950 ಮಿಲಿಯನ್ ಭಾರತೀಯರಿಗೆ ಇಂಟರ್‌ನೆಟ್ ಸಂಪರ್ಕವಿಲ್ಲವಂತೆ...!

ಇತ್ತ ಸಮಿಕ್ಷೆಯೊಂದರ ಪ್ರಕಾರ ದೇಶದ ಸುಮಾರು 950 ಮಿಲಿಯನ್ ಜನರಿಗೆ ಇಂಟರ್‌ನೆಟ್ ಸಂಪರ್ಕವನ್ನು ಕಲ್ಪಿಸಲಾಗಿಲ್ಲ. ಹೀಗಿರುವ ಸಂದರ್ಭದಲ್ಲಿ ಡಿಜಿಟಲ್ ಹಣಕಾಸಿನ ವ್ಯವಹಾರವು ಹೇಗೆ ಸಾಧ್ಯವೆಂಬುದು ಪ್ರಶ್ನೆಯಾಗಿದೆ.

|

ಒಂದು ಕಡೆ ಕೇಂದ್ರ ಸರಕಾರವು ಲೆಸ್ ಕ್ಯಾಷ್ ವ್ಯವಸ್ಥೆಯನ್ನು ಜಾರಿಗೆ ತರಲು ಇನ್ನಿಲ್ಲದ ಪ್ರಯತ್ನವನ್ನು ಮಾಡುತ್ತಿದ್ದರೆ, ಇತ್ತ ಸಮಿಕ್ಷೆಯೊಂದರ ಪ್ರಕಾರ ದೇಶದ ಸುಮಾರು 950 ಮಿಲಿಯನ್ ಜನರಿಗೆ ಇಂಟರ್‌ನೆಟ್ ಸಂಪರ್ಕವನ್ನು ಕಲ್ಪಿಸಲಾಗಿಲ್ಲ. ಹೀಗಿರುವ ಸಂದರ್ಭದಲ್ಲಿ ಡಿಜಿಟಲ್ ಹಣಕಾಸಿನ ವ್ಯವಹಾರವು ಹೇಗೆ ಸಾಧ್ಯವೆಂಬುದು ಪ್ರಶ್ನೆಯಾಗಿದೆ.

950 ಮಿಲಿಯನ್ ಭಾರತೀಯರಿಗೆ ಇಂಟರ್‌ನೆಟ್ ಸಂಪರ್ಕವಿಲ್ಲವಂತೆ...!

ರಿಲಯನ್ಸ್ ಡಿಜಿಟಲ್ ಲೈಫ್ ನಿಂದ ಮತ್ತೊಂದು ಬಜೆಟ್ ಸ್ಮಾರ್ಟ್‌ಪೋನ್

ಸ್ಮಾರ್ಟ್‌ಪೋನ್ ಯುಗದಲ್ಲಿ ಅದರಲ್ಲೂ ಉಚಿತ 4G ಇಂಟರ್‌ನೆಟ್ ಲಭ್ಯವಿದ್ದರು ಸುಮಾರು 950 ಮಿಲಿಯನ್ ಭಾರತೀಯರು ಅಂತರ್ಜಾಲ ವಂಚಿತರು ಎಂಬುದನ್ನು ನಂಬಲು ಸಾಧ್ಯವಿಲ್ಲ. ಆದರೆ ಸಮೀಕ್ಷೆಯೊಂದು ಈ ವಿಚಾರವನ್ನು ಸಾಕ್ಷಿ ಸಮೇತ ವಿವರಿಸಿದೆ. Assocham-Deloitte ನಡೆಸಿರುವ ಜಂಟಿ ಸಮೀಕ್ಷೆಯಲ್ಲಿ ಈ ವಿಚಾರವು ಬೆಳಕಿಗೆ ಬಂದಿದೆ.

ಈ ಸೈಬರ್ ಅಪರಾಧವನ್ನು ತಡೆಯಲು ರಾಷ್ಟ್ರೀಯ ಕ್ರಮಗಳು ಎಂಬ ಸಮೀಕ್ಷೆಯ ಪ್ರಕಾರ ಭಾರತದಲ್ಲಿ ಇಂಟರ್ನೆಟ್ ಸಂಪರ್ಕವು ಏರುಗತಿಯಲ್ಲಿ ಸಾಗುತ್ತಿದೆ. ಬ್ರಾಡ್ ಬ್ಯಾಂಡ್ ಮತ್ತು ಸ್ಮಾರ್ಟ್‌ಪೋನ್ ಬಳಕೆಯಿಂದ ಅಂತರ್ಜಾಲದ ಸಂಪರ್ಕ ಸಾಧಿಸುವುದು ಹೆಚ್ಚಾಗುತ್ತಿದೆ ಎನ್ನಲಾಗಿದೆ.

950 ಮಿಲಿಯನ್ ಭಾರತೀಯರಿಗೆ ಇಂಟರ್‌ನೆಟ್ ಸಂಪರ್ಕವಿಲ್ಲವಂತೆ...!

5000 mAh ಬ್ಯಾಟರಿ ಮತ್ತು 200 GB SD ಕಾರ್ಡ್ ಸಾಮಾರ್ಥ್ಯದ ನುಬಿಯಾ ಸ್ಮಾರ್ಟ್‌ಪೋನ್

ಅಲ್ಲದೇ ಸದ್ಯ ಸರಕಾರವು ರಿಮೋಟ್ ಪ್ರದೇಶಗಳಲ್ಲೂ ಅಂತರ್ಜಾಲದ ಸಂಪರ್ಕವನ್ನು ತಲುಪಿಸಲು ಯತ್ನ ನಡೆಸುತ್ತಿದೆ ಎಂದು ತಿಳಿಸಿದ್ದು, ಇದಕ್ಕಾಗಿ ಇನ್ನು ಹೆಚ್ಚಿನ ಪ್ರಯತ್ನಗಳನ್ನು ನಡೆಸಬೇಕು ಎಂದು ಸಲಹೆಯನ್ನು ನೀಡಿದೆ.

ಡಿಜಿಟಲ್ ಸಾಕ್ಷರತೆಯನ್ನು ಹೆಚ್ಚಿಸುವ ಸಲುವಾಗಿ ಶಾಲೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ಹೆಚ್ಚಿನ ತರಬೇತಿ ನೀಡಬೇಕು ಎಂದಿದೆ. ಡಿಜಿಟಲ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಜೊತೆಗೆ ಮೈತ್ರಿ ಏರ್ಪಡಿಸಬೇಕು ಎಂದು ಸಹ ಈ ಸಮೀಕ್ಷೆ ತಿಳಿಸಿದೆ.

950 ಮಿಲಿಯನ್ ಭಾರತೀಯರಿಗೆ ಇಂಟರ್‌ನೆಟ್ ಸಂಪರ್ಕವಿಲ್ಲವಂತೆ...!

2016ರ ಟಾಪ್ 4G ಡೇಟಾ ಪ್ಲಾನ್ ಮತ್ತು ಕಾಲಿಂಗ್ ಪ್ಲಾನ್ ಗಳು..!

ಖಾಸಗಿ ಸಹಭಾಗಿತ್ವದಲ್ಲಿ ಈ ಅಂತರ್ಜಾಲವನ್ನು ಗ್ರಾಮೀಣ ಪ್ರದೇಶಕ್ಕೆ ತಲುಪಿಸುವ ಕಾರ್ಯವೇಗವಾಗಿ ನಡೆಯಬೇಕು, ಡಿಜಿಟಲ್ ವಿಷಯದಲ್ಲಿ ಸ್ಟಾರ್ಟ್ ಆಪ್ ಉದ್ಯಮಗಳು ಹೆಚ್ಚಾಗಬೇಕು ಎಂದು ಈ ಸಮಿಕ್ಷೆ ತಿಳಿಸಿದೆ.

ಅಲ್ಲದೇ ಕೇಲವು ಟೆಲಿಕಾಂ ಆಪರೇಟರ್ ಗಳು ಗ್ರಾಮೀಣ ಭಾಗದಲ್ಲಿ ಗುಣಮಟ್ಟದ ಇಂಟರ್ನೆಟ್ ಪೂರೈಕೆ ಮಾಡುತ್ತಿಲ್ಲ, ಇದನ್ನು ಬದಲಾಯಿಸಿ ಅಲ್ಲಿಯೂ ಗುಣಮಟ್ಟದ ಅಂತರ್ಜಾಲದ ಸೇವೆಯನ್ನು ನೀಡಬೇಕು ಎಂದು ಸಮೀಕ್ಷೆಯು ಸಲಹೆ ನೀಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
nearly 950 million Indians do not have an Internet connection, according to a joint study done by Assocham-Deloitte, to konw more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X