಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

Read more about:
English summary
9 Year Old Anvitha Vijay Is the Youngest Developer at WWDC 2016. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X